ಅಬ್ಬಬ್ಬೋ....! ಮತ್ತೊಂದು ವಿಡಿಯೋ ಲೀಕ್.....ಆತಂಕದಲ್ಲಿ ಸೋನು ಗೌಡ

By Ramesh B  |  First Published Aug 8, 2022, 5:57 PM IST

ಸೋನು ಶ್ರೀನಿವಾಸ್​​ ಗೌಡ ಅವರ ಖಾಸಗಿ ವಿಡಿಯೋ  ಲೀಕ್​ ಆಗಿತ್ತು ಎಂಬುದು ಗೊತ್ತಿರುವ ವಿಚಾರ. ಆ ಬಗ್ಗೆ ಸ್ವತಃ ಸೋನು ಅವರೇ ಈಗ ದೊಡ್ಮನೆಯಲ್ಲಿ ಒಪ್ಪಿಕೊಂಡಿದ್ದು ಉಂಟು. ಇದೀಗ ತಮ್ಮದು ಇನ್ನೊಂದು ವಿಡಿಯೋ ಇದೆ ಶಾಕಿಂಗ್ ನ್ಯೂಸ್ ಕೊಟ್ಟಿದ್ದಾರೆ.


ಇದೇ ಮೊದಲ ಬಾರಿಗೆ ಕನ್ನಡ ಬಿಗ್‌ಬಾಸ್ ಒಟಿಟಿಯಲ್ಲಿ ಪ್ರಸಾರವಾಗುತ್ತಿದೆ. ಇಷ್ಟು ಸೀಸನ್ ಟಿವಿಯಲ್ಲಿ ನೋಡಿದ ವೀಕ್ಷಕರಿಗೆ ಈಗ ಒಟಿಟಿಯಲ್ಲಿ ನೋಡುವುದು ಹೊಸ ಅನುಭವ ನೀಡುತ್ತಿದೆ.

ಈ ಬಿಗ್‌ಬಾಸ್‌ನಲ್ಲಿ ಎರಡನೇ ಕಂಟೆಸ್ಟೆಂಟ್ ಸೋನು ಶ್ರೀನಿವಾಸ್‌ ಗೌಡ ಅವರೇ ಸುದ್ದಿಯಲ್ಲಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ತಮ್ಮ ವೆರೈಟಿ ವಿಡಿಯೋ, ರೀಲ್ಸ್, ಟಿಕ್‌ ಟಾಕ್‌ ಮೂಲಕ ಸೌಂಡ್ ಮಾಡಿರೋ ಸೋನು ಗೌಡ ಬಗ್ಗೆ ನಾನಾ ರೀತಿ ಚರ್ಚೆಗಳು ನಡೆಯುತ್ತಿವೆ. ಅದರಲ್ಲೂ ಅವರ ವಿಡಿಯೋ ಸಾಕಷ್ಟು ಸದ್ದು ಮಾಡುತ್ತಿದೆ.

Tap to resize

Latest Videos

undefined

ಆ ವಿಡಿಯೋ ಲೀಕ್‌ ಆಗಿದ್ದೇಗೆ? ಎಳೆ-ಎಳೆಯಾಗಿ ಬಿಚ್ಚಿಟ್ಟ ಸೋನು ಶ್ರೀನಿವಾಸ್ ಗೌಡ

ಇನ್ನು ಸೋನು ಶ್ರೀನಿವಾಸ್​​ ಗೌಡ ಅವರ ಖಾಸಗಿ ವಿಡಿಯೋ ಲೀಕ್​ ಆಗಿತ್ತು ಎಂಬುದು  ಜಗಜ್ಜಾಹೀರಾಗಿದೆ. ಆ ಬಗ್ಗೆ ಸ್ವತಃ ಸೋನು ಅವರೇ ಮೊದಲ ದಿನ ದೊಡ್ಮನೆಯಲ್ಲಿ ಒಪ್ಪಿಕೊಂಡು ಕಣ್ಣೀರಿಟ್ಟಿದ್ದರು. ಬಾಯ್‌ ಫ್ರೆಂಡ್‌ ಆ ವಿಡಿಯೋವನ್ನು ಲೀಕ್ ಮಾಡಿದ್ದಾನೆ ಅಂತೆಲ್ಲಾ ಹೇಳಿದ್ರು. ಇದೀಗ ವಿಷ್ಯಾ ಏನು ಅಂದ್ರೆ  ಸೋನು ಗೌಡ ಅವರದ್ದೇ ಇನ್ನೊಂದು ವಿಡಿಯೋ ಇದೆಯಂತೆ.

ಮತ್ತೊಂದು ವಿಡಿಯೋ ಲೀಕ್‌ ಆತಂಕದಲ್ಲಿ ಸೋನು
ಯೆಸ್‌...ಈಗಾಗಲೇ ಮೊದಲ ವಿಡಿಯೋ ಮೂಲಕ ಸಾಕಷ್ಟು ಟೀಕೆ, ಟ್ರಾಲ್‌ ಆಗಿದ್ದ ಸೋನು ಶ್ರೀನಿವಾಸ್‌ ಗೌಡ ಅವರದ್ದು ಇನ್ನೊಂದು ವಿಡಿಯೋ ಇದೆ. ನಂದು ಇನ್ನೊಂದು ವಿಡಿಯೋ ಇದೆ. ಯಾವಾಗ ಬರತ್ತೋ ಗೊತ್ತಿಲ್ಲ ಎಂದು ಸ್ವತಃ ಸೋನು ಗೌಡ ಆತಂಕಪಡಿಸಿದ್ದಾರೆ.

ಖುದ್ದು, ಆ ವಿಡಿಯೋ ಲೀಕ್‌ ಬಗ್ಗೆ ಮೊದಲ ದಿನವೇ ಬಿಗ್‌ಬಾಸ್‌ ಮನೆಯಲ್ಲಿ ಎಳೆ-ಎಳೆಯಾಗಿ ಬಿಚ್ಚಿಟ್ಟು ಕಣ್ಣೀರು ಹಾಕಿದ್ರು. 
ಹೌದು....ನಂದು ಇನ್ನೊಂದು ವಿಡಿಯೋ ಇದೆ. ಯಾವಾಗ ಬರತ್ತೋ ಗೊತ್ತಿಲ್ಲ ಎಂದು ಸ್ವತಃ ಸೋನು ಗೌಡ ಆತಂಕಪಡಿಸಿದ್ದಾರೆ.  ಮೊದಲ ವಿಡಿಯೋ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸೋನು ಗೌಡ ವಿರುದ್ಧ ಆಕ್ರೋಶಗಳು ವ್ಯಕ್ತವಾಗುತ್ತಿವೆ. ಅಲ್ಲದೇ ಐಫೋನ್ ಸೋನು ಗೌಡ ಅಂತೆಲ್ಲಾ ಟ್ರಾಲ್ ಮಾಡಲಾಗುತ್ತಿದೆ. ಇದೀಗ ಮತ್ತೊಂದು ವಿಡಿಯೋ ಇದೆ ಎಂದು ಸೋನು ಬಾಂಬ್ ಸಿಡಿಸಿದ್ದಾರೆ.

Bigg Boss OTT ಸೋಷಿಯಲ್‌ ಮೀಡಿಯಾ ಬೆಡಗಿ ಸೋನು ಶ್ರೀನಿವಾಸ್‌ಗೌಡ ಒರಿಜಿನಲ್ ಹೆಸ್ರು ಬಹಿರಂಗ

ಆ ವ್ಯಕ್ತಿ ಬಳಿ ಇನ್ನೊಂದು ವಿಡಿಯೋ
ಇನ್ನೊಂದು ವಿಡಿಯೋ ಇರುವ ಬಗ್ಗೆ ಸೋನು ಗೌಡ ಹೇಳಿಕೊಂಡಿದ್ದು, ನನಗೆ ಗೊತ್ತಿರುವ ವ್ಯಕ್ತಿ ನನ್ನ ಜೊತೆ ಮೂರು ವರ್ಷ ಇದ್ದ. ಅವನು ಎಂಎಸ್ಸಿ ಮುಗಿಸಿದ ನಂತರ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಹೋದ. ನಂತರ ಪ್ರಪೋಸ್​ ಮಾಡಿದ. ನಾನೂ ಒಪ್ಪಿಕೊಂಡೆ. ನಂತರ ನಮ್ಮ ಪ್ರೀತಿ ನಿಜವಾಗಿದ್ದರೆ ವಿಡಿಯೋ ಕಾಲ್​ ಮಾಡು ಅಂದ. ನಾನು ನೇರವಾಗಿ ವಿಡಿಯೋ ಕಾಲ್​ ಮಾಡಿದೆ. ಎಲ್ಲ ಹುಡುಗಿಯರ ಲೈಫ್​ನಲ್ಲಿ ಇದು ಕಾಮನ್​. ಆದರೆ ಅವನು ಅದನ್ನೆಲ್ಲ ರೆಕಾರ್ಡ್​ ಮಾಡಿಕೊಂಡ ಎಂದಿದ್ದಾರೆ.

ನೀನು ನನ್ನನ್ನು ಬಿಟ್ಟು ಬೇರೆ ಯಾರನ್ನೂ ಮದುವೆ ಆಗೋಕೆ ಆಗಲ್ಲ ಅಂತ ಆತ ಬ್ಲಾಕ್​ ಮೇಲ್​ ಮಾಡಲು ಶುರುಮಾಡಿದ. ನನಗೇ ಆ ವಿಡಿಯೋ ಕಳಿಸಿದ. ಒಂದೇ ಕ್ಷಣದಲ್ಲಿ ನಾನು ನಮ್ಮ ಮನೆಯ ಮಾನ ಮರ್ಯಾದೆ ತೆಗೆದುಹಾಕಿಬಿಟ್ಟೆ. ಹುಡುಗಿಯಾಗಿ ಹುಟ್ಟಿದ್ದೇ ತಪ್ಪಾಯ್ತು ಅಂತ ಅಳಲು ಶುರುಮಾಡಿದೆ. ಕುಟುಂಬದವರು ಮತ್ತು ಸಂಬಂಧಿಕರೆಲ್ಲ ನನಗೆ ಬೈಯ್ದರು ಎಂದು ಆ ಕಹಿ ಘಟನೆಯನ್ನು ನೆನೆದು ಸೋನು ಕಣ್ಣೀರು ಹಾಕಿದ್ದಾರೆ.

ವಿಡಿಯೋ ಲೀಕ್ ಆದ ಬಳಿಕ ನಾನು ಅಪ್ಪನ ಮನೆಗೆ ಒಮ್ಮೆಯೂ ಹೋಗಿಲ್ಲ. ಯಾಕೆಂದರೆ ನನಗೆ ಮುಖ ತೋರಿಸೋಕೆ ಆಗ್ತಾ ಇಲ್ಲ. ತಪ್ಪು ಮಾಡಿದ್ದೀನಿ. ಅದನ್ನು ಒಪ್ಪಿಕೊಳ್ತೇನೆ. ಹುಡುಗಿಯರು ನನ್ನ ರೀತಿ ಸ್ಟ್ರಾಂಗ್​ ಆಗಿರಿ. ಒಮ್ಮೆ ಮಾಡಿದ ತಪ್ಪನ್ನು ಮತ್ತೆ ಮಾಡಬೇಡಿ. ಅವನ ಬಳಿ ಇದ್ದಿದ್ದು ಎರಡು ವಿಡಿಯೋ. ಒಂದು ವಿಡಿಯೋ ಲೀಕ್​ ಮಾಡಿದ್ದಾನೆ. ಅವನ ಹತ್ತಿರ ಇನ್ನೊಂದು ವಿಡಿಯೋ ಇದೆ. ಅದನ್ನು ಯಾವಾಗ ಬಿಡುತ್ತಾನೋ ನನಗೆ ನಿಜವಾಗಿ ಗೊತ್ತಿಲ್ಲ. ನನಗೆ ಆದಂತೆ ಬೇರೆ ಯಾರಿಗೂ ಆಗಬಾರದು ಎಂದಿದ್ದಾರೆ. .

ಈಗಾಲೇ ಸೋನು ಗೌಡರದ್ದು ಒಂದು ವಿಡಿಯೋ ನೋಡಿ ಕೆಲ ನೆಟ್ಟಿಗರು ಮಜಾ ಮಾಡಿ ಕಣ್ನು ತಂಪಾಗಿಸಿಕೊಂಡಿದ್ರೆ, ಇನ್ನು ಕೆಲವರು ಛೀ...ಥೂ..ಅಂತ ಕ್ಯಾಕರಿಸಿ ಉಗಿದಿದ್ದಾರೆ. ಇದರ ಮಧ್ಯೆ ಮತ್ತೊಂದು ವಿಡಿಯೋ ಲೀಕ್ ಆದ್ರೆ, ಸೋನು ಗೌಡ ಕಥೆ ಅಷ್ಟೇ...
 

click me!