ಪ್ರೇಮಿಗಳ ದಿನಕ್ಕಾಗಿ ವೈಷ್ಣವಿಗೆ ವಜ್ರಾಭರಣ ಗಿಫ್ಟ್! ಮದ್ವೆಗೆ ಸಜ್ಜಾಗ್ತಿದ್ಯಾ ಸೀತಾ-ರಾಮ ಜೋಡಿ? ಇಲ್ಲಿದೆ ಡಿಟೇಲ್ಸ್​

Published : Feb 07, 2025, 09:06 PM ISTUpdated : Feb 08, 2025, 02:31 PM IST
ಪ್ರೇಮಿಗಳ ದಿನಕ್ಕಾಗಿ ವೈಷ್ಣವಿಗೆ ವಜ್ರಾಭರಣ ಗಿಫ್ಟ್! ಮದ್ವೆಗೆ ಸಜ್ಜಾಗ್ತಿದ್ಯಾ ಸೀತಾ-ರಾಮ ಜೋಡಿ? ಇಲ್ಲಿದೆ ಡಿಟೇಲ್ಸ್​

ಸಾರಾಂಶ

ಜೀ ಕನ್ನಡದ 'ಸೀತಾರಾಮ' ಧಾರಾವಾಹಿಯ ಗಗನ್ ಮತ್ತು ವೈಷ್ಣವಿ ಜನಪ್ರಿಯ ಜೋಡಿ. ಇವರಿಬ್ಬರ ರೀಲ್ಸ್‌ಗಳು ಮತ್ತು ರೊಮ್ಯಾಂಟಿಕ್ ವಿಡಿಯೋಗಳು ಅಭಿಮಾನಿಗಳಲ್ಲಿ ಮದುವೆ ಊಹಾಪೋಹ ಹುಟ್ಟಿಸಿವೆ. ವ್ಯಾಲೆಂಟೈನ್ಸ್ ಡೇ ಗಿಫ್ಟ್ ಆಗಿ ಗಗನ್ ವೈಷ್ಣವಿಗೆ ವಜ್ರಾಭರಣ ಕೊಟ್ಟಿದ್ದು ಇದನ್ನು ಬಲಪಡಿಸಿದೆ. ಆದರೆ, ಇದು ಜಾಹೀರಾತಿನ ಭಾಗವಾಗಿದ್ದು, ಅಭಿಮಾನಿಗಳು ನಿರಾಸೆಗೊಂಡಿಲ್ಲ.

ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಸೀತಾರಾಮ ಸೀರಿಯಲ್‌ ನಾಯಕ, ನಾಯಕಿ ತಮ್ಮ ಕ್ಯೂಟ್‌ನೆಸ್‌ನಿಂದಲೂ ಸಖತ್ ಪಾಪ್ಯುಲರ್‌. ಗಗನ್ ಚಿನ್ನಪ್ಪ ಹಾಗೂ ವೈಷ್ಣವಿ ಈ ಕ್ಯೂಟ್ ಹೀರೋ ಹೀರೋಯಿನ್. ಇವರಿಬ್ಬರ ಕೆಮೆಸ್ಟ್ರಿ ಚೆನ್ನಾಗಿ ವರ್ಕೌಟ್ ಆಗ್ತಾ ಇದೆ. ಇಬ್ರೂ ಈ ಪಾತ್ರಕ್ಕೆ ಹೇಳಿ ಮಾಡಿಸಿದ ಹಾಗಿದ್ದಾರೆ ಅಂತ ಎಲ್ಲರೂ ಕಮೆಂಟ್ ಮಾಡ್ತಾರೆ.  ಆಗಾಗ್ಗೆ ಇವರು  ಸೇರಿ ರೀಲ್ಸ್​ ಮಾಡುತ್ತಲೇ ಇರುತ್ತಾರೆ. ಇದನ್ನು ನೋಡಿದವರು, ಇವರಿಬ್ಬರ ಮಧ್ಯೆ ಖಂಡಿತಾ ಕುಚ್ ಕುಚ್​ ನಡೆಯುತ್ತಿದೆ ಎಂದೇ ಹೇಳುತ್ತಾ ಬಂದಿದ್ದಾರೆ. ಇವರಿಬ್ಬರೂ ಅವಿವಾಹಿತರಾಗಿರುವ ಹಿನ್ನೆಲೆಯಲ್ಲಿ ಈ ಜೋಡಿಯ ಮದುವೆ ಮಾಡಿಸಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ನಂತರ ರೊಮಾಂಟಿಕ್​ ಸಾಂಗ್​ನ ವಿಡಿಯೋ ನೋಡಿದ ಮೇಲಂತೂ  ಮದುವೆ ಆಗ್ಲಿ ಅನ್ನೋ ಫ್ಯಾನ್ಸ್ ಒತ್ತಡ ಮತ್ತಷ್ಟು ಹೆಚ್ಚಾಗಿದೆ.  

ಇದೀಗ ಸೀತಾ ಅರ್ಥಾತ್​ ವೈಷ್ಣವಿ ಗೌಡ ಅವರಿಗೆ ರಾಮ್​ ಅರ್ಥಾತ್​ ಗಗನ್​ ಅವರು, ಪ್ರೇಮಿಗಳ ದಿನಕ್ಕೆ ಗಿಫ್ಟ್​ ಕೊಟ್ಟಿದ್ದಾರೆ. ಅದೂ ಸಾಧಾರಣ ಗಿಫ್ಟ್​ ಅಲ್ಲ, ಬದಲಿಗೆ ವಜ್ರಾಭರಣ. ​ ಜ್ಯೂವೆಲ್ಲರಿ ಷಾಪ್​ಗೆ ಹೋಗಿರುವ ಈ ಜೋಡಿ ಅಲ್ಲಿಯ ಆಭರಣಗಳನ್ನು ನೋಡಿದೆ. ಆಗ ರಾಮ್​ ವಜ್ರದ ನೆಕ್​ಲೆಸ್​ ಸೇರಿದಂತೆ ಕೆಲವೊಂದು ಆಭರಣಗಳನ್ನು ಗಿಫ್ಟ್​ ನೀಡಿದ್ದಾರೆ. ಆದ್ದರಿಂದ ಮೊದಲೇ ಇವರಿಬ್ಬರ ನಡುವೆ ಏನೋ ನಡೆಯುತ್ತಿದೆ ಎನ್ನುತ್ತಿರುವ ಅಭಿಮಾನಿಗಳು ಈಗ ತಾವು ಅಂದುಕೊಂಡದ್ದು ನಿಜವಾಯ್ತು. ಇವರಿಬ್ಬರೂ ಲವ್​ನಲ್ಲಿ ಬಿದ್ದಿದ್ದಾರೆ ಎಂದೇ ಬಣ್ಣಿಸುತ್ತಿದ್ದಾರೆ.

ನೀನೇನೆ ನನ್ನವನು ಎಂದು ಬಾಯ್ಬಿಟ್ಟ ವೈಷ್ಣವಿ, ಎದೆ ಮೇಲೆ ಕಾಲಿಟ್ಟಂಗಾಯ್ತು ಎಂದ ಗಗನ್​!

ಅಸಲಿಗೆ ಇದು ಜಾಹೀರಾತಿಯ ವಿಡಿಯೋ. ಪ್ರೇಮಿಗಳ ದಿನಕ್ಕೆ ಒಳ್ಳೊಳ್ಳೆ ಸೆಲೆಕ್ಷನ್​ ಇದೆ ಎನ್ನುವ ಹಿನ್ನೆಲೆಯಲ್ಲಿ ಈ ಜಾಹೀರಾತನ್ನು ಮಾಡಲಾಗಿದೆ. ಇದಕ್ಕೆ ಸೀತಾ ಮತ್ತು ರಾಮ್​ ಜೋಡಿಯನ್ನು ಸೆಲೆಕ್ಟ್​ ಮಾಡಲಾಗಿದೆ. ಇದು ಗೊತ್ತಿದ್ದರೂ ಫ್ಯಾನ್ಸ್​ ಮಾತ್ರ ಯಾರ ಕಣ್ಣೂ ಬೀಳದಿರಲಿ, ಇಬ್ಬರ ಜೋಡಿ ಶಾಶ್ವತವಾಗಿರಲಿ ಎಂದೇ ಹೇಳುತ್ತಿದ್ದಾರೆ. ಈ ಹಿಂದೆ ಕೂಡ ಇವರ ಮದುವೆ ಬಗ್ಗೆ ಸಾಕಷ್ಟು ಚರ್ಚೆಯಾಗಿತ್ತು.

ಕೆಲ ದಿನಗಳ ಹಿಂದೆ,  ವೈಷ್ಣವಿಯೇ ಗಗನ್​ ಬಳಿ ಮದುವೆ, ಮಕ್ಕಳ ವಿಷಯ ತೆಗೆದಿದ್ದು, ಇವರಿಬ್ಬರ ನಡುವೆ ಏನೋ ಇದೆ ಎನ್ನುವ ಎಂದೇ ಅಭಿಮಾನಿಗಳು ಅಂದುಕೊಂಡಿದ್ದರು.  ಪ್ರಸಿದ್ಧ ವ್ಯಕ್ತಿಯೊಂದಿಗೆ ಊಟ ಮಾಡುವುದಾದರೆ ಯಾರ ಜೊತೆ ಎಂದು ವೈಷ್ಣವಿ ಅವರನ್ನು ಕೇಳಿದಾಗ ಕೂಡಲೇ ಗಗನ್​ ನನ್ನ ಜೊತೆ ಎಂದಿದ್ದರು. ವೈಷ್ಣವಿ ಖಂಡಿತಾ ಇಲ್ಲ, ನಾನು ಓಡಿ ಹೋಗ್ತೀನಿ ಎಂದಿದ್ದಾರೆ. ನಿಮ್ಮ ಹೆಸರನ್ನು ಬದಲಾಯಿಸಿಕೊಳ್ಳುವುದಿದ್ದರೆ ಏನಂತ ಇಟ್ಟುಕೊಳ್ತೀರಾ ಕೇಳಿದಾಗ, ಕೂಡಲೇ ಗಗನ್​ ಅವ್ರು ವನಜಾಕ್ಷಿ ಎಂದಿದ್ದರು. ಆಗ ವೈಷ್ಣವಿ, ಇಲ್ಲ ವೈಷ್ಣೋದೇವಿಯಿಂದ ಈ ಹೆಸರು ಬಂದಿದ್ದು, ಹೆಸರು ಬದಲಾಯಿಸಿಕೊಳ್ಳಲ್ಲ ಎಂದಿದ್ದರು. ಲಾಟರಿ ಬಂದರೆ ಏನು ಮಾಡುತ್ತೀರಿ ಕೇಳಿದಾಗ, ಅಮ್ಮನ ಕೈಗೆ ಕೊಡುತ್ತೇನೆ ಎಂದರು ವೈಷ್ಣವಿ. ಆಗ ಗಗನ್​ ಎಲ್ಲಾ ಸುಳ್ಳು ಎಂದರು. ಆಗ ವೈಷ್ಣವಿ ಮಕ್ಕಳನ್ನು ಸಾಕುವ ಕಷ್ಟ ನಿಮಗೇನು ಗೊತ್ತು ಮದ್ವೆಯಾಗಿ ಮಕ್ಳು ಮಾಡಿಕೊಳ್ಳಿ ಎಂದಾಗ ಕೂಡಲೇ ಗಗನ್​ ನನ್ನ ಮನೆಯಲ್ಲಿ ಯಾರೂ ಹೆಣ್ಣೇ ನೋಡ್ತಾ ಇಲ್ವಲ್ಲಪ್ಪಾ ಅಯ್ಯೋ ಎಂದರು. ಅದಕ್ಕೆ ನೆಟ್ಟಿಗರು ಪಕ್ಕದಲ್ಲೇ ಇದ್ದಾಳಲ್ಲ ಅಂದಿದ್ದರು.  ಒಟ್ಟಿನಲ್ಲಿ ಇವರಿಬ್ಬರ ಮದುವೆ ಮಾಡಿಸದೇ ಅಭಿಮಾನಿಗಳು ಬಿಡುವಂತೆ ಕಾಣಿಸುತ್ತಿಲ್ಲ. 

ಮದ್ವೆ- ಮಕ್ಕಳು ಬಗ್ಗೆ ನಟಿ ವೈಷ್ಣವಿ ಬೋಲ್ಡ್​ ಮಾತು: ನಾಚಿ ನೀರಾದ ರಾಮ್​ ಪಾತ್ರಧಾರಿ ಗಗನ್!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ಫ್ರೀ ಪ್ರಾಡಕ್ಟ್ ನೀನು, ವೇಸ್ಟ್ ಬಾಡಿ.. ಆದಷ್ಟೂ ಬೇಗ ಹೋಗು'.. ಗಿಲ್ಲಿ ಮಾತಿಗೆ ಸೋಷಿಯಲ್ ಮೀಡಿಯಾ ಏನ್ ಹೇಳ್ತಿದೆ?
ಹೆಣ್ಣು ಹುಲಿ ಸುಷ್ಮಾ ರಾಜ್ ಹೊಟ್ಟೆ ಮೇಲೆ ಮರಿ ಹುಲಿ, ಭಿನ್ನವಾಗಿ ನಡೆದ ಪ್ರೆಗ್ನೆನ್ಸಿ ಫೋಟೋ ಶೂಟ್