
ಬೆಂಗಳೂರು (ಫೆ.07): ಬಿಗ್ ಬಾಸ್ ಫೈನಲಿಸ್ಟ್ ಮೋಕ್ಷಿತಾ ಪೈ ಅವರಿಗೆ ರಿಯಾಲಿಟಿ ಶೋ ಮುಗಿಸಿಕೊಂಡು ಬಂದ ನಂತರ ಭಾರೀ ಸಿನಿಮಾ ಆಫರ್‌ಗಳು ಸಿಗುತ್ತಿವೆ. ಇದರ ನಡುವೆಯೇ ಅಂಜನಾದ್ರಿ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣ ಮಾಡುತ್ತಿರುವ ಮೊದಲ ಸಿನಿಮಾದ ಟೈಟಲ್ ನಾಳೆಯೇ ರಿವೀಲ್ ಆಗಲಿದೆ.
ನಟಿ ಮೋಕ್ಷಿತಾ ಪೈ ಅವರು ಪಾರು ಧಾರಾವಾಹಿ ಮೂಲಕ ಕನ್ನಡಿಗರ ಮನೆ ಮಗಳಾಗಿದ್ದಾಳೆ. ಇದಾದ ನಂತರ ಕನ್ನಡಿಗರು ಪಾರು ಎಂತಲೇ ಗುರುತಿಸುತ್ತಿದ್ದ ಮೋಕ್ಷಿತಾ ಪೈಗೆ ತನ್ನ ಹೆಸರಿನಲ್ಲಿಯೇ ಖ್ಯಾತಿ ತಂದು ಕೊಟ್ಟಿದ್ದು ಬಿಗ್ ಬಾಸ್ ಕನ್ನಡ ಸೀಸನ್ 11ರ ರಿಯಾಲಿಟಿ ಶೋ. ಬಿಗ್ ಬಾಸ್ ಮನೆಯ ಸುಂದರೀರ ಸಾಲಿನಲ್ಲಿ ಮೋಕ್ಷಿತಾ ಹೆಚ್ಚು ಅಭಿಮಾನಿಗಳನ್ನು ಹೊಂದಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಆರಂಭದಲ್ಲಿ ಹಾಗೂ ಮಧ್ಯ ಭಾಗದಲ್ಲಿ ಸರಿಯಾಗಿ ಆಟವಾಡದೇ ಎಲಿಮಿನೇಟ್ ಆಗುವ ಹಂತದಲ್ಲಿದ್ದರು. ಇನ್ನೇನು ಫಿನಾಲೆ ವಾರಕ್ಕೆ ಒಂದೆರೆಡು ವಾರದ ಮುಂಚೆಯೇ ಸ್ವಂತವಾಗಿ ತನ್ನ ಶ್ರಮ ಎಷ್ಟಿದೆಯೋ ಅದರಿಂದಲೇ ಕಷ್ಟಪಟ್ಟು ಆಟವಾಡಿದ ಮೋಕ್ಷಿತಾಗೆ ಫಿನಾಲೆಗೆ ಹೋಗುವುದಕ್ಕೆ ಅವಕಾಶವೂ ಸಿಕ್ಕಿತು. ಇದಾದ ನಂತರ ಬಿಗ್ ಬಾಸ್ 3ನೇ ರನ್ನರ್ ಆಪ್ ಆಗಿ ಮನೆಯಿಂದ ಹೊರಗೆ ಬಂದಿದ್ದಾರೆ. ಈ ಸೀಸನ್‌ನಲ್ಲಿ ಗಾಯಕ ಹಳ್ಳಿಹೈದ ಹನುಮಂತ ಬಿಗ್ ಬಾಸ್ ಟ್ರೋಫಿ ವಿಜೇತರಾಗಿದ್ದಾರೆ.
ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ ಬೆನ್ನಲ್ಲಿಯೇ ಮೋಕ್ಷಿತಾಗೆ ಇರುವ ಅಭಿಮಾನಿಗಳ ಬಳಗ ತುಂಬಾ ದೊಡ್ಡದಾಗಿ ಬೆಳೆದಿರುವುದನ್ನು ನೋಡಿ ಆಶ್ಚರ್ಯಚಕಿತರಾಗಿದ್ದಾರೆ. ಜೊತೆಗೆ, ಮೋಕ್ಷಿತಾಗೆ ಹಲವು ನಿರ್ದೇಶಕರು ಕಥೆ ಹೇಳಿ ಸಿನಿಮಾದ ಚಾನ್ಸ್ ನೀಡುತ್ತಿದ್ದಾರೆ. ಆದರೆ, ಎಲ್ಲ ಸಿನಿಮಾಗಳನ್ನು ಕುರುಡಾಗಿ ಒಪ್ಪಿಕೊಳ್ಳದೇ ಹೊಸಬರಾಗಿದ್ದರೂ ಒಳ್ಳೆಯ ಕಥೆ ಹೊಂದಿದ ಸಿನಿಮಾಗೆ ಸಹಿ ಹಾಕಿ ಶೂಟಿಂಗ್‌ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಹಲವು ಸಿನಿಮಾ ಆಫರ್‌ಗಳ ನಡುವೆ ಅಂಜನಾದ್ರಿ ಪ್ರೊಡಕ್ಷನ್ ಅವರ ಮೊದಲ ಸಿನಿಮಾಗೆ ನಾಯಕಿಯಾಗಿ ನಟಿಸುತ್ತಿದ್ದಾರೆ.
ಇದನ್ನೂ ಓದಿ: ತ್ರಿವಿಕ್ರಮ್ ಮನದಾಸೆ ಅರಿತುಕೊಂಡ ಮೋಕ್ಷಿತಾ ಪೈ; ವಿಕ್ಕಿಗೆ ಜೋಡಿಯಾಗಲು ಗ್ರೀನ್ ಸಿಗ್ನಲ್!
ಅಂಜನಾದ್ರಿ ಪ್ರೊಡಕ್ಷನ್‌ನ ಮೊದಲ ಸಿನಿಮಾದ ಹೆಸರು ಇನ್ನೂ ರಿವೀಲ್ ಆಗಿಲ್ಲ. ಅದರಕ್ಕೆ ಈಗ ಸದ್ಯಕ್ಕೆ ಎಂಸಿಆರ್ (MCR Movie) ಎಂದು ಹೆಸರು ಕೊಡಲಾಗಿದೆ. ಆದರೆ, ನಾಳೆ ಎಂಸಿಆರ್ ಎಂದರೆ ಏನೆಂಬುದನ್ನು ಯಾವು ರಿವೀಲ್ ಮಾಡುವುದಾಗಿ ಸ್ವತಃ ನಟಿ ಮೋಕ್ಷಿತಾ ಪೈ ಅವರು ವಿಡಿಯೋವೊಂದನ್ನು ಪೋಸ್ಟ್ ಮಾಡಿಕೊಂಡಿದ್ದಾರೆ. ಈ ಪೋಸ್ಟ್‌ನಲ್ಲಿ ನಾಳೆ ಸಂಜೆ 6:00 ಗಂಟೆಗೆ ಅಂಜನಾದ್ರಿ ಪ್ರೊಡಕ್ಷನ್ಸ್‌ನ ಮೊದಲ ಸಿನಿಮಾ ಪ್ರಾಜೆಕ್ಟ್ #MCRನಲ್ಲಿ ಶೀರ್ಷಿಕೆ ಬಿಡುಗಡೆ ಮಾಡಲು ನಮಗೆ ತುಂಬಾ ಸಂತೋಷವಾಗಿದೆ. ಇದಕ್ಕೆ ಜಯರಾಮ್ ಗಂಗಪ್ಪನಹಳ್ಳಿ ನಿರ್ಮಾಣ ಮತ್ತು ಧನುಷ್ ಗೌಡ.ವಿ ನಿರ್ದೇಶನ ಮಾಡುತ್ತಿದ್ದಾರೆ.
ಇನ್ನು ನಟಿ ಮೋಕ್ಷಿತಾ ಅವರಿಗೆ ಎಂಸಿಆರ್ ಸಿನಿಮಾದಲ್ಲಿ ಜೊತೆಯಾಗಿ ವೇಣುಗೌಡ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಮೋಕ್ಷಿತಾ ಪೈ ಹಾಗೂ ವೇಣುಗೌಡ ಇಬ್ಬರೂ ಜೊತೆಯಾಗಿ ವೀಡಿಯೋ ಮಾಡಿದ್ದು, ಎಂಸಿಆರ್ ಸಿನಿಮಾದ ಟೈಟಲ್‌ನ ಪೂರ್ಣ ಹೆಸರನ್ನು ನಾಳೆ ರಿವೀಲ್ ಮಾಡುವುದಾಗಿ ತಿಳಿಸಿದ್ದಾರೆ. ನಮ್ಮ ಸಿನಿಮಾ ಟೈಟಲ್ ಎಂಸಿಆರ್ ಪೂರ್ಣ ಹೆಸರು ಏನಿದೆ ನೀವು ಕೂಡ ಗೆಸ್ ಮಾಡಿ ಎಂದು ಮೋಕ್ಷಿತಾ ಮನವಿ ಮಾಡಿದ್ದಾರೆ. ಮೋಕ್ಷಿತಾಳ ವಿಡಿಯೋಗೆ ಮತ್ತೊಬ್ಬ ಬಿಗ್‌ಬಾಸ್ ಸ್ಪರ್ಧಿ ಐಶ್ವರ್ಯಾ ಸಿಂಧೋಗಿ, ಸೀರಿಯಲ್ ನಟಿ ಮಾನ್ಸಿ ಜೋಶಿ ಅವರು ಕೂಡ ಶುಭಾಶಯ ಕೋರಿದ್ದಾರೆ. ಎಂಸಿಆರ್ ಎಂದರೆ ಏನೆಂದು ಕಾಮೆಂಟ್ ಮಾಡುವುದಕ್ಕೆ ನೆಟ್ಟಿಗರು ಹೆಚ್ಚಿನ ಆಸಕ್ತಿಯನ್ನು ತೋರಿಸಿಲ್ಲ.
ಇದನ್ನೂ ಓದಿ: BBK 11: ನಾನು ಗೌತಮಿ ಜಾಧವ್‌ನನ್ನು ಟಾರ್ಗೆಟ್ ಮಾಡ್ಲಿಲ್ಲ, ಆ ಟೈಮ್‌ನಲ್ಲಿ ಬಕೆಟ್ ಹೇಳಿಲ್ಲ: ಮೋಕ್ಷಿತಾ ಪೈ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.