ತರ್ಲೆ ಬಾಕ್ಸ್ ಯೂಟ್ಯೂಬ್ ಚಾನಲ್‌ನಲ್ಲಿ ನಿರಂತರ 12 ಗಂಟೆ ವರ್ಚುವಲ್ ಮನರಂಜನೆ!

By Kannadaprabha NewsFirst Published Jun 4, 2021, 1:28 PM IST
Highlights

ಕೊರೋನಾ ಸಂಕಷ್ಟದಲ್ಲಿದ್ದವರ ನೆರವಿಗೆ ಮೊದಲ ಬಾರಿಗೆ ವರ್ಚುವಲ್ ಮನರಂಜನೆ ಕಾರ್ಯಕ್ರಮ ಆಯೋಜಿಸಲಾಗಿದೆ. 
 

ಜೂನ್ 5ರಂದು ಮಧ್ಯಾಹ್ನ 12 ರಿಂದ ರಾತ್ರಿ 12 ಗಂಟೆವರೆಗೂ ನಾನ್ ಸ್ಟಾಪ್ ಆಗಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ 60ಕ್ಕೂ ಹೆಚ್ಚು ಕಲಾವಿದರು ಭಾಗಿಯಾಗುತ್ತಿದ್ದಾರೆ. ಹಾಡು, ಸಂಗೀತ, ಮಿಮಿಕ್ರಿ, ಏಕಪಾತ್ರ ಅಭಿನಯ, ಹಾಸ್ಯ, ಸ್ಟಾಂಡಪ್ ಕಾಮಿಡಿ ಸೇರಿದಂತೆ ವಿವಿಧ ರೀತಿಯ ಮನರಂಜನೆ ಕಾರ್ಯಕ್ರಮಗಳನ್ನು ನಡೆಸಲಿದ್ದಾರೆ.

ಪರ್ಪಲ್ ರಾಕ್ ಎಂಟರ್‌ಟೈನರ್‌ಸ್ ಹಾಗೂ ಮಲ್ಟಿಬಾಕ್‌ಸ್ ಎಂಟರ್‌ಟೈನ್‌ಮೆಂಟ್ ಜಂಟಿಯಾಗಿ ಆಯೋಜನೆ ಮಾಡಿರುವ ಈ ಕಾರ್ಯಕ್ರಮ ತರ್ಲೆ ಬಾಕ್‌ಸ್ ಯೂಟ್ಯೂಬ್ ಚಾನಲ್‌ನಲ್ಲಿ ನೇರ ಪ್ರಸಾರ ಆಗಲಿದೆ. ‘ವರ್ಚುಲ್ ಕಾರ್ಯಕ್ರಮ ನೋಡಿ ಇಷ್ಟ ಆದವರು ದೇಣಿಗೆ ನೀಡಬಹುದು. ಕಾರ್ಯಕ್ರಮದ ವಿಡಿಯೋದಲ್ಲೇ ಹಣ ನೀಡುವ ಲಿಂಕ್ ಹಾಕಿರುತ್ತೇವೆ. ಕೊರೋನಾ ಸಂಕಷ್ಟದಲ್ಲಿರುವವರಿಗೆ ಬಳಕೆ ಆಗಲಿದೆ’’ ಎನ್ನುತ್ತಾರೆ ಕಾರ್ಯಕ್ರಮದ ಆಯೋಜಕ ಗಣೇಶ್ ಪಾಪಣ್ಣ.

ಜೀ ಕನ್ನಡದಲ್ಲಿ 'ನೇತಾಜಿ ಸುಭಾಷ್ ಚಂದ್ರ ಬೋಸ್' ಧಾರಾವಾಹಿ ಆರಂಭ! 

ವಿಜಯ ರಾಘವೇಂದ್ರ, ಶುಭಾ ಪೂಂಜಾ, ಕಾವ್ಯ ಶೆಟ್ಟಿ, ರಘು ದೀಕ್ಷಿತ್, ದಿವ್ಯ ಉರುಡುಗ, ಕೆಎಂ ಚೈತನ್ಯ, ಅನಿರುದ್ಧ ಶಾಸ್ತ್ರಿ, ಅದ್ವಿತಿ ಶೆಟ್ಟಿ, ಅದ್ವಿಕ್ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ.

click me!