
ರಾಮನಗರ: ಬಿಗ್ ಬಾಸ್ ಮನೆ ಸುತ್ತಲಿನ ವಿವಾದದ ಹಿನ್ನೆಲೆಯಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ನರೇಂದ್ರಸ್ವಾಮಿ ಅವರು ಸ್ಪಷ್ಟನೆ ನೀಡಿದ್ದು, ಮಂಡಳಿ ಮತ್ತು ಬಿಗ್ ಬಾಸ್ ಶೋ ನಡುವೆ ಯಾವುದೇ ನೇರ ಸಂಬಂಧವಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಬಿಗ್ ಬಾಸ್ ಮನೆ ತೆರೆಯುವ ವಿಷಯದಲ್ಲಿ ಮಂಡಳಿ ವಿರೋಧದ ನಿಲುವು ತಾಳಿದೆ ಎಂಬ ವದಂತಿಗಳಿಗೆ ತಾವೇ ತೆರೆ ಎಳೆದಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ನರೇಂದ್ರಸ್ವಾಮಿ ಅವರು, ನಾನು ನಿನ್ನೆಯೇ ಎಲ್ಲವನ್ನೂ ಸ್ಪಷ್ಟಪಡಿಸಿದ್ದೇನೆ. ದಯವಿಟ್ಟು ಅರ್ಥ ಮಾಡಿಕೊಂಡುಕೊಳ್ಳಿ. ಪಿಸಿಬಿ (Pollution Control Board)ಗೂ ಬಿಗ್ ಬಾಸ್ ಶೋವಿಗೂ ಯಾವುದೇ ನೇರ ಸಂಬಂಧವಿಲ್ಲ. ನಾನು ಮಾಡಬೇಕಾದ ಎಲ್ಲಾ ಆಡಳಿತಾತ್ಮಕ ಆದೇಶಗಳನ್ನು ಈಗಾಗಲೇ ಮಾಡಿದ್ದೇನೆ. ಅದನ್ನು ಬಿಟ್ಟರೆ ಬೇರೆ ಯಾವುದೇ ವಿಷಯವೇ ಇಲ್ಲ ಎಂದು ಹೇಳಿದರು.
ಈ ಮೂಲಕ ಬಿಗ್ ಬಾಸ್ ಓಪನ್ ವಿಚಾರದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ನರೇಂದ್ರಸ್ವಾಮಿ ಉಲ್ಟಾ ಹೊಡೆದಿದ್ದಾರೆ. ನಾನು ನಿನ್ನೆಯೇ ಸ್ಪಷ್ಟ ಪಡಿಸಿದ್ದೇನೆ. ಪಿಸಿಬಿಗೂ ಬಿಗ್ ಬಾಸ್ ಗೂ ಯಾವುದೇ ಸಂಬಂಧ ಇಲ್ಲ. ದಯಮಾಡಿ ಅರ್ಥ ಮಾಡಿಕೊಳ್ಳಿ. ಅದು ಬಿಟ್ಟು ಬೇರೆ ಯಾವುದೇ ವಿಚಾರ ಇಲ್ಲ. ನಾನೇನು ಆದೇಶ ಮಾಡಬೇಕಾಗಿದೆಯೋ ಮಾಡಿ ಆಗಿದೆ. ಅದನ್ನಬಿಟ್ಟು ಬೇರೆ ಏನೂ ಇಲ್ಲ. ಮಂಡಳಿ ಆದೇಶದಲ್ಲೂ ಸ್ಪಷ್ವವಾಗಿದೆ. ನಾವು ಎಲ್ಲೂ ಕೂಡ ಬಿಗ್ ಬಾಸ್ ಗೆ ವಿರೋಧ ಇಲ್ಲ. ಹತ್ತಾರು ಬಾರಿ ನಾನು ಸ್ಪಷ್ಟವಾಗಿ ಉತ್ತರ ಕೊಟ್ಟಿದ್ದೀವಿ. ನಿಮ್ಮ ಉಪ ಪ್ರಶ್ನೆಗಳಿಗೆ ನಾನು ಉತ್ತರ ಕೊಡಲ್ಲ ಎಂದು ನರೇಂದ್ರಸ್ವಾಮಿ ಹೇಳಿಕೆ ನೀಡಿರುವುದು ಈಗ ಬಾರೀ ಚರ್ಚೆ ಹುಟ್ಟುಹಾಕಿದೆ.
ಮಂಡಳಿಯ ಆದೇಶದಲ್ಲಿಯೂ ಈ ವಿಷಯ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ನಾವು ಯಾವ ಹಂತದಲ್ಲೂ ಬಿಗ್ ಬಾಸ್ ಶೋಗೆ ವಿರೋಧ ತೋರಿಲ್ಲ. ಈ ಬಗ್ಗೆ ಹತ್ತಾರು ಬಾರಿ ಸ್ಪಷ್ಟನೆ ನೀಡಿದ್ದೇವೆ. ಉಪಪ್ರಶ್ನೆಗಳಿಗೆ ನಾನು ಉತ್ತರ ನೀಡುವುದಿಲ್ಲ ಎಂದೂ ಸ್ಪಷ್ಟಪಡಿಸಿದರು. ಈ ಹೇಳಿಕೆಗಳ ಮೂಲಕ ಬಿಗ್ ಬಾಸ್ ಮನೆ ತೆರೆಯುವ ಕುರಿತು ಮಾಲಿನ್ಯ ನಿಯಂತ್ರಣ ಮಂಡಳಿಯ ವಿರುದ್ಧ ಹರಿದಾಡುತ್ತಿದ್ದ ಆರೋಪಗಳಿಗೆ ನರೇಂದ್ರಸ್ವಾಮಿ ಅಂತಿಮ ಸ್ಪಷ್ಟನೆ ನೀಡಿದ್ದಾರೆ.
ಇನ್ನೊಂದು ಕಡೆ, ಬಿಡದಿ ಬಳಿ ಇರುವ ಜಾಲಿವುಡ್ ಸ್ಟುಡಿಯೋದಲ್ಲಿ ಚಟುವಟಿಕೆಗಳು ಸಂಪೂರ್ಣ ಸ್ಥಗಿತಗೊಂಡಿವೆ. ಕಳೆದ ಕೆಲವು ತಿಂಗಳುಗಳ ಕಾಲ ಪ್ರತಿ ದಿನ ಜನಸಂದಣಿಯಿಂದ ತುಂಬಿರುತ್ತಿದ್ದ ಸ್ಟುಡಿಯೋ ಈಗ ಸಂಪೂರ್ಣವಾಗಿ ಖಾಲಿ ಖಾಲಿಯಾಗಿ ಕಾಣಿಸುತ್ತಿದೆ. ಮಂಡಳಿಯ ಆದೇಶದ ನಂತರ, ಸ್ಟುಡಿಯೋದಲ್ಲಿ ಬಿಗ್ ಬಾಸ್ ಶೋ ಚಿತ್ರೀಕರಣಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಉಳಿದ ಎಲ್ಲಾ ಮನರಂಜನಾ ಹಾಗೂ ವಾಣಿಜ್ಯ ಚಟುವಟಿಕೆಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ.
ಜಾಲಿವುಡ್ ಆಡಳಿತ ಮಂಡಳಿ ಪ್ರಕಟಿಸಿರುವ ಮಾಹಿತಿಯ ಪ್ರಕಾರ ಸಿನೆಮಾ ಶೂಟಿಂಗ್‌ಗಳು,ವಾಟರ್ ಪಾರ್ಕ್ ಚಟುವಟಿಕೆಗಳು, ವಿವಿಧ ಗೇಮ್ ಹಾಗೂ ಸಾಹಸ ಕಾರ್ಯಕ್ರಮಗಳು,ಇವೆಲ್ಲವೂ ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಇದರಿಂದ ಸ್ಟುಡಿಯೋದಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಗೂ ಪರಿಣಾಮ ಬಿದ್ದಿದ್ದು, ಈಗಾಗಲೇ 15 ಮಂದಿ ಸಿಬ್ಬಂದಿಗಳಿಗೆ ರಜೆ ನೀಡಲಾಗಿದೆ.
ಕಳೆದ ವಾರ ಪರಿಸರ ನಿಯಮ ಉಲ್ಲಂಘನೆಯ ಹಿನ್ನೆಲೆಯಲ್ಲಿ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಜಾಲಿವುಡ್ ಸ್ಟುಡಿಯೋ ವಿರುದ್ಧ ಕ್ರಮ ಕೈಗೊಂಡು, ಶೂಟಿಂಗ್ ಚಟುವಟಿಕೆಗಳನ್ನು ಸ್ಥಗಿತಗೊಳಿಸಲು ಆದೇಶಿಸಿತ್ತು. ಇದರ ಪರಿಣಾಮವಾಗಿ ಬಿಗ್ ಬಾಸ್ ಮನೆಗೆ ಸೀಲ್ ಹಾಕಿ, ಸ್ಪರ್ಧಿಗಳನ್ನು ತಾತ್ಕಾಲಿಕವಾಗಿ ರೆಸಾರ್ಟ್‌ಗೆ ಸ್ಥಳಾಂತರಿಸಲಾಗಿತ್ತು.
ನಂತರ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮಧ್ಯಸ್ಥಿಕೆಯಿಂದ ಬಿಗ್ ಬಾಸ್ ಶೋಗೆ ಮಾತ್ರ ನಿರ್ದಿಷ್ಟ ಶರತ್ತುಗಳಡಿ ಅನುಮತಿ ನೀಡಲಾಗಿದ್ದು, ಸ್ಟುಡಿಯೋ ಸೀಲ್ ತೆರೆಯಲಾಗಿದೆ. ಆದರೆ ಇತರೆ ಚಟುವಟಿಕೆಗಳು ಮತ್ತೆ ಪ್ರಾರಂಭವಾಗಲು ಮಂಡಳಿಯ ಅನುಮತಿ ಮತ್ತು ತಾಂತ್ರಿಕ ಪರಿಷ್ಕರಣೆ ಅಗತ್ಯವಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.