ಲಕ್ಷಣದ 'ಭೂಪತಿ' ಜಗನ್ ಮುಂಬರುವ 'ಶ್ರೀಗೌರಿ'ಗೆ ಜೋಡಿ; ಸೋಷಿಯಲ್ ಮೀಡಿಯಾ ಚರ್ಚೆ ವೈರಲ್!

Published : Dec 18, 2023, 03:48 PM ISTUpdated : Dec 18, 2023, 04:10 PM IST
ಲಕ್ಷಣದ 'ಭೂಪತಿ' ಜಗನ್ ಮುಂಬರುವ 'ಶ್ರೀಗೌರಿ'ಗೆ ಜೋಡಿ; ಸೋಷಿಯಲ್ ಮೀಡಿಯಾ ಚರ್ಚೆ ವೈರಲ್!

ಸಾರಾಂಶ

ಲಕ್ಷಣ ಸೀರಿಯಲ್‌ನಲ್ಲಿ ಹೀರೋ ಆಗಿ ಮಿಂಚಿದ್ದ ಜಗನ್ ಅವರೇ ಮುಂಬರುವ ಶ್ರೀಗೌರಿ ಸೀರಿಯಲ್ ಹೀರೋ ಆಗಿರಬಹುದಾ ಎಂಬ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ಜೋರಾಗಿಯೇ ನಡೆಯುತ್ತಿದೆ.

ಕಲರ್ಸ್ ಕನ್ನಡದಲ್ಲಿ ಹೊಸ ಸೀರಿಯಲ್ ಶುರುವಾಗುತ್ತಿದೆ. ಈ ಬಗ್ಗೆ ಆಕರ್ಷಕ ಎನಿಸುವ ಪ್ರೊಮೋಗಳು ಹೊರಬರುತ್ತಿವೆ. ಈ ಮೊದಲು , ನಿಮ್ಮ  ಆಯ್ಕೆ A) ಇಂದು ರಾತ್ರಿ 9:15⁠
B) ಇಂದು ರಾತ್ರಿ 10:15⁠ ಎಂಬ ಪ್ರೊಮೋ ಬಿಡುಗಡೆಯಾಗಿತ್ತು. ಈಗ ಹೊಸ ಪ್ರೊಮೋ ರಿಲೀಸ್ ಆಗಿ ಭಾರೀ ಗಮನ ಸೆಳೆಯುತ್ತಿದೆ. ಹೊಸ ಪ್ರೊಮೊದಲ್ಲಿ 'ಹೂವಂತೆ ಅರಳುವ ಹುಡುಗಿ, ರಾತ್ರಿ ಬಾಡುವ ಭಯವಿಲ್ಲ ಇವಳಿಗೆ. ಹೆಮ್ಮೆಯಿಂದ ಅರ್ಪಿಸುವ ಹೊಸ ಕತೆ - ಶ್ರೀಗೌರಿ' ಎಂಬ ಪ್ರೊಮೋ ಕಲರ್ಸ್ ಕನ್ನಡದ ಅಧಿಕೃತ ಸೋಷಿಯಲ್ ಮೀಡಿಯಾದಲ್ಲಿ ರಾರಾಜಿಸುತ್ತಿದೆ. 

ಲಕ್ಷಣ, ಗೃಹಪ್ರವೇಶ ಮತ್ತು ರಕ್ಷಾ ಬಂಧನ ಸೀರಿಯಲ್ ನಿರ್ಮಾಣ ಸಂಸ್ಥೆಯಿಂದಲೇ ಈ ಹೊಸ ಶ್ರೀಗೌರಿ ಧಾರಾವಾಹಿ ನಿರ್ಮಾಣ ಆಗುತ್ತಿದೆ. ಲಕ್ಷಣ ಸೀರಿಯಲ್ ಬಹಳಷ್ಟು ಫೇಮಸ್ ಕೂಡ ಆಗಿತ್ತು. ಇದೇ ಮೇಕರ್ಸ್ ಕಡೆಯಿಂದ ಬರುತ್ತಿರುವ ಸೀರಿಯಲ್ ಎಂಬ ಕಾರಣಕ್ಕೆ ಶ್ರೀಗೌರಿ ಬಗ್ಗೆ ಈಗಾಗಲೇ ಟಿವಿ ವೀಕ್ಷಕ ಬಳಗದಿಂದ ನಿರೀಕ್ಷೆ ಗರಿಗೆದರಿದೆ. ಬಹುಶಃ ಬಿಗ್ ಬಾಸ್ ಗೇಮ್ ಶೋ ಮುಗಿದ ಮೇಲೆ ಈ ಸೀರಿಯಲ್ ಪ್ರಸಾರ ಆರಂಭವಾಗಲಿದೆ ಎನ್ನಬಹುದು.

 

ಲಕ್ಷಣ ಸೀರಿಯಲ್‌ನಲ್ಲಿ ಹೀರೋ ಆಗಿ ಮಿಂಚಿದ್ದ ಜಗನ್ ಅವರೇ ಮುಂಬರುವ ಶ್ರೀಗೌರಿ ಸೀರಿಯಲ್ ಹೀರೋ ಆಗಿರಬಹುದಾ ಎಂಬ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ಜೋರಾಗಿಯೇ ನಡೆಯುತ್ತಿದೆ. ಉತ್ತರ ಸದ್ಯಕ್ಕೆ ಸಿಕ್ಕಿಲ್ಲ, ಇದ್ದರೂ ಇರಬಹುದು, ಇಲ್ಲದೆಯೂ ಇರಬಹುದು. ಆದರೆ, ಹೊಸ ಸೀರಿಯಲ್‌ ಬರುತ್ತಿದೆ ಎಂಬ ಸುದ್ದಿಯೇ ಸೀರಿಯಲ್ ಪ್ರಿಯರಲ್ಲಿ ಭಾರೀ ಪುಳಕ ಹುಟ್ಟಿಸಿದೆ. 'ಪುಟ್ಟಗೌರಿ, ಮಂಗಳಗೌರಿ ಹೀಗೆ ಈಗಾಗಲೇ ಬಂದಿರುವ ಸೀರಿಯಲ್ ಹೆಸರುಗಳಂತೆ ಇದೀಗ ಶ್ರೀಗೌರಿ ಬರುತ್ತಿದ್ದಾಳೆ, ಒಟ್ಟಿನಲ್ಲಿ ಈ ಸೀರಿಯಲ್‌ ಲೋಕದವರಿಗೆ ಗೌರಿ ಬಿಟ್ಟರೆ ಗತಿಯಿಲ್ಲ' ಎಂದು ಹಲವರು ಸೋಷಿಯಲ್ ಮೀಡಿಯಾಗಳಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. 

ಒಟ್ಟಿನಲ್ಲಿ, ಪ್ರೋಮೋ ನೋಡಿದರೆ ಮುಂಬರುವ ಶ್ರೀಗೌರಿ ಸೀರಿಯಲ್ ಮೇಕಿಂಗ್ ರಿಚ್ ಆಗಿದೆ ಎನ್ನಬಹುದು. ಹೊರಾಂಗಣ ಲೊಕೇಶನ್‌ನಲ್ಲಿ, ಕೆರೆ, ದೋಣಿ ಹಿನ್ನೆಲೆಯಲ್ಲಿ ಮೂಡಿ ಬಂದಿರುವ ಪ್ರೊಮೋ ಭಾರಿ ಕುತೂಹಲ ಕೆರಳಿಸುತ್ತಿದೆ. ಯಾವ ವೇಳೆಯಲ್ಲಿ, ಯಾವತ್ತಿಂದ ಶ್ರೀಗೌರಿ ಟಿವಿಯಲ್ಲಿ ಮೂಡಿ ಬಂದು ಪ್ರೇಕ್ಷಕರಿಗೆ ದರ್ಶನ ನೀಡಲಿದ್ದಾಳೆ ಎಂಬುದನ್ನು ಕಾದು ನೋಡಬೇಕು. ಸದ್ಯ ಪ್ರೋಮೋ ನೋಡಿ ಖುಷಿ ಪಡುವುದಷ್ಟೇ ಉಳಿದಿರುವ ದಾರಿ. 

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅಸಮಾನ್ಯಳಲ್ಲಿ ಅಸಮಾನ್ಯ ಈ ಪುಟಾಣಿ: Naa Ninna Bidalaare ಹಿತಾ ನಿಬ್ಬೆರಗಾಗುವ ಫೋಟೋಶೂಟ್​!
Bigg Boss ಅಭಿಷೇಕ್​ಗೆ ದೊಡ್ಮನೆಯಿಂದ ಸಿಕ್ಕಿರೋ ಸಂಭಾವನೆ ಎಷ್ಟು? ಫ್ಯಾನ್ಸ್​ ನಿರೀಕ್ಷೆ ಸುಳ್ಳಾಗೋಯ್ತು!