
ʼಮಿಥುನ ರಾಶಿʼ ಧಾರಾವಾಹಿಯಲ್ಲಿ ರಾಶಿ ಪಾತ್ರ ಮಾಡಿದ್ದ ನಟಿ ವೈಷ್ಣವಿ ಕೌಂಡಿನ್ಯ ಆ ಧಾರಾವಾಹಿಯಲ್ಲಿ ಬಹಳ ಸಿಂಪಲ್ ಆಗಿದ್ದರು. ಈಗ ಇವರ ಫೋಟೋಶೂಟ್ ನೋಡಿದವರ ನಿದ್ದೆ ಹಾಳಾಗಿದೆಯಂತೆ. ಹೌದು, ವೈಷ್ಣವಿ ಕೌಂಡಿನ್ಯ ಬ್ಲೌಸ್ ಧರಿಸದೆ, ಸೀರೆ ಉಟ್ಟು ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ವೈಷ್ಣವಿ ಕೌಂಡಿನ್ಯ ಸೌಂದರ್ಯ ನೋಡಿ ಅನೇಕರು ಮರುಳಾಗಿದ್ದಾರೆ.
ಬ್ಲೌಸ್ ಇಲ್ಲದೆ ಸೀರೆ ಉಟ್ಟರು!
ವೈಷ್ಣವಿ ಕೌಂಡಿನ್ಯ ಅವರು ಸೋಶಿಯಲ್ ಮೀಡಿಯಾದಲ್ಲಿ ಒಂದು ಫೋಟೋ ಶೇರ್ ಮಾಡಿದ್ದಾರೆ. ಬ್ಲೌಸ್ ಇಲ್ಲದೆ ಅವರು ಸೀರೆಯುಟ್ಟು ಮಿಂಚಿದ್ದಾರೆ. ಈ ಫೋಟೋ ನೋಡಿ ವೈಷ್ಣವಿ ಸೌಂದರ್ಯದ ಬಗ್ಗೆ ಭಾರೀ ಮೆಚ್ಚುಗೆ ಸಿಕ್ಕಿದೆ, ಹಾಗೆಯೇ ನೆಗೆಟಿವ್ ಕಾಮೆಂಟ್‌ಗಳು ಬಂದಿವೆ. ಟ್ರೆಡಿಷನಲ್, ಮಾಡರ್ನ್ ಎಂದು ವೈಷ್ಣವಿ ಕೌಂಡಿನ್ಯ ಅವರು ಆಗಾಗ ವಿವಿಧ ಸ್ಟೈಲ್‌ನಲ್ಲಿ ಫೋಟೋಶೂಟ್ ಮಾಡಿಸಿಕೊಳ್ಳುತ್ತಿರುತ್ತಾರೆ.
ಮಿಥುನ ರಾಶಿಯ ಸರಳ ಸುಂದರಿ ವೈಷ್ಣವಿ ಈವಾಗ ಸಖತ್ ಬೋಲ್ಡ್
ʼಮಿಥುನರಾಶಿʼ ಅವಕಾಶ ಸಿಕ್ಕಿದ್ದು ಹೇಗೆ?
ನಟನೆಯಲ್ಲಿ ಆಸಕ್ತಿ ಇದ್ದಿದ್ದರಿಂದ ಕಾಲೇಜಿನಲ್ಲಿದ್ದಾಗಲೇ ವೈಷ್ಣವಿ ಕೌಂಡಿನ್ಯ ಅವರು ಆಡಿಶನ್ಸ್ ಕೊಡುತ್ತಿದ್ದರು. ಹೀಗೆಯೇ ಅವರಿಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿದ್ದ 'ಶಾಂತಂ ಪಾಪಂ' ಧಾರಾವಾಹಿಯಲ್ಲಿ ನಟಿಸುವ ಅವಕಾಶ ಬಂತು. ಅದನ್ನು ನೋಡಿ 'ಮಿಥುನ ರಾಶಿ' ಧಾರಾವಾಹಿಗೆ ಆಯ್ಕೆ ಮಾಡಿಕೊಂಡರು. ಶಂಕರ್ ನಾಗ್ ಅಭಿಮಾನಿಯಾದ ರಾಶಿ ಆಟೋ ಓಡಿಸುತ್ತಾಳೆ, ಅಷ್ಟೇ ಅಲ್ಲದೆ ಮನೆ ನಿಭಾಯಿಸುತ್ತಾಳೆ. ಅಕ್ಕ ಸುರಕ್ಷಾ ಖರ್ಚು ಮಾಡುತ್ತ, ಶೋಕಿ ಮಾಡಿದರೂ ಕೂಡ ಅವಳು ಮಾತ್ರ ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಹಗಲು-ರಾತ್ರಿ ದುಡಿದು ಹಣ ಸಂಪಾದನೆ ಮಾಡಿ ಮನೆಗೆ ತಂದುಕೊಡುತ್ತಾಳೆ. ಈ ಪಾತ್ರ ಅನೇಕರಿಗೆ ಇಷ್ಟ ಆಗಿತ್ತು. ವೈಷ್ಣವಿ ಅವರು ಹೊರಗಡೆ ಹೋದಾಗೆಲ್ಲ “ನೀವು ನಿಜವಾಗಿಯೂ ಆಟೋ ಓಡಸ್ತೀರಾ?” ಎಂದು ಕೇಳುತ್ತಿದ್ದರು.
ಮನೆ ಖರೀದಿ ಮಾಡಿರೋ ವೈಷ್ಣವಿ!
ʼಬಿಗ್ ಬಾಸ್ ಮಿನಿ ಸೀಸನ್ʼನಲ್ಲಿಯೂ ವೈಷ್ಣವಿ ಅವರು ಭಾಗವಹಿಸಿದ್ದರು. ಈಗ ಅವರು ಕೆಲ ವರ್ಷಗಳಿಂದ ಬೇರೆ ಭಾಷೆಯಲ್ಲಿ ನಟಿಸುತ್ತಿದ್ದಾರೆ, ಅಲ್ಲಿಯೇ ಅವರು ಒಂದಾದಮೇಲೆ ಒಂದರಂತೆ ಪ್ರಾಜೆಕ್ಟ್‌ಗಳನ್ನು ಮಾಡುತ್ತಿದ್ದಾರೆ. ಕಳೆದ ವರ್ಷ ಅವರು ಹೊಸ ಮನೆಗೆ ಕೂಡ ಕಾಲಿಟ್ಟರು. ಚಿಕ್ಕ ವಯಸ್ಸಿನಲ್ಲಿಯೇ ಅವರು ಮನೆ ಖರೀದಿಸಿ ಸಾಧನೆ ಮಾಡಿದ್ದು, ಅನೇಕರಿಗೆ ಅಚ್ಚರಿ ಮೂಡಿಸಿತ್ತು.
ಧಾರಾವಾಹಿಯಲ್ಲಿ ಅಮ್ಮನ ಪಾತ್ರ, ರಿಯಲ್ ಲೈಫಲ್ಲಿ ಫುಲ್ ಸ್ಟೈಲಿಷ್!
ನಟನೆ ಜೊತೆಗೆ ಶಿಕ್ಷಣದಲ್ಲಿ ವೈಷ್ಣವಿ ಮುಂದು!
ನಟನೆಗೆ ಬಂದಮೇಲೆ ವೈಷ್ಣವಿ ಅವರು ಓದನ್ನು ಬಿಡಲಿಲ್ಲ. ಎರಡನ್ನೂ ಚಾಲೆಂಜ್ ಆಗಿ ತಗೊಂಡು, ಶಿಕ್ಷಣ ಮುಂದುವರೆಸಿದರು. ವೈಷ್ಣವಿ ಅವರು ಒಳ್ಳೆಯ ಮಾರ್ಕ್ಸ್ ತಗೊಳ್ತಾರೆ ಎನ್ನೋದು ಗೊತ್ತಿದ್ದಕ್ಕೆ ಅವರ ಮನೆಯವರು ಕೂಡ ಏನೂ ಹೇಳಲಿಲ್ಲ. ಕ್ಲಾಸಿಕಲ್ ಡ್ಯಾನ್ಸರ್ ಆಗಿರೋ ವೈಷ್ಣವಿ ಅವರು ನಟನೆಯಲ್ಲಿಯೂ ಸಕ್ರಿಯವಾಗಿದ್ದಾರೆ. ಹೀಗಾಗಿ ಇವರ ಬಗ್ಗೆ ಮನೆಯಲ್ಲಿ ಫುಲ್ ಖುಷಿ ಇದೆಯಂತೆ.
ಚಿತ್ರರಂಗದಲ್ಲಿ ಸಾಕಷ್ಟು ಕಲಿತಿರುವ ವೈಷ್ಣವಿ ಕೌಂಡಿನ್ಯ!
ಪಿಯುಸಿಯಲ್ಲಿದ್ದಾಗಲೇ ವೈಷ್ಣವಿ ಕೌಂಡಿನ್ಯ ಅವರು ಚಿತ್ರರಂಗಕ್ಕೆ ಕಾಲಿಟ್ಟರು, ಸೀರಿಯಲ್‌ಗೆ ಹೀರೋಯಿನ್ ಆದರು. ಕೆಲವರು ವೈಷ್ಣವಿಯನ್ನು ಚೈಲ್ಡ್ ಎಂದು ಕರೆದಿದ್ದರಂತೆ. ಚಿತ್ರರಂಗದಲ್ಲಿ ಬ್ಯುಸಿ ಇರುವ ವೈಷ್ಣವಿ ಅವರು ಅನೇಕ ವಿಷಯಗಳನ್ನು ಕಲಿತಿದ್ದಾರಂತೆ. ಈಗ ವೈಷ್ಣವಿ ಅವರ ಲೈಫ್‌ಸ್ಟೈಲ್ ಬದಲಾಗಿದ್ದು, ಸಿನಿಮಾವಿರಲೀ, ಸೀರಿಯಲ್ ಇರಲೀ ಸೆಟ್‌ನಲ್ಲಿ ನಾವು ಹೇಗೆ ಇರಬೇಕು ಅಂತ ಕಲಿತಿದ್ದಾರಂತೆ. ಈ ರಂಗದಲ್ಲಿ ಹೇಗಿರಬೇಕು, ಯಾರ ಜೊತೆ ಹೇಗಿರಬೇಕು, ಹೇಗೆ ಮಾತನಾಡಬೇಕು ಎಂದು ಕೂಡ ಅವರು ಕಲಿತಿದ್ದಾರಂತೆ.
ವೈಷ್ಣವಿ ಕೌಂಡಿನ್ಯ ಅವರು ಮತ್ತೆ ಯಾವಾಗ ಕನ್ನಡದಲ್ಲಿ ನಟಿಸ್ತಾರೆ ಎಂದು ಕಾದು ನೋಡಬೇಕಾಗಿದೆ. ಈಗ ಅವರಿಗೆ 21 ವರ್ಷ ವಯಸ್ಸು ಎನ್ನಲಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.