ಮೆಡಿಕಲ್‌ ಸಿಬ್ಬಂದಿಗಳ ವೈಯಕ್ತಿಕ ಕಥೆ; ಒಳ್ಳೆಯ ರೇಟಿಂಗ್‌ ಪಡೆದು, ಕನ್ನಡದಲ್ಲಿ ರಿಲೀಸ್‌ ಆದ Heart Beat Series;

Published : Nov 30, 2025, 12:25 PM IST
heart beat series

ಸಾರಾಂಶ

OTT Release This Week: ಕನ್ನಡದಲ್ಲಿ ಈಗಾಗಲೇ ಸಾಕಷ್ಟು ಸಿರೀಸ್‌ಗಳು ಮೂಡಿ ಬರುತ್ತಿವೆ. ಅದರಂತೆ ಹಾರ್ಟ್‌ಬೀಟ್‌ ಎನ್ನುವ ಸಿರೀಸ್‌ ಕೂಡ ಪ್ರಸಾರ ಆಗಿದೆ, ಇದರಲ್ಲಿ ಮೆಡಿಕಲ್‌ ಲೋಕ ಹಾಗೂ ಅಲ್ಲಿನ ಸಿಬ್ಬಂದಿಗಳ ಕುರಿತ ಕಥೆಯಿದೆ.

28 ನವೆಂಬರ್ 2025ರಿಂದ Jio Hot Star ವೇದಿಕೆಯಲ್ಲಿ ತನ್ನ ಬಹುನಿರೀಕ್ಷಿತ ಮೆಡಿಕಲ್ ಡ್ರಾಮಾ ಸರಣಿ “ಹಾರ್ಟ್‌ಬೀಟ್” ಅನ್ನು ಕನ್ನಡದಲ್ಲಿ ಪ್ರಾರಂಭಿಸಿದೆ. ಇದರಲ್ಲಿ 100 ಎಪಿಸೋಡ್‌ಗಳಿವೆ. ವೈದ್ಯಕೀಯ ಲೋಕದ ಸವಾಲುಗಳು, ಸಂಬಂಧಗಳಲ್ಲಿ ಬರುವ ಸಂಘರ್ಷಗಳು, ಮಾನವೀಯ ಭಾವನೆಗಳ ರೋಚಕ ಸಂಯೋಜನೆಯನ್ನು ಇಲ್ಲಿದ್ದು, ಪ್ರೇಕ್ಷಕರಿಗೆ ಮಾತ್ರ ಮನರಂಜನೆಯ ಹಬ್ಬ ಎನ್ನಬಹುದು.

ಒಳ್ಳೆಯ ರೇಟಿಂಗ್‌ ಸಿಕ್ಕಿದೆ

ಈ ಒಂದು ಶೋಗೆ ಪ್ರೇಕ್ಷಕರಿಂದ ಅತ್ಯಂತ ಉತ್ತಮ ಪ್ರತಿಕ್ರಿಯೆ ಕೂಡ ಸಿಕ್ಕಿದೆ. IMDB ರೇಟಿಂಗ್ 8.6 ನೀಡಿದೆ. ಇದರಿಂದಲೇ ಈ ಸರಣಿಯ ಗುಣಮಟ್ಟ ಭಾವುಕ ಕಥೆ ಹೇಗಿದೆ ಎಂದು ಗೊತ್ತಾಗುವುದು.

ಪಾತ್ರಧಾರಿಗಳು ಯಾರು?

ದೀಪಾ ಬಾಲು, ಚಾರುಕೇಶ್, ಜೊತೆಗೂಡಿ ಅನುಮೋಲ್, ಕಾರ್ತಿಕ್ ಕುಮಾರ್ ಹಲವಾರು ಕಲಾವಿದರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ದೀಪಕ್ ಸುಂದರರಾಜನ್ ಬರೆದಿದ್ದು, ಅಬ್ದುಲ್ ಕಬೀಝ್ ಮತ್ತು ಚಿದಂಬರಂ ಮಣಿವಣ್ಣನ್ ನಿರ್ದೇಶಿಸಿದ್ದಾರೆ.

ಕಥೆ ಏನು?

ಅಮೇರಿಕದ ಖ್ಯಾತ ಮೆಡಿಕಲ್ ಡ್ರಾಮಾಗಳಾದ ನ್ಯೂ ಆಮ್ಸ್‌ಟರ್ಡ್ಯಾಮ್, ಗ್ರೇ’ಸ್ ಅನಾಟಮಿ ಯ ಶೈಲಿಯನ್ನು ಈ ಸಿರೀಸ್‌ ಹೋಲುವುದು. ಗಾಲ್ಪಿಕ RK ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆ ಹಿನ್ನಲೆಯಲ್ಲಿ ಇಟ್ಟುಕೊಂಡಿದೆ. ಇಲ್ಲಿ ಸರ್ಜಿಕಲ್ ಇಂಟರ್ನ್‌ಗಳು, ರೆಸಿಡೆಂಟ್‌ಗಳು, ಅಟೆಂಡಿಂಗ್ ವೈದ್ಯರ ದಿನನಿತ್ಯದ ವೃತ್ತಿಜೀವನದ ಒತ್ತಡಗಳು, ಅವರ ವೈಯಕ್ತಿಕ ಬದುಕಿನ ಸಂಘರ್ಷಗಳು ನೈಜವಾಗಿ ಮೂಡಿ ಬಂದಿದೆ.

ಸೀಸನ್ 1 ಕಥಾ ಸಾರಾಂಶವೇನು?

ಹಾರ್ಟ್‌ಬೀಟ್ ಸಿರೀಸ್‌ನಲ್ಲಿ ರಿನಾ ಎಂಬ ಪ್ರತಿಭಾವಂತ ಯುವ ವೈದ್ಯೆಯ ಕಥೆ ಇಲ್ಲಿದೆ. ಜನಪ್ರಿಯ ಜನರಲ್ ಸರ್ಜನ್ ಡಾ. ರಧಿ ಅವರಿಂದ ದೂರ ಆಗಿರುವ ಮಗಳು ಎಂಬುದು ಗೊತ್ತಾದಾಗ, ರಿನಾ, ರಧಿಯ ಜೀವನಗಳು ಹೊಸ ಟ್ವಿಸ್ಟ್‌ ಪಡೆಯುತ್ತವೆ. RK ಹಾಸ್ಪಿಟಲ್‌ನ ಸರ್ಜಿಕಲ್ ರೆಸಿಡೆನ್ಸಿ ಪ್ರೋಗ್ರಾಂಗೆ ಸೇರಿರುವ ರಿನಾ, ತನ್ನ ಸಹ-ಇಂಟರ್ನ್‌ಗಳಾದ ತೇಜು, ಗುಣ, ನವೀನ್, ರಾಕಿ, ಹಾಗೂ ಹಿರಿಯ ರೆಸಿಡೆಂಟ್‌ಗಳಾದ ಅನಿತಾ, ರವಿ ಅವರೊಂದಿಗೆ ವೈಯಕ್ತಿಕ-ವೃತ್ತಿಜೀವನದ ಒತ್ತಡಗಳನ್ನು ನಿಭಾಯಿಸುವ ಪ್ರಯತ್ನ ಮಾಡುತ್ತಾಳೆ.

ಆಸ್ಪತ್ರೆ ಸ್ಥಾಪಕ RK ಅವರ ಮಗ ಅರ್ಜುನ್, ರಿನಾ ಜೀವನದಲ್ಲಿ ಪ್ರೇಮದ ಹೊಸ ಅಧ್ಯಾಯವನ್ನು ತೆರೆಯುವಲ್ಲಿ ಪ್ರಮುಖ ಪಾತ್ರವಹಿಸ್ತಾನೆ. ಆದರೆ ಭೂತಕಾಲದ ರಹಸ್ಯಗಳು ಬೆಳಕಿಗೆ ಬರುತ್ತಿದ್ದಂತೆ, ಸಂಬಂಧಗಳು, ಕರ್ತವ್ಯಗಳು, ಭಾವನೆಗಳು ಪರಸ್ಪರ ಮುಖಾಮುಖಿಯಾಗುತ್ತವೆ. ಹಾರ್ಟ್‌ಬೀಟ್ ವೈದ್ಯಕೀಯ ಜಗತ್ತಿನ ಮಾನವೀಯ ಮುಖವನ್ನು ಹಿಡಿದಿಡುವ, ಹೃದಯಕ್ಕೆ ಹತ್ತಿರದ ಕಥೆಗಳೊಂದಿಗೆ ಪ್ರೇಕ್ಷಕರನ್ನು ಆಕರ್ಷಿಸಲು ಸಜ್ಜಾಗಿದೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಟಾಸ್ಕ್ ಆಡದೇ ಈ ವಾರದ ‘ಕ್ಯಾಪ್ಟನ್’ ಆದ ಸ್ಪಂದನಾ.. ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್!
ಹೊರ ಹೋದ್ಮೇಲೆ ನೀನೇ ಟ್ರೇನ್ ಮಾಡ್ಬೇಕಲ್ವಾ ! ಮನಸ್ಸಿನ ಮಾತು ಹೊರ ಹಾಕಿದ ರಾಶಿಕಾ