
ರಾಮನಗರದಲ್ಲಿ ಜನರು ಕಬ್ಜಾ ಶರಣು ಹಾಗೂ ಸಕ್ಕರೆ ನಾಡು ಕೆಂಪಣ್ಣ ಅವರಿಗೆ ಹಲ್ಲೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಇದರ ನಡುವೆಯೇ 200ಕೆ ಫಾಲೋವರ್ಸ್ ಹೊಂದಿರುವ ಕಬ್ಜಾ ಶರಣು ಅಳುತ್ತಲೇ ಸೋಶಿಯಲ್ ಮೀಡಿಯಾಗೆ ಗುಡ್ ಬೈ ಹೇಳಿದ್ದಾರೆ.
ಈ ಬಗ್ಗೆ ವಿಡಿಯೋದಲ್ಲಿ ಮಾತನಾಡಿರುವ ಕಬ್ಜಾ ಶರಣು ಅವರು, 'ನಾನು ನಿಮ್ಮ ಕಬ್ಜಾ ಶರಣು. ಸೋಶಿಯಲ್ ಮೀಡಿಯಾಗೆ ಇದು ನನ್ನ ಲಾಸ್ಟ್ ವಿಡಿಯೋ ಆಗಿರುತ್ತದೆ. ಇನ್ಮೇಲೆ ಪಾದಯಾತ್ರೆ, ನಿಮಗೆ ಚಾಲೆಂಜಸ್ ಅಂತಾ ತೊಂದರೆ ಕೊಡುವುದಿಲ್ಲ. ನಮ್ಮ ಸೋಶಿಯಲ್ ಮೀಡಿಯಾ ಜರ್ನಿಗೆ ಇಲ್ಲಿವರೆಗೂ ಯಾರಾರು ಸಪೋರ್ಟ್ ಮಾಡುತ್ತಾ ಬಂದಿದ್ದೀರೋ ಅವರೆಲ್ಲರಿಗೂ ತುಂಬು ಹೃದಯದ ಧನ್ಯವಾದಗಳು. ಮತ್ತು ನನ್ನ 200ಕೆ ಫ್ಯಾಮಿಲಿ (2 ಲಕ್ಷ ಫಾಲೋವರ್ಸ್‌ಗಳು) ಸದಸ್ಯರಿಗೂ ಧನ್ಯವಾದಗಳು.
ನಿನ್ನೆ ನನ್ನ ಕುರಿತಾಗಿ ಒಂದು ವಿಡಿಯೋ ವೈರಲ್ ಆಗಿರುತ್ತದೆ. ಅದರಲ್ಲಿ ನನ್ನ ಮೇಲೆ ಹಲ್ಲೆ ಮಾಡುತ್ತಿರುತ್ತಾರೆ. ಆ ವಿಡಿಯೋ ನೋಡಿ ತುಂಬಾ ಜನ ಖುಷಿ ಪಟ್ಟಿದ್ದೀರಿ. ತುಂಬಾ ಜನ ಇಡೀ ಕರ್ನಾಟಕದ ಜನರಿಗೆ ತಲುಪುವಂತೆ ಶೇರ್ ಮಾಡಿಕೊಂಡಿದ್ದೀರಿ. ಜೊತೆಗೆ ಇನ್ನು ತುಂಬಾ ಜನರು ನಮ್ಮ ಕುಟುಂಬದ ಜನರಿಗೆ ತಲುಪುವಂತೆ ವೀಡಿಯೋವನ್ನು ಅವರಿಗೆ ಕಳಿಸಿದ್ದೀರಿ. ಇಂತಹ ಎಲ್ಲ ಒಳ್ಳೆಯ ಮನಸ್ಸುಗಳಿಗೂ ಧನ್ಯವಾದಗಳು ಎಂದು ಮಾರ್ಮಿಕವಾಗಿ ಮಾತನಾಡುತ್ತಾ ದುಃಖ ವ್ಯಕ್ತಪಡಿಸಿದ್ದಾರೆ.
ನಿನ್ನೆ ಏನಾಯ್ತು ಅಂತಾ ಒಂದು ಕ್ಲಾರಿಟಿ ಕೊಡುತ್ತೇನೆ. ಮಂಡ್ಯದಲ್ಲಿ ನಿನ್ನೆ ಮಂಜುನಾಥ್ ಕೆ.ಆರ್. ಪೇಟೆ, ಚೇತನ್ ದುರ್ಗಾ ಸರ್ ಸೇರಿ ಹೊಸ ವರ್ಷಕ್ಕೆಂದು ಬೂದಿಗೆರೆಗೆ ದೇವರ ದರ್ಶನಕ್ಕೆ ಹೋಗಿರುತ್ತೇವೆ. ದರ್ಶನ ಮಾಡುವಂತಹ ಸಂದರ್ಭದಲ್ಲಿ ರವಿ ಮಂಡ್ಯ ಹಾಗೂ ಸಕ್ಕರೆನಾಡು ಕೆಂಪಣ್ಣ ಎಲ್ಲರೂ ಬಂದಿರುತ್ತಾರೆ. ಎಲ್ಲರೂ ಸೇರಿ ದೇವರ ದರ್ಶನ ಮಾಡಿಕೊಂಡು, ಇನ್ನೇನು ನಮ್ಮ ಪಾಡಿಗೆ ನಾವು ವಾಪಸ್ ಹೋಗಲು ಮುಂದಾಗುತ್ತೇವೆ. ಆಗ ಬೇರೆಡೆಯಿಂದ ಬಂದಿದ್ದ ಎಲ್ಲರೂ ಬೆಂಗಳೂರಿಗೆ ಒಟ್ಟಿಗೆ ಹೋಗೋಣ ಎಂದುಕೊಂಡಿದ್ದೆ.
ಆಗ ರವಿ ಮಂಡ್ಯ ಅವರು ನಮ್ಮ ಪರಿಚಯದವರು ಒಬ್ಬರು ಮಾಗಡಿ ಸ್ಟೇಷನ್‌ನಲ್ಲಿ ಇದ್ದಾರೆ ಅವರನ್ನು ಮಾತನಾಡಿಸಿಕೊಂಡು ಹೋಗೋಣ ಅಂತಾ ಹೇಳಿದರು. ಆದ್ರೆ, ಸ್ಟೇಷನ್‌ನಲ್ಲಿ ಯಾರು ಇದ್ದಾರೆ ಎನ್ನುವುದೇ ನನಗೆ ಗೊತ್ತಿಲ್ಲ, ಅವರ ಪರಿಚಯವೂ ಇರುವುದಿಲ್ಲ. ನನಗೆ ಗೊತ್ತಿದ್ದಿದ್ದು ರವಿ ಮಂಡ್ಯ ಅಣ್ಣ ಮತ್ತು ಕೆಂಪಣ್ಣ ಮಾತ್ರ. ಅವರು ಹೇಳಿದಾಗ ಸರಿ ಹೋಗೋಣ ಎಂದು ಮಾಗಡಿ ಪೊಲೀಸ್ ಠಾಣೆಗೆ ಹೋಗುತ್ತೇವೆ. ಅಲ್ಲಿ ಏನು ನಡೆಯುತ್ತದೆ ಎಂಬ ವಿಚಾರವೂ ನನಗೆ ಗೊತ್ತಿರಲಿಲ್ಲ. ಅವರಿಬ್ಬರೂ ಠಾಣೆಯೊಳಗೆ ಹೋಗಿ ಮಾತನಾಡಿಕೊಂಡು ಹೊರಗೆ ಬಂದಾಗ ಊರಿನ ಜನರೆಲ್ಲರೂ ಸೇರಿಕೊಂಡಿರುತ್ತಾರೆ. ಅವರು ಏನೂ ಮಾತನಾಡಿಸದೇ ಏಕಾಏಕಿ ಹಲ್ಲೆ ಮಾಡುತ್ತಾರೆ. ಹಲ್ಲೆ ಮಾಡುವವರಿಗೆ ನಾನು ಹೇಳುತ್ತೇನೆ, ಅಣ್ಣಾ ಹೊಡಿಬೇಡಿ. ನಮ್ಮಮ್ಮನ ಆಣೆಗೂ, ಚಾಮುಂಡಿ ತಾಯಿ ಆಣೆಗೂ ಇಲ್ಲಿ ಏನು ನಡೆಯುತ್ತಿದೆ ಎಂಬ ವಿಚಾರವೇ ಗೊತ್ತಿಲ್ಲ ಎಂದು ಕೇಳಿಕೊಂಡರೂ ಬಿಡದೇ ಹಲ್ಲೆ ಮಾಡಿದ್ದಾರೆ. ಹಳ್ಳಿ ಜನರ ಆಕ್ರೋಶ ಮಿತಿಮೀರಿ ಅವರು ಹಲ್ಲೆ ಮಾಡಿದ್ದಾರೆ.
ಇದಕ್ಕೆ ಕಾರಣ ಏನೆಂದರೆ ಜ.1 ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಒಂದು ಪಾರ್ಟಿ ಆಯೋಜನೆ ಮಾಡಿರುತ್ತಾರೆ. 30ರಿಂದ 40 ಜನರಿರುವ ಈ ಪಾರ್ಟಿಯಲ್ಲಿ ರವಿ ಮಂಡ್ಯ, ಕೆಂಪಣ್ಣ ಕೂಡ ಜಾಯಿನ್ ಆಗಿರುತ್ತಾರೆ. ಪಾರ್ಟಿಯಲ್ಲಿರುವ ಒಬ್ಬ ವ್ಯಕ್ತಿ ಅದ್ಯಾರೋ ಜಾಮೂನ್ ಎನ್ನುವವನು ಬೆಳಗ್ಗೆ ಒಂದು ಹುಡುಗಿಯೊಂದಿಗೆ ಅಸಭ್ಯವಾಗಿ ವರ್ತಿಸಿರುತ್ತಾನೆ. ಈ ಬಗ್ಗೆ ಕೇಸ್ ಕೂಡ ದಾಖಲಾಗಿರುತ್ತದೆ. ಈ ಕೇಸಿನ ಬಗ್ಗೆಯೂ ನನಗೆ ಗೊತ್ತಿಲ್ಲ. ಜೊತೆಗೆ, ಯಾರು ಪಾರ್ಟಿ ಆಯೋಜನೆ ಮಾಡಿದ್ದಾರೆಂಬೂ ನನಗೆ ತಿಳಿದಿಲ್ಲ. ಆದ್ರೆ, ಅವರೊಂದಿಗೆ ಪೊಲೀಸ್ ಠಾಣೆಗೆ ಹೋಗಿ ಹೊರಬಂದಾಗ ನಮ್ಮ ಮೇಲೆ ಜನ ಹಲ್ಲೆ ಮಾಡಿದರು. ಇದನ್ನು ನೋಡಿದ ಅದೆಷ್ಟೋ ಜನರು ಮಂಜುನಾಥ ಸ್ವಾಮಿನೇ ನಿನಗೆ ಪ್ರಸಾದ ಕೊಟ್ಟಿದ್ದಾನೆ ತಗೋ ಎಂದು ಕಾಮೆಂಟ್ ಮಾಡಿದ್ದಾರೆ. ಅದನ್ನ ತಗೋಳೋಣ, ಆದ್ರೆ ನಾನು ತಪ್ಪೇ ಮಾಡಿಲ್ಲ ಅಣ್ಣ ಎಂದು ಗೋಳಾಡಿದ್ದಾನೆ.
ನಾನು ತಪ್ಪು ಮಾಡಿದಾಗ ಬೈದಿದ್ದೀರಿ, ಬುದ್ಧಿ ಮಾತು ಹೇಳಿದ್ದೀರಿ. ಆಗ ನಾನು ತಿದ್ದಿಕೊಂಡಿದ್ದೇನೆ. ತಪ್ಪೇ ಮಾಡಿಲ್ಲ, ಅಂದರೂ ನನ್ನ ಹೇಟ್ ಮಾಡ್ತಿದ್ದೀರಿ. ಕೆಟ್ಟದಾಗಿ ಕಾಮೆಂಟ್ ಮಾಡುತ್ತಿದ್ದೀರಿ. ಇದನ್ನು ನೋಡಿ ನನ್ನ ಮನಸ್ಸಿಗೆ ತಡೆದುಕೊಳ್ಳುವುದಕ್ಕೆ ಆಗ್ತಿಲ್ಲ. ಅವಾಗಲೂ ಒಂದು ಹೆಣ್ಣಿಗೆ ನ್ಯಾಯ ಸಿಗಲಿ ಎಂದು ಧರ್ಮಸ್ಥಳಕ್ಕೆ ಪಾದಯಾತ್ರೆ ಮಾಡಿದೆ. ಇವಾಗ ಈ ಕೇಸಿನಲ್ಲಿಯೂ ಕೂಡ ಒಂದು ಹೆಣ್ಣಿಗೆ ನ್ಯಾಯ ಸಿಗಲಿ ಎಂದು ಬೇಡಿಕೊಳ್ತೇನೆ. ಇದೀಗ ಕೇಸಿನ ಬಗ್ಗೆ ತನಿಖೆ ನಡೆಯುತ್ತಿದೆ. ಇದರಲ್ಲಿ ಹೆಣ್ಣು ಮಕ್ಕಳಿಗ ನ್ಯಾಯ ಸಿಕ್ಕಿಲ್ಲ ಎಂದರೆ ನಾನೇ ಅವರ ಪರವಾಗಿ ಸ್ಟ್ಯಾಂಡ್ ತೆಗೆದುಕೊಳ್ಳುತ್ತೇನೆ.
ಒಟ್ಟಾರೆ ಅಣ್ಣಾ ನಾನು ತಪ್ಪೇ ಮಾಡದೆ ಒದೆ ತಿಂದು ಬಂದಿದ್ದೇನೆ. ಇದನ್ನು ನೋಡಿ ಖುಷಿ ಪಟ್ಟವರು ಹಾಗೂ ಈವರೆಗೆ ನನ್ನನ್ನು ಬೆಂಬಲಿಸಿದ ಎಲ್ಲರಿಗೂ ಥ್ಯಾಂಕ್ ಯು ಸೋ ಮಚ್... ಈ ಮೂಲಕ ನನ್ನ ಸೋಶಿಯಲ್ ಮಿಡಿಯಾಗೆ ಎಂಡ್ ಕೊಡ್ತಾ ಇದ್ದೀನಿ. 200ಕೆ ಫ್ಯಾಮಿಲಿ ನಿಮಗೆ ಮುಖ್ಯವಾಗಿ ಧನ್ಯವಾದ ಹೇಳ್ತೀನಿ. ನನಗೆ ಎಲ್ಲದಕ್ಕೂ ಸಪೋರ್ಟ್ ಮಾಡಿದ್ದೀರಿ. ನಿಮ್ಮ ಆ ಋಣವನ್ನು ತೀರಿಸುವುದಕ್ಕೆ ಆಗೊಲ್ಲ ಎಂದು ತಮ್ಮ ಕೊನೆಯ ವಿಡಿಯೋ ಕೊನೆಗೊಳಿಸುತ್ತಾನೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.