
ಕಲರ್ಸ್ ಕನ್ನಡ ವಾಹಿನಿಯಲ್ಲಿ ‘ಲಾಫರ್ ಶೆಫ್ಸ್’ ಶೋ ಪ್ರಸಾರ ಆಗುತ್ತಿದೆ. ಇತ್ತೀಚೆಗೆ ‘ಲಾಫರ್ ಶೆಫ್ಸ್ ಅಖಾಡ’ ಎಂಬ ಎಪಿಸೋಡ್ ಪ್ರಸಾರ ಆಗಿದೆ. ಅದರಲ್ಲಿ ಪೈಲ್ವಾನ್ ಆಗಮನವಾಗಿದೆ. ದೇಶದ ಪೈಲ್ವಾನ್‌ರು ಈ ವೇದಿಕೆಗೆ ಬಂದಿದ್ದಾರೆ. ಆ ವೇಳೆ ಪೈಲ್ವಾನ್‌ನ್ನು ಮಣಿಸು ಎಂದು ಖ್ಯಾತ ನಟನೋರ್ವ ತನ್ನ ಪತ್ನಿಯನ್ನು ಮುಂದೆ ಬಿಟ್ಟ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
ಅಂಕಿತಾ ಲೋಖಂಡೆ, ವಿಕ್ಕಿ ಜೈನ್, ಅಲಿ ಗೋನಿ, ಕರಣ್ ಕುಂದ್ರಾ, ಕೃಷ್ಣ ಅಭಿಷೇಕ್ , ಕಾಶ್ಮೀರಾ ಶಾ, ನಿಯಾ ಶರ್ಮಾ, ಸುದೇಶ್ ಲಹರಿ, ಅಭಿಷೇಕ್ ಕುಮಾರ್, ಸಮರ್ಥ್ ಜುರೆಲ್, ಎಲ್ವಿಶ್ ಯಾದವ್, ಕರಣ್ ಕುಂದ್ರಾ , ತೇಜಸ್ವಿ ಪ್ರಕಾಶ್, ಅರ್ಮಾನ್ ಮಲಿಕ್
ಪೈಲ್ವಾನ್‌ಗಳ ಶಕ್ತಿ, ಸಾಮರ್ಥ್ಯ ನೋಡಿ ಅನೇಕರು ಕಂಗಾಲಾಗಿದ್ದಾರೆ.ನಿಶ್ರಿನ್ ಪಾರೀಖ್ ಅವರು ಏಷ್ಯಾ, ಜಾಗತಿಕ ಬಾಡಿ ಬಿಲ್ಡಿಂಗ್‌ನಲ್ಲಿ ಭಾಗವಹಿಸುತ್ತಾರೆ. ಇವರಿಗೆ 60 ವರ್ಷವಂತೆ. ಕಿರಣ್ ದೆಂಬ್ಲಾ ಅವರು 51 ವರ್ಷದವರಾಗಿದ್ದು, 20 ವರ್ಷಗಳಿಂದ ಬಾಡಿ ಬಿಲ್ಡಿಂಗ್‌ನಲ್ಲಿ ಸಕ್ರಿಯವಾಗಿದ್ದಾರೆ. ಅನುಷ್ಕಾ ಶೆಟ್ಟಿ, ಎಸ್ ಎಸ್ ರಾಜಮೌಳಿ, ತಾಪ್ಸಿಗೂ ಕೂಡ ಪರ್ಸನಲ್ ಟ್ರೇನರ್ ಕೂಡ ಹೌದು.
ಸ್ಪರ್ಧಿಗಳು ಅಡುಗೆ ಮಾಡುತ್ತಾರೆ, ಇಲ್ಲಿ ಒಂದಿಷ್ಟು ತರಲೆ, ತಮಾಷೆ ಕೂಡ ಇರುತ್ತದೆ. ಇವರಿಗೆ ಪೈಲ್ವಾನ್‌ಗಳು ಸಹಾಯ ಕೂಡ ಮಾಡುತ್ತಾರೆ. ಪೈಲ್ವಾನ್‌ಗಳು ಕಲ್ಲಿನಲ್ಲಿ ಅರೆದು ಚಟ್ನಿ ಮಾಡಿಕೊಟ್ಟಿದ್ದಾರೆ.
ಪೈಲ್ವಾನ್‌ಗಳ ಜೊತೆ ಸ್ಪರ್ಧಿಗಳು ಕುಸ್ತಿ ಮಾಡಲು ಮುಂದಾಗಿದ್ದಾರೆ. ಆ ವೇಳೆ ಹಾಸ್ಯನಟ ಕೃಷ್ಣ ಅಭಿಷೇಕ್ ಅವರೇ ತಮ್ಮ ಪತ್ನಿ ಕಾಶ್ಮೇರಾ ಶಾ ಅವರನ್ನು ಮುಂದೆ ಬಿಟ್ಟಿದ್ದಾರೆ. ಕಾಶ್ಮೇರಾ ಶಾ ಅವರಂತೂ ಪೈಲ್ವಾನನ ಮೈಮೇಲೆ ಹಾರಿ ಕೂತಿದ್ದಾರೆ. ಇದನ್ನು ನೋಡಿ ಅಲ್ಲಿದ್ದವರೆಲ್ಲ ಕಂಗಾಲಾಗಿದ್ದಾರೆ.
ಪೈಲ್ವಾನ್ ಜೊತೆ ಹೋರಾಡು ಎಂದು ಕೃಷ್ಣ ಅಭಿಷೇಕ್ ಕಳಿಸಿರೋ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಯಾವಾಗಲೂ ಕಾಮಿಡಿ ಮಾಡುತ್ತ, ಪತ್ನಿಯ ಕಾಲೆಳೆಯುತ್ತಿದ್ದ ಕೃಷ್ಣ, ಈಗ ಪತ್ನಿಯನ್ನು ಕುಸ್ತಿ ಮಾಡು ಎಂದು ಕಳಿಸಿರೋದು ಎಲ್ಲರಿಗೂ ಆಶ್ಚರ್ಯ ತಂದಿದೆ. ಕೃಷ್ಣ ಅಭಿಷೇಕ್ ತರ ಇದ್ದರೆ ಯಾವ ಪತ್ನಿಗೂ ಮಾನಸಿಕ ಸಮಸ್ಯೆ ಆಗೋದಿಲ್ಲ, ಸಂಶಯ ಪಡೋರು ಕೂಡ ಇರೋದಿಲ್ಲ ಎಂದು ಹೇಳಿದ್ದಾರೆ. ಇನ್ನೊಂದು ಕಡೆ ಈ ರೀತಿ ಗಂಡ ನಡೆದುಕೊಳ್ಳೋದು, ಹೆಂಡತಿಯನ್ನು ಹೀಗೆ ಫ್ರೀ ಬಿಡೋದು ಸರಿ ಅಲ್ಲ ಎಂದು ಹೇಳಿದ್ದಾರೆ. ನಮ್ಮ ಕಡೆ ಈ ರೀತಿ ಗಂಡ ಮಾಡಿದ್ರೆ ಚಪ್ಪಲಿಯಲ್ಲಿ ಬೀಳುತ್ತೆ ಎಂದು ಕೂಡ ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.