Lakshmi Baramma Serial ನಟಿ ರಶ್ಮಿ ಪ್ರಭಾಕರ್‌ ಮನೆಗೆ ಹೊಸ ಸದಸ್ಯರ ಆಗಮನ! ಈ ವಿಡಿಯೋ ನೋಡಿ..!

ಲಕ್ಷ್ಮೀ ಬಾರಮ್ಮʼ ಧಾರಾವಾಹಿಯಲ್ಲಿ ಲಚ್ಚಿ ಪಾತ್ರದಲ್ಲಿ ಮಿಂಚಿದ್ದ ನಟಿ ರಶ್ಮಿ ಪ್ರಭಾಕರ್‌ ಮನೆಗೆ ಹೊಸ ಸದಸ್ಯರ ಆಗಮನವಾಗಿದೆ. ಈ ವಿಷಯವನ್ನು ಅವರು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 
 

lakshmi baramma serial actress rashmi prabhakar and nikhil buy new car

ಆರು ವರ್ಷಗಳಿಗೂ ಅಧಿಕ ಕಾಲ ಪ್ರಸಾರ ಆಗಿದ್ದ ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿ ದೊಡ್ಡ ಇತಿಹಾಸ ಸೃಷ್ಟಿ ಮಾಡಿತ್ತು. ಈ ಧಾರಾವಾಹಿಯಲ್ಲಿ ಲಚ್ಚಿ ಪಾತ್ರ ಮಾಡುತ್ತಿದ್ದ ನಟಿ ರಶ್ಮಿ ಪ್ರಭಾಕರ್‌ ಮನೆಗೆ ಹೊಸ ಸದಸ್ಯರ ಆಗಮನವಾಗಿದೆ. ಹೌದು, ರಶ್ಮಿ ದಂಪತಿ ಈಗ ಹೊಸ ಕಾರ್‌ನ ಒಡತಿಯಾಗಿದ್ದಾರೆ. ಈ ವಿಷಯವನ್ನು ಅವರು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 

ರಶ್ಮಿಗೆ ಶುಭಾಶಯಗಳ ಸುರಿಮಳೆ! 
ಸೋಶಿಯಲ್‌ ಮೀಡಿಯಾದಲ್ಲಿ ಅವರು ಹೊಸ ಕಾರ್‌ನ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ರಶ್ಮಿ ಪ್ರಭಾಕರ್‌ ಅವರು ಪತಿ ನಿಖಿಲ್‌ ಜೊತೆ ಹೊಸ ಕಾರ್‌ ಖರೀದಿ ಮಾಡಿದ್ದಾರೆ. ಅನೇಕರು ರಶ್ಮಿ ದಂಪತಿಗೆ ಶುಭಾಶಯ ತಿಳಿಸಿದ್ದಾರೆ.

Latest Videos

ಆ ಒಂದು ದಿನದ ಶೂಟಿಂಗ್‌ನಿಂದ ಕಣ್ಣಿಗೆ ಮಾಡಿಸಿದ ದೊಡ್ಡ ಆಪರೇಷನ್ ಫೇಲ್; ಭಾವುಕರಾದ ರಶ್ಮಿ ಪ್ರಭಾಕರ್

ಧಾರಾವಾಹಿಗಳಲ್ಲಿ ನಟನೆ!
ಅಂದಹಾಗೆ ರಶ್ಮಿ ಅವರು ಬೆಂಗಳೂರಿನಲ್ಲಿ ಬೆಳೆದಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿದ್ದ ʼಶುಭವಿವಾಹʼ ಧಾರಾವಾಹಿ ಮೂಲಕ ನಟನೆ ಆರಂಭಿಸಿದರು. ಅಲ್ಲಿ ಅವರು ಹೀರೋ ತಂಗಿ ಪಾತ್ರ ಮಾಡಿದ್ದರು. ಆ ಧಾರಾವಾಹಿ ದೊಡ್ಡ ಹಿಟ್‌ ಆಗಿತ್ತು. ಆಬಳಿಕ ಅವರು ಮಹಾಭಾರತ ಎನ್ನುವ ಪೌರಾಣಿಕ ಧಾರಾವಾಹಿಯಲ್ಲಿ ನಟಿಸಿದರು. ಅಲ್ಲಿ ಅವರಿಗೆ ದುರ್ಯೋಧನನ ತಂಗಿ ಪಾತ್ರ ಮಾಡುವ ಅವಕಾಶ ಸಿಕ್ಕಿತ್ತು. 

ಇತಿಹಾಸ ಸೃಷ್ಟಿಸಿದ್ದ ಲಕ್ಷ್ಮೀ ಬಾರಮ್ಮ ಸೀರಿಯಲ್
ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ʼಜೀವನ ಚೈತ್ರʼ ಧಾರಾವಾಹಿಯಲ್ಲಿ ರಶ್ಮಿ ಪ್ರಭಾಕರ್‌ ನಟಿಸಿದ್ದಾರೆ. ಅಷ್ಟೇ ಅಲ್ಲದೆ ಅವರು ʼಲಕ್ಷ್ಮೀ ಬಾರಮ್ಮʼ ಧಾರಾವಾಹಿಯಲ್ಲಿ ನಟಿಸುವ ಅವಕಾಶ ಪಡೆದರು. ಕವಿತಾ ಗೌಡ ಅವರು ಈ ಹಿಂದೆ ಚಿನ್ನು ಪಾತ್ರದಲ್ಲಿ ನಟಿಸುತ್ತಿದ್ದರು. ಅವರು ಧಾರಾವಾಹಿಯಿಂದ ಹೊರಗಡೆ ಬಂದಾಗ ಆ ಜಾಗಕ್ಕೆ ರಶ್ಮಿ ಪ್ರಭಾಕರ್‌ ಎಂಟ್ರಿ ಆಯ್ತು. ಈಗಾಗಲೇ ವರ್ಷಾನುಗಟ್ಟಲೇ ಲಚ್ಚಿ ಪಾತ್ರ ಮಾಡುತ್ತಿದ್ದ ಕವಿತಾ ಗೌಡ ಅವರನ್ನು ರಿಪ್ಲೇಸ್‌ ಮಾಡೋದು ರಶ್ಮಿಗೆ ಸುಲಭ ಇರಲಿಲ್ಲ. ಹೀಗಾಗಿ ಅವರು ಅದನ್ನೇ ಚಾಲೆಂಜಿಂಗ್‌ ಆಗಿ ತಗೊಂಡು ನಟಿಸಿದರು. ಆನಂತರ ಅನೇಕರು ಅವರನ್ನು ಇಷ್ಟಪಟ್ಟಿದ್ದರು. ಈ ಧಾರಾವಾಹಿ ಮುಗಿಯುವವರೆಗೂ ರಶ್ಮಿ ನಟಿಸಿದ್ದರು. ‌

ಇವರೇ ನೋಡಿ ಕಿರುತೆರೆ ನಟಿಯರ ರಿಯಲ್ ಲೈಫ್ ಸಂಗಾತಿ… ಈ ಜೋಡಿಗಳಲ್ಲಿ ನಿಮಗ್ಯಾವ ಜೋಡಿ ಇಷ್ಟ?

ಪರಭಾಷೆಯಲ್ಲಿಯೂ ನಟನೆ!
ಅಂದಹಾಗೆ ಪರಭಾಷೆಗಳಲ್ಲಿಯೂ ರಶ್ಮಿ ಪ್ರಭಾಕರ್‌ ನಟಿಸಿದ್ದಾರೆ. ಇನ್ನು ಸ್ಟಾರ್‌ ಸುವರ್ಣ ವಾಹಿನಿಯ ʼಮನಸೆಲ್ಲಾ ನೀನೆʼ ಧಾರಾವಾಹಿಯಲ್ಲಿಯೂ ರಶ್ಮಿ ನಟಿಸಿದರು. ಆದರೆ ಬಹುಬೇಗ ಈ ಧಾರಾವಾಹಿಗೆ ಗುಡ್‌ಬೈ ಹೇಳಿದ್ದರು. 

ಡ್ಯಾನ್ಸರ್‌ ಕೂಡ ಹೌದು! 
ರಶ್ಮಿ ಪ್ರಭಾಕರ್‌ ಅವರು ಡ್ಯಾನ್ಸರ್‌ ಕೂಡ ಹೌದು. ಭರತನಾಟ್ಯ ಕಲಾವಿದೆಯಾಗಿರುವ ಅವರು ಮಕ್ಕಳಿಗೆ ಭರತನಾಟ್ಯ ಕ್ಲಾಸ್‌ ತಗೊಳ್ತಾರೆ. ಒಟ್ಟಿನಲ್ಲಿ ರಶ್ಮಿ ಸಿಕ್ಕಾಪಟ್ಟೆ ಆಕ್ಟಿವ್‌ ಎನ್ನಬಹುದು. ಇದರ ಜೊತೆಗೆ ರಶ್ಮಿ ಅವರು ಚಿತ್ರರಂಗದಲ್ಲಿ ಫುಲ್‌ ಆಕ್ಟಿವ್‌ ಆಗಿದ್ದಾರೆ, ಆದಷ್ಟು ಬೇಗ ಅವರು ಕನ್ನಡ ಟಿವಿ ಪರದೆ ಮೇಲೆ ಕಾಣಿಸಿಕೊಳ್ಳಲಿ ಎಂಬ ನಿರೀಕ್ಷೆಯಲ್ಲಿದ್ದಾರೆ.

 

ಕಾಶಿ, ಕಾಶ್ಮೀರ ಯಾತ್ರೆ..! 
ಕಳೆದ ಸೆಪ್ಟೆಂಬರ್‌ನಲ್ಲಿ ಅವರು ಕಾಶಿ, ವಾರಣಾಸಿ ದರ್ಶನ ಪಡೆದಿದ್ದಾರೆ. ಕುಟುಂಬದ ಜೊತೆ ಅವರು ತೀರ್ಥಕ್ಷೇತ್ರಗಳ ದರ್ಶನ ಪಡೆದಿದ್ದಾರೆ. ಕಳೆದ ಮಾರ್ಚ್‌ನಲ್ಲಿ ಅವರು ಕಾಶ್ಮೀರಕ್ಕೂ ಕೂಡ ಭೇಟಿ ಕೊಟ್ಟಿದ್ದರು. ಅಲ್ಲಿನ ಸುಂದರ ಸ್ಥಳಗಳ ಫೋಟೋಗಳನ್ನು ಅವರು ಹಂಚಿಕೊಂಡಿದ್ದರು. 

ರಶ್ಮಿ ಅವರು ಕೊನೆಯದಾಗಿ ತಮಿಳು ಭಾಷೆಯ ʼಕನ್ನೈ ಕಲೈಮಾಲೆʼ ಎನ್ನುವ ಧಾರಾವಾಹಿಯಲ್ಲಿ ನಟಿಸಿದ್ದರು. ಇನ್ನು ʼಬಿ5ʼ, ʼಮಹಾಕಾವ್ಯʼ ಎನ್ನುವ ಚಿತ್ರಗಳಲ್ಲಿಯೂ ಇವರು ನಟಿಸಿದ್ದರು. ಅಷ್ಟೇ ಅಲ್ಲದೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿದ್ದ ʼಸೂಪರ್ ಕ್ವೀನ್ʼ ರಿಯಾಲಿಟಿ ಶೋನಲ್ಲಿ ರಶ್ಮಿ ಭಾಗವಹಿಸಿದ್ದಲ್ಲದೆ, ಈ ಪಟ್ಟವನ್ನು ಕೂಡ ಪಡೆದುಕೊಂಡಿದ್ದರು. 

click me!