ನನ್ನಾಸೆಯಾ ಹೂವೆ... 48 ವರ್ಷಗಳ ಬಳಿಕ ಡಾ.ರಾಜ್​ ಬದ್ಲು ರವಿಚಂದ್ರನ್​ ಜೊತೆ ಲಕ್ಷ್ಮಿ ಲವ್ಲಿ ಡ್ಯುಯೆಟ್​!

By Suvarna News  |  First Published Mar 30, 2024, 3:21 PM IST

ಲಕ್ಷ್ಮಿ ಹಾಗೂ ರವಿಚಂದ್ರನ್​ ಅವರು ಡ್ರಾಮಾ ಜ್ಯೂನಿಯರ್ಸ್​ ವೇದಿಕೆಯಲ್ಲಿ ನಾ ನಿನ್ನ ಬಿಡಲಾರೆ ಚಿತ್ರದ ನನ್ನಾಸೆಯಾ ಹೂವೆ ಹಾಡಿಗೆ ಡ್ಯುಯೆಟ್​ ಹಾಡಿದ್ದಾರೆ. 
 


1976ರಲ್ಲಿ ಬಿಡುಗಡೆಯಾದ ನಾನಿನ್ನ ಬಿಡಲಾರೆ ಚಿತ್ರ ಸೂಪರ್​ ಡೂಪರ್​ ಆಗಿ ಓಡಿತ್ತು. ಇದರಲ್ಲಿನ ಡಾ.ರಾಜ್​ ಕುಮಾರ್​ ಮತ್ತು ಜ್ಯೂಲಿ ಲಕ್ಷ್ಮಿ ಅಭಿನಯಕ್ಕೆ ಅಭಿಮಾನಿಗಳು ಸೋತು ಹೋಗಿದ್ದರು. ಆಗಿನ ಕಾಲದ ಚಿತ್ರಗಳೇ  ಹಾಗಲ್ಲವೆ? ಅವುಗಳ ಹಾಡುವಂತೆ 50-60-70 ವರ್ಷಗಳಾದರೂ ಮರೆಯಲಾರದಂಥವು. ಇಂದಿನ ಚಿತ್ರಗಳ ಬೆರಳೆಣಿಕೆ ಹಾಡುಗಳು ಒಂದಷ್ಟು ವರ್ಷ ಜನ ಮಾನಸದಲ್ಲಿ ರೀಲ್ಸ್​ ಮೂಲಕ ಉಳಿಯುತ್ತವೆಯಾದರೂ ಹಿಂದಿನ ಚಿತ್ರಗಳು ಮಾತ್ರ ಎಂದಿಗೂ ಸಿನಿ ಪ್ರಿಯರ ಮನದಲ್ಲಿ ಬೇರೂರಿಬಿಟ್ಟಿರುತ್ತವೆ, ನಾಲಿಗೆಯ ಮೇಲೆ ಹಾಡುಗಳು ಹರಿದಾಡುತ್ತಲೇ ಇರುತ್ತವೆ. ಅಂಥ ಹಾಡುಗಳಲ್ಲಿ ಒಂದು ನಾ ನಿನ್ನ ಬಿಡಲಾರೆ ಚಿತ್ರದ ನನ್ನಾಸೆಯಾ ಹೂವೆ... ಬೆಳದಿಂಗಳಾ ಚೆಲುವೆ...  ಚಿ.ಉದಯಶಂಕರ್ ಸಾಹಿತ್ಯದ  ರಾಜನ್-ನಾಗೇಂದ್ರ ಸಂಗೀತರ ಈ ಹಾಡನ್ನು ಡಾ. ರಾಜ್ ಕುಮಾರ್ ಅವರೇ ಹಾಡಿದ್ದರು. ಈ ಹಾಡು ಇಂದಿಗೂ ಜನಜನಿತವೇ.
 
ಇದೀಗ ಈ ಹಾಡನ್ನು ಜೀ ಕನ್ನಡ ವಾಹಿನಿಯ ಡ್ರಾಮಾ ಜ್ಯೂನಿಯರ್ಸ್​ ಸೀಸನ್​-5ರಲ್ಲಿ ಹಾಡಲಾಗಿದೆ. ಈ ಸಂಗೀತದ ರಿಯಾಲಿಟಿ ಷೋನಲ್ಲಿ ಖುದ್ದು ಲಕ್ಷ್ಮಿಯವರೂ ತೀರ್ಪುಗಾರರಲ್ಲಿ ಒಬ್ಬರಾಗಿದ್ದಾರೆ. ಜೊತೆಗೆ ಕ್ರೇಜಿಸ್ಟಾರ್​ ರವಿಚಂದ್ರನ್​ ಕೂಡ. ಈ ಹಾಡಿಗೆ ಈಗ ಡಾ.ರಾಜ್​ ಬದಲು ರವಿಚಂದ್ರನ್​ ಅವರು ಲಕ್ಷ್ಮಿಯವರ ಜೊತೆ ಡ್ಯುಯೆಟ್​ ಹಾಡಿದ್ದು, ಅಭಿಮಾನಿಗಳು ಫಿದಾ ಆಗಿದ್ದಾರೆ. ಡಾ.ರಾಜ್​ ಬದಲು ನಾನು ನಿಮ್ಮ ಜೊತೆ ಅಭಿನಯಿಸುತ್ತೇನೆ ಎಂದು ರವಿಚಂದ್ರನ್​ ಹೇಳಿದಾಗ ಲಕ್ಷ್ಮಿ ಅವರು ನಾಚಿ ನೀರಾದರು. ಕೊನೆಗೂ 48 ವರ್ಷಗಳ ಹಿಂದೆ ಹೇಗೆ ನಾಚಿಕೆಯಿಂದ ರಾಜ್​ಕುಮಾರ್​ ಅವರ ಜೊತೆ ಲಕ್ಷ್ಮಿಯವರು ಅಭಿನಯಿಸಿದ್ದರೋ, ಇದೀಗ ರವಿಚಂದ್ರನ್​ ಜೊತೆಗೂ ಹಾಗೆಯೇ ಅಭಿನಯಿಸಿದ್ದಾರೆ.

ನಟಿಯರು ಯಾವಾಗೆಲ್ಲಾ ಗರ್ಭಿಣಿ ಆಗ್ತಾರೆ ಎಂಬ ಸತ್ಯ ಬಿಚ್ಚಿಟ್ಟ ಬಾಲಿವುಡ್​ ತಾರೆ ಪರಿಣಿತಿ ಚೋಪ್ರಾ!

Tap to resize

Latest Videos

ಅಂದಹಾಗೆ 1952ರಲ್ಲಿ ಹುಟ್ಟಿರುವ ಲಕ್ಷ್ಮಿ ಅವರಿಗೆ ಈಗ 71 ವರ್ಷ ವಯಸ್ಸು. ನಾ ನಿನ್ನ ಬಿಡಲಾರೆ ಚಿತ್ರ ಮಾಡಿದ ಸಂದರ್ಭದಲ್ಲಿ ಅವರಿಗೆ ಕೇವಲ 24 ವರ್ಷ ವಯಸ್ಸು. ಆದರೂ ಇಂದಿಗೂ ಅದೇ ರೀತಿಯ ನಟನೆಯ ಮೂಲಕ ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದಾರೆ, ಗೆಲ್ಲುತ್ತಿದ್ದಾರೆ. ಕನ್ನಡ ಚಿತ್ರರಂಗದ ಚಂದನದ ಗೊಂಬೆ ಎಂದೇ ಫೇಮಸ್​ ಆಗಿರುವ ರಾಷ್ಟ್ರಪ್ರಶಸ್ತಿ ಪುರಸ್ಕೃತೆ ಲಕ್ಷ್ಮಿ ಅವರು ಚತುರ್ಭಾಷಾ ತಾರೆ.  ಕನ್ನಡ, ತಮಿಳು, ಹಿಂದಿ, ತೆಲುಗು ಮತ್ತು ಮಲಯಾಳಂ ಭಾಷೆಗಳೆಲ್ಲ ಸೇರಿ  400ಕ್ಕೂ ಅಧಿಕ  ನಟಿಸಿದ್ದಾರೆ. ಲಕ್ಷ್ಮಿಯವರ ಪುತ್ರಿ ಐಶ್ವರ್ಯ ಕೂಡ 1990 ರಲ್ಲಿ ನಟಿಯಾಗಿ ಚಿತ್ರರಂಗ ಪ್ರವೇಶಿಸಿದರು. ಇವರ ವೈಯಕ್ತಿಯ ಜೀವನದ ಕುರಿತು ಹೇಳುವುದಾದರೆ, ಲಕ್ಷ್ಮಿಯವರು ತಮ್ಮ 17ನೇ ವಯಸ್ಸಿನಲ್ಲಿ ಭಾಸ್ಕರ ಎಂಬುವವರನ್ನು ಮದುವೆಯಾಗಿ  ಐಶ್ವರ್ಯ ಎಂಬ ಮಗಳನ್ನು ಪಡೆದರು.  1974 ರಲ್ಲಿ ವಿಚ್ಛೇದನ ಪಡೆದ ಇವರು  1975 ರಲ್ಲಿ ಮಲಯಾಳಂ ಚಿತ್ರ ನಿರ್ಮಾಪಕ ಮತ್ತು ನಟ ಮೋಹನ್ ಶರ್ಮಾರವರನ್ನು ಮದುವೆಯಾದರು. ಐದು ವರ್ಷದ ದಾಂಪತ್ಯ ಕೊನೆಗೊಂಡಿತು. ನಂತರ  1987 ರಲ್ಲಿ ಚಿತ್ರ ನಿರ್ದೇಶಕ ಶಿವಚಂದ್ರನ್ ಜೊತೆ ವಿವಾಹವಾಗಿದ್ದು,  `ಸಂಯುಕ್ತ' ಎಂಬ ಪುತ್ರಿಯನ್ನು ದತ್ತು ಪಡೆದುಕೊಂಡಿದ್ದಾರೆ. 

ಇವರ ಸಿನಿ ಪಯಣದ ಕುರಿತು ಹೇಳುವುದಾದರೆ,  1968 ರಲ್ಲಿ ಕೇವಲ 15 ವರ್ಷದವರಿದ್ದಾಗಲೇ ತಮಿಳು ಚಿತ್ರ `ಜೀವನಾಂಶ' ದಿಂದ ಸಿನರಂಗ ಪ್ರವೇಶಿಸಿದರು. 1975 ರಲ್ಲಿ ಹಿಂದಿ ಭಾಷೆಯಲ್ಲಿ ತೆರೆಗೆ ಬಂದ `ಜೂಲಿ' ಚಿತ್ರದಿಂದ ತುಂಬಾ ಪ್ರಸಿದ್ಧಿ ಪಡೆದರು. ಇದರಿಂದ ಇವರನ್ನು ಇಂದಿಗೂ ಹಲವರು ಜೂಲಿ ಲಕ್ಷ್ಮಿ ಎಂದೇ ಕರೆಯುತ್ತಾರೆ. 1968 ರಲ್ಲಿ ಡಾ.ರಾಜ್ ಅಭಿನಯದ `ಗೋವಾದಲ್ಲಿ ಸಿ.ಐ.ಡಿ 999' ಚಿತ್ರದ ಮೂಲಕ ಚಂದನವನ ಪ್ರವೇಶಿಸಿದರು. ನಂತರ ರಾಜ್ ಜೊತೆ `ನಾ ನಿನ್ನ ಮರೆಯಲಾರೆ' ಮತ್ತು `ಒಲವು ಗೆಲವು' ಚಿತ್ರಗಳಲ್ಲಿ ನಟಿಸಿದರು. ಕನ್ನಡ ಚಿತ್ರರಂಗದಲ್ಲಿ ಅನಂತನಾಗ್ ಮತ್ತು ಲಕ್ಷ್ಮೀ ಜೋಡಿ ಆಗಿನ ಕಾಲದ ಟಾಪ್ ಜೋಡಿಯಾಗಿತ್ತು. ತರಾಸು ಕಾದಂಬರಿ ಆಧಾರಿತ ಚಿತ್ರ`ಚಂದನದ ಗೊಂಬೆ' ಮೂಲಕ ಆರಂಭವಾದ ಈ ಜೋಡಿ ಸುಮಾರು 25 ಕ್ಕಿಂತ ಹೆಚ್ಚು ಚಿತ್ರಗಳಲ್ಲಿ  ಪ್ರೇಕ್ಷಕರ ಮನ ಸೆಳೆಯಿತು.   `ಇದು ಕಥೆಯಲ್ಲ ಜೀವನ' ಮತ್ತು `ಸದಾ ನಿಮ್ಮೊಂದಿಗೆ' ಕಾರ್ಯಕ್ರಮದ ನೆಡೆಸಿಕೊಟ್ಟಿರುವ ನಟಿ, ಸದ್ಯ  `ಡ್ರಾಮಾ ಜೂನಿಯರ್ಸ್' ಕಾರ್ಯಕ್ರಮದ ತೀರ್ಪುಗಾರರಾಗಿದ್ದಾರೆ. 

ಗರ್ಲ್​ಫ್ರೆಂಡ್​ ಜತೆಯಿರಲು ಕರಣ್​ ಜೋಹರ್​ರ ಮನೆ ಬಾಡಿಗೆ ಪಡೆದ ಇಮ್ರಾನ್​ ಖಾನ್​: ತಿಂಗಳಿಗೆ ಅಬ್ಬಾ ಇಷ್ಟಾ?

 

click me!