ಇಲ್ಲಿ ನಿಂತರೆ ಗೌತಮ್​, ಅಲ್ಲಿ ನಿಂತರೆ ಭೂಮಿಕಾ... ಡುಮ್ಮ ಸರ್​ ಡಬಲ್​ ಆ್ಯಕ್ಟಿಂಗ್​ಗೆ ಮನಸೋತ ವೀಕ್ಷಕರು

By Suvarna News  |  First Published Mar 30, 2024, 12:02 PM IST

ಗೌತಮ್​ ಗುಲಾಬಿ ಹೂವು ಹಿಡಿದು ಡಬಲ್​ ಆ್ಯಕ್ಟಿಂಗ್​ ಶುರು ಮಾಡಿದ್ದಾನೆ. ಪತ್ನಿ ಭೂಮಿಕಾಗೆ ಆ ಹೂವನ್ನು ಕೊಡುವಲ್ಲಿ ಸಕ್ಸಸ್​ ಆಗ್ತಾನಾ? 
 


ಇಲ್ಲಿ ನಿಂತರೆ ಗೌತಮ್​, ಅಲ್ಲಿ ನಿಂತರೆ ಭೂಮಿಕಾ... ಅಬ್ಬಬ್ಬಾ ಏನಿದು ಲವ್​ ಸ್ಟೋರಿ... ಹೌದು. ಗೌತಮ್​ ಡಬಲ್​ ಆ್ಯಕ್ಟಿಂಗ್​ ಶುರುವಾಗಿದೆ. ಪತ್ನಿಯ ಬಳಿ ಕೊನೆಗೂ ಪ್ರೀತಿಯ ವಿಷಯವನ್ನು ಹೇಳಿಯೇ ಬಿಡೋಣ ಎಂದುಕೊಂಡಿರೋ ಗೌತಮ್​ ಕೈಯಲ್ಲಿ ಗುಲಾಬಿ ಹೂವು ಹಿಡಿದು ಡಬಲ್​ ಆ್ಯಕ್ಟಿಂಗ್​ ಶುರು ಮಾಡಿಕೊಂಡಿದ್ದಾನೆ. ಗುಲಾಬಿ ಹೂವನ್ನು ಪತ್ನಿಗೆ ಕೊಟ್ಟು ಐ ಲವ್​ ಯೂ ಎನ್ನುವ ತವಕದಲ್ಲಿ ಇದ್ದಾನೆ. ಅದನ್ನು ಪಡೆದುಕೊಂಡ ಮೇಲೆ ಭೂಮಿಕಾ ಏನು ಹೇಳಬಹುದು, ಹೇಗೆ ನಾಚಿ ನೀರಾಗಬಹುದು ಎನ್ನುವುದನ್ನು ತಾನೇ ಕಲ್ಪನೆ ಮಾಡಿಕೊಂಡು ಅವಳ ಪಾತ್ರವನ್ನೂ ತಾನೇ ಮಾಡಿದ್ದಾನೆ. ಅತ್ತ ಕಡೆಯಿಂದ ಗೆಳೆಯನ ಈ ಹೊಸ ಅವತಾರವನ್ನು ಕದ್ದುಮುಚ್ಚಿ ನೋಡುತ್ತ ಖುಷಿ ಪಡುತ್ತಿದ್ದಾನೆ ಆನಂದ್​. ಅಮೃತಧಾರೆಯ ಕ್ಯೂಟ್​ ಲವ್​ ಸ್ಟೋರಿಗೆ ಫ್ಯಾನ್ಸ್​ ಫಿದಾ ಆಗಿದ್ದಾರೆ. ಪ್ರೊಮೋ ಅನ್ನು ಜೀ ಕನ್ನಡ ವಾಹಿನಿ ಶೇರ್​ ಮಾಡಿದ್ದು, ಅಭಿಮಾನಿಗಳು ಹಾರ್ಟ್​ ಇಮೋಜಿಯಿಂದ ಕಮೆಂಟ್​ ಬಾಕ್ಸ್​ ತುಂಬಿಸಿದ್ದಾರೆ. 

ನಿನ್ನೆಯಷ್ಟೇ ಗೌತಮ್​  ಮತ್ತು ಭೂಮಿಕಾ ಹೋಳಿಯ ರಂಗಿನಲ್ಲಿ ಪ್ರೀತಿಯನ್ನು ಶುರುವಿಟ್ಟುಕೊಂಡಿದ್ದರು.  ಗೌತಮ್​ ಏಳುವ ಮೊದಲೇ ಆತನ ಕೆನ್ನೆಗೆ ಬಣ್ಣ ಸವರಿದ್ದಾಳೆ ಭೂಮಿಕಾ. ಗೌತಮ್​ ಎದ್ದು ಮುಖ ನೋಡಿಕೊಂಡಾಗ ಏನ್ರಿ ಇದು ಎಂದು ಕೇಳಿದ್ದ.  ನಾನು ಬಣ್ಣ ಹಚ್ಚಿದೆ ಎಂದು ಮನಸ್ಸಿನಲ್ಲಿ ಇಟ್ಟುಕೊಂಡು ನನಗೂ ಬಣ್ಣ ಹಾಕಬೇಡಿ ಮತ್ತೆ ಎಂದಿದ್ದಳು ಭೂಮಿಕಾ. ಆಗ ಗೌತಮ್​ಗೆ ಗೆಳೆಯ ಆನಂದ್​ ಮಾತು ನೆನಪಾಗಿದೆ. ಹೆಣ್ಣುಮಕ್ಕಳು ಬೇಡ ಅಂದ್ರೆ ಬೇಕು ಅಂತ, ಬೇಕು ಅಂದ್ರೆ ಬೇಡ ಅಂತ ಅರ್ಥ ಎಂದು. ಇದೇ ಕಾರಣಕ್ಕೆ ಭೂಮಿಕಾ ಕೆನ್ನೆಗೂ ಬಣ್ಣ ಹಚ್ಚಿದ್ದ. ಇವರಿಬ್ಬರ ರಂಗಿನಾಟಕ್ಕೆ ವೀಕ್ಷಕರು ಮನಸೋತಿದ್ದರು.

Tap to resize

Latest Videos

ಒಂದಲ್ಲ, ಎರಡಲ್ಲ... 60 ಟೇಕ್​ ಆದ್ರೂ ಸೀತೆ ಜತೆ ಡ್ಯಾನ್ಸ್​ ಮಾಡಲಾಗದೇ ರಾಮ್ ಪರದಾಟ​: ನಕ್ಕು ನಕ್ಕು ಸುಸ್ತಾದ ಫ್ಯಾನ್ಸ್​ 

ಅಷ್ಟಕ್ಕೂ ಇದಾಗಲೇ ಗೌತಮ್​ ಮತ್ತು ಭೂಮಿಕಾ ನಡುವೆ ಪ್ರೀತಿ ಒಂದು ಹೆಜ್ಜೆ ಮುಂದಕ್ಕೇ ಹೋಗಿದೆ.  ಇಲ್ಲಿಯವರೆಗೆ ಮಲ್ಲಿಗೆ ಹೂವು ಎಂದ್ರೆ ಅಲರ್ಜಿ ಅಂತಿದ್ದ ಗೌತಮ್​ ಪತ್ನಿ ಭೂಮಿಕಾಗೆ ಇಷ್ಟ ಎಂದು ಮಲ್ಲಿಗೆ ಹೂವನ್ನು ತಂದು ಕೊಟ್ಟಿದ್ದಾನೆ. ನಿಮಗೆ ಇದು ಎಂದ್ರೆ ಅಲರ್ಜಿ ಅಲ್ವಾ ಎಂದು ಭೂಮಿಕಾ ಕೇಳಿದಾಗ, ಈಗೀಗ ನಿಮಗೆ ಏನು ಇಷ್ಟವೋ, ಅದು ನನಗೂ ಇಷ್ಟ ಆಗ್ತಿದೆ, ಯಾಕೋ ಗೊತ್ತಿಲ್ಲ ಎಂದಿದ್ದಾನೆ. ಭೂಮಿಕಾ ನಾಚಿ ನೀರಾಗಿದ್ದಾಳೆ. ಮಲ್ಲಿಗೆ ಹೂವನ್ನು ಮುಡಿಸುವಂತೆ ಕೇಳಿದಾಗ, ಅಂಜುತ್ತಲೇ ಅದನ್ನು ಮುಡಿಸಿದ್ದಾನೆ ಗೌತಮ್​. ಒಟ್ಟಿನಲ್ಲಿ ಡುಮ್ಮ ಸರ್​ಗೆ ಕೊನೆಗೂ ಲವ್​ ಅಂದ್ರೇನು ಅಂತ ಗೊತ್ತಾಗೋಕೆ ಶುರುವಾಗಿದೆ ಅಂತಿದ್ದಾರೆ ಫ್ಯಾನ್ಸ್​. ಮಲ್ಲಿಗೆ ಹೂವಿನ ಪ್ರೊಮೋ ಅನ್ನು ಜೀ ಕನ್ನಡ ವಾಹಿನಿ ಶೇರ್​ ಮಾಡಿದ್ದು, ಇದಕ್ಕೆ ಥಹರೇವಾರಿ ಕಮೆಂಟ್​ಗಳ ಸುರಿಮಳೆಯಾಗುತ್ತಿದೆ. ನಿಮ್ಮಿಬ್ಬರ ಪ್ರೀತಿಗೆ ಯಾರ ಕಣ್ಣೂ ಬೀಳದಿರಲಿ ಅಂತಿದ್ದಾರೆ ಅಭಿಮಾನಿಗಳು. 

ಹಾಗೆಂದು ಗೌತಮ್​ಗೆ ಇದೇ ಮೊದಲು ಬಾರಿಯಲ್ಲ. ಹಿಂದೆಯೂ ತಾನು ಪ್ರೀತಿ ಮಾಡ್ತಿರೋದು ತಿಳಿದಿತ್ತು. ಆದರೂ ಪ್ರೀತಿ-ಗೀತಿ ಅನ್ನೋದೇ ಗೊತ್ತಿಲ್ಲದ ಗೌತಮ್​ಗೆ ಇವೆಲ್ಲಾ ಹೊಸತಾಗಿತಲ್ಲಾ!  ಅತ್ತ ಭೂಮಿಕಾ ಅಂತೂ ತನ್ನ ಪ್ರೀತಿಯನ್ನು ಪತಿಗೆ ಹೇಗೆ ತಿಳಿಸಬೇಕು ಎನ್ನುವುದನ್ನು ತಿಳಿಯದೇ ಕಸಿವಿಸಿಯಲ್ಲಿಯೇ ಇದ್ದಳು, ಈಗೂ ಆಕೆ ನೇರವಾಗಿ ಪ್ರೀತಿಯ ಬಗ್ಗೆ ಹೇಳಿಯೇ ಇಲ್ಲ.  ಅವಳು ಪ್ರೀತಿಯನ್ನು ತಿಳಿಸಲು ಎಷ್ಟೇ ಪ್ರಯತ್ನ ಮಾಡಿದರೂ ಅದು ಪೆದ್ದು ಗೌತಮ್​ಗೆ ಗೊತ್ತೇ ಆಗುತ್ತಿಲ್ಲ. ಸ್ನೇಹಿತ ಆನಂದ್​, ಗೌತಮ್​ಗೆ ಚಾಲೆಂಜ್​ ಕೊಟ್ಟಿದ್ದ. ಪತ್ನಿಗೆ ಕಿಸ್​ ಮಾಡ್ಲೇಬೇಕು ಎನ್ನುವ ಚಾಲೆಂಜ್​ ಇದಾಗಿತ್ತು. ಇಲ್ಲದಿದ್ದರೆ ಪಾರ್ಟಿಯಲ್ಲಿ ಕುಡಿದ ವಿಷಯವನ್ನು ಅಜ್ಜಿಗೆ ತಿಳಿಸುವುದಾಗಿ ಹೇಳಿದ್ದ. ಗೌತಮ್​ಗೆ ಬೇರೆ ದಾರಿಯೇ ಇರಲಿಲ್ಲ. ಪತ್ನಿಗೆ ಕಿಸ್​ ಕೊಡಲೇಬೇಕು ಎಂದು ಹೋಗಿದ್ದ. ಅಷ್ಟರಲ್ಲಿಯೇ ಭೂಮಿಕಾ ಸಮೀಪ ಹಲ್ಲಿ ಬಂದು ಇನ್ನೇನು ಇಬ್ಬರೂ ಒಂದಾಗುತ್ತಾರೆ ಎಂದೇ ಹೇಳಲಾಗಿತ್ತು. ಆದರೆ ಅದು ಸಾಧ್ಯವಾಗಿರಲಿಲ್ಲ. ಈಗ ಗುಲಾಬಿ ಹೂವನ್ನು ಕೊಡುವಲ್ಲಿ ಸಕ್ಸಸ್​ ಆಗ್ತಾನಾ ಎನ್ನುವ ಕುತೂಹಲ ಅಭಿಮಾನಿಗಳದ್ದು. 

ನಟಿಯರು ಯಾವಾಗೆಲ್ಲಾ ಗರ್ಭಿಣಿ ಆಗ್ತಾರೆ ಎಂಬ ಸತ್ಯ ಬಿಚ್ಚಿಟ್ಟ ಬಾಲಿವುಡ್​ ತಾರೆ ಪರಿಣಿತಿ ಚೋಪ್ರಾ!

click me!