ಬಿಗ್‌ಬಾಸ್ (Big Boss 10) ಮನೆಯಲ್ಲಿ ತುಕಾಲಿ ಸಂತು ಆಡಿದ ಮಾತೊಂದಕ್ಕೆ ಸುದೀಪ್ ಸಿಟ್ಟಾಗಿದ್ದಾರೆ. ಅವರ ಈ ನಡೆ ಹೆಣ್ಮಕ್ಕಳಿಗೆ ಹೆಚ್ಚು ಇಷ್ಟವಾಗಿದೆ.
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ಬಿಗ್ ಬಾಸ್ ಕನ್ನಡ 10' (Big Boss Kannada 10) ರಿಯಾಲಿಟಿ ಶೋ ಅಂತಿಮ ಘಟ್ಟಕ್ಕೆ ಹತ್ತಿರವಾಗ್ತಿದೆ. ಈ ಬಾರಿಯ ಬಿಗ್‌ಬಾಸ್ ಶೋಗೆ ಪ್ರತೀ ಸಲಕ್ಕಿಂತ ಹೆಚ್ಚಿನ ಟಿಆರ್‌ಪಿ ಸಿಕ್ಕಿದೆ. ಈ ಬಾರಿಯ ಕಾಂಪಿಟೀಶನ್‌ಗಳೂ ಜನರಿಗೆ ಹೆಚ್ಚು ಇಷ್ಟವಾದಂತಿದೆ. ಇದರ ಜೊತೆಗೆ ಈ ಬಾರಿಯ ಬಿಗ್‌ಬಾಸ್‌ನಲ್ಲಿ ಮಹಿಳೆಯರಿಗೆ ಮರ್ಯಾದೆ ಕೊಡುವ ವಿಚಾರ ಅತೀ ಹೆಚ್ಚು ಚರ್ಚೆಗೆ ಬಂತು. ಈ ಶೋನ ಆರಂಭದಲ್ಲೇ ವಿನಯ್ ಅವರು ಬಳೆ ಬಗ್ಗೆ ಕೇವಲವಾಗಿ ಆಡಿದ ಮಾತಿಗೆ ಬಿಗ್‌ಬಾಸ್ ಮನೇಲಿರೋರು ಮಾತ್ರ ಅಲ್ಲ, ನೋಡುತ್ತಿದ್ದ ಜನರೂ ಬೆಂಕಿಯಾದರು. ಸುದೀಪ್ ಅವರೂ ಹೆಣ್ಮಕ್ಕಳ ಪರವಾಗಿ ಮೌಲಿಕವಾದ ಮಾತುಗಳನ್ನ ಹೇಳಿದರು.
ಇದೀಗ ತುಕಾಲಿ ಸ್ಟಾರ್ ಸಂತು ಅವರ ಸರದಿ. ಸಂತು ಅವರು ಕಳೆದ ವಾರ ಮಹಿಳಾ ಸ್ಪರ್ಧಿಗಳ ಬಗ್ಗೆ ಕಾಮೆಂಟ್ ಮಾಡಿದ್ದರು. 'ಸಂಡೇ ವಿಥ್ ಸುದೀಪ್' ಎಪಿಸೋಡ್‌ನಲ್ಲಿ ಸುದೀಪ್ ಈ ಬಗ್ಗೆ ಮಾತನಾಡಿದರು. ಮಹಿಳಾ ಸ್ಪರ್ಧಿಗಳ ಬಗ್ಗೆ 'ತುಕಾಲಿ ಸ್ಟಾರ್' ಸಂತು ಮಾಡಿದ ಕಾಮೆಂಟ್‌ಗೆ ಸುದೀಪ್‌ಗೆ ಸಿಟ್ಟು ತರಿಸಿದೆ. ಇದಕ್ಕೆ ಅವರು ಕ್ಲಾಸ್ ಕೂಡ ತಗೊಂಡಿದ್ದಾರೆ.
ಅಷ್ಟಕ್ಕೂ ಅದಾಗಿದ್ದು ಹೀಗೆ. ಬಿಗ್ ಬಾಸ್' ಮನೆಯಲ್ಲಿ ಮಹಿಳಾ ಸ್ಪರ್ಧಿಗಳು ಸೋಪ್‌ವೊಂದರ ಪ್ರಚಾರಕ್ಕೋಸ್ಕರ ಫೋಟೋಗೆ ಪೋಸ್ ಕೊಡುತ್ತಿದ್ದರು. ಸಂಗೀತಾ ಅವರೂ ಇತರ ಸ್ಪರ್ಧಿಗಳೊಂದಿಗೆ ಪೋಸ್ ಕೊಡುತ್ತಿರೋದನ್ನು ನೋಡಿದ ಸಂತು ಅವರು ಅಲ್ಲೇ ಕೂತಿದ್ದ ವಿನಯ್ ಗೌಡ, ಕಾರ್ತಿಕ್ ಮುಂದೆ 'ಸುಮಾರ್ ಆಗಿರೋ ಫಿಗರ್‌ಗಳಿಗೂ ಒಂದು ಕಾಲ ಬರತ್ತೆ ಅಂದ್ರೆ ಅದು ಇದೇನಾ?' ಎಂದು ಹೇಳಿದ್ದರು. ಇಂಥಾ ಮಾತುಗಳು ಬೆಂಕಿಯಾಗುತ್ತವೆ ಅನ್ನೋದು ವಿನಯ್ ಹಾಗೂ ಕಾರ್ತಿಕ್‌ಗೆ ಮೊದಲೇ ತಿಳಿದಿತ್ತು. ಹೀಗಾಗಿ 'ಇದಕ್ಕೆ ನಾನಿಲ್ಲಪ್ಪಾ' ಅಂತ ಕಾರ್ತಿಕ್ ಎದ್ದು ಹೋಗಿದ್ದಾರೆ, ವಿನಯ್ ಅಂತೂ ಈ ಮೊದಲೇ ಫೈರ್ ಆದವರು. ಅವರೂ ಹೆಣ್ಮಕ್ಕಳ ಬಗ್ಗೆ ಕೇವಲವಾಗಿ ಮಾತನಾಡಕೂಡದು ಎಂಬ ಬಗ್ಗೆ ಪಾಠ ಕಲಿತಂತಿದೆ. ಸೋ ಅವರೂ ಕೂಡ ಅಲ್ಲಿಂದ ಕಾಲ್ಕೀಳುತ್ತಾರೆ.
ಆದರೆ ವಾರದ ಕೊನೆಗೆ ಈ ವಿಚಾರವಾಗಿ ಸುದೀಪ್ ತುಕಾಲಿ ಅವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
ಬಿಗ್‌ಬಾಸ್ ಅಭಿಮಾನಿಗಳಿಗೆ ಭರ್ಜರಿ ಗುಡ್ ನ್ಯೂಸ್: ದೊಡ್ಮನೆಯಲ್ಲಿ ಉಳಿದುಕೊಳ್ಳಲು ಫ್ಯಾನ್ಸ್ಗೂ ಅವಕಾಶ!
'ನನಗೆ ಒಂದು ವಿಚಾರ ತುಂಬ ಕೋಪ ಬಂದಿತು. ನಿಮ್ಮ ಮಹಿಳಾ ಸ್ನೇಹಿತೆಯರ ಬಗ್ಗೆ ನೀವು ಕೊಟ್ಟ ಹೇಳಿಕೆ ನನಗೆ ಇಷ್ಟ ಆಗಲಿಲ್ಲ. ಮನೆಯಲ್ಲಿರುವ ತಾಯಿ ಕೂಡ ಹೆಣ್ಣೇ. ಮನೆಯಲ್ಲಿರುವವರು ಮಾತ್ರ ಹೆಣ್ಣು ಮಕ್ಕಳು, ಹೊರಗಡೆ ಇರುವವರು ಹೆಣ್ಣು ಮಕ್ಕಳಲ್ಲ ಅಂತ ಅಂದುಕೊಳ್ಳುವವರ ಬಗ್ಗೆ ನನಗೆ ಗೌರವ ಇಲ್ಲ. ಇದನ್ನು ಕಾಮಿಡಿ ಅಂತ ಅಂದುಕೊಳ್ಳೋಣ. ಈ ಮಾತು ಹೇಳುತ್ತಿದ್ದಂತೆ ಎಷ್ಟು ಜನರು ಸಕ್ಕರು? ಕಾರ್ತಿಕ್, ವಿನಯ್ ಕೂಡ ಅಲ್ಲಿಂದ ಎದ್ದರು. ಈ ವಿಚಾರವನ್ನು ನಾವು ಸೀರಿಯಸ್ ಆಗಿ ಆಗೋ ಹಾಗೆ ಮಾಡಿಲ್ಲ. ಹಾಸ್ಯ ಕಲಾವಿದರಾಗೋದು ತುಂಬ ಕಷ್ಟ. ನಗಿಸುವಂತಹ ಕಷ್ಟದ ಕೆಲಸ ಮತ್ತೊಂದಿಲ್ಲ. ಇದು ನಿಮಗೆ ವರವಾಗಿ ಸಿಕ್ಕಿದೆ, ಅದರ ಮೂಲಕ ಒಳ್ಳೆಯದನ್ನು ಹಂಚಬೇಕು, ಒಬ್ಬರನ್ನಿಟ್ಕೊಂಡು ಅವರಿಗೆ ಬೇಸರ ಮಾಡುವಂತೆ ಮಾಡಿ, ನಾಲ್ವರನ್ನು ನಗಿಸೋದನ್ನು ಕಾಮಿಡಿ ಅನ್ನಲ್ಲ' ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ. 'ನಾವು ಎಷ್ಟೇ ದೊಡ್ಡ ಸಿನಿಮಾ ಮಾಡಿದರೂ ನಮ್ಮ ಫಸ್ಟ್ ಸೀನ್‌ಗೆ ಮಾತ್ರ ಪ್ರೇಕ್ಷಕರು ಚಪ್ಪಾಳೆ ಹೊಡಿತಾರೆ, ಆದರೆ ಹಾಸ್ಯಕಲಾವಿದರು ಬಂದಾಗೆಲ್ಲ ಜನರು ಶಿಳ್ಳೆ ಹೊಡೀತಾರೆ. ಇದೇ ಹೀರೋ, ಕಾಮಿಡಿಯನ್‌ಗೂ ಇರೋ ವ್ಯತ್ಯಾಸ' ಎಂದು ಕಿಚ್ಚ ಸುದೀಪ್ ಅವರು ಹೇಳಿದ್ದಾರೆ.
'ಈ ವಿಷಯ ಇಷ್ಟು ಸೀರಿಯಸ್ ಆಗತ್ತೆ ಅಂತ ಅಂದುಕೊಂಡಿರಲಿಲ್ಲ. ನಾನು ಆಡಿದ ಮಾತಿಗೆ ಕ್ಷಮಿಸಿ' ಎಂದು ಸಂತು ಬಿಗ್ ಬಾಸ್ ಮನೆಯ ಮಹಿಳಾ ಸ್ಪರ್ಧಿಗಳಲ್ಲಿ ಕ್ಷಮೆ ಕೋರಿದ್ದಾರೆ.
ಪ್ರತಾಪ್ ನಿಜಕ್ಕೂ ಆತ್ಮಹತ್ಯೆಗೆ ಯತ್ನಿಸಿದ್ರಾ? ಅಂದು ಏನಾಗಿತ್ತೆಂದು ಸಂಪೂರ್ಣ ಮಾಹಿತಿ ನೀಡಿದ ಡ್ರೋನ್