
ಕಳೆದ ಎರಡು ವರ್ಷಗಳಿಂದ ವೀಕ್ಷಕರನ್ನು ರಂಜಿಸಿದ್ದ ಕಲರ್ಸ್ ಕನ್ನಡ ವಾಹಿನಿಯ ಕೆಂಡಸಂಪಿಗೆ ಸೀರಿಯಲ್ ಇನ್ನೇನು ಮುಕ್ತಾಯಗೊಳ್ಳಲಿದೆ. ಈ ಕುರಿತು ಸೀರಿಯಲ್ನಲ್ಲಿ ವಿಲನ್ ಪಾತ್ರ ಮಾಡಿದ್ದ ಸಾಧನಾ ಅರ್ಥಾತ್ ಅಮೃತಾ ರಾಮಮೂರ್ತಿ ಅವರು ಸೋಷಿಯಲ್ ಮೀಡಿಯಾದಲ್ಲಿ ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಸೀರಿಯಲ್ ಹಬ್ಬ ಅಂದ್ರೆ ಅನುಬಂಧ ಅವಾರ್ಡ್ಸ್ಗೆ ಎಲ್ಲಾ ಸೀರಿಯಲ್ಗಳ ಕಲಾವಿದರೂ ರೆಡಿಯಾಗಿದ್ದಾರೆ. ಹಲವಾರು ವಿಭಾಗಗಳಲ್ಲಿ ನೀಡುವ ಅವಾರ್ಡ್‌ಗೆ ಕೆಂಡಸಂಪಿಗೆ ಸೀರಿಯಲ್ ಕಲಾವಿದರ ಪಾಲೂ ಇದೆ. ಇದಾಗಲೇ ಬಿಗ್ಬಾಸ್ ಖ್ಯಾತಿಯ ನಿವೇದಿತಾ ಗೌಡ ಅವರು, ಕೆಲವು ಸೀರಿಯಲ್ ತಂಡಗಳನ್ನು ಮಾತನಾಡಿಸಿದ್ದಾರೆ. ಈ ಅವಾರ್ಡ್ ಫಂಕ್ಷನ್ಗೆ ಸದ್ಯ ಇವರೇ ರಾಯಭಾರಿ. ಇದಾಗಲೇ ಕೆಲ ತಂಡಗಳನ್ನು ಮಾತನಾಡಿಸಿರುವ ನಿವೇದಿತಾ ಗೌಡ ಇದೀಗ ಕೆಂಡಸಂಪಿಗೆ ತಂಡದ ಜೊತೆಯೂ ಮಾತುಕತೆ ನಡೆಸಿದ್ದು, ಇದರ ಪ್ರೊಮೋ ಅನ್ನು ಕಲರ್ಸ್ ಕನ್ನಡ ವಾಹಿನಿ ಶೇರ್ ಮಾಡಿಕೊಂಡಿದೆ.
ಈ ಸಂದರ್ಭದಲ್ಲಿ ತಂಡದ ಸದಸ್ಯರು ಸೀರಿಯಲ್ಗೆ ಸಂಬಂಧಿಸಿದಂತೆ ಹಲವು ವಿಷಯಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಖಳನಾಯಕಿ ಸಾಧನಾ ಅರ್ಥಾತ್ ನಟಿ ಅಮೃತಾ ರಾಮಮೂರ್ತಿ ಅವರು ತಮ್ಮ ಡ್ರೆಸ್ ಗುಟ್ಟನ್ನು ಬಿಟ್ಟುಕೊಟ್ಟಿದ್ದಾರೆ. 2022ರ ಆಗಸ್ಟ್ ತಿಂಗಳಿನಿಂದ ಬರೋಬ್ಬರಿ ಎರಡು ವರ್ಷ ನಡೆದಿರುವ ಈ ಸೀರಿಯಲ್ನಲ್ಲಿ ಒಂದೇ ಒಂದು ಡ್ರೆಸ್ ಅನ್ನು ನಾನು ರಿಪೀಟ್ ಹಾಕಲಿಲ್ಲ ಎಂದು ಅವರು ಹೇಳಿದ್ದಾರೆ. ಅದಕ್ಕೆ ಕಾರಣ ಕೊಟ್ಟಿರುವ ಅವರು, ನಮ್ಮ ನಿರ್ದೇಶಕರು ನಿಮ್ಮದು ಸ್ಟೈಲಿಷ್ ಪಾತ್ರ ಎಂದು ಹೇಳಿದ್ದರು. ಅದಕ್ಕಾಗಿ ಪಾತ್ರದ ಜೊತೆ ಕಾಂಪ್ರಮೈಸ್ ಆಗುವ ಮಾತೇ ಇಲ್ಲ. ಇದೇ ಕಾರಣಕ್ಕೆ ಒಂದೇ ಒಂದು ಕಾಸ್ಟ್ಯೂಮ್ ರಿಪೀಟ್ ಮಾಡಲಿಲ್ಲ. ಪಾತ್ರಕ್ಕೆ ಕರೆಕ್ಟ್ ಆಗಿ ಡ್ರೆಸ್ ನಿಭಾಯಿಸಬೇಕು ಎನ್ನುವ ಕಾರಣಕ್ಕೆ ಡ್ರೆಸ್ ರಿಪೀಟ್ ಮಾಡಿಲ್ಲ ಎಂದು ಹೇಳಿದ್ದಾರೆ.
'ಕರಿಮಣಿ'ಯಲ್ಲಿ ಕಾಣಿಸಿಕೊಂಡ ನಿವೇದಿತಾ ಗೌಡ- ಮುಂದಿನ ಮಾಲೀಕ ಯಾರಮ್ಮಾ ಕೇಳ್ತಿದ್ದಾರೆ ನೆಟ್ಟಿಗರು!
ಅಂದಹಾಗೆ ಕೆಲ ದಿನಗಳ ಹಿಂದಷ್ಟೇ ಅಮೃತಾ ಅವರು, 'ಕೆಂಡಸಂಪಿಗೆ' ಸೀರಿಯಲ್ ಮುಗಿಯುತ್ತಿರುವುದಕ್ಕೆ ನೋವಿನ ವಿದಾಯ ಹೇಳಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. 'ಕೆಂಡಸಂಪಿಗೆ' ಧಾರಾವಾಹಿಯ ಇವರ ಓಪನಿಂಗ್ ಶಾಟ್ ಬಿಎಂಡಬ್ಲ್ಯುನಲ್ಲಿ ಆಗಿತ್ತು. ಈಗ ಅಂತ್ಯ ಹೇಗೆ ಆಗುತ್ತೆ ಅಂಥ ನೀವೇ ನೋಡಿ. ಕೊನೆಯ ಸಂಚಿಕೆಗಳನ್ನು ಮರೆಯದೇ ನೋಡಿ. ಲವ್ ಯೂ ಆಲ್ ಎಂದು ಅವರು ಬರೆದುಕೊಂಡಿದ್ದರು. ಮಾತ್ರವಲ್ಲದೇ ವಿಡಿಯೋದ ಕೆಳಗೆ "ಕೆಂಡಸಂಪಿಗೆ ಕೊನೆಯ ಹಂತದಲ್ಲಿ. ಐ ವಿಲ್ ಮಿಸ್ ಯೂ ಸಾಧನಾ" ಎಂದು ಹೇಳಿದ್ದರು.
ಇನ್ನು ನಿವೇದಿತಾ ಗೌಡ ವಿಷಯಕ್ಕೆ ಬರುವುದಾದರೆ, ಈ ಅವಾರ್ಡ್ ಫಂಕ್ಷನ್ಗೆ ಇವರನ್ನು ಉಸ್ತುವಾರಿ ಮಾಡಿರುವುದಕ್ಕೆ ಇದಾಗಲೇ ಹಲವರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಚಂದನ್ ಶೆಟ್ಟಿ ಜೊತೆ ವಿಚ್ಛೇದನ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ನಿವೇದಿತಾ ಅವರನ್ನೇ ದೋಷಿಯನ್ನಾಗಿ ಮಾಡಲಾಗುತ್ತಿದೆ. ಇದಕ್ಕಾಗಿ ನಿವೇದಿತಾ ಕಂಡರೆ ಯಾಕೋ ಇವರ ವಿರುದ್ಧ ತಿರುಗಿ ಬೀಳುವವರೇ ಹೆಚ್ಚಾಗಿದ್ದಾರೆ. ಸೋಷಿಯಲ್ ಮೀಡಿಯಾಗಳಲ್ಲಿ ರೀಲ್ಸ್ ಮಾಡಿದಾಗಲೂ ನೆಗೆಟಿವ್ ಕಮೆಂಟ್ಸ್ ಜಾಸ್ತಿ ಆಗುತ್ತಿವೆ. ಇನ್ನು ಅನುಬಂಧ ಅವಾರ್ಡ್ ಒಳ್ಳೆಯ ಕುಟುಂಬಕ್ಕೆ ನೀಡುವ ಅವಾರ್ಡ್. ಅದಕ್ಕೆ ಇವರ್ಯಾಕೆ ಎಂದೂ ಹಲವರು ಮೂಗು ಮುರಿಯುತ್ತಿದ್ದಾರೆ.
ಜನ ಮೆಚ್ಚಿದ ಸಂಸಾರ ಅವಾರ್ಡ್‌ಗೆ ನಿವೇದಿತಾ ಗೌಡ ಎಂಟ್ರಿ! ವಿಡಿಯೋ ನೋಡಿ ಬಿಸಿಬಿಸಿ ಚರ್ಚೆ ಶುರು
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.