
ಮೀರಾ ಮಾಧವ, ಗಾಂಧಾರಿ, ರಾಧಾ ರಮಣ ಧಾರಾವಾಹಿ ನಟಿ ಕಾವ್ಯಾ ಗೌಡ ( Actress Kavya Gowda ) ಹಾಗೂ ಅವರ ಪತಿ ಸೋಮಶೇಖರ್ ಮೇಲೆ ಸಂಬಂಧಿಕರು ಹಲ್ಲೆ ಮಾಡಿದ್ದಾರೆ ಎಂಬ ಆರೋಪದಡಿಯಲ್ಲಿ ದೂರು ದಾಖಲಾಗಿದೆ. ಈಗ ಕಾವ್ಯಾ ಗೌಡ ಕೂಡ ಹಲ್ಲೆ ಮಾಡಿದ್ದಾರೆ ಎಂದು ಪ್ರೇಮಾ ಎನ್ನುವವರು ದೂರು ನೀಡಿದ್ದಾರೆ.
ಕೆ ಆರ್ ಪುರಂನಲ್ಲಿರುವ ಮನೆಯಲ್ಲಿ ಕಾವ್ಯಾ ಗೌಡ ಅವರು ಅತ್ತೆ-ಮಾವ, ಪತಿ ಸೋಮಶೇಖರ್ ಹಾಗೂ ಮಗಳು, ಇನ್ನು ಸೋಮಶೇಖರ್ ಗಂಡ ಹಾಗೂ ಅವರ ಹೆಂಡತಿ, ಮಗು ಕೂಡ ವಾಸವಿದ್ದಾರೆ.
“ನಾನು ಚಿತ್ರರಂಗದಲ್ಲಿದ್ದೇನೆ, ಸ್ವಲ್ಪ ಹೆಸರು ಮಾಡಿದ್ದೇನೆ, ಇದನ್ನು ಸಹಿಸಲು ಆಗದೆ ಈ ರೀತಿ ಮಾಡಿದ್ದಾರೆ. ಮಧ್ಯಮ ವರ್ಗದಿಂದ ನಾನು ಬಂದವಳು ಎಂದು ಯಾವಾಗಲೂ ಹಂಗಿಸುತ್ತಲೇ ಇರುತ್ತಾರೆ. ನನ್ನ ಮಗಳನ್ನು ನೋಡಿಕೊಳ್ಳಲು ಸುಮಾ ಎನ್ನುವ ಹುಡುಗಿ ಇದ್ದಳು. ಅವಳ ಮೇಲೆ ಕೂಡ ಕಳ್ಳಿ ಎಂದು ಆರೋಪ ಮಾಡಿದ್ದರು. ಇದನ್ನು ನನ್ನ ಮಾವ ಇತ್ಯರ್ಥ ಮಾಡಿದ್ದರೂ ಕೂಡ ಬಗೆಹರಿದಿಲ್ಲ” ಎಂದು ಕಾವ್ಯಾ ಗೌಡ ಹೇಳಿದ್ದಾರೆ.
“ನಮ್ಮ ಮನೆಯಲ್ಲಿ ಎಲ್ಲ ಕಡೆ ಸಿಸಿಟಿವಿ ಕ್ಯಾಮರಾ ಇದೆ, ಚೆಕ್ ಮಾಡಿಯೇ ಎಲ್ಲರನ್ನು ಬಿಡುತ್ತಾರೆ. ಲಿವಿಂಗ್ ಏರಿಯಾದಲ್ಲಿ ಇಟ್ಟಿದ್ದ ಆಭರಣ ಕಳುವು ಆಗಿದೆಯಂತೆ. ಲಿವಿಂಗ್ ಏರಿಯಾದಲ್ಲಿ ಯಾರು ಆಭರಣ ಇಡುತ್ತಾರೆ?” ಎಂದು ಕಾವ್ಯಾ ಗೌಡ ಹೇಳಿದ್ದಾರೆ.
ಕಾವ್ಯಾ ಗೌಡ ಅವರು ಈ ಬಗ್ಗೆ ಮಾತನಾಡಿದ್ದು, “ನನ್ನ ಪತಿ ಹಾಗೂ ಮಾವನ ಅಕೌಂಟ್‌ನಿಂದ ನನಗೆ ಒಂದು ರೂಪಾಯಿ ಕೂಡ ಬಂದಿಲ್ಲ. ನಾನು ಚಿತ್ರರಂಗಕ್ಕೆ ಬಂದು ಹದಿನೆಂಟು ವರ್ಷ ಆಗಿದೆ. ನಾನು ಎಲ್ಲೇ ಹೋದರೂ, ನನ್ನ ಹಣದಿಂದಲೇ ಖರ್ಚು ಮಾಡುತ್ತೇನೆ” ಎಂದು ಸ್ಪಷ್ಟನೆ ನೀಡಿದ್ದಾರೆ.
ಕಾವ್ಯಾ ಗೌಡ ಅವರು, “ಪ್ರೇಮಾ ಅವರನ್ನು ನಾನು ಫ್ಯಾಮಲಿ ಎಂದು ಪರಿಗಣಿಸೋದಿಲ್ಲ. ಅವರ ಬ್ಯಾಕ್‌ಗ್ರೌಂಡ್ ಬಗ್ಗೆ ಕೂಡ ಏನೂ ಗೊತ್ತಿಲ್ಲ, ಹೇಳೋದಿಲ್ಲ” ಎಂದು ಹೇಳಿದ್ದಾರೆ.
ಅಂದಹಾಗೆ ಸೋಮಶೇಖರ್ ಅವರು ಹಲ್ಲೆ ಮಾಡಿರುವ ವಿಡಿಯೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಈ ಬಗ್ಗೆ ಕಾವ್ಯಾ ಗೌಡ ಮಾತನಾಡಿದ್ದು, “ನನ್ನ ಎರಡು ವರ್ಷದ ಮಗಳ ಮೇಲೆ ಹೊಡೆದರು. ಹೀಗಾಗಿ ನನ್ನ ಗಂಡ ಸುಮ್ಮನಿರಲಿಲ್ಲ, ಪ್ರತಿರೋಧ ಮಾಡಿದರು” ಎಂದಿದ್ದಾರೆ.
“ನನ್ನನ್ನು ನೂರು ಜನರ ಮುಂದೆ ಅತ್ಯಾ*ಚಾರ ಮಾಡ್ತೀನಿ ಎಂದಿದ್ದಾರೆ. ನನ್ನನ್ನು ಕೊ*ಲ್ಲುತ್ತಾರಂತೆ. ಈಗಾಗಲೇ ನನ್ನ ಖಾಸಗಿ ಭಾಗಗಳಿಗೆ ಒದ್ದಿದ್ದಾರೆ. ನನ್ನನ್ನು ಕೊಲ್ಲಲು, ಅತ್ಯಾ*ಚಾರ ಮಾಡಲು ಕಾನೂನು ಸುಲಭ ಇದೆಯಾ? ನಾನು ನ್ಯಾಯದಿಂದಲೇ ಹೋರಾಡುವೆ” ಎಂದು ಕಾವ್ಯಾ ಗೌಡ ಹೇಳಿದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.