
ಸದ್ಯ ʼಕರ್ಣʼ ಧಾರಾವಾಹಿಯಲ್ಲಿ ನಟಿಸುತ್ತಿರುವ ಜ್ಯೋತಿ ಬಂಟ್ವಾಳ ( Actress Jyothi Bantwal ) ಅವರ ಮೈಮೇಲೆ ದೇವರು ಬರುವುದಂತೆ. ಹೌದು, ಕೆಲ ತಿಂಗಳುಗಳ ಹಿಂದೆ ಚಾಮರಾಜಪೇಟೆಯ ಕಲಾವಿದರ ಸಂಘದಲ್ಲಿ ಪೂಜೆ ನಡೆದಾಗ ಅವರ ಮೈಮೇಲೆ ದೇವರು ಬಂದಿದ್ದು ದೊಡ್ಡ ಮಟ್ಟದಲ್ಲಿ ಸೌಂಡ್ ಆಯ್ತು. ಈ ಬಗ್ಗೆ ನಿರ್ದೇಶಕ ರಘುರಾಮ್ ಅವರಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ನಮ್ಮ ಕಡೆ ದೇವರ ಮೈಮೇಲೆ ಬಂದ್ರು ಅಂತ ಹೇಳ್ತಾರೆ. ಸುಮಾರು ಒಂದು 30 ವರ್ಷ 40 ವರ್ಷದ ಹಿಂದೆ, ನಾನು ರೆಗ್ಯುಲರ್ ದಸರಾದಲ್ಲಿ ನವರಾತ್ರಿಗೆ ಫಾಸ್ಟಿಂಗ್ ಮಾಡ್ತೀನಿ. ಆಮೇಲೆ ದೇವಿ ಸಹಸ್ರನಾಮ ಓದಿ ನನಗೆ ಹೆಂಗೆ ಅನ್ಸುತ್ತೋ ಆ ಥರ ಪೂಜೆಗಳನ್ನು ಮಾಡುತ್ತಿದ್ದೆ. ಆ ಥರ ಪೂಜೆ ಮಾಡಿಕೊಂಡು ಬರಬೇಕಾದ್ರೆ ಒಂದು ಸಲ ನಮ್ಮ ಮನೆಯಲ್ಲಿ ಋತುಮತಿಯಾದೆ ಅಂತ ಆಗಲಿಲ್ಲ. ಇನ್ನೊಮ್ಮೆ ಯಾರದೋ ಮನೆಯಲ್ಲಿ ಸತ್ಯನಾರಾಯಣ ಪೂಜೆಗೆ ಹೋಗಬೇಕಿತ್ತು.
ಒಮ್ಮೊಮ್ಮೆ ಅದು ನವಮಿ, ದಶಮಿಗಳು ಒಂದೇ ದಿನ ಬರುತ್ತವೆ. ನನಗೆ ಅಂದು ಅವರ ಮನೆಗೆ ಹೋದಾಗ ಇವತ್ತೇ ದಶಮಿ, ಇವತ್ತೇ ಪೂಜೆ ಮಾಡಬೇಕು ಅಂತ ಹೇಳಿದ್ರು. ನಾನು ಮನೆಗೆ ಬಂದು ಪೂಜೆ ಮಾಡಿದೆ. ನಾನು ಆಗ ಲಕ್ಷ್ಮೀ ಸ್ತೋತ್ರ ಓದುತ್ತಿದ್ದೆ, ನನಗೆ ಲಲಿತ ಸಹಸ್ರನಾಮ ಓದಬೇಕು ಅಂತ ಗೊತ್ತಿರಲಿಲ್ಲ. ನಾನು ಪೂಜೆ ಮಾಡುವಾಗ ನನ್ನ ತಲೆಯಲ್ಲಿ ದೇವರ ಬಗ್ಗೆ ಏನೇನೋ ವಿಚಾರಗಳು ಬರುತ್ತಿದ್ದವು. ಅದೇ ವಿಚಾರಗಳು ನನ್ನ ಅಕ್ಕನ ತಲೆಯಲ್ಲಿಯೂ ಬರುತ್ತಿತ್ತಂತೆ.
ನಮ್ಮ ಮನೆಯ ಪ್ಯಾಸೇಜ್‌ನಲ್ಲಿ ಏಳು ಕಮಲದ ಹೂವು ಹಾಕಿ ರಂಗೋಲಿ ಥರ ಬಿಡಿಸಿದ್ದೆ. ಒಂದು ಗಾಳಿ ಬಂದು ಆ ಹೂವುಗಳೆಲ್ಲವೂ ಹಾರಿ ಹೋಯ್ತು. ಇತ್ತ ನನ್ನ ಕೈಯಲ್ಲಿ ಆರತಿ ಇತ್ತು. ನನ್ನ ಮೈ ಭಾರ ಆಯ್ತು, ನನಗೆ ಫಸ್ಟ್ ಟೈಮ್ ಮೈಮೇಲೆ ದೇವರು ಬಂದಿತ್ತು. ನನ್ನ ಅಮ್ಮ ಹೆದರಿದ್ದರು. ಆದರೆ ನನ್ನ ಅಕ್ಕನಿಗೆ ಇದು ದೇವರು ಎನ್ನೋದು ಅರ್ಥ ಆಗಿ, ಅಮ್ಮನನ್ನು ಸಮಾಧಾನ ಮಾಡಿದ್ದಾರೆ.
ನಾನು ಯಾವುದೇ ದೇವಿ ದೇವಸ್ಥಾನಕ್ಕೆ ಹೋದರೂ ನನ್ನ ಮೈಮೇಲೆ ಬರುತ್ತದೆ. ಆಮೇಲೆ ನಾನು ಮೈಮೇಲೆ ಬಂದಾಗ ಮಾತಾಡೋಕೆ ಶುರು ಮಾಡಿದರು. ಇನ್ನು ನನ್ನ ಅಕ್ಕನ ಮನೆಯವರು ಕೂಡ ಏನಾದರೂ ಸಮಸ್ಯೆ ಬಂದಾಗ ನನ್ನ ಹತ್ರ ಕೇಳೋದುಂಟು. ನಾನು ಸಿನಿಮಾದಲ್ಲಿದ್ದೀನಿ, ಮೈಮೇಲೆ ಬರೋದು ನೋಡಿ ಕೆಲವರು ನಾಟಕ ಅಂತ ಹೇಳೋದುಂಟು. ಹೀಗಾಗಿ ದಯವಿಟ್ಟು ನನ್ನಿಂದ ಏನಾದರೂ ನಮ್ಮ ಮನೆಯವರಿಗೆ ಸಹಾಯ ಆಗುವಂತೆ ಮಾಡು ಅಂತ ದೇವರ ಬಳಿ ಕೇಳಿಕೊಂಡೆ. ನೆಗೆಟಿವ್ ಕಾಮೆಂಟ್ ಮಾಡೋರಿಗೆ ನಾನು ಏನೂ ಹೇಳೋದಿಲ್ಲ.
ಒಮ್ಮೆ ನನ್ನ ಗೋಲ್ಡ್ ಚೈನ್‌ನ್ನು ಮೂಕಾಂಬಿಕೆ ದೇವಿ ವಿಗ್ರಹಕ್ಕೆ ಮುಡಿಸಿ ಕೊಡಿ ಅಂತ ಪುರೋಹಿತರ ಬಳಿ ಹೇಳಿದ್ದೆ. ಆಮೇಲೆ ಅವರು ದೇವಿಗೆ ಚೈನ್ ಮುಡಿಸಿ ಕೊಟ್ಟರು. ಆ ದೇವಿ ಪವರ್, ನನ್ನ ಚೈನ್‌ಗೆ ಬಂದಿತ್ತು, ನಾನು ಆ ಚೈನ್ ಹಾಕುತ್ತಿದ್ದೆ. ನಮ್ಮ ಪೂರ್ವಜರೊಬ್ಬರಿಗೆ ಮೈಮೇಲೆ ಬರುತ್ತಿತ್ತಂತೆ. ಹಾಗೆ ವಂಶಪಾರಂಪರ್ಯವಾಗಿ ನನಗೆ ಮೈಮೇಲೆ ಬಂದಿದೆ.
ಇತ್ತೀಚೆಗೆ ಸ್ವಲ್ಪ ನಾನು ದೇವರ ಪೂಜೆ ಮಾಡೋದು ಕಮ್ಮಿ ಮಾಡಿದೆ. ದಸರಾದಲ್ಲಿ ಕಳಶ ಸ್ಥಾಪನೆ ಮಾಡಿ, ಮುತ್ತೈದೆಯನ್ನು ಕರೆದು, ಅರಿಶಿಣ ಕುಂಕುಮ ಕೊಟ್ಟು ಅವರಿಗೆ ಪೂಜೆ ಮಾಡುತ್ತಿದ್ದೆ. ಅಲ್ಲಿ ಸ್ವಲ್ಪ ತಪ್ಪಾಯ್ತು. ಇನ್ನು ನಮ್ಮ ಮನೆಯಲ್ಲಿ ಎರಡು ಬೆಕ್ಕುಗಳಿವೆ. ಆ ಬೆಕ್ಕುಗಳಿಗೆ ನಾನ್ ವೆಜ್ ಹಾಕಬೇಕು. ಇನ್ನು ಆ ಬೆಕ್ಕುಗಳು ಕಳಶ ಬೀಳಿಸಿದರೆ ತಪ್ಪಾಗುತ್ತದೆ ಅಂತ ನಾನು ವಿಶೇಷವಾಗಿ ಪೂಜೆ ಮಾಡುತ್ತಿಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.