ಯಾರ ಹೆಸರೂ ಹೇಳದೇ ಹಿಗ್ಗಾಮುಗ್ಗಾ ಸಿಂಪತಿ ಗಿಟ್ಟಿಸೋರ ನೀರಿಳಿಸಿದ ಕನ್ನಡತಿ ಅಕ್ಕ ಅನು!

Published : Nov 26, 2023, 07:19 PM ISTUpdated : Dec 04, 2023, 11:34 AM IST
ಯಾರ ಹೆಸರೂ ಹೇಳದೇ ಹಿಗ್ಗಾಮುಗ್ಗಾ ಸಿಂಪತಿ ಗಿಟ್ಟಿಸೋರ ನೀರಿಳಿಸಿದ ಕನ್ನಡತಿ ಅಕ್ಕ ಅನು!

ಸಾರಾಂಶ

ಪ್ರಸ್ತುತ ಸಮಾಜದಲ್ಲಿ ಜನರು ತಪ್ಪು ಮಾಡಿಯೂ, ಏನೂ ಣಾಡೇ ಇಲ್ಲವೆಂಬಂತೆ ಸಿಂಪತಿ ಗಿಟ್ಟಿಸಿಕೊಂಡು ಬದುಕುತ್ತಿರುವವರನ್ನು ಕನ್ನಡತಿ ಅಕ್ಕ ಅನು ಹಿಗ್ಗಾಮುಗ್ಗಾ ನೀರಿಳಿಸಿದ್ದಾರೆ.

ಬೆಂಗಳೂರು (ನ.26):  ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್‌ಬಾಸ್ ಸೀಸನ್‌ 10 ಮನೆಯಲ್ಲಿ ನಡೆಯುತ್ತಿರುವ ವಿದ್ಯಾಮಾನಗಳಿಗೆ ಕನೆಕ್ಟ್ ಆಗುವಂತೆ  ಸಾಮಾಜಿಕ ಜಾಲತಾಣದಲ್ಲಿ ಕೆಚ್ಚೆದೆಯ ಕನ್ನಡತಿ ಎಂಬ ಟ್ಯಾಗ್‌ಲೈನ್ ಹಾಕಿಕೊಂಡು ಶಾಲೆಗಳ ಜೀರ್ಣೋದ್ಧಾರ ಕೆಲಸ ಮಾಡುವ ಅಕ್ಕ ಅನು (kechedeya kannadathi anu) ತಪ್ಪು ಮಾಡಿಯೂ, ಏನೂ ಮಾಡದಂತೆ ಸಿಂಪತಿ ಗಟ್ಟಿಸಿಕೊಳ್ಳುವ ಕೆಲವರ ಬೆವರಿಳಿಸುವ ಕೆಲಸ ಮಾಡಿದ್ದಾರೆ. ಸಮಾಜದ ಸ್ವಾಸ್ಥ್ಯ ಹಾಳು ಮಾಡಿ ಪ್ರತಿಷ್ಠಿತ ವೇದಿಕೆಗೆ ಬಂದು ಕ್ಷಮೆ ಕೇಳಿ ಸಿಂಪತಿ ಗಿಟ್ಟಿಸಿಕೊಂಡು ಲಕ್ಸುರಿ ಜೀವನ ಮಾಡಲು ಯೋಜನೆ ರೂಪಿಸಿದ್ದಾರೆ ಎಂದು ಪರೋಕ್ಷವಾಗಿ ಕೆಲವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಅಕ್ಕ ಅನು ಬರೆದುಕೊಂಡ ಪೋಸ್ಟ್ ಇಲ್ಲಿದೆ ನೋಡಿ.. 'ಪ್ರಸ್ತುತ ಸಮಾಜದಲ್ಲಿ ಬರೀ ಸುಳ್ಳು ಪ್ರತಿಷ್ಠೆ,ಮೋಸ,ವಂಚನೆ ಹಾಗೂ ಸಮಾಜದ ಹಾದಿ ತಪ್ಪಿಸುವಂತ ಅನೈತಿಕ ಚಟುವಟಿಗೆಗಳಿಂದ ಸಮಾಜದ ಸ್ವಾಸ್ಥ್ಯ ಹಾಳು ಮಾಡಿ ಪ್ರತಿಷ್ಠಿತ ವೇದಿಕೆಗಳಿಗೆ ಅವಕಾಶ ಪಡೆದು,ನಂತರ ತಪ್ರೊಪ್ಪಿಕೊಂಡು ಸಿಂಪತಿಗೊಳಗಾಗುತ್ತಾರೆ. ಜನಗಳು ಇಂತಹ ವಿಚಾರಗಳನ್ನೇ ಅಯ್ಯೋ,ಪಾಪ ಅಂದ್ರೆ ಮುಂದಿನ ಯುವ ಪೀಳಿಗೆ ಅವರ ಮುಂದಿನ ಶಾರ್ಟ್ ಕಟ್ ಉಪಜೀವನಕ್ಕಾಗಿ ಮಾಡಬಾರದ ಕೆಲಸಗಳನ್ನೇ ಮಾಡಿ ಪ್ರತಿಷ್ಠಿತ ವೇದಿಕೆಗಳಿಗೆ ಹೋಗಿ ಕ್ಷಮೆಯಾಚಿಸಿ ನಂತರ ಆರಾಮಾಗಿ ಸಿಂಪತಿ ಹಣದಲ್ಲಿ ಜನಪ್ರಿಯತೆ ಗಳಿಸಿದ ವ್ಯಕ್ತಿಗಳು ಉತ್ತಮ ಜೀವನ, (ಲಕ್ಷುರಿ ಲೈಫ್)ಎಂಜಾಯ್ ಮಾಡ್ತಾರೆ.ಈಹಾಳಾದ ಸಾಮಾಜಿಕ ಜಾಲತಾಣದಂತಹ ಯುಗದಲ್ಲಿ ಪ್ರಾಮಾಣಿಕತೆ ಹಾಗೂ ಪ್ರಬುದ್ಧತೆಗೆ ಯಾವತ್ತೂ ಬೆಲೆ ಸಿಗುತ್ತದೆಯೋ ಅವತ್ತು ಸುಳ್ಳು ಪ್ರತಿಷ್ಠೆ ಹಾಗೂ ಸಮಾಜದ ಹಾದಿ ತಪ್ಪಿಸುವವರ ಪ್ರಾಬಲ್ಯ ಕಮ್ಮಿ ಆದ್ರೂ ಆಗಬಹುದೋ..

ಕಿಸ್‌ ಬೆಡಗಿ ನಟಿ ಶ್ರೀಲೀಲಾ ಉತ್ತುಂಗದಲ್ಲಿರುವಾಗಲೇ ಬಣ್ಣದ ಜಗತ್ತಿನಿಂದ ದೂರವಾಗ್ತಾರಾ? ಈ ನಿರ್ಧಾರ ಬೇಡವೆಂದ ಫ್ಯಾನ್ಸ್!

ವಿಶೇಷ ಸೂಚನೆ ಇದು ಯಾರದೋಸಪೋರ್ಟ್ ಗಾಗಿ ಬರೆದ ಬರಹ ಅಲ್ಲ. ಈಗಿನ ಪರಿಸ್ಥಿತಿ ಕೂಡ ಹಾಗೆ ಇದೆ ಪ್ರಾಮಾಣಿಕವಾಗಿ ಬದುಕವರಿಗಿಂತ ಜನಗಳನ್ನ ಗೊಂದಲಕ್ಕೊಳಗಾಗುವಂತೆ ಮಾಡುವವರಿಗೆ ಸನ್ಮಾನ ಸಮಾಧಾನಗಳು ಜಾಸ್ತಿ' ಅಕ್ಕ ಅನು ಎಂದು ಬರೆದುಕೊಂಡು ಪೋಸ್ಟ್ ಮಾಡಿದ್ದಾರೆ. 

ಜೊತೆಗೆ, ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್‌ನಲ್ಲಿ 'ನನ್ನ ವಿಚಾರಗಳು ಸರಿಯಾಗಿವೆ ಎಂದು ಭಾವಿಸಿ ಬಹಿರಂಗವಾಗಿ ಹಂಚಿಕೊಳ್ಳುತ್ತಿದ್ದೇನೆ.ಯಾರನ್ನೋ ದೂರುವ ದ್ವೇಷದ ಹಾಗೂ ಅಸೂಯೆ ಭಾವನೆ ನನ್ನಲ್ಲಿ ಇಲ್ಲ.ಅಂತ ವಿಚಾರಗಳು ಬಂದ್ರು ಅದರಿಂದ ಹೊರಬರುವ ಪ್ರಯತ್ನ ಮಾಡಿ ನನ್ನನ್ನ ನಾನೇ ದೂರಿಕೊಂಡು ಪಾಪಪ್ರಜ್ಞಾಳಾಗುತ್ತೇನೆ. ಚಿಕ್ಕ ಪುಟ್ಟ ತಪ್ಪುಗಳು ಪ್ರಮಾದವಶಾತ್ ನನ್ನಿಂದ ಆದ್ರೂ ತಿಳಿವಳಿಕೆ ಇರುವವರು ಸಲಹೆ ನೀಡಿದ್ರು ತಪ್ಪಿಲ್ಲ' ಎಂದು ಪೋಸ್ಟ್ ಹಾಕಿಕೊಂಡಿದ್ದಾರೆ.

ರಚಿತಾರಾಮ್‌ಗೆ ಮದ್ವೆ ಪ್ರಪೋಸ್ ಮಾಡಿದ ಕಂಟೆಸ್ಟಂಟ್: ತರಾಟೆ ತೆಗೆದುಕೊಂಡ ರವಿಚಂದ್ರನ್!

ಇದಕ್ಕೆ ಕಮೆಂಟ್‌ ಮಾಡಿರುವ ಮಹೇಶ್ ಜನವಾರ ಎನ್ನುವವರು 'ವಿನಯ ಗೌಡ ಗೆ ಬೆಂಬಲ ನೀಡ್ತಾ ಇದ್ದೀರಿ. ತಪ್ಪಿಲ್ಲ . ಆದ್ರೆ ಬಿಗ್ ಬಾಸ್ ಮನೆಯಲ್ಲಿ ಅವನಿಂದ ಅಲ್ಲಿ ನಡೆಯುತ್ತಿರುವುದು ಮಾತು ಆಗ್ಲಿ ವರ್ತನೆ ಆಗಲಿ ಅಷ್ಟು ಕೆಟ್ಟದು ಆಗ್ತಿದೆ. ಯಾರಾದ್ರೂ ಅನುಕರಿಸಿದರೆ ಸಮಾಜದ ಸ್ವಾಸ್ಥ್ಯ ಹಾಳು ಆಗುವುದಿಲ್ಲ. ಅಥವಾ ನಿಮ್ಮದು ಸಾಮಾಜಿಕ ತಾಣ ಒಂದು ಕೆಟ್ಟ ಸಂದೇಶ ಕೊಟ್ಟ ಹಾಗೆ ಅಲ್ವಾ.. ಇಲ್ಲಿ ನಿನ್ನ ಬೆಳಿಸಿರುವುದು ನಾವೇ. ಇಲ್ಲಿ ನಿನ್ನ ನೋಡುವ ದೃಶ್ಯ ಕೂಡ ನಮ್ಮನ್ನು ಬದಲಾಯಿಸುತ್ತೆ. ಬಕೆಟ್ ಹಿಡಿಯುವ ಕೆಲ್ಸ್ ನಿಮ್ಮಿಂದ ಅಗಾಬಾರದು' ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ವೈವಾಹಿಕ ಜೀವನಕ್ಕೆ ಬಿಗ್ ಬಾಸ್ ಮಾಜಿ ಸ್ಪರ್ಧಿ, ಹಿಂದೂ ಮುಸ್ಲಿಂ ಸಂಪ್ರದಾಯದಂತೆ ಮದುವೆ
ಕಾಲುಂಗುರ ಧರಿಸಿದ ನಟಿ ರಜಿನಿ ಪತಿ…. ಪ್ರಶ್ನಿಸಿದವರಿಗೆ ಏನಂದ್ರು ನೋಡಿ