
ಜನಪ್ರಿಯ ಧಾರವಾಹಿ ಕನ್ನಡತಿಯಲ್ಲಿ ಇತ್ತೀಚೆಗಷ್ಟೇ ರತ್ಮಮಾಲಾ ಅವರು ಭುವಿಗೋಸ್ಕರ ಸ್ಪೆಷಲ್ ಕ್ಯಾರೆಟ್ ಹಲ್ವಾ ರೆಡಿ ಮಾಡಿಸಿ ಉಣಬಡಿಸಿದ್ದರು. ಆದ್ರೆ ಇದನ್ನು ಮಾಡ್ಸಿದ್ದಲ್ಲ, ಸ್ವತಃ ಅವರೇ ಮಾಡಿದ್ದಾರೆ.
ಹೌದು. ಕನ್ನಡತಿ ಸೀರಿಯಲ್ ಸೆಟ್‌ನಲ್ಲಿ ಕಲಾವಿದರೇ ಸೇರಿಕೊಂಡು ಕ್ಯಾರೆಟ್ ಹಲ್ವಾ ತಯಾರಿಸಿದ್ದಾರೆ. ಕ್ಯಾರೆಟ್ ತುರಿದು, ತುಪ್ಪದಲ್ಲಿ ದ್ರಾಕ್ಷಿ ಗೋಡಂಬಿ ಹುರಿದು, ಹಾಲು ಸೇರಿಸಿ ನಿಧಾನವಾಗಿ ಅಡುಗೆ ಮಾಡಿದ್ದಾರೆ.
ಕನ್ನಡತಿ ನಟನಿಗೆ ಬಂತು ರಿಯಲ್ ಅಮ್ಮನ ಪತ್ರ: ಕಣ್ಣೀರಾದ ಹರ್ಷ..!
ರತ್ನಮಾಲಾ ಅವರ ಜೊತೆ ಸಾನ್ಯಾ ಸೇರಿ ಇತರ ಕಲಾವಿರೂ ಕೈ ಜೋಡಿಸಿದ್ದಾರೆ. ಕ್ಯಾರೆಟ್ ಹಲ್ವಾ ತಯಾರಿಸೋ ವಿಡಿಯೋವನ್ನು ಶೇರ್ ಮಾಡಿಕೊಂಡ ರತ್ನಮಾಲಾ ಅವರು, ಕನ್ನಡತಿಯ ನಳಪಾಕದಲ್ಲಿ ಕ್ಯಾರೆಟ್ ಹಲ್ವಾ, ಅದನ್ನು ಸವಿದು ಉಂಡವರೆ ಪುಣ್ಯವಂತರು ಅಲ್ವಾ ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ.
ಅಂತೂ ಸೀರಿಯಲ್ ಸೆಟ್‌ನಲ್ಲಿಯೂ ಬಂದು ಅಡುಗೆ ಮಾಡೋ ಕಲಾವಿರನ್ನು ಮೆಚ್ಚಲೇ ಬೇಕಲ್ಲಾ..? ಹಾಗೆಯೇ ಜೊತೆಗೇ ಅಡುಗೆ ಮಾಡಿ ಉಣ್ಣುವ ಸಾಮರಸ್ಯವನ್ನೂ.. ಕನ್ನಡತಿಯ ತಂಡ ತಯಾರಿಸಿದ ಕ್ಯಾರೆಟ್ ಹಲ್ವಾ ವಿಡಿಯೋ ಇಲ್ನೋಡಿ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.