ಮಸ್ತಾನಿಯಾದ್ರು ಕನ್ನಡತಿ ನಟಿ..! ಏನ್ ಚಂದ ಡ್ಯಾನ್ಸ್ ನೋಡಿ

By Suvarna News  |  First Published Dec 22, 2020, 3:40 PM IST

ಕನ್ನಡತಿ ನಟಿ ಮಸ್ತಾನಿ ಲುಕ್‌ನಲ್ಲಿ ಮಿಂಚಿದ್ದಾರೆ. ಚಂದಕ್ಕೆ ಡ್ರೆಸ್ ಮಾಡ್ಕೊಂಡು ಕನ್ನಡತಿ ನಟಿ ಎಷ್ಟ್ ಚಂದ ಡ್ಯಾನ್ಸ್ ಮಾಡಿದ್ದಾರೆ ನೋಡಿ


ಕನ್ನಡತಿ ಧಾರವಾಹಿ ನಟಿ ರಾಮೋಲ ಮಸ್ತಾನಿಯಾಗಿದ್ದಾರೆ. ಕನ್ನಡತಿಯ ಕ್ಯೂಟ್ ವಿಲನ್ ಮಸ್ತಾನಿಯಾದ್ರೆ ಹೇಗಿರ್ಬೋದು ಅಂತ ತೋರ್ಸಿದ್ದಾರೆ ನಟಿ ಸಾನ್ಯಾ. ಚಂದದ್ದೊಂದು ವಿಡಿಯೋ ಮಾಡಿ ಶೇರ್ ಮಾಡ್ಕೊಂಡಿದ್ದಾರೆ.

ಮಾಡೆಲ್ ಮತ್ತು ನಟಿ ರಾಮೋಲ ಬಾಜಿರಾವ್ ಮಸ್ತಾನಿ ಸಿನಿಮಾದ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ರೆಡ್ ಕಲರ್ ಲೆಹಂಗಾದಲ್ಲಿ ಡ್ರೆಸ್ ಮಾಡಿದ ನಟಿ ಸೂಪರ್ ಆಗಿ ಡ್ಯಾನ್ಸ್ ಮಾಡಿದ್ದಾರೆ.

Tap to resize

Latest Videos

ರಿಲಯನ್ಸ್ ಜ್ಯುವೆಲ್ಸ್ ಮಿಸ್ ಇಂಡಿಯಾ 1st ರನ್ನರ್ ಅಪ್ ಈ ಕಿರುತೆರೆ ನಟಿ, ಕನ್ನಡತಿಯ ಬ್ಯೂಟಿಫುಲ್ ವಿಲನ್ ಈಕೆ..!

ಕನ್ನಡತಿ ಧಾರವಾಹಿಯಲ್ಲಿ ಖಡಕ್ ವಿಲನ್ ರಾಮೋಲಾ ಸೋಷಿಯಲ್ ಮೀಡಿಯಾದಲ್ಲಿ ಫುಲ್ ಆಕ್ಟಿವ್. ಫೋಟೊ, ವಿಡಿಯೋಗಳನ್ನು ಫ್ಯಾನ್ಸ್ ಜೊತೆ ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ.

ಸೆಟ್‌ನ ಫನ್ನಿ ಮೊಮೆಂಟ್ಸ್, ಚಂದದ ಹಾಡಿನ ರೀಲ್ಸ್ ವಿಡಿಯೋಗಳನ್ನು ಅಪ್‌ಲೋಡ್ ಮಾಡ್ತಾರೆ. ಕ್ಯೂಟ್ ಆಗಿದ್ರೂ ಸ್ಮಾರ್ಟ್‌ ವಿಲ್ ಆಗಿ ಕಾಣಿಸ್ಕೊಂಡಿರೋ ಸಾನ್ಯಾ ವಿಲನ್ ಆಗಿಯೂ ಕ್ಯೂಟ್ ಆಗಿ ಕಾಣಿಸೋದೆ ವಿಶೇಷ.

click me!