ತುಂಬಾ ದಿನದ ನಂತ್ರ ಇನ್ಸ್ಟಾಗ್ರಾಮ್ ಗೆ ಬಂದ್ರೂ ಖುಷಿ ಸುದ್ದಿ ನೀಡಿದ ರಂಜನಿ ರಾಘವನ್!

By Roopa Hegde  |  First Published Jul 8, 2024, 1:40 PM IST

ಕನ್ನಡತಿ ಧಾರವಾಹಿ ಖ್ಯಾತಿಯ ರಜನಿ ರಾಘವನ್ ತುಂಬಾ ದಿನಗಳ ನಂತ್ರ ಮತ್ತೆ ಅಭಿಮಾನಿಗಳ ಮುಂದೆ ಕಾಣಿಸಿಕೊಂಡಿದ್ದಾರೆ. ಅಭಿಮಾನಿಗಳ ಜೊತೆ ಖುಷಿ ಸುದ್ದಿ ಹಂಚಿಕೊಂಡಿದ್ದಲ್ಲದೆ ಫೋಟೋಕ್ಕೆ ಫೋಸ್ ನೀಡಿದ್ದಾರೆ. 
 


ಕನ್ನಡತಿ ಧಾರಾವಾಹಿ ಮೂಲಕವೇ ಕರ್ನಾಟಕ ಜನತೆ ಮನಗೆದ್ದಿರುವ ಕನ್ನಡದ ಯುವ ನಟಿ ರಜನಿ ರಾಘವನ್ ತುಂಬಾ ದಿನಗಳ ನಂತ್ರ ಮತ್ತೆ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ಇಣುಕಿ ನೋಡಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ತುಂಬಾ ದಿನವಾಯ್ತು ನಿಮ್ಮನ್ನು ನೋಡಿ ಎನ್ನುವ ಶೀರ್ಷಿಕೆಯೊಂದಿಗೆ ತಮ್ಮ ಸುಂದರ ಸೀರೆ ಫೋಟೋವನ್ನು ರಜನಿ ರಾಘವನ್ ಹಂಚಿಕೊಂಡಿದ್ದಾರೆ.

ರಜನಿ ರಾಘವನ್ (Rajani Raghavan) ತಮ್ಮ ಇನ್ಸ್ಟಾಗ್ರಾಮ್ (Instagram) ಖಾತೆಯಲ್ಲಿ ಎರಡು ಫೋಟೋ ಪೋಸ್ಟ್ ಮಾಡಿ. ಅರೇ ಹೇಗಿದ್ದೀರಿ, ನೋಡಿ ಸುಮಾರ್ ದಿನ ಆಯ್ತು ಎಂದು ರಜನಿ ಶೀರ್ಷಿಕೆ ಹಾಕಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ರಜನಿ ರಾಘವನ್ ಅವರ ಪೋಸ್ಟ್ ಗೆ ಅಭಿಮಾನಿಗಳು ಪ್ರತಿಕ್ರಿಯೆ ನೀಡಿದ್ದಾರೆ. ನೀವಿಷ್ಟು ಸುಂದರವಾಗಿ ಕಾಣಲು ಕಾರಣವೇನು ಎಂದು ಕೆಲ ಅಭಿಮಾನಿ (fan) ಗಳು ಕೇಳಿದ್ರೆ, ಕಿರಣ್ ರಾಜ್ ಜೊತೆ ಮತ್ತೆ ಯಾವಾಗ ತೆರೆ ಮೇಲೆ ಎಂಬ ಪ್ರಶ್ನೆಯನ್ನೂ ಅಭಿಮಾನಿಗಳು ಕೇಳಿದ್ದಾರೆ. ಇಷ್ಟೇ ಅಲ್ಲ ರಜನಿ ರಾಘವನ್ ಅವರಿಗೆ ಶುಭಾಶಯಕೋರಿದ್ದಾರೆ. 

Tap to resize

Latest Videos

undefined

ಸಿನಿಮಾ ಇಷ್ಟ ಆದ್ರೆ ಮಾತ್ರ ಇಂಟರ್‌ವಲ್‌ನಲ್ಲಿ ಟಿಕೆಟ್‌ ಖರೀದಿಸಿ; ಸ್ಯಾಂಡ್‌ವುಡ್‌ನ ಹೊಸ ಪ್ರಯೋಗ ಯಾವತ್ತಿಂದ ಶುರು?

ರಜನಿ ರಾಘವನ್ ಅವರಿಗೆ ಆಗಾಗ ಇನ್ಸ್ಟಾಗ್ರಾಮ್ ಗೆ ಬರುವಂತೆ ಅಭಿಮಾನಿಗಳು ಸಲಹೆ ನೀಡಿದ್ದಾರೆ. ನಿಮ್ಮ ಸುದ್ದಿನೇ ಇರೋದಿಲ್ಲ. ಆಗಾಗ ಬಂದು ನಮಗೆ ಅಪ್ಡೇಟ್ ಕೊಡಿ ಎಂದು ಕೆಲವರು ಹೇಳಿದ್ದಾರೆ. ಮತ್ತೆ ಕೆಲವರು ರಜನಿ ರಾಘವನ್ ಕಾಲೆಳೆದಿದ್ದಾರೆ. ಅವಾರ್ಡ್ ಅದು, ಇದು ಅಂತಾ ಬಂದ್ಮೇಲೆ ನಾವೆಲ್ಲ ನಿಮ್ಮ ಕಣ್ಣಿಗೆ ಬೀಳ್ತಿವಾ ಎಂದು ಪ್ರಶ್ನೆ ಮಾಡಿದ್ದಾರೆ. ಇಷ್ಟೇ ಅಲ್ಲ ನಾವು ಚೆನ್ನಾಗಿದೇವೆ, ನೀವು ಹೇಗಿದ್ದೀರಾ ಎಂದು ಪ್ರಶ್ನೆ ಕೇಳಿದ್ದಾರೆ. 

ರಜನಿ ರಾಘವನ್ ಗೆ ಯುವ ಸಾಹಿತ್ಯ ರನ್ನ ಪ್ರಶಸ್ತಿ (Award) : ರಜನಿ ರಾಘವನ್ ಗೆ ಅಭಿಮಾನಿಗಳು ಶುಭಕೋರಲು ಇದು ಕಾರಣ. ರಜನಿ ರಾಘವನ್ ಅವರಿಗೆ ಕರ್ನಾಟಕ ಕನ್ನಡ ಬರಹಗಾರ ಮತ್ತು ಪ್ರಕಾಶಕ ಸಂಘದ ವತಿಯಿಂದ ರಜನಿ ರಾಘವನ್ ಅವರಿಗೆ ಯುವ ಸಾಹಿತ್ಯ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. 

ರಜನಿ ರಾಘವನ್ ಈಗಾಗ್ಲೇ ಎರಡು ಪುಸ್ತಕ ಪಬ್ಲಿಷ್ ಮಾಡಿದ್ದಾರೆ. ರಜನಿ ರಾಘವನ್ ಕಥೆ ಡಬ್ಬ ಮತ್ತು ಸ್ವೈಪ್ ರೈಟ್ ಕಾದಂಬರಿಯನ್ನು ಅವರು ಬರೆದಿದ್ದು, ಓದುಗರಿಂದ ಇದಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. 

ರಜನಿ ರಾಘವನ್, ಧಾರಾವಾಹಿ, ಸಿನಿಮಾಗಳಲ್ಲಿ ನಟಿಸುತ್ತಲೇ ಕಥೆ, ಕಾದಂಬರಿ ಬರೆಯುತ್ತ ಸಾಹಿತ್ಯ ಕ್ಷೇತ್ರದಲ್ಲೂ ಮಿಂಚುತ್ತಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ರಜನಿ ನಿನ್ನೆ ಮತ್ತೆರಡು ಪೋಸ್ಟ್ ಹಂಚಿಕೊಂಡಿದ್ದಾರೆ. ಒಂದರಲ್ಲಿ ರಜನಿ, ಯುವ ಸಾಹಿತ್ಯ ರತ್ನ ಪ್ರಶಸ್ತಿ ಹಿಡಿದುಕೊಂಡಿದ್ದಾರೆ. ಯುವ ಸಾಹಿತ್ಯ ರತ್ನ ಪ್ರಶಸ್ತಿ ನನ್ನೆಲ್ಲ ಓದುಗರಿಗೆ ಅರ್ಪಣೆ ಎಂದು ರಜನಿ ರಾಘವನ್ ಬರೆದಿದ್ದಾರೆ. ಮತ್ತೊಂದು ವಿಡಿಯೋದಲ್ಲಿ ರಜನಿ ರಾಘವನ್, ತಮಗೆ ಯುವ ಸಾಹಿತ್ಯ ರತ್ನ ಪ್ರಶಸ್ತಿ ಸಿಕ್ಕಿದ್ದಕ್ಕೆ ಖುಷಿ ವ್ಯಕ್ತಪಡಿಸಿದ್ದಾರೆ. ಇದಾದ ಮೇಲೆ ಅದೇ ಸೀರೆಯಲ್ಲಿ ರಜನಿ ಫೋಟೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದು, ರಜನಿ ಅಭಿಮಾನಿಗಳಿಗೆ ಖುಷಿಯಾಗಿದೆ. ಇನ್ನಷ್ಟು ಬರಹದ ನಿರೀಕ್ಷೆಯಲ್ಲಿದ್ದೇವೆ ಎಂದು ಅಭಿಮಾನಿಗಳು ಬರೆದಿದ್ದಾರೆ. 

ಕತ್ತಲು ಬೆಳಕಿನ ಕಣ್ಣಾಮುಚ್ಚಾಲೆ ಆಟದಲ್ಲಿ ಮತ್ತೆ ಬೆತ್ತಲಾದ ಪೂನಂ ಪಾಂಡೆ!

ಸದ್ಯ ರಜನಿ, ವಿಜಯ್ ರಾಘವೇಂದ್ರ ಜೊತೆ ಸಿನಿಮಾದಲ್ಲಿ ಬ್ಯುಸಿಯಿದ್ದಾರೆ. ಬರಗೂರು ರಾಮಚಂದ್ರಪ್ಪ ನಿರ್ದೇಶನದ ಸ್ವಪ್ನ ಮಂಟಪ ಚಿತ್ರದಲ್ಲಿ ರಜನಿ ಜೊತೆ ವಿಜಯ್ ರಾಘವೇಂದ್ರ ಕಾಣಿಸಿಕೊಳ್ಳಲಿದ್ದಾರೆ.  ಈಗಾಗಲೇ ಚಿತ್ರದ ಶೂಟಿಂಗ್, ಡಬ್ಬಿಂಗ್ ಮುಗಿದಿದೆ. ಚಿತ್ರ ವೀಕ್ಷಣೆಗೆ ಅಭಿಮಾನಿಗಳು ಕಾತರದಿಂದ ಕಾಯ್ತಿದ್ದಾರೆ. ರಜನಿ ನಟಿಸಿರುವ ಕಾಂಗರೂ ಸಿನಿಮಾ ಈಗಾಗಲೇ ತೆರೆಗೆ ಬಂದಿದ್ದು, ಒಂದಾದ್ಮೇಲೆ ಒಂದು ಚಿತ್ರದಲ್ಲಿ ನಟಿಸುತ್ತಿರುವ ರಜನಿ ರಾಘವನ್, ತಮ್ಮ ನಟನೆ ಮೂಲಕ ಅಭಿಮಾನಿಗಳ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

click me!