ತಮಿಳು ‘ಸರಿಗಮಪಗೆ’ ಕನ್ನಡದ ಗಾಯಕಿ ಆಯ್ಕೆ

By Web Desk  |  First Published May 26, 2019, 1:57 PM IST

ಸರಿಗಮಪ ಖ್ಯಾತಿಯ ಐಶ್ವರ್ಯಾ ರಂಗರಾಜನ್ ತಮಿಳು ಸರಿಗಮಪಕ್ಕೆ ಕಾಲಿಟ್ಟಿದ್ದಾರೆ | ಐಶ್ವರ್ಯಾ ಹಾಡಿಗೆ ಎಲ್ಲರೂ ಫಿದಾ |  


ಸರಿಗಮಪ 11 ರಲ್ಲಿ ತಮ್ಮ ಅದ್ಭುತ ಗಾಯನದ ಮೂಲಕ ಗಮನ ಸೆಳೆದಿದ್ದ ಐಶ್ವರ್ಯಾ ರಂಗರಾಜನ್ ತಮಿಳಿನ ಸರಿಗಮಪಕ್ಕೆ ಆಯ್ಕೆಯಾಗಿದ್ದಾರೆ. 

ಮೆಗಾ ಆಡಿಶನ್ ನಲ್ಲಿ ಇವರ ಪರ್ಫಾಮೆನ್ಸ್ ಗೆ ಎಲ್ಲರೂ ಫಿದಾ ಆಗಿದ್ದಾರೆ. ತೀರ್ಪುಗಾರರಾದ ಶ್ರೀನಿವಾಸ್ ಹಾಗೂ ಸುಜಾತಾ ಐಶ್ವರ್ಯಾ ಹಾಡು ಕೇಳಿ ಫುಲ್ ಖುಷ್ ಆಗಿದ್ದಾರೆ. ನಿಮ್ಮನ್ನು ಪಡೆಯಲು ಈ ವೇದಿಕೆ ಅದೃಷ್ಟ ಮಾಡಿದೆ ಎಂದು ಐಶ್ವರ್ಯಾರನ್ನು ಸ್ವಾಗತಿಸಿದರು. 

Tap to resize

Latest Videos

undefined

 

ಐಶ್ವರ್ಯಾ ರಂಗರಾಜನ್ ಹಾಡಿನ ಜೊತೆಗೆ ನಟನೆಗೂ ಇಳಿದಿದ್ದರು. ಕಲರ್ಸ್ ಸೂಪರ್ ನಲ್ಲಿ ಪ್ರಸಾರವಾಗುವ ‘ಮಗಳು ಜಾನಕಿ’ ಧಾರಾವಾಹಿಯಲ್ಲಿ ಜಾನಕಿ ತಂಗಿ ಚಂಚಲಾ ಪಾತ್ರದಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದರು. ಇತ್ತೀಚಿಗೆ ವೈಯಕ್ತಿಕ ಕಾರಣದಿಂದ ಧಾರಾವಾಹಿಯಿಂದ ಹೊರ ಬಂದಿದ್ದಾರೆ. 

click me!