ಶೈನ್‌ ಶೆಟ್ಟಿಗೆ 'ನೀನೆ ನೀನೇ' ಎಂದ ಸಂಗೀತಾ ರಾಜೀವಿ; ಇದು ಮದ್ವೆ ಅಲ್ಲ ಸರ್!

Published : Sep 27, 2020, 01:48 PM ISTUpdated : Sep 27, 2020, 02:05 PM IST
ಶೈನ್‌ ಶೆಟ್ಟಿಗೆ 'ನೀನೆ ನೀನೇ' ಎಂದ ಸಂಗೀತಾ ರಾಜೀವಿ; ಇದು ಮದ್ವೆ ಅಲ್ಲ ಸರ್!

ಸಾರಾಂಶ

ಬಿಗ್ ಬಾಸ್‌ ವಿಜೇತ ಶೈನ್ ಶೆಟ್ಟಿ ಮದ್ವೆ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಭಾನುವಾರ ಹೇಳುತ್ತೀವಿ ಅಂದಿದ್ರು ಅಲ್ವಾ ಏನಂತೆ? 

ಕಿರುತೆರೆ ವಾಹಿನಿಯ ಜನಪ್ರಿಯ ನಟ ಶೈನ್ ಶೆಟ್ಟಿ ಮದುವೆ ಆಗುತ್ತಿದ್ದಾರೆ. ಹುಡುಗಿ ಜೊತೆ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ ಆದರೆ ಹೆಸರು ಹಾಗೂ ಮುಖವನ್ನು ರಿವೀಲ್ ಮಾಡಿಲ್ಲ. ಯಾರಿರಬಹುದು ಎಂದು ಕುತೂಹಲದಲ್ಲಿರುವ ನೆಟ್ಟಿಗರಿಗೆ ಇಲ್ಲಿದೆ ಉತ್ತರ...

'ಗಲ್ಲಿ ಕಿಚನ್' ಫುಡ್‌ ಟ್ರಕ್‌ ಆರಂಭಿಸಿದ ಬಿಗ್ ಬಾಸ್‌ ವಿನ್ನರ್ ಶೈನ್‌ ಶೆಟ್ಟಿ; ರುಚಿ ನೋಡಿದ್ದೀರಾ? 

ಹೌದು! ಶೈನ್‌ ಜೊತೆ ಯುವ ಗಾಯಕಿ ಜೊತೆ ಕಾಣಿಸಿಕೊಂಡು ವಿಡಿಯೋ ಶೇರ್ ಮಾಡಿಕೊಂಡಿರುವುದು ನಿಜ ಆದರೆ ಮದುವೆ ವಿಚಾರವಾಗಿ ಅಲ್ಲ. ಸಂಗೀತಾ ಅವರ ಸಂಯೋಜನೆಯಲ್ಲಿ ಮೂಡಿ ಬರುತ್ತಿರುವ ಹಾಡಿನಲ್ಲಿ ಶೈನ್ ಶೆಟ್ಟಿ ಕಾಣಿಸಿಕೊಳ್ಳಲಿದ್ದಾರೆ. ಕುತೂಹಲ ಹೆಚ್ಚಿಸುವುದಕ್ಕೆ ವಿಡಿಯೋವೊಂದನ್ನು ಶೇರ್ ಮಾಡಿದ್ದರು.

 

ಸಂಗೀತಾ ಪೋಸ್ಟ್‌: 

ವಿಡಿಯೋ ನೋಡಿ ಶೈನ್ ಶೆಟ್ಟಿ ಮದುವೆ ಆಗುತ್ತಿದ್ದಾರೆ ಎಂದು ಹಬ್ಬುತ್ತಿದ್ದಂತೆ  ಗಾಯಕಿ ಸಂಗೀತಾ ಪೋಸ್ಟ್‌ ಶೇರ್ ಮಾಡಿದ್ದಾರೆ ಹಾಗೂ ಇಂದು ತಮ್ಮ ಅಲ್ಬಂ ಸಾಂಗ್ ಹೆಸರನ್ನು ರಿವೀಲ್ ಮಾಡಿದ್ದಾರೆ.  'ಹೌದು ನೀವೆಲ್ಲರೂ ಗೆಸ್ ಮಾಡಿದ್ದು ಕರೆಕ್ಟ್ ಆಗಿದೆ. ಶೈನ್‌ ಶೆಟ್ಟಿ ಜೊತೆ' ಎಂದು ಹೇಳಿ 'ನೀನೆ ನೀನೇ. ಇಲ್ಲಿದೆ ನಮ್ಮ ಮೊದಲ ಸರ್ಪ್ರೈಸ್. ಇನ್ನು ತುಂಬಾ ರಿವೀಲ್ ಮಾಡುವುದು ಇದೆ. ಕಾದು ನೋಡಿ' ಎಂದು ಬರೆದುಕೊಂಡಿದ್ದಾರೆ.

ಉಡುಪಿ ಶೆಟ್ಟಿ ಹುಡುಗನ ವಿಭಿನ್ನ ಹೆಸರು; 'ಶೈನ್‌' ಹೆಸರ ರಹಸ್ಯ ರಿವೀಲ್!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Karna Serial- ಈ ನಿತ್ಯಾಗೆ ಸ್ವಲ್ಪವೂ ಬುದ್ಧಿ ಇಲ್ಲ: ನಟಿ ನಮ್ರತಾ ಗೌಡ ಮೇಲೆ ವೀಕ್ಷಕರು ಗರಂ
Ramayana: ಕಣ್ಣಲ್ಲಿ ಅಹಂಕಾರ, ಮಾತಲ್ಲಿ ಗಾಂಭೀರ್ಯ; ರಾಮಾಯಣದಲ್ಲಿ ರಣಬೀರ್ ಕಪೂರ್‌ಗಿಂತ ಯಶ್‌ ಅಬ್ಬರವೇ ಜೋರು!