ಕಿರಿಕ್ ಕೀರ್ತಿಗೆ ಅಪಘಾತ; ವ್ಹೀಲ್ ಚೇರ್ ಮೇಲೆ ಕುಳಿತ ಬಿಗ್‌ಬಾಸ್ ಮಾಜಿ ಸ್ಪರ್ಧಿ!

Published : Oct 15, 2026, 08:04 PM IST
Kirik Keerthi

ಸಾರಾಂಶ

ಬಿಗ್‌ಬಾಸ್ ಕನ್ನಡದ ಮಾಜಿ ಸ್ಪರ್ಧಿ ಕೀರ್ತಿ ಶಂಕರಘಟ್ಟ ಅವರು ಭೀಕರ ಅಪಘಾತಕ್ಕೊಳಗಾಗಿ 4-5 ತಿಂಗಳುಗಳ ಕಾಲ ಹಾಸಿಗೆ ಹಿಡಿದಿದ್ದ ವಿಚಾರವನ್ನು ಹಂಚಿಕೊಂಡಿದ್ದಾರೆ. ಅಪಘಾತದಿಂದ ತೂಕ ಕಳೆದುಕೊಂಡು ವಿಶ್ವಾಸ ಕಳೆದುಕೊಂಡಿದ್ದ ಅವರು, ಇದೀಗ ಚೇತರಿಸಿಕೊಂಡು ಮತ್ತೆ ಸೋಶಿಯಲ್ ಮೀಡಿಯಾಗೆ ಮರಳಿದ್ದಾರೆ.

ಬೆಂಗಳೂರು: ಬಿಗ್‌ಬಾಸ್ ಕನ್ನಡದ ಮಾಜಿ ಸ್ಪರ್ಧಿ ಕೀರ್ತಿ ಶಂಕರಘಟ್ಟ ತಮಗಾದ ಅಪಘಾತದ ಮಾಹಿತಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಗಾಯಗೊಂಡಿದ್ದು ಮತ್ತು ಚೇತರಿಸಿಕೊಳ್ಳುತ್ತಿರುವ ಫೋಟೋಗಳನ್ನು ಹಂಚಿಕೊಂಡಿರುವ ಕೀರ್ತಿ ಅವರು, ಈ ಅಪಘಾತದಿಂದ ನಾಲ್ಕೈದು ತಿಂಗಳು ವಿಶ್ರಾಂತಿ ಪಡೆದುಕೊಳ್ಳುವಂತಾಯ್ತ ಎಂದು ತಿಳಿಸಿದ್ದಾರೆ. ಆದ್ರೆ ಈ ಅಪಘಾತ ಆಗಿದ್ದು ಯಾವಾಗ ಎಂಬುದರ ಮಾಹಿತಿಯನ್ನು ತಿಳಿಸಿಲ್ಲ.

ಕೀರ್ತಿ ಸೋಶಿಯಲ್ ಮೀಡಿಯಾ ಪೋಸ್ಟ್

ಒಂದು ಅಪಘಾತ ನನ್ನನ್ನು ಮುಗಿಸೇ ಬಿಟ್ಟಿತ್ತು. ಅದು ಅಪಘಾತಕ್ಕಿಂತ ದೊಡ್ಡ ಆಘಾತ! ಹೊಸ ವರ್ಷದಿಂದ ಹೊಸ ಬದುಕು ಅಂದುಕೊಂಡವನ ಜೀವನದಲ್ಲಿ ಮತ್ತೊಂದು ಆಘಾತ. 4-5 ತಿಂಗಳು ಮನೆಯಲ್ಲಿ ಮಲಗಿಬಿಟ್ಟೆ. ವಿಶ್ವಾಸ ಕಳೆದುಕೊಂಡಿದ್ದೆ. ಆದ್ರೆ ಪ್ರಯತ್ನ‌ ಬಿಡಲಿಲ್ಲ. ಭಗವಂತ ನಾನಿದೀನಿ ಅಂತ ಮತ್ತೆ ಎದ್ದು ನಿಲ್ಲಿಸಲು ನಿರ್ಧಾರ ಮಾಡಿದ್ದ. ದೇಹದ ತೂಕ 55ಕ್ಕೆ ಇಳಿದಿತ್ತು. ಈಗ ಮತ್ತೆ 60 ದಾಟಿ ಮುನ್ನುಗ್ತಿದೆ. ದೇವರು ಮತ್ತು ದೇವರಂತಾ ಕೆಲವರು ಮತ್ತೆ ಕೈಹಿಡಿದು ಮೇಲೆತ್ತಿದ್ದಾರೆ. ಇನ್ನು ಆ ದಾರಿಯಲ್ಲಿ ನಿರಂತರ ಪಯಣ ನನ್ನದಾಗಬೇಕಷ್ಟೆ. ಒಂದೆರೆಡು ವಾರದಿಂದ ವೈಯಕ್ತಿಕ ಕಾರಣದಿಂದ ಸ್ವಲ್ಪ ಸೋಷಿಯಲ್ ಮೀಡಿಯಾದಿಂದ ದೂರ ಇದ್ದೆ. ಇನ್ನು ಸಿಕ್ಕಾಪಟ್ಟೆ ಕಂಟೆಂಟ್ ಬರ್ತಿರುತ್ತೆ. ನೋಡಿ ಹಾರೈಸಿ. ಈಗ ತಾನೇ ಶುರುವಾಗಿದೆ. ಸಾಗೋದು ತುಂಬಾ ಇದೆ. ನಿಮ್ಮಾಶೀರ್ವಾದ ಇರಲಿ. ಧನ್ಯೋಸ್ಮಿ.

ಆರೋಗ್ಯದಲ್ಲಿ ಚೇತರಿಕೆ

ಈ ಪೋಸ್ಟ್‌ಗೆ ಕಮೆಂಟ್ ಮಾಡಿರುವ ಸೋಶಿಯಲ್ ಮೀಡಿಯಾ ಬಳಕೆದಾರರು, ಜೀವನದಲ್ಲಿ ಯಾವಾಗಲೂ ಬೀಳುವುದೇ ನಿನ್ನ ಹಣೆಬರಹವಲ್ಲ. ಇಂದು ನಿನ್ನನ್ನು ಕೆಳಗೆ ಬೀಳಿಸಿದ ಜೀವನವೇ, ನಾಳೆ ನಿನ್ನನ್ನು ಎದ್ದು ನಿಲ್ಲಿಸುವ ಶಕ್ತಿಯನ್ನೂ ಕೊಡುತ್ತದೆ. ನಂಬಿಕೆ ಕಳೆದುಕೊಳ್ಳಬೇಡ, ನಿನ್ನ ಒಳ್ಳೆಯ ದಿನಗಳೂ ಬರುತ್ತವೆ ಎಂದು ಶುಭ ಹಾರೈಸಿದ್ದಾರೆ. ಬೇಗ ಹುಷಾರಾಗಿ. ನಿಮ್ಮ ಪ್ರಯತ್ನವೇ ನಿಮ್ಮ ಶಕ್ತಿ ಎಂದು ಧೈರ್ಯ ತುಂಬುವ ಕೆಲಸವನ್ನು ಮಾಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಶ್ಮಿಕಾ ಮಂದಣ್ಣ ಆಪ್ತ ಸ್ನೇಹಿತೆ ಪ್ರೇರಣಾ ಅದ್ದೂರಿ ಸೀಮಂತ; ‘ರಂಗನಾಯಕಿ’ಯ ವಿಡಿಯೋ ವೈರಲ್!
ಮನೆಗೆ ಮಹಾಲಕ್ಷ್ಮಿಯ ಆಗಮನ! ಹೆಣ್ಣು ಮಗುವಿಗೆ ತಾಯಿಯಾದ ‘ದೃಷ್ಟಿಬೊಟ್ಟು’ ಖ್ಯಾತಿಯ ಗೌತಮಿ ಉದಯ್