ಲಾಕ್‌ಡೌನ್‌ನಲ್ಲಿ ಕೋತಿಗಳ ಕಾಳಜಿ ವಹಿಸಿದ ನಿರೂಪಕಿ ಚೈತ್ರಾ ವಾಸುದೇವನ್!

By Suvarna NewsFirst Published May 30, 2021, 3:56 PM IST
Highlights

ಆಹಾರವಿಲ್ಲದೇ ಪರದಾಡುತ್ತಿರುವ ಕೋತಿಗಳಿಗೆ ಬಾಳೆಹಣ್ಣು, ತರಕಾರಿ ಮತ್ತು ನೀರು ಒದಗಿಸಿದ ಬಿಗ್ ಬಾಸ್ ಚೈತ್ರಾ ವಾಸುದೇವನ್.
 

ಕನ್ನಡ ಜನಪ್ರಿಯ ನಿರೂಪಕಿ ಚೈತ್ರಾ ವಾಸುದೇವನ್ ಲಾಕ್‌ಡೌನ್‌ ಸಮಯದಲ್ಲಿ ಜನ ಸಾಮಾನ್ಯರ ಪರ ಕೆಲಸ ಮಾಡುತ್ತಿದ್ದಾರೆ. ಈ ವೇಳೆ ಪ್ರಾಣಿಗಳ ಬಗ್ಗೆಯೂ ಕಾಳಜಿ ವಹಿಸಿದ್ದಾರೆ. ಅದಕ್ಕೆ ಸಾಕ್ಷಿ ಸ್ವತಃ ಚೈತ್ರಾ ಶೇರ್ ಮಾಡಿಕೊಂಡಿರುವ ವಿಡಿಯೋ.

ಕಾರಿನ ಹಿಂಬದಿಯಲ್ಲಿ ಬಾಳೆ ಹಣ್ಣು, ನೀರು, ಟೋಮ್ಯಾಟೋ  ಮತ್ತು ಬಿಸ್ಕೆಟ್ ಇರಿಸಿಕೊಂಡಿದ್ದು, ಕಾರಿನ ಬಳಿ ಬರುತ್ತಿರುವ ಕೋತಿಗಳಿಗೆ ಬಾಳೆ ಹಣ್ಣು ನೀಡಿದ್ದಾರೆ. 'ಈ ಸಮಯದಲ್ಲಿ ನಮ್ಮ ಕೈಲಾದ ಸೇವೆಯನ್ನು ನಾವು ಮಾಡೋಣ,' ಎಂದು ಬರೆದುಕೊಂಡಿದ್ದಾರೆ. ಕೋತಿ ಬಾಳೆ ಹಣ್ಣು ತಿಂದ ನಂತರ ಅಲ್ಲೇ ಬಿಟ್ಟ ಸಿಪ್ಪೆಗಳನ್ನು ಅಲ್ಲಿಯೇ ಕಸವಾಗದಂತೆ ತಡೆಯಲು ಚೈತ್ರಾ ಒಂದು ಕವರಿನಲ್ಲಿ ತುಂಬಿಸಿಕೊಳ್ಳುತ್ತಾರೆ. 

ಇನ್ನೂ ಒಂದು ವರ್ಷ ಸಂಭಾವನೆ ಕಡಿತ ಒಪ್ಪಬೇಕು, ಅಡ್ವಾನ್ಸ್ ಹಿಂತಿರುಗಿಸಿರುವೆ: ಬಿಗ್ ಬಾಸ್ ಚೈತ್ರಾ ವಾಸುದೇವನ್‌ 

ಚೈತ್ರಾ ನಿರೂಪಣೆ ಜೊತೆಗೆ ತಮ್ಮದೇಯಾದ ಈವೆಂಟ್ ಕಂಪನಿ ಹೊಂದಿದ್ದಾರೆ. ತಮ್ಮ ಕಂಪನಿಯಲ್ಲಿ ಕೆಲಸ ಮಾಡುವ ಕಾರ್ಮಿಕರ ಕುಟುಂಬಕ್ಕೆ ತಿಂಗಳ ದಿನಸಿ ಕಿಟ್ ವಿತರಣೆ ಮಾಡಿದ್ದಾರೆ. ಸದ್ಯ ಫ್ಯಾಮಿಲಿ ಜೊತೆ ಸಮಯ ಕಳೆಯುತ್ತಿರುವ ಚೈತ್ರಾ, ಆಗಾಗ ಇನ್‌ಸ್ಟಾಗ್ರಾಂ ರಿಲೀಸ್ ಮಾಡುವ ಮೂಲಕ ಫಾಲೋವರ್ಸ್‌ಗಳನ್ನು ಮನೋರಂಜಿಸುತ್ತಾರೆ.

 

click me!