
‘ಲಕ್ಷ್ಮೀ ನಿವಾಸಂ’ ಎನ್ನುವ ಧಾರಾವಾಹಿಯು ತೆಲುಗಿನಲ್ಲಿ ಕೂಡ ಪ್ರಸಾರ ಆಗ್ತಿದೆ. ಈ ಹಿಂದೆ ‘ಲಕ್ಷ್ಮೀ ನಿವಾಸ’ ಧಾರಾವಾಹಿಯಲ್ಲಿ ಶ್ರೀಕಾಂತ್ ಮಗಳು ಪಾತ್ರದಲ್ಲಿ ನಟಿಸುತ್ತಿದ್ದ ಪ್ರಿಯಾ ವಿ ಈಗ ತೆಲುಗಿನಲ್ಲಿ ನಟಿಸುತ್ತಿದ್ದರು. ಆದರೆ ಅವರಿಗೆ ಮೊದಲೇ ತಿಳಿಸದೆ ಸೀರಿಯಲ್‌ನಿಂದ ಹೊರಹಾಕಲಾಗಿದೆಯಂತೆ.
ಜೀ ತೆಲುಗು ವಾಹಿನಿಯಲ್ಲಿ ಪ್ರಸಾರ ಆಗುತ್ತಿದ್ದ ‘ಲಕ್ಷ್ಮೀ ನಿವಾಸಂʼ ಧಾರಾವಾಹಿ ಪ್ರಸಾರ ಆಗುತ್ತಿತ್ತು. ಈ ಧಾರಾವಾಹಿಯಲ್ಲಿ ಪ್ರಿಯಾ ಕೆಸರೆ ಅವರು ನಟಿಸುತ್ತಿದ್ದರು. ಇವರಿಗೆ ಶೂಟಿಂಗ್‌ಗೆ ಬನ್ನಿ ಅಂತ ಹೇಳಿ, ಸೆಟ್‌ಗೆ ಕರೆಸಿಕೊಂಡು, ಅಲ್ಲಿ ಬೇರೆ ಮಗುವಿನ ಬಳಿ ಶೂಟಿಂಗ್ ಮಾಡಿಸಲಾಗಿದೆ. ಇದನ್ನು ಪ್ರಿಯಾ ತಾಯಿ ವಿರೋಧಿಸಿ ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದಾರೆ. ಪ್ರಶಾಂತ್ ಮಿಲಿಶೆಟ್ಟಿ ಎನ್ನುವವರು ಈ ಧಾರಾವಾಹಿಯ ನಿರ್ಮಾಪಕರು ಎನ್ನಲಾಗಿದೆ.
“ನೀವು ಲಕ್ಷ್ಮೀ ನಿವಾಸಂ ಧಾರಾವಾಹಿಯಿಂದ ನನ್ನ ಮಗಳನ್ನು ರಿಪ್ಲೇಸ್ ಮಾಡಿರಬಹುದು, ಆದರೆ ನನ್ನ ಮಗಳ ಪ್ರತಿಭೆಯನ್ನಲ್ಲ. ನಮ್ಮ ಹೊಟ್ಟೆಗೆ ಹೊಡೆದು, ನೀವು ಏನು ಪಡೆದುಕೊಳ್ತೀರಿ? ಲಕ್ಷ್ಮೀ ನಿವಾಸಂ ಧಾರಾವಾಹಿಗೋಸ್ಕರ ನಾವು ಬೇರೆ ಪ್ರಾಜೆಕ್ಟ್‌ಗಳನ್ನು ಬಿಟ್ಟೆವು, ನಿಮ್ಮ ಟಿಆರ್‌ಪಿಗೋಸ್ಕರ ನನ್ನ ಮಗಳನ್ನು 150 ಎಪಿಸೋಡ್‌ವರೆಗೂ ಬಳಸಿಕೊಂಡಿರಿ. ನೀವು ನನ್ನ ಮಗಳು ಎಕ್ಸ್‌ಪೆನ್ಸಿವ್ ಕಿಡ್ ಎಂದು ರಿಪ್ಲೇಸ್ ಮಾಡಿದ್ರಿ, ಹೌದು, ನನ್ನ ಮಗಳು ಎಕ್ಸ್‌ಪೆನ್ಸಿವ್” ಎಂದು ಪ್ರಿಯಾ ತಾಯಿ ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದಾರೆ.
ಅಂದಹಾಗೆ ಶೂಟಿಂಗ್ ಮಾಡುವಾಗ ಬೇಬಿ ಪ್ರಿಯಾಗೆ ಕರೆಂಟ್ ಶಾಕ್ ಕೂಡ ಹೊಡೆದಿದೆ. ಸ್ವಿಮ್ಮಿಂಗ್ ಪೂಲ್‌ಗೂ ಕೂಡ ಬೀಳಿಸಿದ್ದಾರೆ. ಅಷ್ಟೇ ಅಲ್ಲದೆ ಲೇಟ್ ನೈಟ್ ಶೂಟ್ ಮಾಡಲಾಗಿದೆ. ಈ ವಿಡಿಯೋಗಳನ್ನು ಪ್ರಿಯಾ ಅಕೌಂಟ್‌ನಲ್ಲಿ ಶೇರ್ ಮಾಡಿಕೊಳ್ಳಲಾಗಿದೆ.
“ಇದು ಅವಳ ಹೋರಾಟಕ್ಕೆ ಸಿಕ್ಕ ಉಡುಗೊರೆಯಾ? ಅವಳು ಎಂದಿಗೂ ನಾನು ಸುಸ್ತಾಗಿದ್ದೇನೆ ಎಂದು ಹೇಳಲಿಲ್ಲ, ಅವಳು ತುಂಬಾ ಕಷ್ಟಪಟ್ಟಿದ್ದಾಳೆ. ನಮಗೆ ಮೋಸ ಮಾಡಿ ಅವಳನ್ನು ಬಳಸಿಕೊಂಡ ನಿರ್ಮಾಪಕರ ಖಾತೆ ಮತ್ತು ನಿರ್ಮಾಣ ಸಂಸ್ಥೆಯ ಸ್ಕ್ರೀನ್‌ಶಾಟ್ ಅನ್ನು ನಾನು ಅಪ್‌ಲೋಡ್ ಮಾಡಿದ್ದೇನೆ. ಕೆಲಸ ಮಾಡಿರುವ ಉಳಿದ ಹಣವನ್ನು ಕೊಟ್ಟಿಲ್ಲ. ಕಳೆದ ಏಪ್ರಿಲ್ ತಿಂಗಳಿನಿಂದ ನಮಗೆ ಹಣವನ್ನು ಕೊಟ್ಟಿಲ್ಲ. ಕಷ್ಟ ಇರುತ್ತದೆ ಅಂತ ನಾವು ಅರ್ಥಮಾಡಿಕೊಂಡು ಸುಮ್ಮನಿದ್ದೆವು” ಎಂದು ಪ್ರಿಯಾ ತಾಯಿ ಹೇಳಿದ್ದಾರೆ.
“ನಮ್ಮ ಜೀವನ ಆರಾಮಾಗಿಲ್ಲ ಅಂತ ವೀಕ್ಷಕರು ಕೂಡ ಅರ್ಥ ಮಾಡಿಕೊಳ್ಳಬೇಕು. ಒಂದೋ ನಾವು ಕೆಜಿಎಫ್ ಲೆವೆಲ್‌ಗೆ ಹೋಗಬೇಕು ಆಗ ದುಡ್ಡನ್ನಾದರೂ ಮಾಡ್ತೀವಿ. ಅಥವಾ ಚಿತ್ರರಂಗಕ್ಕೆ ಬರಲೇಬಾರದು. ಅದರ ಮಧ್ಯೆ ಇರುವ ಕಲಾವಿದರು ಬಿಡೋಕೂ ಆಗದೆ, ಹಿಂದಕ್ಕೆ ಹೋಗೋಕೆ ಆಗದೆ ಯಾವಾಗಲೋ ಒಂದು ದಿನ ನಮಗೂ ಟೈಮ್ ಬರತ್ತೆ ಅಂತ ಇರುವವರು ನಿಜಕ್ಕೂ ಗ್ರೇಟ್. ನಾವು ದಿನದಲ್ಲಿ 17ಕ್ಕೂ ಹೆಚ್ಚು ಗಂಟೆ ದುಡಿಯುತ್ತೇವೆ. ನಮಗೆ ಇದು ಹೂವಿನ ಹಾಸಿಗೆ ಆಗಿರೋದಿಲ್ಲ. ನಮ್ಮನ್ನು ಎಷ್ಟೇ ಕೆಟ್ಟದಾಗಿ ನಡೆಸಿಕೊಂಡರೂ ಕೂಡ ನಾವು ಪಬ್ಲಿಕ್ ಫಿಗರ್ ಆಗಿರಬೇಕು” ಎಂದು ನಟಿ ಚಿತ್ರಲ್ ರಂಗಸ್ವಾಮಿ ಅವರು ಶೇರ್ ಮಾಡಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.