ನಿರ್ಮಾಪಕಿ, ನಿರ್ದೇಶಕಿ, ನಟಿ ಶ್ರುತಿ ನಾಯ್ಡು ಅವರಿಂದ ಕೊರೋನಾ ವಾರಿಯರ್ಸ್ ಗೆ ಧನ್ಯವಾದ/ ವಿಶಿಷ್ಟ ರೀತಿಯಲ್ಲಿ ಧನ್ಯವಾದ ಸಲ್ಲಿಸದ ನಿರ್ದೇಶಕಿ/ ಬೆಳ್ಳಿ ನಾಣ್ಯ ಇಟ್ಟು ಸ್ಮರಣೆ
ಮೈಸೂರು(ಮೇ 10) ನಿರ್ಮಾಪಕಿ, ನಿರ್ದೇಶಕಿ, ನಟಿ ಶ್ರುತಿ ನಾಯ್ಡು ಪೊಲೀಸರಿಗೆ ವಿಶೇಷ ರೀತಿ ಧನ್ಯವಾದ ಹೇಳಿದ್ದಾರೆ. ತಿಂಗಳುಗಳಿಂದ ಜೀವದ ಹಂಗು ತೊರೆದು, ಕೊರೋನಾ ತಡೆಗಟ್ಟುವಲ್ಲಿ ಶ್ರಮಿಸುತ್ತಿರುವ ಪೊಲೀಸ್ ಸಿಬ್ಬಂದಿಗೆ ವಿಶೇಷವಾಗಿ ಕೃತಜ್ಞತೆ ಹೇಳಿದ್ದಾರೆ.
ವಿಭಿನ್ನ ವಿನ್ಯಾಸದಲ್ಲಿ ಸಿದ್ಧಪಡಿಸಿರುವ ಬಾಕ್ಸ್ ವೊಂದರಲ್ಲಿ 20 ಗ್ರಾಮ್ ಬೆಳ್ಳಿ ನಾಣ್ಯವನ್ನಿಟ್ಟು ಅದಕ್ಕೆ ಕೃತಜ್ಞತೆಯ ಅಕ್ಷರ ತೊಡಿಸಿದ್ದಾರೆ. ಈಗಾಗಲೇ ಕೊರೋನಾ ವಾರಿಯರ್ಸ್ ಮತ್ತು ಕೊರೋನಾ ಕಾರಣದಿಂದಾಗಿ ಹಸಿವಿನಿಂದ ಬಳಲುತ್ತಿದ್ದ ಅನೇಕ ಕುಟುಂಬಗಳಿಗೆ ಶ್ರುತಿ ನೆರವಾಗಿದ್ದಾರೆ.
ಉತ್ತರ ಕನ್ನಡದ ಕೊರೋನಾ ಸೋಂಕಿಗೆ ಈ ಆಸ್ಪತ್ರೆ ಕಾರಣ
ಮೈಸೂರಿನ ಸಮೀಪದ ಕಾಡಂಚಿನ ಜನರಿಗೂ ಆಹಾರ ಕಿಟ್ ತಲುಪಿಸಿ, ಪ್ರಶಂಸೆಗೆ ಪಾತ್ರರಾಗಿದ್ದರು. ಅಲ್ಲದೇ ತಮ್ಮದೇ ಒಡೆತನದ ಮೈಸೂರು ಮಿರ್ಚಿ ರೆಸ್ಟೋರೆಂಟ್ ಮೂಲಕವೂ ಜನರಿಗೆ ನೆರವಾಗಿದ್ದರು. ಈಗ ಮೈಸೂರಿನ ಕುವೆಂಪು ನಗರ ಪೊಲೀಸ್ ಠಾಣೆಯ ಸಿಬ್ಬಂದಿಗೆ ಕೃತಜ್ಞತೆಯ ಬಾಕ್ಸ್ ನೀಡಿ ಮೆಚ್ಚುಗೆಗೆ ಕಾರಣವಾಗಿದ್ದಾರೆ. ಮೈಸೂರಿನ ಕುವೆಂಪು ನಗರದ ನಿವಾಸಿ ಆಗಿರುವ ಶ್ರುತಿ ನಾಯ್ಡು ರವಿವಾರ ಪೊಲೀಸ್ ಠಾಣೆಗೆ ತೆರಳಿ 90 ಜನ ಸಿಬ್ಬಂಸಿಗೆ ಬೆಳ್ಳಿ ನಾಣ್ಯ ಇರುವ ಕೃತಜ್ಞತಾ ಬಾಕ್ಸ್ ವಿತರಿಸಿದರು. ಎಸಿಪಿ ಪೂರ್ಣಚಂದ್ರ ತೇಜಸ್ವಿ, ಇನ್ಸ್‌ಪೆಕ್ಟರ್ ರಾಜು ಜಿ.ಸಿ ತಮ್ಮ ಸಿಬ್ಬಂದಿ ಉಪಸ್ಥಿತರಿದ್ದರು.
ಶರೆಡ್ ಝೋನ್ ನಲ್ಲಿದ್ದ ಮೈಸೂರನ್ನು ಗ್ರೀನ್ ಝೋನ್ ನತ್ತ ತರುವಲ್ಲಿ ಶ್ರಮಿಸುತ್ತಿರುವ ಜಿಲ್ಲಾಧಿಕಾರಿ ಅಭಿರಾಮ್ ಶಂಕರ್ ಮತ್ತು ಮೈಸೂರು ನಗರ ಪೊಲೀಸ್ ಕಮಿಷನರ್ ಡಾ. ಚಂದ್ರಗುಪ್ತ ಅವರನ್ನು ಈ ಸಂದರ್ಭದಲ್ಲಿ ಶ್ರುತಿ ನಾಯ್ಡು ಸ್ಮರಿಸಿದರು.
ಈ ಕುರಿತು ಮಾತನಾಡಿದ ಶ್ರುತಿ ನಾಯ್ಡು "ನಾವು ಮನೆಯಲ್ಲಿ ಆರಾಮಾಗಿ ಇರುವಂತೆ ಮಾಡಿದವರು ಪೊಲೀಸ್ ಸಿಬ್ಬಂದಿ. ರಜೆ ತಗೆದುಕೊಳ್ಳದೇ ಕೆಲಸ ಮಾಡಿದ್ದಾರೆ. ಅಪಯಕಾರಿ ಸ್ಥಳಗಳಲ್ಲೂ ಅವರು ಡ್ಯೂಟಿ ಮಾಡಿದ್ದಾರೆ. ಹಾಗಾಗಿ ಅವರಿಗೆ ಕೃತಜ್ಞತೆ ಹೇಳೋಣ ಅನಿಸಿತು. ಕೊರೋನಾ ತಡೆಗಟ್ಟುವಲ್ಲಿ ಶ್ರಮಿಸಿದ ಎಲ್ಲರಿಗೂ ಈ ಮೂಲಕ ಕೃತಜ್ಞತೆ ಹೇಳಿದ್ದೇನೆ" ಎನ್ನುತ್ತಾರೆ.
"ಲಾಕ್ ಡೌನ್ ಕಾರಣದಿಂದಾಗಿ ನಾನೂ ಮೈಸೂರಿನಲ್ಲಿ ಇರಬೇಕಾಯಿತು. ಪ್ರತಿ ದಿನವೂ ನಾನು ಪೊಲೀಸ್ ಅಧಿಕಾರಿಗಳು ಮತ್ತು ಅವರ ಸಿಬ್ಬಂದಿಯ ಕೆಲಸ ಕಾರ್ಯ ನೋಡುತ್ತಿದ್ದೇವೆ. ಹಗಲಿರುಳು ಕೆಲಸ ಮಾಡಿದ್ದಾರೆ. ಎಷ್ಟೇ ಒತ್ತಡವಿದ್ದರೂ ಶಾಂತಿ ರೀತಿಯಲ್ಲಿ ವರ್ತಿಸಿದ್ದಾರೆ. ಜನರ ಸಹಾಯಕ್ಕೆ ನಿಂತಿದ್ದಾರೆ. ಅವರ ಈ ಕಾರ್ಯವನ್ನು ಯಾವತ್ತಿಗೂ ಮರೆಯುವುದಕ್ಕೆ ಸಾಧ್ಯವಿಲ್ಲ" ಎನ್ನುತ್ತಾರೆ ಶ್ರುತಿ