ನಟಿ ಜ್ಯೋತಿ ರೈ ಕನ್ನಡದ 'ಬಂದೇ ಬರುತಾವ ಕಾಲ' ಸೀರಿಯಲ್ ಮೂಲಕ ನಟನಾವೃತ್ತಿ ಪ್ರಾರಂಭಿಸಿ, ಬಳಿಕ ಜೋಗುಳ ಸೇರಿದಂತೆ ಕನ್ನಡ, ತಮಿಳು, ತೆಲುಗು ಹಾಗೂ ತುಳು ಭಾಷೆಗಳಲ್ಲಿ 20ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಇದೀಗ ತೆಲುಗಿನ 'ಗುಪ್ಪೆದಂಥ ಮನಸು (Guppedantha Manasu)' ಸೀರಿಯಲ್‌ನಲ್ಲಿ ನಟಿಸುತ್ತಿರುವ ನಟಿ ಜ್ಯೋತಿ ರೈ, ವೆಬ್ ಸೀರೀಸ್‌ನಲ್ಲೂ ನಟಿಸುತ್ತಿದ್ದಾರೆ.
ಕನ್ನಡ ಕಿರುತೆರೆಯಲ್ಲಿ ನಟನಾ ವೃತ್ತಿಗೆ ಎಂಟ್ರು ಕೊಟ್ಟು 'ಜೋಗುಳ' ಧಾರಾವಾಹಿ ಮೂಲಕ ಮನೆಮನೆ ಮಾತಾಗಿದ್ದ ನಟಿ ಜ್ಯೋತಿ ರೈ, ಇದೀಗ ತೆಲುಗು ಸೀರಿಯಲ್‌ನಲ್ಲಿ ನಟಿಸುತ್ತಿದ್ದಾರೆ. ಅಲ್ಲಿಯೇ ವೃತ್ತಿ ಬದುಕನ್ನು ಮುಂದುವರಿಸುತ್ತಿರುವ ಜ್ಯೋತಿ ರೈ, ಇದೀಗ ಕನ್ನಡಿಗರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರಾ? ಹೌದು ಎನ್ನಬೇಕಾಗಿದೆ ಈಗ.. ಕಾರಣ, ಇಂದು (21 ಅಕ್ಟೋಬರ್ 2023) ಲೈವ್ ಬಂದಿರುವ ಜ್ಯೋತಿ ರೈ, "ಕನ್ನಡಿಗರು ಇತ್ತೀಚೆಗೆ ಮಾಡಿರುವ ಕಾಮೆಂಟ್‌ಗಳಿಂದ ತಮಗೆ ಬೇಸರವಾಗಿದೆ" ಎಮದು ಹೇಳಿದ್ದಾರೆ.
ಇಂದು ಲೈವ್‌ನಲ್ಲಿ ಮಾತನಾಡಿರುವ ಜ್ಯೋತಿ ರೈ, "ನಾನು ನನ್ನ ನಟನಾವೃತ್ತಿ ಶುರು ಮಾಡಿರುವುದು ಕನ್ನಡದಲ್ಲಿ, ನಾನು ಯಾವತ್ತೂ ಕನ್ನಡದ ಹುಡುಗಿಯೇ ಆಗಿರುವೆ. ಆದರೆ, ನಾನು ನನ್ನ ವೃತ್ತಿ ಬದುಕನ್ನು ಮುಂದುವರಿಸಲು ನನಗೆ ಬಾಷೆಯ ಗಡಿ ಹಾಕಿಕೊಳ್ಳಲು ಸಾಧ್ಯವಿಲ್ಲ. ನಾನು ತೆಲುಗಿನ ಸೀರಿಯಲ್ ಇಂಡಸ್ಟ್ರಿಗೆ ಬಂದು ಇಲ್ಲಿ ನಟನೆ ಮಾಡುತ್ತಿದ್ದೇನೆ. ಇಲ್ಲಿ, ಆಲ್‌ಮೋಸ್ಟ್ 900 ಎಪಿಸೋಡ್ ಆಯ್ತು, ಇನ್ನೂ ಮುಂದುವರಿತಾ ಇದೆ. ಹೌದು, ನಾನು ಕನ್ನಡದ ಕೆಲವು ಸೀರಿಯಲ್ ಬಿಟ್ಟಿದ್ದೇನೆ, ಆದರೆ ಕಾರಣ ಅದು ಕನ್ನಡದ್ದು ಅಂತ ಅಲ್ಲ, ನನಗೆ ಅಲ್ಲಿ-ಇಲ್ಲಿ ಟ್ರಾವೆಲ್ಲಿಂಗ್ ಮಾಡಲು ಅಸಾಧ್ಯ ಎಂಬ ಕಾರಣಕ್ಕೆ ಅಷ್ಟೇ.
ಆದರೆ, ನಾನು ತೆಲುಗು ಸೀರಿಯಲ್ ಮಾಡುತ್ತಿದ್ದೇನೆ ಎನ್ನವ ಕಾರಣಕ್ಕೆ "ನಾನು ಕನ್ನಡ ಮರೆತಿದ್ದೇನೆ, ನನಗೆ ಕನ್ನಡಿಗರ ಬಗ್ಗೆ ಪ್ರೀತಿಯಿಲ್ಲ, ಎಂದೆಲ್ಲ ಕನ್ನಡಿಗರು ಭಾವಿಸುವುದು ತಪ್ಪು. ಕನ್ನಡಿಗರು ಈ ಬಗ್ಗೆ ನನ್ನನ್ನುತಪ್ಪಾಗಿ ಅರ್ಥೈಸಿಕೊಂಡು ನನಗೆ ಕನ್ನಡಿಗರು ಕೆಟ್ಟದಾಗಿ ಕಾಮೆಂಟ್ ಮಾಡುವುದು ನನಗೆ ಇಷ್ಟವಾಗುವುದಿಲ್ಲ. ಈ ಬಗ್ಗೆ ನನಗೆ 'ಹರ್ಟ್' ಆಗಿದೆ. ಕನ್ನಡಿಗರ ಕಾಮೆಂಟ್ ನೋಡಿ ನನಗೆ ಬೇಸರವಾಗಿದೆ. ಏಕೆಂದರೆ, ನಾನು ಇಲ್ಲಿ ವೃತ್ತಿ ಮಾಡಲು ಬಂದಿದ್ದೇನೆ, ಅದನ್ನೇ ಮಾಡುತ್ತಿದ್ದೇನೆ ಅಷ್ಟೇ" ಎಂದು ಹೇಳಿದ್ದಾರೆ.
BBK10: ಬಿಗ್ ಬಾಸ್ ಮನೆಯೊಳಗೆ ಮ್ಯೂಸಿಕ್ ಕ್ಲಾಸ್, ಟೀಚರ್ ಶಭಾಶ್‌ಗಿರಿ ಪಡೆದ ಸೂಪರ್ ಸ್ಟೂಡಂಟ್!
ಅಂದಹಾಗೆ, ನಟಿ ಜ್ಯೋತಿ ರೈ ಕನ್ನಡದ 'ಬಂದೇ ಬರುತಾವ ಕಾಲ' ಸೀರಿಯಲ್ ಮೂಲಕ ನಟನಾವೃತ್ತಿ ಪ್ರಾರಂಭಿಸಿ, ಬಳಿಕ ಜೋಗುಳ ಸೇರಿದಂತೆ ಕನ್ನಡ, ತಮಿಳು, ತೆಲುಗು ಹಾಗೂ ತುಳು ಭಾಷೆಗಳಲ್ಲಿ 20ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಇದೀಗ ತೆಲುಗಿನ 'ಗುಪ್ಪೆದಂಥ ಮನಸು (Guppedantha Manasu)' ಸೀರಿಯಲ್‌ನಲ್ಲಿ ನಟಿಸುತ್ತಿರುವ ನಟಿ ಜ್ಯೋತಿ ರೈ, ವೆಬ್ ಸೀರೀಸ್‌ನಲ್ಲೂ ನಟಿಸುತ್ತಿದ್ದಾರೆ. ಜತೆಗೆ, ಅಲ್ಲಿಯ ತರುಣ ನಿರ್ದೇಶಕ 'ಪೂರ್ವಜ್ ' ಅವರೊಂದಿಗೆ ಮರುಮದುವೆ (ಈ ಮೊದಲು ಜ್ಯೋತಿ ರೈ ತಮ್ಮ 20ನೇ ವಯಸ್ಸಿನಲ್ಲಿ ಪದ್ಮನಾಭ ಎಂಬವರೊಂದಿಗೆ ವಿವಾಹ ಆಗಿದ್ದರು ಎನ್ನಲಾಗಿದೆ) ಆಗುವ ಪ್ರಯತ್ನದಲ್ಲೂ ಇದ್ದಾರೆ ಎನ್ನಲಾಗುತ್ತಿದೆ.
"ತುಂಬಾ ದಿನಗಳಿಂದ ಲೈವ್‌ಗೆ ಬಂದು ಮಾತನಾಡಬೇಕೆಂದು ಅಂದುಕೊಂಡಿದ್ದೆ, ಶೂಟಿಂಗ್ ಕಾರಣಕ್ಕೆ ಆಗಿರಲಿಲ್ಲ. ಇಂದು ಸಾಧ್ಯವಾಯಿತು" ಎಂದು ಲೈವ್ ಗೆ ಬಂದ ಜ್ಯೋತಿ ರೈ, "ಕನ್ನಡಿಗರು ಕೆಟ್ಟದಾಗಿ ನನ್ನ ಬಗ್ಗೆ ಕಾಮೆಂಟ್ ಮಾಡುತ್ತಿದ್ದಾರೆ, ಇದರಿಂದ ನನಗೆ ಬೇಸರವಾಗಿದೆ, ಹರ್ಟ್ ಆಗಿದೆ" ಎಂದಿದ್ದಾರೆ. ಇದೀಗ ನಟಿ ಜ್ಯೋತಿ ರೈ ಮಾತು ಕೇಳಿ ಕನ್ನಡಿಗರಿಗೆ 'ಹರ್ಟ್ ಆಗಿರುತ್ತೆ, ಆಗದೇ ಇರುತ್ತಾ?" ಎಂದು ಹೇಳಬೇಕಾಗಿದೆಯೇನೋ ಎಂಬ ಪರಿಸ್ಥಿತಿ ಉಂಟಾಗುತ್ತಿದೆ ಎನ್ನಬಹುದೇ?
ಶಿಲ್ಪಾ ಶೆಟ್ಟಿ ಡಿವೋರ್ಸ್: ಸ್ಪಷ್ಟನೆ ಕೊಟ್ಟ 'ಗಿಮಿಕ್ ಮಹಾರಾಜ' ಕುಂದ್ರಾ ಪೋಸ್ಟ್ !
ಏಕೆಂದರೆ, ಕನ್ನಡಿಗರು ಏನೋ ತುಂಬಾ ಪ್ರೀತಿಯಿಂದ, ಕನ್ನಡದಲ್ಲಿಯೇ ಸೀರಿಯಲ್ ಮಾಡಿ ಎಂಬ ಉದ್ದೇಶದಿಂದ ಕಾಮೆಂಟ್ ಮಾಡಿದ್ದಾರೆ. ಅದಕ್ಕೆ, ಇಲ್ಲೇ ಬೆಳೆದು ಹೀಗಾ ಮಾತಾಡೋದು" ಎಂದು ನಟಿ ಜ್ಯೋತಿ ರೈ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಕಾಮೆಂಟ್ಸ್ ಹರಿದು ಬರುತ್ತಿದೆ. ಮುಂದೇನಾಗಲಿದೆ ಈ ಮ್ಯಾಟರ್ ಎಂಬುದನ್ನು ಕಾದು ನೋಡಬೇಕಷ್ಟೇ!