ನಟಿ ಶಿಲ್ಪಾ ಶೆಟ್ಟಿ ಗಂಡ ಎಂದು ಗುರುತಿಸಿಕೊಂಡಿರುವ ರಾಜ್‌ ಕುಂದ್ರಾ ಪಕ್ಕಾ ಬಿಸಿನೆಸ್‌ ಮ್ಯಾನ್. ಮುಂಬೈ ಹಾಗೂ ಹಲವು ಕಡೆ ತಮ್ಮ ಬಿಸಿನೆಸ್ ಹೊಂದಿರುವ ರಾಜ್‌ ಕುಂದ್ರಾ, ಅನಧಿಕೃತವಾಗಿ 'ಬ್ಲೂ ಫಿಲ್ಮ್' ತಯಾರಿಕಾ ಕಂಪನಿ ಹೊಂದಿದ್ದು, ಈ ಮೂಲಕ ಇಲ್ಲೀಗಲ್ ಬ್ಯುಸಿನೆಸ್ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಯ್ತು. 

ನಟಿ ಶಿಲ್ಪಾ ಶೆಟ್ಟಿ ಗಂಡ ಎಂದು ಗುರುತಿಸಿಕೊಂಡಿರುವ ರಾಜ್‌ ಕುಂದ್ರಾ ಪಕ್ಕಾ ಬಿಸಿನೆಸ್‌ ಮ್ಯಾನ್. ಮುಂಬೈ ಹಾಗೂ ಹಲವು ಕಡೆ ತಮ್ಮ ಬಿಸಿನೆಸ್ ಹೊಂದಿರುವ ರಾಜ್‌ ಕುಂದ್ರಾ, ಅನಧಿಕೃತವಾಗಿ 'ಬ್ಲೂ ಫಿಲ್ಮ್' ತಯಾರಿಕಾ ಕಂಪನಿ ಹೊಂದಿದ್ದು, ಈ ಮೂಲಕ ಇಲ್ಲೀಗಲ್ ಬ್ಯುಸಿನೆಸ್ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಯ್ತು. ಬಳಿಕ ಅದಕ್ಕೆ ಸಂಬಂಧಿಸಿದ ಕೇಸ್‌ ವಿಚಾರಣೆಗಾಗಿ ರಾಜ್‌ ಕುಂದ್ರಾ ಪೊಲೀಸ್, ಜೈಲು ಹಾಗೂ ಕೋರ್ಟ್‌ ಎಂದು ಅಲೆದಾಡಿ ಬಳಿಕ ಜಾಮೀನು ಪಡೆದುಕೊಂಡು ಹೊರಬಂದಿದ್ದು ಕೂಡ ಆಯ್ತು. ಇದೀಗ, ಮತ್ತೆ ಕೇಸ್ ವಿಚಾರಣೆ ನಡೆಯುತ್ತಿದ್ದು, ಇದೀಗ ಮತ್ತೆ ರಾಜ್‌ ಕುಂದ್ರಾ ಜೈಲು ಸೇರಿ ಜಾಮೀನು ಪಡೆದುಕೊಂಡಿದ್ದಾರೆ. 

Tamannaah Bhatia: ಮಾದಕ ಲುಕ್‌ನಲ್ಲಿ ಮೈ ನವಿರೇಳಿಸುವ ನಟಿ ತಮನ್ನಾ ಭಾಟಿಯಾ ಚೆಂದದ ಫೋಟೋಗಳು!

ಈ ಮಧ್ಯೆ ನಿನ್ನೆ ಅವರು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಾಕಿಕೊಂಡಿರುವ ಪೋಸ್ಟ್ ಹೊಸ ಬಾಂಬ್‌ ಸಿಡಿಸಿದಂತಿತ್ತು. ತಮ್ಮ ಹೆಂಡತಿ ಶಿಲ್ಪಾ ಶೆಟ್ಟಿಗೆ ತಾವು ಡಿವೋರ್ಸ್‌ ಕೊಟ್ಟೇ ಬಿಟ್ಟೆ ಎಂಬಂತೆ ಪೋಸ್ಟ್ ಹಾಕಿದ್ದ ರಾಜ್‌ ಕುಂದ್ರಾ, ಬಳಿಕ ಇಂದು ಅದಕ್ಕೆ ಉಲ್ಟಾ ಎಂಬಂತೆ ಮತ್ತೆ ಪೋಸ್ಟ್ ಮಾಡಿದ್ದಾರೆ. ತಾವು ತಮ್ಮ ಹೆಂಡತಿಯನ್ನು ಮೊದಲಿಗಿಂತ ಹೆಚ್ಚು ಪ್ರೀತಿಸಲು ಶುರು ಮಾಡಿದ್ದೇನೆ ಎಂಬಂತೆ ಬರೆದಿದ್ದಾರೆ. ತಮ್ಮ ಇನ್‌ಸ್ಟಾಗ್ರಾಂನಲ್ಲಿ "I know I am in love with you because my reality is finally better than my dreams 🙏❤️🧿🤗 @theshilpashetty #Love... " ಎಂದು ಬರೆದುಕೊಂಡಿದ್ದಾರೆ ರಾಜ್ ಕುಂದ್ರಾ. 

ಶಿಲ್ಪಾ ಶೆಟ್ಟಿ ಪತಿ ಸಪರೇಟ್‌ ಆಗಿದ್ದು ಯಾಕೆ? ವಿಡಿಯೋ ಮೂಲಕ ಮೌನ ಮುರಿದ ರಾಜ್‌ ಕುಂದ್ರಾ!

ಒಟ್ಟಿನಲ್ಲಿ, ನಿನ್ನೆ ಹಾಕಿದ್ದ ಪೋಸ್ಟ್ ಗಿಮಿಕ್ ಎಂಬುದನ್ನು ರಾಜ್ ಕುಂದ್ರಾ ಈ ಮೂಲಕ ಸ್ಪಷ್ಟಪಡಿಸಿದ್ದಾರೆ ಎನ್ನಬಹುದು. ತಮ್ಮ ಮನಸ್ಸಿನ ಜಂಜಾಟಗಳು ಹಾಗೂ ಆಟಗಳನ್ನೆಲ್ಲಾ ಸೋಷಿಯಲ್ ಮೀಡಿಯಾಗಳಲ್ಲೇ ಹಂಚಿಕೊಳ್ಳುವುದು ಇತ್ತೀಚಿನ ಡ್ರೆಂಡ್ ಎನ್ನಬಹುದು. ಇದನ್ನೇ ಅಸ್ತ್ರವನ್ನಾಗಿಸಿಕೊಂಡು ನಿನ್ನೆ ರಾಜ್ ಕುಂದ್ರಾ ಸುದ್ದಿ ಮೂಲಕ ಫುಲ್ ವೈರಲ್ ಆಗಿದ್ದರು. ಅಂತೂ ಕೊನೆಗೂ "ಕನಸಿಗಿಂತ ರಿಯಾಲಿಟಿ ಚೆನ್ನಾಗಿದೆ" ಎಂಬುದು ರಾಜ್‌ ಕುಂದ್ರಾಗೆ ಜ್ಞಾನೋದಯ ಆಗಿದೆ ಎನ್ನಬಹುದು.

View post on Instagram