
ಈಕೆ ಕನ್ನಡದಲ್ಲಿ ನಟಿಸಿದ್ದು ಒಂದೇ ಒಂದು ಸಿನಿಮಾ. ಔಟ್ & ಔಟ್ ಕಾಮಿಡಿ ಸಿನಿಮಾ ಇದಾಗಿದ್ದರೂ, ಬಾಕ್ಸಾಫೀಸ್‌ನಲ್ಲಿ ಹೆಚ್ಚೇನೂ ಸದ್ದು ಮಾಡಲಿಲ್ಲ. ಆದರೆ, ಈ ಸಿನಿಮಾದಲ್ಲಿ ತಮ್ಮ ಕಾಮಿಡಿ ಟೈಮಿಂಗ್ ಹಾಗೂ ನಟನೆಯ ಮೂಲಕ ಆಕೆ ಸೈ ಎನಿಸಿಕೊಂಡಿದ್ದರು. ತನ್ನ ಸೌಂದರ್ಯ ಹಾಗೂ ನಟನೆಯಿಂದ ಗಮನಸೆಳೆದ ಈ ಸುಂದರಿಗೆ ನಂತರ ಕನ್ನಡದಲ್ಲಿ ಹೆಚ್ಚಿನ ಆಫರ್‌ಗಳು ಸಿಗಲಿಲ್ಲ. ತೆಲುಗು ಭಾಷೆಯಲ್ಲೂ ಅದೃಷ್ಟ ಪರೀಕ್ಷೆಗೆ ಇಳಿದು ರವಿತೇಜಾ ಅಂತಾ ದೊಡ್ಡ ನಟನೊಂದಿಗೆ ನಟಿಸಿದರೂ ಯಶಸ್ಸು ದಕ್ಕಲಿಲ್ಲ. ಈ ಸಿನಿಮಾಗಳಿಂದ ದೂರವಿರುವ ಈ ಬೆಡಗಿ, ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ತಮ್ಮ ಹಾಟ್ ಫೋಟೋಗಳ ಮೂಲಕ ಹವಾ ಸೃಷ್ಟಿಸುತ್ತಿದ್ದಾರೆ.
ಸಾಮಾನ್ಯವಾಗಿ ಚಿತ್ರರಂಗದಲ್ಲಿ ನಟ-ನಟಿಯರಾಗಿ ನೆಲೆಯೂರುವುದು ಅಷ್ಟೊಂದು ಸುಲಭದ ಮಾತಲ್ಲ. ಅದರಲ್ಲೂ ನಟಿಯರು ಹಲವು ಸವಾಲುಗಳು, ಮುಜುಗರಗಳನ್ನು ಎದುರಿಸಿ ತಮ್ಮದೇ ಆದ ಗುರುತು ಗಿಟ್ಟಿಸಿಕೊಳ್ಳಬೇಕಾಗುತ್ತದೆ. ನಟನೆಯ ಮೇಲಿನ ಆಸಕ್ತಿಯಿಂದ ಬಣ್ಣದ ಲೋಕಕ್ಕೆ ಕಾಲಿಟ್ಟು ಮೊದಲ ಸಿನಿಮಾದಲ್ಲೇ ಬ್ಲಾಕ್‌ಬಸ್ಟರ್ ಹಿಟ್ ನೀಡಿದ ತಾರೆಯರು ಹಲವರಿದ್ದಾರೆ. ಆದರೆ, ಮೊದಲ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಸೋತರೂ, ತಮ್ಮ ಅಭಿನಯದಿಂದ ಭೇಷ್ ಎನಿಸಿಕೊಂಡ ನಟಿಯರು ಬೆರಳೆಣಿಕೆಯಷ್ಟು ಮಂದಿ ಮಾತ್ರ. ಆ ಸಾಲಿಗೆ ಸೇರಿದವರೇ ಈ ನಟಿ.
ಕನ್ನಡದಲ್ಲಿ ನಟಿಸಿದ ಏಕೈಕ ಸಿನಿಮಾ ಫ್ಲಾಪ್ ಆದರೂ, ಇದೀಗ ಚಿತ್ರರಂಗದಿಂದ ಬ್ರೇಕ್ ತೆಗೆದುಕೊಂಡಿರುವ ಈ ಸುಂದರಿ ಸೋಷಿಯಲ್ ಮೀಡಿಯಾದಲ್ಲಿ ಹಾಟ್‌ಲುಕ್ ಫೋಟೋಗಳ ಮೂಲಕ ಅಭಿಮಾನಿಗಳ ನಿದ್ದೆಗೆಡಿಸುತ್ತಿದ್ದಾರೆ. ಕೆಂಪು ಸೀರೆಯಲ್ಲಿ ಮಂತ್ರಮುಗ್ಧಗೊಳಿಸುತ್ತಿರುವ ಈ ನಟಿ ಯಾರೆಂದು ಗುರುತಿಸಿದ್ರಾ? ಇವರು ಸ್ಯಾಂಡಲ್‌ವುಡ್ ಪ್ರೇಕ್ಷಕರಿಗೆ ಹೊಸಬರೇನಲ್ಲ. ಅವರೇ ಅದಿತಿ ಗೌತಮ್ ಅಲಿಯಾಸ್ ಸಿಯಾ ಗೌತಮ್!
ಅದಿತಿ ಗೌತಮ್ ಎಂದರೆ ತಕ್ಷಣಕ್ಕೆ ಗುರುತು ಹಿಡಿಯುವುದು ಕಷ್ಟವಾಗಬಹುದು. ಆದರೆ, ನವರಸನಾಯಕ ಜಗ್ಗೇಶ್ ಅಭಿನಯದ 'ಡಬಲ್ ಡೆಕ್ಕರ್' ಎನ್ನುವ ಔಟ್ & ಔಟ್ ಕಾಮಿಡಿ ಸಿನಿಮಾದ ಹೀರೋಯಿನ್ ಎಂದರೆ ಗುರುತು ಸಿಗಬಹುದು. 2011ರಲ್ಲಿ ತೆರೆಕಂಡಿದ್ದ ಈ ಸಿನಿಮಾದಲ್ಲಿ ಜಗ್ಗೇಶ್‌ಗೆ ಇಬ್ಬರು ಪತ್ನಿಯರು. ಶ್ರದ್ಧಾ ಆರ್ಯ ಇನ್ನೊಂದು ಪಾತ್ರ ಮಾಡಿದ್ದರೆ, ಮತ್ತೊಂದು ಪಾತ್ರದಲ್ಲಿ ಅದರಿತಿ ಗೌತಮ್ ನಟಿಸಿದ್ದರು. ಈ ಸಿನಿಮಾದಲ್ಲಿ ಈಕೆಯ ನಟನೆ ಹಾಗೂ ಜಗ್ಗೇಶ್ ಅವರ ಎದುರಾಗಿ ಹೇಳಿದ ಕಾಮಿಡಿ ಡೈಲಾಗ್‌ಗಳು ಫೇಮಸ್ ಆಗಿದ್ದವು. ಸಿಯಾ ಗೌತಮ್ ಎನ್ನುವ ಟೈಟಲ್ ಕಾರ್ಡ್‌ನಲ್ಲಿ ಇವರು ಕಾಣಿಸಿಕೊಂಡಿದ್ದರು.
ಕನ್ನಡಕ್ಕೆ ಬರುವ ಮುನ್ನ 'ನೇನಿಂತೆ' ಚಿತ್ರದ ಮೂಲಕ ತೆಲುಗಿನಲ್ಲಿ ನಟಿ ಎಂದು ಗುರುತಿಸಿಕೊಂಡರೂ ಅದಿತಿಗೆ ಆ ಬಳಿಕ ತೆಲುಗಿನಲ್ಲಿ ಹೇಳಿಕೊಳ್ಳುವಂತಹ ಆಫರ್‌ಗಳು ಬರಲಿಲ್ಲ. ಕನ್ನಡದ ಬಳಿಕ, ಹಿಂದಿಯಲ್ಲಿ ರಣಬೀರ್ ಕಪೂರ್ ಅಭಿನಯದ 'ಸಂಜೂ' ಚಿತ್ರದಲ್ಲೂ ನಟಿಸಿದ ಈ ನಟಿ, ಕನ್ನಡ ಚಿತ್ರರಂಗದಿಂದ ಸಂಪೂರ್ಣವಾಗಿ ದೂರ ಉಳಿದರು. ಈಗ ಸಂಪೂರ್ಣವಾಗಿ ಅವರು ಮುಂಬೈಯಲ್ಲಿ ನೆಲೆಸಿದ್ದಾರೆ.
ಆದರೆ, ಈಗ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ಅದಿತಿ ಗೌತಮ್, ದಿನನಿತ್ಯ ತಮ್ಮ ಗ್ಲಾಮರಸ್ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೇ ಕೆಂಪು ಸೀರೆಯಲ್ಲಿ ಅತ್ಯಂತ ಸಿಂಪಲ್ ಹಾಗೂ ಗ್ಲಾಮರಸ್ ಲುಕ್‌ನಲ್ಲಿ ಕಾಣಿಸಿಕೊಂಡು, ತಮ್ಮ ಸೌಂದರ್ಯದಿಂದ ಸೋಷಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.