ಹನುಮಂತುಗೆ 3 ಸಲ ಬಿಗ್ ಬಾಸ್ ಆಫರ್‌ ಬಂದಿತ್ತು, 5 ಕೋಟಿ ವೋಟ್‌ ಹಾಕಿರೋದು ಕಡಿಮೆನೇ: ತ್ರಿವಿಕ್ರಮ್

Published : Jan 28, 2025, 08:19 AM IST
ಹನುಮಂತುಗೆ 3 ಸಲ ಬಿಗ್ ಬಾಸ್ ಆಫರ್‌ ಬಂದಿತ್ತು, 5 ಕೋಟಿ ವೋಟ್‌ ಹಾಕಿರೋದು ಕಡಿಮೆನೇ: ತ್ರಿವಿಕ್ರಮ್

ಸಾರಾಂಶ

ಬಿಗ್‌ಬಾಸ್‌ 11ರ ವಿಜೇತ ಹನುಮಂತು 5 ಕೋಟಿಗೂ ಅಧಿಕ ಮತಗಳಿಸಿದ್ದು, ತ್ರಿವಿಕ್ರಮ್‌ ಇದನ್ನು ಕಡಿಮೆ ಎಂದಿದ್ದಾರೆ. ಹನುಮಂತುವಿನ ಸರಳತೆ ಜನಪ್ರಿಯತೆಗೆ ಕಾರಣ ಎಂದವರು, ತಮ್ಮ ಬಿಗ್‌ಬಾಸ್‌ ಅನುಭವದಿಂದ ಖ್ಯಾತಿ, ಆತ್ಮವಿಶ್ವಾಸ ಹೆಚ್ಚಿದೆ ಎಂದಿದ್ದಾರೆ. ಸಿನಿಮಾ ಅಥವಾ ಧಾರಾವಾಹಿಗಳಲ್ಲಿ ನಟಿಸಲು ಸಿದ್ಧ ಎಂದೂ ತಿಳಿಸಿದ್ದಾರೆ.

ಬಿಗ್ ಬಾಸ್ ಸೀಸನ್ 11ರ ವಿನ್ನರ್ ಹನುಮಂತು 5 ಕೋಟಿಗೂ ಹೆಚ್ಚು ವೋಟ್‌ಗಳನ್ನು ಪಡೆದು ಕನ್ನಡಿಗರ ಮನಸ್ಸು ಗೆದ್ದಿದ್ದಾರೆ. ಆದರೆ ಹನುಮಂತುಗೆ 5 ಕೋಟಿ ವೋಟ್ ಬಂದಿರುವುದು ಕಡಿಮೆನೇ ಎಂದು ತ್ರಿವಿಕ್ರಮ್ ಹೇಳಿದ್ದಾರೆ. ನಿಜಕ್ಕೂ ಹನುಮಂತುಗೆ ಎಷ್ಟು ಸಲ ಆಫರ್ ಬಂದಿತ್ತು? ತ್ರಿವಿಕ್ರಮ್ ತಮ್ಮ ಫೇಮ್‌ ಹೇಗೆ ಉಳಿಸಿಕೊಳ್ಳುತ್ತಾರೆ ಅನ್ನೋದನ್ನು ಹಂಚಿಕೊಂಡಿದ್ದಾರೆ. 

ಹನುಮಂತು ಮೊದಲಿನಿಂದಲೂ ರಿಯಾಲಿಟಿ ಶೋಗಳನ್ನು ಮಾಡಿಕೊಂಡು ಬಂದಿದ್ದ. ಇಂಡಿಯನ್ ಐಡಲ್‌ಗೆ ಆಯ್ಕೆ ಆಗಿದ್ದವನು ಹೀಗಾಗಿ ಅವನಿಗೆ ಸುಲಭವಾಗಿ 5 ಕೋಟಿಗೂ ಹೆಚ್ಚು ವೋಟ್‌ಗಳು ಬಿದ್ದಿದೆ. ಬಿಗ್ ಬಾಸ್ ತಂಡವೇ ಮೂರ್ನಾಲ್ಕು ಸಲ ಆಫರ್ ಕೊಟ್ಟಿದ್ದಾರೆ. ಹನುಂತು ತುಂಬಾ ಸರಳವಾಗಿ ಇರುವುದೇ ಜನರಿಗೆ ಹತ್ತಿರವಾಗಲು ಸುಲಭವಾಗುತ್ತದೆ. ನಾನು ಸೀರಿಯಲ್ ಮಾಡಿ ನಾಲ್ಕು ವರ್ಷ ಗ್ಯಾಪ್ ತೆಗೆದುಕೊಂಡಿದ್ದರೆ ..ಎಲ್ಲೋ ಹಾಡುವವರ ಮುಂದೆ ಮಾತನಾಡುವವನಾಗಿ ನಾನು ಜನರಿಗೆ ಅಷ್ಟು ಕನೆಕ್ಟ್ ಆಗಿಲ್ಲ. ಹನುಮಂತುಗೆ 5 ಕೋಟಿ ವೋಟ್ ತುಂಬಾನೇ ಕಡಿಮೆ ಜಾಸ್ತಿ ಬಿದ್ದಿದ್ದರೂ ಆಶ್ಚರ್ಯ ಇಲ್ಲ. ಒಬ್ಬ ವ್ಯಕ್ತಿ ಸುಮಾತು 99 ಸಲ ವೋಟ್ ಮಾಡಬಹುದಿತ್ತು...5 ಕೋಟಿಯನ್ನು 99 ಸಲ ಡಿವೈಡ್ ಮಾಡಿದ್ದರೆ ನಿಮಗೆ ಒಂದು ಲೆಕ್ಕ ಸಿಗುತ್ತದೆ ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ತ್ರಿವಿಕ್ರಮ್ ಮಾತನಾಡಿದ್ದಾರೆ

ನನ್ನ ಮದುವೆ ಜೀವನ ತುಂಬಾ ಚೆನ್ನಾಗಿದೆ ಯಾಕೆ ಎಲ್ಲರೂ ಪದೇ ಪದೇ ಪ್ರಶ್ನೆ ಮಾಡ್ತಿದ್ದೀರಾ?: ದೀಪಿಕಾ ದಾಸ್ ಗರಂ

ಸೀರಿಯಲ್‌ ಮಾಡುವಾಗ ಸಾಮ್ರಾಟ್ ಅನ್ನೋ ಪಾತ್ರಕ್ಕೆ 10% ಫೇಮ್ ಸಿಕ್ಕಿತ್ತು ಆದರೆ ಬಿಗ್ ಬಾಸ್‌ನಲ್ಲಿ ನನಗೆ 100% ಸಿಕ್ಕಿದೆ. ಒಂದಿಷ್ಟು ದೊಡ್ಡ ಕೆಲಸಗಳನ್ನು ನಾನು ಮಾಡಬಹುದು ಅನ್ನೋ ಧೈರ್ಯವನ್ನು ಬಿಗ್ ಬಾಸ್‌ನಿಂದ ಸಿಕ್ಕಿದೆ. ಸುಮಾರು ನಿರ್ಮಾಪಕರ ಬಳಿ ಕಥೆ ಹಿಡಿದುಕೊಂಡು ಹೋದಾಗ ನಿನಗೆ ಏನ್ ಮಾರ್ಕೆಟ್ ಇದೆ ಎಂದು ಪ್ರಶ್ನೆ ಮಾಡುತ್ತಿದ್ದರು. ಪೇಮೆಂಟ್ ಬೇಕು ಎಂದು ಕೇಳಿದಾಗ ನಿಮಗೆ ಇಷ್ಟು ಪೇಮೆಂಟ್ ಕೊಡಲು ಇದ್ದೀರಾ ಎನ್ನುವರು. ಈಗ ಜನರ ಪ್ರೀತಿ ಸಿಕ್ಕಿರುವ ಕಾರಣ ನಾನು ಒಂದು ಸಿನಿಮಾ ಮಾಡಿದರೆ ಜನರು ಬಂದು ನೋಡಬಹುದು ಅನ್ನೋ ನಂಬಿಕೆ ಬಂದಿದೆ ಎಂದು ತ್ರಿವಿಕ್ರಮ್ ಹೇಳಿದ್ದಾರೆ.

ಪಾರ್ಟಿಯಲ್ಲಿ ಪುನೀತ್ ರಾಜ್‌ಕುಮಾರ್ ಮತ್ತು ಅಶ್ವಿನಿ ಜೊತೆಗಿರುವ ಮೋಕ್ಷಿತಾ ಫೋಟೋ ವೈರಲ್!

ನಿರ್ದೇಶಕರು ಸೂರು ಸರ್‌ ನನ್ನ ಬಿಗ್ ಬಾಸ್ ಜರ್ನಿಯಲ್ಲಿ ನನ್ನ ಸ್ನೇಹಿತರ ಜೊತೆ ಸಂಪರ್ಕದಲ್ಲಿ ಇದ್ದರಂತೆ. ಇದಾದ ಮೇಲೆ ನಾನೇ ಕೆಲಸ ನಿರ್ದೇಶಕರನ್ನು ಭೇಟಿ ಮಾಡಬೇಕು. ಅಲ್ಲದೆ ಈಗ ನಾನು ಮೊದಲು ಸುದೀಪ್‌ ಅಣ್ಣನ ಭೇಟಿ ಮಾಡಬೇಕು. ಏಕೆಂದರೆ ಇದನ್ನು ಹೇಗೆ ಕ್ಯಾರಿ ಮಾಡುವುದು ಏನು ಮಾಡುವುದು ಎಂದು ತಿಳಿದುಕೊಳ್ಳಬೇಕು. ಈಗ ಸೀರಿಯಲ್ ಬರ್ಲಿ ಅಥವಾ ಸಿನಿಮಾ ಬರ್ಲಿ ಒಪ್ಪಿಕೊಳ್ಳುತ್ತೀನಿ...ಯಾವುದಕ್ಕೂ ಬೇಡ ಎನ್ನುವ ಮನಸ್ಥಿತಿಯಲ್ಲಿ ನಾನು ಇಲ್ಲ ಎಂದಿದ್ದಾರೆ ತ್ರಿವಿಕ್ರಮ್.

ಕೊನೆಗೂ ಯೂಟ್ಯೂಬ್‌ ದುಡಿಮೆ ಎಷ್ಟು ಎಂದು ಬಾಯಿಬಿಟ್ಟ ಧನರಾಜ್‌; ನೆಟ್ಟಿಗರು ಶಾಕ್

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
Bigg Boss: ನಂಗೆ ಮದ್ವೆಯಾದ್ಮೇಲೆ ಮಕ್ಕಳಾಗತ್ತಲ್ವಾ ಎಂದ ರಕ್ಷಿತಾ ಶೆಟ್ಟಿ, ಸೂರಜ್​ ಬಳಿ ಇಂಥ ಪ್ರಶ್ನೆ ಕೇಳೋದಾ?