ಗಿಚ್ಚಿಗಿಲಿಗಿಲಿ ಸೀಸನ್ 3 ವಿನ್ನರ್ ಆದ ಹುಲಿ ಕಾರ್ತಿಕ್, ರನ್ನರ್ ತುಕಾಲಿ ಮಾನಸ, ಗೆದ್ದ ಹಣವೆಷ್ಟು?

By Gowthami K  |  First Published Sep 15, 2024, 11:45 PM IST

ಕಲರ್ಸ್ ಕನ್ನಡದ ಗಿಚ್ಚಿಗಿಲಿಗಿಲಿ ಸೀಸನ್ 3 ರ ವಿಜೇತರಾಗಿ ಹುಲಿ ಕಾರ್ತಿಕ್ ಹೊರಹೊಮ್ಮಿದ್ದಾರೆ. ಈಗ 'ಬಿಗ್ ಬಾಸ್ ಕನ್ನಡ 11' ಕಾರ್ಯಕ್ರಮಕ್ಕೆ ಅವರು ಪ್ರವೇಶಿಸುತ್ತಾರ ಎಂಬ ಚರ್ಚೆಗಳು ನಡೆಯುತ್ತಿವೆ.


ಕಲರ್ಸ್ ಕನ್ನಡದಲ್ಲಿ ಯಶಸ್ವಿಯಾಗಿರುವ ಕಾರ್ಯಕ್ರಮ ಗಿಚ್ಚಿಗಿಲಿಗಿಲಿ ಸೀಸನ್‌ 3ರ ವಿನ್ನರ್ ಆಗಿ ಹುಲಿ ಕಾರ್ತಿಕ್‌ 10 ಲಕ್ಷ ರೂಗಳ ಚಿನ್ನ ಬೆಲ್ಟ್ ಗೆದ್ದಿದ್ದಾರೆ. ತುಕಾಲಿ ಮಾನಸ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ. ಇವರು 3 ಲಕ್ಷ ರೂ ಬಹುಮಾನ ಗೆದ್ದಿದ್ದಾರೆ. ನನಗೆ ವಾಯ್ಸ್‌ ಬರುತ್ತಿಲ್ಲ . ನನ್ನ ತಾಯಿಗೆ ಥ್ಯಾಂಕ್ಸ್‌ ಹೇಳುತ್ತೇನೆ. ಆಕೆ ನನಗೆ ಕೊಟ್ಟ ಫ್ರೀಡಂ ಇದಕ್ಕೆಲ್ಲ ಕಾರಣ ಎಂದಿದ್ದಾರೆ ಕಾರ್ತಿಕ್.

ಬಿಗ್‌ಬಾಸ್‌ ಕನ್ನಡ ಸೀಸನ್ 10ರ ನಂತರ ಗಿಚ್ಚಿಗಿಲಿ ಗಿಲಿ ಆರಂಭವಾಗಿ ಬರೋಬ್ಬರಿ 8 ತಿಂಗಳ ಕಾಲ ಕಲರ್ಸ್ ಕನ್ನಡದಲ್ಲಿ ಈ ಶೋ ಸುದೀರ್ಘವಾಗಿ ಮೂಡಿಬಂದಿತ್ತು. ಮತ್ತು ಜನ ಮನ್ನಣೆ ಗಳಿಸಿತ್ತು. ಮಲೆನಾಡಿನ ಹೆಮ್ಮೆಯ ಕಲಾವಿದ ಹುಲಿ ಕಾರ್ತಿಕ್ ಪ್ರಶಸ್ತಿ ಗೆಲ್ಲಲು 8 ವರ್ಷ ಕಾದಿದ್ದಾರೆ. ಕಲರ್ಸ್ ಸೂಪರ್‌ ನಲ್ಲಿ ಮೂಡಿ ಬರುತ್ತಿದ್ದ ಮಜಾ ಭಾರತದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ಕಾರ್ತಿಕ್‌ ಹಾಗೇ ಮುಂದುವರೆದು 8 ವರ್ಷದ ಬಳಿಕ ಕಲರ್ಸ್ ನ ಕಾಮಿಡಿ ನಟನಾಗಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

 ಮಾಜಿ ಗೆಳತಿಯೊಂದಿಗಿನ ಆದಾಯ ಹಂಚಿಕೆ, ಬೈಕ್‌ ಗಿಫ್ಟ್ ಬಗ್ಗೆ ಮಾತನಾಡಿದ ವರುಣ್ ಆರಾಧ್ಯ

Latest Videos

undefined

ಯಾವುದೇ ಪಾತ್ರ ಕೊಟ್ಟರೂ ನೀರು ಕುಡಿದಷ್ಟೇ ಸಲೀಸಾಗಿ ನಿಭಾಯಿಸಿ, ಎಲ್ಲರನ್ನೂ ನಗೆಗಡಲಲ್ಲಿ ತೇಲಿಸುವ, ಅದ್ಭುತ ಕಾಮಿಡಿ ಟೈಮಿಂಗ್ ಹೊಂದಿರುವ ಕಲಾವಿದ ಹುಲಿ ಕಾರ್ತಿಕ್. ಅವರ ಪೆದ್ದರಾಜನ ಸ್ಕಿಟ್‌ ಯಾರೂ ಮರೆಯುವಂತಿಲ್ಲ. ಕಾರ್ತಿಕ್ ಮೂಲತಃ ಶಿವಮೊಗ್ಗದವರು. ತೀರ್ಥಹಳ್ಳಿಯ ಚಿಕ್ಕಳ್ಳಿ ಎಂಬ ಊರಿನವರು ಇವರಿಗೆ ತಾಯಿಯೇ ಪ್ರಪಂಚ.

ಬಡತನದಲ್ಲಿ ಬೆಳೆದ ಕಾರ್ತಿಕ್ ಗಾರೆ ಕೆಲಸ , ಪಂಚರ್ ಶಾಪ್, ವೆಲ್ಡಿಂಗ್ ಶಾಪ್, ಐಸ್‌ಕ್ರೀಮ್ ಪಾರ್ಲರ್‌ ನಲ್ಲಿ ಹೊಟ್ಟೆಪಾಡಿಗಾಗಿ ಕೆಲಸ ಮಾಡಿದ್ದಾರೆ. ಬಣ್ಣದ ಬದುಕಿನತ್ತ ಆಕರ್ಪಿತರಾಗಿ ನಾಟಕಗಳಲ್ಲಿ  ಬಣ್ಣ ಹಚ್ಚಿ, ಮಜಾ ಭಾರತ ಮತ್ತು ಗಿಚ್ಚಿಗಿಲಿಗಿಲಿಯಲ್ಲಿ ಜನಪ್ರಿಯತೆ ಗಳಿಸಿದರು. ನಂತರ  ‘ಟಗರು ಪಲ್ಯ’, ‘ತ್ರಿವಿಕ್ರಮ’ ಮುಂತಾದ ಹಲವು ಸಿನಿಮಾಗಳಲ್ಲಿ ಹುಲಿ ಕಾರ್ತಿಕ್ ನಟಿಸಿದ್ದಾರೆ.

ವರ್ಷಾ ಕಾವೇರಿ ಜೊತೆಗಿನ ಬ್ರೇಕಪ್‌ಗೆ ಕಾರಣ ಬಿಚ್ಚಿಟ್ಟ ವರುಣ್‌ ಆರಾಧ್ಯ!

ಈಗ ‘ಬಿಗ್ ಬಾಸ್ ಕನ್ನಡ 11’ ಕಾರ್ಯಕ್ರಮ ಸೆ.29ರ ಭಾನುವಾರ ಆರಂಭವಾಗಲಿದೆ. ಹೀಗಿರುವಾಗಲೇ, ‘ಗಿಚ್ಚಿ ಗಿಲಿಗಿಲಿ 3’ ಶೋ ಅಂತ್ಯವಾಗಿದೆ. ಈಗಾಗಲೇ ‘ಗಿಚ್ಚಿ ಗಿಲಿಗಿಲಿ 3’ ಗ್ರ್ಯಾಂಡ್ ಫಿನಾಲೆ ಮುಗಿದ ಬೆನ್ನಲ್ಲೇ ಪ್ರತೀ ಬಾರಿಯಂತೆ ಈ ಬಾರಿ ಈ ಕಾರ್ಯಕ್ರಮದಿಂದ ಹುಲಿ ಕಾರ್ತಿಕ್ ಬಿಗ್‌ಬಾಸ್‌ ಮನೆಗೆ ಹೋಗುತ್ತಾರೆ ಎನ್ನಲಾಗಿದೆ.. ಯಾಕೆಂದರೆ ಈ ಹಿಂದಿನ ಎಲ್ಲಾ ಸೀಸನ್‌ ಗಳಲ್ಲಿ ಇದೇ ರೀತಿ ನಡೆದಿದೆ. ಗಿಚ್ಚಿ ಗಿಲಿಗಿಲಿ ಮುಗಿದ ತಕ್ಷಣ ಅಲ್ಲಿಂದ ಒಬ್ಬರು ಬಿಬಿಕೆ ಶೋ ಗೆ ಹೋಗುತ್ತಾರೆ.

ಈ ಬಾರಿ ಹುಲಿ ಕಾರ್ತಿಕ್, ಚಂದ್ರಪ್ರಭ ಮತ್ತು ತುಕಾಲಿ ಮಾನಸ ಹೆಸರು ಹೆಚ್ಚಾಗಿ ಕೇಳಿ ಬರುತ್ತಿದೆ. ಯಾರು ಹೋಗುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. 

click me!