ಜೀ ಕನ್ನಡದ ಕಿಚನ್ ಕಾರ್ಯಕ್ರಮದಲ್ಲಿ ಗಟ್ಟಿಮೇಳ ದಂಪತಿ ವೈದೇಹಿ-ಸೂರ್ಯನಾರಾಯಣ ಅತಿಥಿಯಾಗಿದ್ದು, ಮಗನ ಮಾತಿಗೆ ವೈದೇಹಿ ಪಾತ್ರಧಾರಿ ಸ್ವಾತಿ ಕಣ್ಣೀರಾಗಿದ್ದಾರೆ.
ಮಕ್ಕಳನ್ನು ಹೊತ್ತು, ಹೆತ್ತು ಎಲ್ಲ ಕಷ್ಟವನ್ನೂ ನುಂಗಿಕೊಂಡು ಅವರನ್ನು ದೊಡ್ಡವರನ್ನಾಗಿ ಮಾಡುವುದು ಎಷ್ಟೋ ಮಹಿಳೆಯರಿಗೆ ಅಷ್ಟು ಸುಲಭದ ಮಾತಾಗಿರುವುದಿಲ್ಲ. ಬಂದ ಸಂಕಷ್ಟಗಳನ್ನು ಬದಿಗೊತ್ತಿ, ಮಕ್ಕಳಿಗೆ ಯಾವುದೇ ರೀತಿಯ ನೋವು, ಸಮಸ್ಯೆ ಬಾರದಂತೆ ಕಣ್ಣಿನ ರೆಪ್ಪೆಯ ರೀತಿಯಲ್ಲಿ ಕಾಪಾಡುವ ತಾಯಂದಿರು ಹಲವರಿದ್ದಾರೆ. ಆದರೆ ಅದೇ ಮಕ್ಕಳು ದೊಡ್ಡವರಾದ ಮೇಲೆ ಹೆತ್ತವರನ್ನೇ ಬೀದಿಗೆ ತಳ್ಳುವುದು, ವೃದ್ಧಾಶ್ರಮಕ್ಕೆ ಸೇರಿಸುವ ಘಟನೆಗಳು ದಿನನಿತ್ಯವೂ ನಡೆಯುತ್ತಿದೆ. ಇಂಥ ಸಂದರ್ಭದಲ್ಲಿ ತಮ್ಮ ಮಕ್ಕಳು ಕೊನೆಯವರೆಗೂ ಇರುತ್ತೇನೆ ಎನ್ನುವ ಒಂದೇ ಒಂದು ಮಾತು ಹೇಳಿದರೂ ಅಪ್ಪ-ಅಮ್ಮ ಎನಿಸಿಕೊಂಡವರಿಗೆ ಬದುಕೇ ಸಾರ್ಥಕ್ಯ ಎನಿಸಿಬಿಡುತ್ತದೆ. ಅಂಥದ್ದೇ ಒಂದು ಧನ್ಯತಾ ಭಾವ ಇದೀಗ ಗಟ್ಟಿಮೇಳ ಸೀರಿಯಲ್ ವೈದೇಹಿಯವರಿಗಾಗಿದೆ.
ಅಂದಹಾಗೆ, ವೈದೇಹಿಯವರ ರಿಯಲ್ ಹೆಸರು ಸ್ವಾತಿ. ಇವರು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಕಿಚನ್ ಕಾರ್ಯಕ್ರಮಕ್ಕೆ ಬಂದಿದ್ದಾರೆ. ಇವರಿಗೆ ಸಾಥ್ ಕೊಟ್ಟವರು ಇದೇ ಸೀರಿಯಲ್ನಲ್ಲಿ ವೈದೇಹಿ ಅವರ ಪತಿಯ ಪಾತ್ರ ವಹಿಸುತ್ತಿರುವ ಸೂರ್ಯನಾರಾಯಣ ಅಂದ್ರೆ ರವಿಕಿರಣ್ ಅವರು. ಗಟ್ಟಿಮೇಳ ಸೀರಿಯಲ್ನಲ್ಲಿ ವೈದೇಹಿಗೆ ನಾಲ್ವರು ಮಕ್ಕಳಿದ್ದರೆ, ರಿಯಲ್ ಲೈಫ್ನಲ್ಲಿ ಸ್ವಾತಿ ಅವರಿಗೆ ಒಬ್ಬನೇ ಪುತ್ರ. ಕಿಚನ್ ಕಾರ್ಯಕ್ರಮದಲ್ಲಿ ಮಾತನಾಡಿದ ಇವರ 19 ವರ್ಷದ ಮಗ, ಯಾರು ಇರ್ತಾರೋ ಇಲ್ವೋ ಗೊತ್ತಿಲ್ಲ. ನಾನಂತೂ ನಿಮ್ ಜೊತೆ ಇರ್ತೀನಿ ಎಂದು ಹೇಳಿದ. ಇದನ್ನು ಕೇಳಿ ಸ್ವಾತಿಯವರು ಕಣ್ಣೀರಾದರು. ಇದು ದೊಡ್ಡ ಮಾತು, ಬದುಕು ಸಾರ್ಥಕವಾಯಿತು ಎಂದು ಕಣ್ಣೀರು ಒರೆಸಿಕೊಂಡರು.
undefined
ದೇಹಕ್ಕಿಂತ ಮುಖ್ಯವಾದದ್ದು ಮಾನಸಿಕ ಸಂಬಂಧ: ಹುಳಿ ಹಿಂಡಲು ಬಂದ ಕಿರಣ್ಗೆ ಗೌತಮ್ ಕೊಟ್ಟ ಶಾಕಿದು!
ಇದೇ ಕಿಚನ್ ಕಾರ್ಯಕ್ರಮದಲ್ಲಿ ರವಿಕಿರಣ್ ಅವರು ಕಲ್ಲಂಗಡಿಯ ಗೊಜ್ಜು ಮಾಡಿ ತೋರಿಸಿದ್ದಾರೆ. ಇನ್ನು ಸ್ವಾತಿ ಅವರ ಕುರಿತು ಹೇಳುವುದಾದರೆ, ಇವರು ಇದಾಗಲೇ ಇವರು 400ಕ್ಕೂ ಅಧಿಕ ಸೀರಿಯಲ್ ಹಾಗೂ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. 1995ರಲ್ಲಿ ಗಿರೀಶ್ ಕಾಸರವಳ್ಳಿಯವರ ‘ಕ್ರೌರ್ಯ’ ಇವರು ಮಾಡಿದ ಮೊದಲ ಸಿನಿಮಾ. ‘ಆಟ ಹುಡುಗಾಟ’ ಪುನೀತ್ ರಾಜ್‌ಕುಮಾರ್ ಅಭಿನಯದ ‘ಚಕ್ರವ್ಯೂಹ’, ನಂತರ ‘ರಾಜ್ ವಿಷ್ಣು’, ‘ಹರಿಶ್ಚಂದ್ರ’, ‘ಪಡ್ಡೆಹುಲಿ’, ‘ತಾರಕ್’, ‘ಅನಂತು ವರ್ಸಸ್ ನಸ್ರುತ್’, ‘ಗೀತಾ’, ‘ರಾಮಾರ್ಜುನ’, ‘ಯುವರತ್ನ’ ಸೇರಿದಂತೆ ಸಾಕಷ್ಟು ಸಿನಿಮಾ ಮಾಡಿದ್ದಾರೆ. ‘ಬೆಂಕಿ’, ‘ಫಾರ್ ರಿಜಿಸ್ಪ್ರೇಷನ್’, ‘ಐ ಲವ್ ಯೂ ರಚ್ಚು’ ಮತ್ತಿತರ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಮೊದಲು ನಾಯಕಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದ ಇವರು, ಈಗ ತಾಯಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸ್ವಾತಿಯವರು ನೋಡುವುದಕ್ಕೆ ಈಗಲೂ ಅಂದಿನಂತೆಯೇ ಕಾಣುತ್ತಾರೆ. ಈಗಲೂ ಅದೇ ಸೌಂದರ್ಯವನ್ನು ಮೇಂಟೈನ್ ಮಾಡುತ್ತಿದ್ದಾರೆ. 'ಮನೆತನ' ಧಾರಾವಾಹಿಯಲ್ಲಿ ಪೂಜಾ ಎಂಬ ನಾಯಕಿ ಪಾತ್ರದಲ್ಲಿ ಸ್ವಾತಿ ನಟಿಸಿದ್ದರು. ಇದಾದ ಬಳಿಕ ಜನನಿ, ಹುಲಿವಾನ್ ಚಂದ್ರಶೇಖರ ಅವರ ನಿರ್ದೇಶನದ 'ಮಲೆಗಳಲ್ಲಿ ಮದುಮಗಳು' ಧಾರಾವಾಹಿಯಲ್ಲಿಯೂ ಮಿಂಚಿದರು. ನಂತರ ಧನಲಕ್ಷ್ಮೀ, ಸುಮಂಗಲಿ, ಮೋಹನ್ ಮಾಡಿದ ಮರ್ಡರ್, ಪಿ. ಶೇಷಾದ್ರಿ ಅವರ ಪ್ರಿಯಾ, ಟಿ ಎನ್ ಸೀತಾರಾಮ್ ಅವರ ಪತ್ತೇದಾರಿ ಪ್ರಭಾಕರ್, ಭಾರ್ಗವ ಅವರ ಉಯ್ಯಾಲೆ ಸೇರಿದಂತೆ ಹತ್ತಾರು ಧಾರಾವಾಹಿಗಳಿಂದ ಮನೆಮಾತಾಗಿದ್ದಾರೆ. ಕಿರುತೆರೆಯಲ್ಲಿ ರವಿಚಂದ್ರನ್ ಎಂದೇ ಖ್ಯಾತರಾಗಿರುವ ನಟ-ನಿರ್ದೇಶಕ ರವಿಕಿರಣ್ ಅವರು ಈ ಸೀರಿಯಲ್ನಲ್ಲಿ ಸೂರ್ಯನಾರಾಯಣ ವಶಿಷ್ಠ ಪಾತ್ರ ನಿರ್ವಹಿಸುತ್ತಿದ್ದಾರೆ.
ಕಾಶ್ಮೀರದಲ್ಲಿ ಸಿಕ್ಕಾಕ್ಕೊಂಡ ಡಾ.ಬ್ರೋ: ಕ್ಯಾಮೆರಾ ಬಂದ್ ಮಾಡಲ್ಲ, ಕನ್ನಡಿಗರಿಗೆ ತೋರಿಸ್ತೀನಿ ಎಂದು ಓಡಿದ ಗಗನ್!