ಪುಟ್ಟ ತಮ್ಮನಿಗೆ ಬಂದ ದೊಡ್ಡ ಕಾಯಿಲೆ, ಛಲ ಬಿಡದ ಬೆಂಗಳೂರಿನ 17 ವರ್ಷದ ಅಕ್ಕ ಈಗ Forbes Under 30 ಸಾಧಕಿ!

Published : Jun 01, 2026, 11:10 AM IST
Forbes 30 Under 30 Asia 2026

ಸಾರಾಂಶ

Forbes 30 Under 30 Asia 2026: ಫೋರ್ಬ್ಸ್ ಏಷ್ಯಾ 2025ರ ‘30 ಅಂಡರ್ 30’ ಪಟ್ಟಿಯ Social Impact ವಿಭಾಗದಲ್ಲಿ ಬೆಂಗಳೂರು ಮೂಲದ 17 ವರ್ಷದ ವಿದ್ಯಾರ್ಥಿನಿ ದಿವ್ಯಾ ಉತ್ಕರ್ಷ ಸ್ಥಾನ ಪಡೆದಿದ್ದಾರೆ. ಹೀಗೆ ದಿವ್ಯಾ ಅವರು ಅತ್ಯಂತ ಕಿರಿಯ ಸಾಧಕಿ ಎಂಬ ಪಟ್ಟ ಪಡೆದಿದ್ದಾರೆ. 

ಫೋರ್ಬ್ಸ್ ಏಷ್ಯಾ 2025ರ ‘30 ಅಂಡರ್ 30’ ಪಟ್ಟಿಯಲ್ಲಿ ( Forbes 30 Under 30 Asia 2026 ) ಬೆಂಗಳೂರು ಮೂಲದ ದಿವ್ಯಾ ಉತ್ಕರ್ಷ ಕೂಡ ಸ್ಥಾನ ಪಡೆದಿದ್ದಾರೆ. ಇದರ ಹಿಂದೆ ನೋವಿನ ಕಥೆ ಕೂಡ ಇದೆ. ದಿವ್ಯಾ ಅವರು ಬಸವೇಶ್ವರನಗರದ ನ್ಯಾಷನಲ್ ಅಕಾಡೆಮಿ ಫಾರ್ ಲರ್ನಿಂಗ್‌ನಲ್ಲಿ ಇತ್ತೀಚೆಗೆ ಸೆಕೆಂಡ್‌ ಪಿಯುಸಿ ಓದಿದ್ದಾರೆ. ಅಷ್ಟೇ ಅಲ್ಲದೆ ಅಮೆರಿಕದಲ್ಲಿ ಇಂಡಸ್ಟ್ರಿಯಲ್ ಎಂಜಿನಿಯರಿಂಗ್ ಓದುವ ಪ್ಲ್ಯಾನ್‌ ಇಟ್ಟುಕೊಂಡಿದ್ದಾರೆ.

ಈ ಪ್ರಾಜೆಕ್ಟ್‌ ಶುರು ಆಗಿದ್ದು ಹೇಗೆ?

"'ಪ್ರಾಜೆಕ್ಟ್ ಸೂರ್ಯ' ಎಂಬ NGO ಆರಂಭಿಸಿದೆ. ಇದರಿಂದಲೇ ನನಗೆ ಫೋರ್ಬ್ಸ್ 30 ಅಂಡರ್ 30 ಪಟ್ಟಿಯಲ್ಲಿ ಸ್ಥಾನ ಸಿಕ್ಕಿದೆ. ನನ್ನ ತಮ್ಮ ಸೂರ್ಯನಿಗೆ ಟೈಪ್ 1 ಶುಗರ್‌ ಇರೋದು ಗೊತ್ತಾಯಿತು. ಆಗ ನನಗೆ 13 ವರ್ಷ. ಹೀಗಾಗಿ ನಾನು, ನನ್ನ ಕುಟುಂಬದವರಿಗೆ ಬೇಸರ ಆಯ್ತು, ಆರ್ಥಿಕವಾಗಿ ಕೂಡ ಕಷ್ಟ ಆಯ್ತು. ಇದೇ ರೀತಿ ನಮ್ಮ ದೇಶದಲ್ಲಿ ಲಕ್ಷಾಂತರ ಜನರು ಚಿಕಿತ್ಸೆಗೆ ಹಣ ಇಲ್ಲದೆ ಒದ್ದಾಡುತ್ತಿದ್ದಾರೆ ಎಂದು ಅರ್ಥ ಆಯ್ತು” ಎಂದು ದಿವ್ಯಾ ಅವರು ಹೇಳಿದ್ದಾರೆ.

ಮೊದಲು ವರ್ಷ ಅವರು ಶುಗರ್‌ 1 ಬಗ್ಗೆ ಸಂಶೋಧನೆ ಮಾಡಿದ್ದರು. ಪಾಲಕರಾದ ಉತ್ಕರ್ಷ ಲೋಕೇಶ್, ಪಲ್ಲವಿ ಉತ್ಕರ್ಷ ಜೊತೆ ಪ್ರಾಜೆಕ್ಟ್ ಸೂರ್ಯವನ್ನು ಪ್ರಾರಂಭಿಸಿದ್ದರು. ಹೀಗಾಗಿ ಇವರಿಗೆ ನಿತ್ಯವೂ ಇನ್ಸುಲಿನ್‌ ಇಂಜೆಕ್ಷನ್‌ ಕೊಡಬೇಕು. ಬಡ ಅಥವಾ ಮಧ್ಯಮ ಕುಟುಂಬದ ಹಣವೆಲ್ಲವೂ ಇನ್ಸುಲಿನ್‌ಗೆ ಬೇಕಾಗುತ್ತದೆ. ಇದರಿಂದಾಗಿ 2022ರಲ್ಲಿ 35,860 ಕ್ಕೂ ಹೆಚ್ಚು ಜನರು ಟೈಪ್ 1 ಮಧುಮೇಹದಿಂದ ಸಾವನ್ನಪ್ಪಿದ್ದಾರೆ ಎಂದು ದಿವ್ಯಾ ಹೇಳಿದ್ದಾರೆ.

ಈ ಸಂಸ್ಥೆ ಮಾಡಿದ ಸಾಧನೆ ಏನು?

ಈ ಸಂಸ್ಥೆಯು ಆರಂಭವಾದ ಕೆಲವೇ ದಿನಗಳಲ್ಲಿ 4,02,000 ಕ್ಕೂ ಹೆಚ್ಚು ಜನರನ್ನು ತಲುಪಿದೆ. ಅಷ್ಟೇ ಅಲ್ಲದೆ ಟೈಪ್ 1 ಶುಗರ್‌ ಇರುವ 3,190 ಮಕ್ಕಳಿಗೆ ಸಹಕಾರ ನೀಡಿದೆ. ಅಷ್ಟೇ ಅಲ್ಲದೆ ಅನುದಾನ, ಸಾರ್ವಜನಿಕ ನಿಧಿ ಸಂಗ್ರಹಣೆಯ ಮೂಲಕ ₹20 ಲಕ್ಷಕ್ಕೂ ಹೆಚ್ಚು ಹಣವನ್ನು ಸಂಗ್ರಹ ಮಾಡಿದೆ.

“ಯಾರಿಗೆ ಚಿಕಿತ್ಸೆ ಪಡೆಯಲು ಆಗುವುದಿಲ್ಲವೋ ಅಂಥ ಕುಟುಂಬಗಳಿಗೆ ಇಲ್ಲಿಯವರೆಗೆ 4,500 ಇನ್ಸುಲಿನ್ ವಯಲ್‌ಗಳು, 2,500 ಗ್ಲೂಕೋಸ್ ಮಾನಿಟರಿಂಗ್ ಸ್ಟ್ರಿಪ್‌ಗಳು, 1,000 ಇನ್ಸುಲಿನ್ ಸಿರಿಂಜ್‌ಗಳನ್ನು ದೇಣಿಗೆಯಾಗಿ ನೀಡಲಾಗಿದೆ” ಎಂದಿದ್ದಾರೆ.

"ಶುಗರ್ ಬಗ್ಗೆ‌ ಸಾವಿರಾರು ಹಳ್ಳಿಗಳಲ್ಲಿ ಜಾಗೃತಿ ಮೂಡಿಸಲು 200 ಕ್ಕೂ ಹೆಚ್ಚು ಆಶಾ (ASHA) ಕಾರ್ಯಕರ್ತೆಯರಿಗೆ ತರಬೇತಿ ನೀಡಿದ್ದೇವೆ. ಇದರಿಂದ 49,500 ಗ್ರಾಮಸ್ಥರಿಗೆ ಈ ವಿಷಯ ತಲುಪಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಉಚಿತ ಆರೋಗ್ಯ ಶಿಬಿರಗಳನ್ನು ಆಯೋಜಿಸಲಾಗಿದೆ. ಅಷ್ಟೇ ಅಲ್ಲದೆ 1,020 ಕ್ಕೂ ಹೆಚ್ಚು ಗ್ಲೂಕೋಸ್ ತಪಾಸಣೆಗಳನ್ನು ಮಾಡಲಾಗಿದೆ" ಎಂದು ಹೇಳಿದ್ದಾರೆ.

ನಮ್ಮ ಸಂಸ್ಥೆ ಹೇಗೆ ಕೆಲಸ ಮಾಡುತ್ತಿದೆ ಎಂದು ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಚೇರಿ, ಅಂತರರಾಷ್ಟ್ರೀಯ ಮಧುಮೇಹ ಒಕ್ಕೂಟ (IDF), ವಿಶ್ವ ಆರೋಗ್ಯ ಸಂಸ್ಥೆ (WHO) ವೇದಿಕೆಗಳಲ್ಲಿ ಹೇಳಿದೆ. ಬೆಂಗಳೂರು, ವಾರಣಾಸಿ, ಮುಂಬೈ, ನವದೆಹಲಿ, ಗಾಜಿಯಾಬಾದ್ ಸೇರಿದಂತೆ ಅಮೆರಿಕ, ಕೆನಡಾ, ಯುಎಇ, ಮೊರಾಕೊ, ನೈಜೀರಿಯಾಗಳಲ್ಲಿ ಶಾಖೆ ಹೊಂದಿದೆ. ಜೊತೆಗೆ 120 ಕ್ಕೂ ಹೆಚ್ಚು ಸ್ವಯಂಸೇವಕರು, 35 ಪ್ರೌಢಶಾಲಾ ಸ್ವಯಂಸೇವಕರನ್ನು ಒಳಗೊಂಡಿದೆ.

ದಿವ್ಯಾ ಸಾಧನೆಯನ್ನು ಬ್ರಿಟಿಷ್ ರಾಜಮನೆತನವು ಗುರುತಿಸಿದ್ದು, 'ಡಯಾನಾ ಪ್ರಶಸ್ತಿ 2023' ನೀಡಿತ್ತು. Chegg.org ಜಾಗತಿಕ ವಿದ್ಯಾರ್ಥಿ ಪ್ರಶಸ್ತಿಯ ಟಾಪ್ 10 ಜಾಗತಿಕ ಫೈನಲಿಸ್ಟ್‌ಗಳಲ್ಲಿ ಒಬ್ಬರಾಗಿದ್ದಾರೆ, ಈ ಪ್ರಶಸ್ತಿಗೆ 140 ದೇಶಗಳ 11,000 ಅರ್ಜಿದಾರರಿಂದ ಇವರನ್ನು ಆಯ್ಕೆ ಮಾಡಲಾಗಿತ್ತು. ಆಮ್ಸ್ಟರ್ಡ್ಯಾಮ್ 2024ರಲ್ಲಿ ವಿಶ್ವ ಸುಸ್ಥಿರತೆ ಪ್ರಶಸ್ತಿಯಿಂದ ಗೌರವಿಸಲ್ಪಟ್ಟ ಐದು ಜನರಲ್ಲಿ ಇವರೂ ಒಬ್ಬರಾಗಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Amruthadhaare Serial: 2 ಕೊ*ಲೆ ಮಾಡಿದ್ದಾಯ್ತು; ಕೆಟ್ಟವ್ರಿಗೆ ಕಾಲ ಎನ್ನೋದು ಸುಳ್ಳಲ್ಲ ಬಿಡಿ! JD ಟೈಮ್‌ ಶುರು
5 ವರ್ಷ ಒದ್ದಾಡಿ ಕನಸು ನನಸು ಮಾಡ್ಕೊಂಡ Sonu Srinivas Gowda; ಹೀಗೆ ಎತ್ತರಕ್ಕೆ ಬೆಳಿ ಎಂದ ಅಕ್ಕ!