
ಬೆಂಗಳೂರು (ನ.09) ದೇಶಾದ್ಯಂದ ರಾಮಾಯಣ ಪ್ರದರ್ಶನಗೊಳ್ಳುತ್ತಿದೆ. ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದರ ನಡುವೆ ಒಟಿಟಿಯಲ್ಲಿ ಈ ವಾರ ಹಬ್ಬ. ಸೂಪರ್ ಹಿಟ್ ಸಿನಿಮಾ, ಜನಪ್ರಿಯ ವೆಬ್‌ಸಿರೀರಿಸ್ ಸೇರಿದಂತೆ ಹಲವು ಮನರಂಜನೆಗಳು ಈ ವಾರ ಸಿಗಲಿದೆ. ನವೆಂಬರ್ 9 ರಿಂದ ನವೆಂಬರ್ 15ರ ವರಗೆ ಒಟಿಟಿ ಪ್ರಿಯರಿಗೆ ಅದ್ಧೂರಿ ಮನರಂಜನೆ ಸಿಗಲಿದೆ. ನವೆಂಬರ್ 2ನೇ ವಾರದಲ್ಲಿ ಒಟಿಟಿಗೆ ಲಗ್ಗೆ ಇಡುತ್ತಿರುವ ಟಾಪ್ ಮೂವಿ ಹಾಗೂ ಸಿರೀಸ್ ಪಟ್ಟಿ ಇಲ್ಲಿದೆ.
ಅರ್ಜುನ್ ರಾಂಪಾಲ್ (Arjun Rampal) ಅಮಾನತುಗೊಂಡ ಪೊಲೀಸ್ ಅಧಿಕಾರಿ ಸಿಕಂದರ್ ಸಿಂಗ್ ಪಾತ್ರದಲ್ಲಿ ನಟಿಸಿರುವ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ. ಮನಾಲಿ ಹಿನ್ನೆಲೆಯಲ್ಲಿ ನಡೆಯುವ ಕಳ್ಳತನ ಹಾಗೂ ಅನುಮಾನಾಸ್ಪದ ಆತ್ಮಹತ್ಯೆ ತನಿಖೆಯ ಸುತ್ತ ಈ ಕಥೆ ಸಾಗುತ್ತದೆ.
ಫ್ಯಾಂಟಸಿ ಪ್ರಿಯರು ಕಾತರದಿಂದ ಕಾಯುತ್ತಿದ್ದ ಹಿಟ್ ಸರಣಿಯ 3ನೇ ಭಾಗ. ಸೌರಾನ್ ತನ್ನ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಹಾಗೂ ಮಿಡಲ್ ಅರ್ಥ್ ಸಾಮ್ರಾಜ್ಯ ಎದುರಿಸುವ ಹೊಸ ಭೀಕರ ಸಮರದ ದೃಶ್ಯಗಳನ್ನು ಇದರಲ್ಲಿ ಪ್ರಸಾರ ಮಾಡಲಾಗುತ್ತದೆ.
ಕ್ರೈಂ ಮತ್ತು ನ್ಯಾಯಾಂಗ ವ್ಯವಸ್ಥೆಯ ಸುತ್ತ ಹೆಣೆದಿರುವ ಭಾರಿ ಕುತೂಹಲಕಾರಿ ಭಾರತೀಯ ಸಸ್ಪೆನ್ಸ್ ಕ್ರೈಂ ಡ್ರಾಮಾ. ಅಪರಾಧ ತನಿಖೆಯ ವೇಳೆ ಬಯಲಾಗುವ ಕರಾಳ ರಹಸ್ಯಗಳು ಈ ಚಿತ್ರದ ಪ್ರಮುಖ ಆಕರ್ಷಣೆ.
ಪ್ರಸಿದ್ಧ ಸೆಂಟ್ ತೆರೆಸಾ ಸಂಸ್ಥೆಯಲ್ಲಿ ನಡೆಯುವ ವಿದ್ಯಾರ್ಥಿನಿಯ ನಿಗೂಢ ಕೊಲೆಯ ತನಿಖೆಯನ್ನು ಆಧರಿಸಿದ 6 ಸಂಚಿಕೆಗಳ ಶೋಕಿಂಗ್ ಥ್ರಿಲ್ಲರ್ ಸರಣಿ. ರೀಮಾ ಮಾಯಾ ನಿರ್ದೇಶನದ ಈ ಸರಣಿಯಲ್ಲಿ ಶನಾಯಾ ಕಪೂರ್ ಮತ್ತು ದಿವಿಕ್ ಶರ್ಮಾ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಅಭಿನಯ ರಾಕ್ಷಸ ಪಂಕಜ್ ತ್ರಿಪಾಠಿ (Pankaj Tripathi) ಮತ್ತು ಅದಿತಿ ರಾವ್ ಹೈದರಿ (Aditi Rao Hydari) ನಟನೆಯ ಸುಂದರ ಫ್ಯಾಮಿಲಿ ಡ್ರಾಮಾ ಕಾಮಿಡಿ ಚಿತ್ರ. ವರುಣ್ ವಿ ಶರ್ಮಾ ನಿರ್ದೇಶನದ ಈ ಸಿನಿಮಾ ಇಡೀ ಕುಟುಂಬ ಕುಳಿತು ನೋಡುವಂತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.