ಈ ಸೀರಿಯಲ್ ಜೋಡಿಗಳಿಗೆ ರಿಯಲ್ ಲೈಫಲ್ಲೂ ಒಂದಾಗಿ ಅಂತ ಫ್ಯಾನ್ಸ್ ಒತ್ತಡ ಜಾಸ್ತಿ ಆಗ್ತಿದೆ. ಆ ರೊಮ್ಯಾಂಟಿಕ್ ಜೋಡಿ ಯಾವುದು?
ದಿನಾ ಸೀರಿಯಲ್ ನೋಡೋ ಜನ ತಮ್ಮಿಷ್ಟದ ಕಲಾವಿದರನ್ನು ಸೋಷಿಯಲ್ ಮೀಡಿಯಾದಲ್ಲೂ ಫಾಲೋ ಮಾಡ್ತಾರೆ. ಸೀರಿಯಲ್ ಹೀರೋ ಹೀರೋಯಿನ್‌ಗಳಿಗೆ ಸಿಕ್ಕಾಪಟ್ಟೆ ಅಭಿಮಾನಿ ಪೇಜ್‌ಗಳಿವೆ. ಕಿರುತೆರೆ ಸ್ಟಾರ್‌ಗಳ ಆನ್‌ಸ್ಕ್ರೀನ್ ಫೋಟೋಗಳಿಗಿಂತ ಆಫ್‌ಸ್ಕ್ರೀನ್ ಫೋಟೋ, ವೀಡಿಯೋಗಳು ಬಹು ಬೇಗ ವೈರಲ್ ಆಗ್ತಿವೆ. ಅದರಲ್ಲೂ ಕೆಲವು ಸೀರಿಯಲ್ ಹೀರೋ ಹೀರೋಯಿನ್‌ಗಳು ಜೊತೆಯಾಗಿ ರೀಲ್ಸ್ ಮಾಡಿದರೆ, ಫೋಟೋ ತೆಗೆಸಿಕೊಂಡರೆ ಕೆಲವೇ ಕ್ಷಣಗಳಲ್ಲಿ ಅವು ಸಾವಿರಾರು ಕಡೆ ಶೇರ್ ಆಗಿ ಲಕ್ಷಾಂತರ ವೀಕ್ಷಣೆ ಪಡೆಯುತ್ತವೆ. ಅಷ್ಟಕ್ಕೂ ಆ ಜೋಡಿಗಳು ಯಾರು?
ಹೊಂಗಸನು ಸೀರಿಯಲ್‌ನ ಮುಖೇಶ್ - ರಕ್ಷಾ
ತೆಲುಗಿನ 'ಗುಪ್ಪೆಡಂಥಾ ಮನಸು' ಅನ್ನೋ ಸೀರಿಯಲ್ ಕನ್ನಡಕ್ಕೆ 'ಹೊಂಗನಸು' ಅನ್ನೋ ಹೆಸರಲ್ಲಿ ಡಬ್ ಆಗಿ ಸ್ಟಾರ್ ಸುವರ್ಣದಲ್ಲಿ ಪ್ರಸಾರ ಆಗ್ತಿದೆ. ಈ ಸೀರಿಯಲ್‌ನ ಫೇಮಸ್ ಜೋಡಿ ಮುಖೇಶ್ ಗೌಡ ಮತ್ತು ರಕ್ಷಾ. ಇಬ್ಬರೂ ಮೈಸೂರು ಮೂಲದವರು. ಮುಖೇಶ್ ಈಗಲೂ ಮೈಸೂರಲ್ಲಿದ್ದರೆ ರಕ್ಷಾ ಫ್ಯಾಮಿಲಿ ಬೆಂಗಳೂರಿಗೆ ಶಿಫ್ಟ್ ಆಗಿದೆ. ಈ ಜೋಡಿಗೆ ಇನ್‌ಸ್ಟಾ ಗ್ರಾಮ್‌ನಲ್ಲಿ ಲಕ್ಷಾಂತರ ಫಾಲೋವರ್ಸ್ ಇದ್ದಾರೆ. ಇವರ ಆನ್‌ಸ್ಕ್ರೀನ್ ಕೆಮೆಸ್ಟ್ರಿಗೆ ಸಾಕಷ್ಟು ಮಂದಿ ಫಿದಾ ಆಗಿದ್ದಾರೆ. ಅಷ್ಟಕ್ಕೂ ಈ ಸೀರಿಯಲ್‌ನಲ್ಲಿ ಇರೋದು ಕಾಲೇಜ್ ಸ್ಟೋರಿ. ರಿಷಿ - ವಸುಧರಾ ಅನ್ನುವ ಪಾತ್ರದಲ್ಲಿ ಈ ಇಬ್ಬರೂ ನಟಿಸಿದ್ದಾರೆ. ಸೀರಿಯಲ್ ಆರಂಭದಲ್ಲಿ ರಿಷಿ ಕಾಲೇಜು ಎಂಡಿ ಹಾಗೂ ಮ್ಯಾಥ್ಸ್ ಲೆಕ್ಚರರ್ ಆಗಿದ್ದರೆ, ವಸುಧರಾ ಆರಂಭದಲ್ಲಿ ಕಷ್ಟದಲ್ಲಿ ವಿದ್ಯಾಭ್ಯಾಸ ಪಡೆಯುವ ಸ್ಟೂಡೆಂಟ್ ಆಗಿದ್ದು, ಈಗ ಆಕೆಯೂ ಮ್ಯಾಥ್ಸ್ ಲೆಕ್ಚರರ್ ಆಗಿದ್ದಾಳೆ. ಇವರಿಬ್ಬರ ಪ್ರೇಮ, ವಿರಸದ ಕಥೆ ಸಖತ್ ಫೇಮಸ್. ಈ ಜೋಡಿ ರಿಯಲ್ ಲೈಫಲ್ಲೂ ಒಂದಾಗ್ಬೇಕು ಅಂತ ನಿತ್ಯ ಸಾವಿರಾರು ಮಂದಿ ಫ್ಯಾನ್ಸ್ ಪೋಸ್ಟ್ ಹಾಕುತ್ತಲೇ ಇರುತ್ತಾರೆ. ಇನ್ನೂ ಸಿಂಗಲ್ ಆಗಿರುವ ಮುಖೇಶ್ ರಕ್ಷಾ ಆಫ್‌ಸ್ಕ್ರೀನ್‌ನಲ್ಲಿ ಪರಸ್ಪರ ಕಾಲೆಳೆಯೋದ್ರಲ್ಲೂ ಫೇಮಸ್. ಸದ್ಯಕ್ಕೆ ನಾವು ಪ್ರೆಂಡ್ಸ್, ಮುಂದೆ ಗೊತ್ತಿಲ್ಲ ಅನ್ನೋ ಈ ಜೋಡಿ ಫ್ಯಾನ್ಸ್ ಆಸೆ ಈಡೇರಿಸ್ತಾರ ಅಂತ ಕಾದು ನೋಡಬೇಕು.
ಬರೋಬ್ಬರಿ 30 ವರ್ಷಗಳ ಬಳಿಕ ಕನ್ನಡಕ್ಕೆ ಬಂದ ಹಿರಿಯ ನಟಿ ಮಹಾಲಕ್ಷ್ಮೀ!
ಪುಟ್ಟಕ್ಕನ ಮಕ್ಕಳು ಸೀರಿಯಲ್ ಧನುಷ್ - ಸಂಜನಾ
ನಂ.2 ಟಿಆರ್‌ಪಿ ಪಡೆಯುತ್ತಿರೋ 'ಪುಟ್ಟಕ್ಕನ ಮಕ್ಕಳು' ಸೀರಿಯಲ್ ಫೇಮಸ್ ಜೋಡಿ ಸಂಜನಾ ಬುರ್ಲಿ ಮತ್ತು ಧನುಷ್ ಎನ್ ಎಸ್. ಇದರಲ್ಲಿ ಧನುಷ್ ಪಕ್ಕಾ ಮಂಡ್ಯದ ಹಳ್ಳಿ ಹೈದ. ಸಂಜನಾ ಬುರ್ಲಿ ಬಡಕುಟುಂಬದ ವಿದ್ಯಾವಂತ ಹುಡುಗಿ. ಅಕ್ಷರ ಜ್ಞಾನ ಇಲ್ಲದ ಕಂಠಿ ಪಾತ್ರದಲ್ಲಿ ಧನುಷ್ ನಟಿಸಿದರೆ, ಸಂಜನಾ ಸ್ನೇಹ ಅನ್ನುವ ದೊಡ್ಡ ಕನಸು ಹೊತ್ತ ಬಡ ಕುಟುಂಬದ ವಿದ್ಯಾವಂತ ಹುಡುಗಿ ಪಾತ್ರದಲ್ಲಿ ನಟಿಸಿದ್ದಾರೆ. ಈ ಜೋಡಿ ಎಲ್ಲೇ ಹೋಗಲಿ ವೀಕ್ಷಕರು ನೀವು ರಿಯಲ್ ಲೈಫಲ್ಲೂ ಒಂದಾಗ್ಬೇಕು ಅಂತ ರಿಕ್ವೆಸ್ಟ್ ಮಾಡ್ತನೇ ಇರ್ತಾರೆ. ಇದಕ್ಕೆ ಕಸಿವಿಸಿಪಟ್ಟು ಈ ಜೋಡಿ, ನಾವು ಆನ್‌ಸ್ಕ್ರೀನ್ (on screen) ಮಾತ್ರ ಲವರ್ಸ್ ಅಂತ ಕ್ಲಾರಿಫಿಕೇಶ್ ಕೊಟ್ಟಿದ್ದಾರೆ. ಆದರೂ ರಿಯಲ್ ಲೈಫಲ್ಲೂ (real life) ಇವರು ಒಂದಾಗಲಿ ಅಂತ ಫ್ಯಾನ್ಸ್ ಒತ್ತಡ ಹಾಕುತ್ತಲೇ ಇದ್ದಾರೆ.
ಸೀತಾರಾಮ ಸೀರಿಯಲ್‌ನ ಗಗನ್ ಮತ್ತು ವೈಷ್ಣವಿ
ಟಿಆರ್‌ಪಿ ರೇಟಿಂಗ್‌ನಲ್ಲಿ ಏರಿಕೆ ಕಾಣುತ್ತಲೇ ಈಗ ನಂ.2 ಸೀರಿಯಲ್ ಆಗಿ ಫೇಮಸ್ ಆಗ್ತಿರೋದು ಸೀತಾರಾಮ ಸೀರಿಯಲ್ (serial) . ಇದರಲ್ಲಿ ವೈಷ್ಣವಿ ಮತ್ತು ಗಗನ್ ನಾಯಕಿ ಮತ್ತು ನಾಯಕ. ಇವರಿಬ್ಬರ ಪೇರ್ ಸಖತ್ ಕ್ಯೂಟ್ (cute) ಆಗಿದೆ. ಇಬ್ಬರೂ ರಿಯಲ್ ಲೈಫಲ್ಲೂ ಜೊತೆಯಾದ್ರೆ ಬಹಳ ಚೆನ್ನಾಗಿರುತ್ತೆ ಅಂತ ಬಹಳ ಮಂದಿ ಹೇಳ್ತಿದ್ದಾರೆ.
Bhagyalakshmi Serial: ಮಹೇಶನ ಕೈಯಲ್ಲಿ ಚಿತ್ರಾನ್ನ ಆಯ್ತು ತಾಂಡವ್ ಲೈಫು!