
ಕನ್ನಡ ಚಿತ್ರರಂಗದ ಮಾಸ್ ಲೀಡರ್ ಹಾಗೂ ಲವರ್ ಮ್ಯಾನ್ ಕರುನಾಡ ಜನತೆಯ ಪ್ರೀತಿಯ ಡಿ-ಬಾಸ್ ದರ್ಶನ್ ಅಭಿನಯದ 'ಒಡೆಯ' ಇತ್ತೀಚಿಗೆ ರಾಜ್ಯದಾದ್ಯಂತ ತೆರೆ ಕಂಡು ಒಂದು ವಾರದಲ್ಲಿ ಬಾಕ್ಸ್ ಆಫೀಸ್ ಕಲೆಕ್ಷನ್ ಮುಟ್ಟಿದೆ ಎನ್ನಲಾಗಿದೆ.
ಇಂದು ದರ್ಶನೋತ್ಸವ;ಒಡೆಯ ಪಕ್ಕಾ ಕಮರ್ಷಿಯಲ್ ಸಿನಿಮಾ!
ಇನ್ನು ಎಲ್ಲೆಡೆ ಪೋಸ್ಟರ್ ಹಾಕುತ್ತಾ ಸಂಭ್ರಮಿಸುತ್ತಿರುವ ದರ್ಶನ್ ಅಭಿಮಾನಿಗಳು ಬಿಗ್ ಬಾಸ್ ಸೀಸನ್ 7 ರ ಸ್ಪರ್ಧಿ ಕುರಿ ಪ್ರತಾಪ್‌ಗೆ ಮತಯಾಚಿಸಿದ್ದಾರೆ. ಡಿ-ಬಾಸ್ ಸೇನೆ ಮದ್ದೂರು ಒಡೆಯ ಪೋಸ್ಟರ್‌ನಲ್ಲಿ 'ಓಟ್ ಫಾರ್ ಕುರಿ ಪ್ರತಾಪ್' ಎಂದು ಬರೆಸಿದ್ದಾರೆ. ಈ ಫೋಸ್ಟರ್ ಪ್ರೇಕ್ಷಕರ ಗಮನ ಸೆಳೆದಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ರಾತ್ರಿ ಆದ್ರೆ ಟಿವಿ ಮುಂದೆ ಕೂತು ಕುರಿ ಪ್ರತಾಪ್ ಕಾಮಿಡಿಗೆ ಕಾಯುವ ವೀಕ್ಷಕರು ಪ್ರತಿ ಸಲವೂ ಪ್ರತಾಪ್ ನಾಮಿನೇಟ್ ಆದಾಗ ಓಟ್ ಮಾಡಿ ಸೇವ್ ಮಾಡಿದ್ದಾರೆ. ಈ ಹಿಂದೆ ಖಾಸಗಿ ವಾಹಿನಿಯಲ್ಲಿ ಜನರಿಗೆ 'ಕುರಿ' ಮಾಡುವ ಶೋ ನಿರೂಪಕನಾಗಿದ್ದು ಆ ಕಾರಣದಿಂದ ಎಲ್ಲರೂ ಅವರನ್ನು ಕುರಿ ಎಂದೇ ಗುರುತಿಸುತ್ತಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.