
ಬಿಗ್ ಬಾಸ್ ಮನೆಯೊಳಕ್ಕೆ ಸೇರಿದವರಿಗೆ ಹೊರ ಪ್ರಪಂಚದ ಯಾವ ಸುಳಿವು ಇರುವುದಿಲ್ಲ ಎಂಬುದು ನಿಯಮ. 2016ರಲ್ಲಿ ನೋಟ್ ಬ್ಯಾನ್ ಆದಾಗ ಸಹ ಬಿಗ್ ಬಾಸ್ ಸ್ಪರ್ಧಿಗಳಿಗೆ ಮಾಹಿತಿ ನೀಡಿರಲಿಲ್ಲ.
ಆದರೆ ಸೋಮವಾರದ ಎಪಿಸೋಡ್ ನೋಡಿದವರಿಗೆ ಒಂದು ಸಣ್ಣ ಅನುಮಾನ ಬಂದಿರಲೇಬೇಕು. ರಕ್ಷಿತ್ ಶೆಟ್ಟಿ ಅಭಿನಯದ ಅವನೇ ಶ್ರೀಮನ್ನಾರಾಯಣ ಸಾಂಗ್ ರಿಲೀಸ್ ಆಗಿ ವಾರವೂ ಆಗಿಲ್ಲ. ಆದರೆ ಸುಮಾರು 60 ದಿನಗಳ ಹಿಂದೆಯೇ ಅಂದರೆ ಎರಡು ತಿಂಗಳ ಹಿಂದೆಯೇ ಮನೆ ಪ್ರವೇಶ ಮಾಡಿರುವ ಚಂದನ್ ಆಚಾರ್ ರಕ್ಷಿತ್ ಶೆಟ್ಟಿ ಸಾಂಗ್ ನಲ್ಲಿ ಹಾಕಿರುವ ಸ್ಟೆಪ್ ಅನ್ನೇ ಹಾಕಿದ್ದಾರೆ.
ಸೋಮವಾರದ ಎಪಿಸೋಡ್ ಆರಂಭ ಅಂದರೆ ಬೆಳಗ್ಗೆ ಸ್ಪರ್ಧಿಗಳನ್ನು ಎಬ್ಬಿಸಲು ಸಾಂಗ್ ಹಾಕುವುದು ವಾಡಿಕೆ. ಅದರ ಮತ್ತೆ ಅವನೇ ಶ್ರೀಮನ್ನಾರಾಯಣದ ಸಾಂಗ್ ಹಾಕಲಾಗಿದೆ. ಉಳಿದ ಎಲ್ಲ ಅಭ್ಯರ್ಥಿಗಳು ಮಾಮೂಲಿಯಾಗಿ ಡ್ಯಾನ್ಸ್ ಮಾಡಿದ್ದರೆ ಕಿರಿಕ್ ಪಾರ್ಟಿ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಅವರೊಂದಿಗೆ ಕಾಣಿಸಿಕೊಂಡಿದ್ದ ಚಂದನ್ ಆಚಾರ್ ಸಾಂಗ್ ನಲ್ಲಿ ಇರುವಂತಹ ಸ್ಟೆಪ್ ಹಾಕಿದ್ದಾರೆ.
ಬಿಗ್ ಬಾಸ್ ಹುಲಿಗಳು ಬಲೆಗೆ ಬಿದ್ದಿದ್ದು ಹೇಗೆ?
ಹಾಗಾದರೆ ಸಾಂಗ್ ರಿಲೀಸ್ ಗೂ ಮುನ್ನವೇ ಹಾಡಿನಲ್ಲಿ ಇದೆ ಸ್ಟೆಪ್ ಇತ್ತು ಎಂದು ಚಂದನ್ ಆಚಾರ್ ಅವರಿಗೆ ಗೊತ್ತಿತ್ತಾ? ಎನ್ನುವ ಪ್ರಶ್ನೆ ಮೂಡಿದೆ.
ಅದು ಏನೇ ಇರಲಿ ಸೋಮವಾರ ಓಪನ್ ನಾಮಿನೇಶನ್ ನಡೆದಿದ್ದು ಚೈತ್ರಾ ಕೊಟ್ಟೂರು, ಚಂದನ್ ಆಚಾರ್, ಚಂದನಾ, ದೀಪಿಕಾ, ಹರೀಶ್ ರಾಜ್, ಕಿಶನ್ ಮತ್ತು ಮನೆಯಿಂದ ಹೊರ ಹೋಗುವಾಗ ರಾಜು ತಾಳಿಕೋಟೆ ಅವರಿಂದ ನೇರವಾಗಿ ನಾಮಿನೇಟ್ ಆಗಿರುವ ಕುರಿ ಪ್ರತಾಪ್ ಮುಂದಿನ ವಾರಕ್ಕೆ ನಾಮಿನೇಟ್ ಆಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.