50ನೇ ದಿನಕ್ಕೆ ಬಿಗ್‌ಬಾಸ್‌ ಪ್ರಯಾಣ ಮುಗಿಸಿದ ವಿಶ್ವನಾಥ್; ಶಮಂತ್‌ ಲಕ್ಕಿ!

Suvarna News   | Asianet News
Published : Apr 19, 2021, 10:51 AM ISTUpdated : Apr 19, 2021, 12:02 PM IST
50ನೇ ದಿನಕ್ಕೆ ಬಿಗ್‌ಬಾಸ್‌ ಪ್ರಯಾಣ ಮುಗಿಸಿದ ವಿಶ್ವನಾಥ್; ಶಮಂತ್‌ ಲಕ್ಕಿ!

ಸಾರಾಂಶ

ಆನಾರೋಗ್ಯದ ಕಾರಣದಿಂದ ಈ ವಾರದ ಎಲಿಮಿನೇಷನ್‌ ಮಾಡಲು ಸುದೀಪ್‌ ವೀಕೆಂಡ್ ವಿಥ್ ಕಿಚ್ಚ ಶೋನಲ್ಲಿ ಪಾಲ್ಗೊಳ್ಳಲಿಲ್ಲ. ಕ್ರಿಯೇಟಿವ್‌ ಟೀಮ್‌ ಮಾಡಿದ ಟಾಸ್ಕ್‌ ಸೂಪರ್, ಮನೆಯಿಂದ ವಿಶ್ವನಾಥ್ ಔಟ್.

ಬಿಗ್ ಬಾಸ್‌ ಮನೆಯಲ್ಲಿ ಒಂದು ವಾರ ಇದ್ದರೆ ಸಾಕಪ್ಪ ಎಂದು ಕೊಂಡು, ಎಂಟ್ರಿ ಆದ ಸ್ಪರ್ಧಿಗಳು 50ನೇ ದಿನಕ್ಕೆ ಕಾಲಿಟ್ಟಿದ್ದಾರೆ, ಇನ್ನು ಫಿನಾಲೆ ತಲುಪಲೇಬೇಕು ಎಂದು ಪ್ಲಾನ್ ಮಾಡುತ್ತಿರುವವರು ಗೋಲ್ಡನ್‌ ಪಾಸ್‌ಗೆ ಕಿತ್ತಾಡುತ್ತಿದ್ದಾರೆ. ಎಷ್ಟೇ ಆತ್ಮೀಯ ಸ್ನೇಹಿತರಾಗಿದ್ದರೂ, ಕೊನೆಯಲ್ಲಿ ತಮ್ಮ ಸ್ವಾರ್ಥ ಮುಖ್ಯವಾಗುತ್ತದೆ ಎಂದು ಗೋಲ್ಡನ್ ಪಾಸ್ ತೋರಿಸಿಕೊಟ್ಟಿದೆ. 

ಭುವಿ ಮನೆಯಲ್ಲೇ ಹರ್ಷನಿಗೆ ಜೈಲಿನ ದರ್ಶನ ಮಾಡಿಸಿದ ವರು 

ಅನಾರೋಗ್ಯದ ಕಾರಣ ಸುದೀಪ್‌ ಈ ವಾರ ವೀಕೆಂಡ್ ಕಾರ್ಯಕ್ರಮದಲ್ಲಿ ಕಾಣಿಸಿ ಕೊಂಳ್ಳಿರಲಿಲ್ಲ. ಕ್ರಿಯೇಟಿವ್ ಟೀಂ ಈ ವಾರದ ನಾಮಿನೇಷನ್‌ ನೋಡಿಕೊಳ್ಳುತ್ತಾರೆ ಎಂದು ಟ್ಟಿಟರ್‌ ಮೂಲಕ ವೀಕ್ಷಕರಿಗೆ ಸುದೀಪ್ ತಿಳಿಸಿದ್ದರು. ನಾಮಿನೇಟ್ ಆಗಿದ್ದ ಪ್ರತಿಯೊಬ್ಬ ಸದಸ್ಯರನ್ನೂ ವಿಭಿನ್ನ ಟಾಸ್ಕ್‌ಗಳ ಮೂಲಕ ಸೇವ್ ಮಾಡಿಕೊಂಡು ಬಂದ ತಂಡ, ಕೊನೆಯಲ್ಲಿ ಇಬ್ಬರನ್ನು ಉಳಿಸಿಕೊಂಡಿತ್ತು. ಬಾಟಮ್‌ ಲಿಸ್ಟ್‌ನಲ್ಲಿ ಚಕ್ರವರ್ತಿ ಚಂದ್ರಚೂಡ್ ಹಾಗೂ ವಿಶ್ವನಾಥ್ ಇದ್ದರು. ಟಿವಿಯಲ್ಲಿ ಪ್ರಸಾರವಾಗುವ ವಿಡಿಯೋ ಹೇಳುತ್ತದೆ ಆ ವ್ಯಕ್ತಿ ಜರ್ನಿ ಮುಕ್ತಾಯವಾಗುತ್ತದೆ ಎಂದು ಬಿಬಿ ಹೇಳಿದ್ದರು. ಹಾವೇರಿ ಗಾಯಕ ವಿಶ್ವನಾಥ್ ವಿಡಿಯೋ ಪ್ರಸಾರವಾಗಿತ್ತು. ಈ ವಾರ ವಿಶ್ವನಾಥ್ ಮನೆಯಿಂದ ಹೊರ ಬಂದರು. 

ಶಮಂತ್‌ ಬದಲು ಮನೆಯಿಂದ ಹೊರಟ ವೈಜಯಂತಿಗೆ ಸುದೀಪ್ ಖಡಕ್ ಸಂದೇಶ! 

ವಿಶ್ವನಾಥ್ ಯಾಕೆ ಔಟ್?
ಸಾಮಾನ್ಯವಾಗಿ ಯಾರೇ ಎಲಿಮಿನೇಟ್ ಆದರೂ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಮನೆಯಿಂದ ಆ ಸ್ಪರ್ಧಿ ಹೊರ ಬಂದಿದ್ದೇಕೆ ಎಂದು ಚರ್ಚೆ ಮಾಡುತ್ತಾರೆ. 50 ದಿನ ಪೂರೈಸುತ್ತಿದ್ದ ವಿಶ್ವನಾಥ್ ಎಲ್ಲಿ ಎಡವಿದ್ದರು ಎಂದು ಜನರ ಚರ್ಚೆ ಮೂಲಕ ತಿಳಿದು ಬಂದಿದೆ. ಅತಿ ಚಿಕ್ಕ ವಯಸ್ಸಿಗೆ ಈ ಅವಕಾಶ ಸಿಕ್ಕರುವ ಕಾರಣ ಅದರ ಮಹತ್ವ ವಿಶ್ವನಾಥ್‌ಗೆ ಇನ್ನೂ ತಿಳಿದಿಲ್ಲ. ಎಲ್ಲರನ್ನೂ ಅಕ್ಕ ಅಣ್ಣ ಎಂದುಕೊಂಡು ಸಿಂಪತಿ ಪಡೆದುಕೊಂಡ. ಆದರೆ ಪಾಸ್‌ ಪಡೆದುಕೊಳ್ಳಲಿಲ್ಲ. ಕ್ಯಾಪ್ಟನ್ ಆದಾಗಲಂತೂ ವಿಶ್ವನಾಥ್ ಮಾತನ್ನು ಯಾರೂ ಕೇಳಲಿಲ್ಲ. ನಿರ್ಧಾರವೂ ಸರಿಯಾಗಿ ತೆಗೆದುಕೊಳ್ಳಲಿಲ್ಲ. ಇದರ ಬಗ್ಗೆ ಸುದೀಪ್ ಕೂಡ ಹೇಳಿದ್ದರು. ಪ್ರತಿ ಸೀಸನ್‌ನಲ್ಲಿ ಬರುವ ಗಾಯಕರನ್ನು ನೋಡಲು ಎಷ್ಟು ಖುಷಿಯಾಗುತ್ತದೆ. ಆದರೆ ವಿಶ್ವನಾಥ್ ತಾನೊಬ್ಬ ಗಾಯಕ ಎನ್ನುವುದನ್ನು ಮರೆತು ಮನೆಯಲ್ಲಿದ್ದರು. ಒಂದೆರಡು ದಿನ ಹಾಡು ಹೇಳಿರುವುದನ್ನು ಕೇಳಿದ್ದೀವಿ ಅಷ್ಟೆ. ಮಿಕ್ಕ ದಿನವೆಲ್ಲ ಬೆಕ್ಕಿನ ಆಟ ಆಡಿದ್ದಾರೆ.

ನಿಮಗೆ ಏನು ಎನಿಸುತ್ತೆ, ಬಿಗ್‌ಬಾಸ್ ಮನೆಯಲ್ಲಿ ಸ್ಪರ್ಧಿಗಳು ಆಡುತ್ತಿರುವ ಸ್ಪರ್ಧೆ ಬಗ್ಗೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಗಿಲ್ಲಿಯಲ್ಲ, Bigg Boss ವಿನ್ನರೇ ಬೇರೆ: ಅಭಿಷೇಕ್​ ಹೇಳಿದ ಆ ಹೆಸರು ಯಾರದ್ದು, ಇಲ್ಲಿದೆ ಕುತೂಹಲ
Bigg Boss ಭವ್ಯಾ ಗೌಡ ಮದ್ವೆ ಅವಿನಾಶ್​ ಶೆಟ್ಟಿ ಜೊತೆನಾ? Karna ನಿಧಿಯ ಅಸಲಿ ಗುಟ್ಟೇನು? ನಟ ಹೇಳಿದ್ದೇನು?