
40ಕ್ಕೂ ಹೆಚ್ಚು ಚಿತ್ರಗಳಲ್ಲಿ ಮಿಂಚಿರುವ ನಟ ಹರೀಶ್ ರಾಜ್ ಬಿಗ್ ಬಾಸ್ ಸೀಸನ್ 7ರ ಸೆನ್ಸೇಷನಲ್ ಸ್ಪರ್ಧಿ. ಚಿತ್ರರಂಗದಿಂದ ದೂರ ಉಳಿದಿದ್ದರು. ಹರೀಶ್ ಎಲ್ಲಿ ಕಣ್ಮರೆಯಾದರು ಎಂದು ಯೋಚಿಸುತ್ತಿದ್ದವರ ಬಳಿಗೆ ಕರೆ ತಂದಿದ್ದೇ ಬಿಗ್‌ಬಾಸ್ ಎಂಬ ರಿಯಾಲಿಟಿ ಶೋ.
BB7: ಕಿರಿಕ್ ಮಾಡಿದವರಿಗೆ ಸಿಗ್ತು ಕಿಚ್ಚನ ಮೆಚ್ಚುಗೆಯ ಚಪ್ಪಾಳೆ!
ಮೊದಲನೇ ವಾರದಿಂದಲೂ ವೀಕ್ಷಕರನ್ನು ಮನರಂಜಿಸುತ್ತಿದ್ದ ಹರೀಶ್ ಫಿನಾಲೆ ವಾರ ಮುಟ್ಟುವಷ್ಟರಲ್ಲಿ ಮನೆಯಿಂದ ಹೊರ ಬಂದಿದ್ದರು. ಒಂದು ಸ್ಥಳದಲ್ಲಿ ನಿಂತು ಬೋರ್ಡಿಂಗ್ ಪಾಸ್ ಸ್ವೈಪ್ ಮಾಡಬೇಕಿತ್ತು. ಯಾರಿಗೆ ಗ್ರೀನ್ ಸಿಗ್ನಲ್ ಬರುತ್ತೋ ಅವರು ಮನೆಯಲ್ಲಿ ಉಳಿಯುತ್ತಾರೆ, ಯಾರಿಗೆ ಕೆಂಪು ಲೈಟ್ ಆನ್ ಆಗುತ್ತೋ ಅವರನ್ನು ಕ್ರೇನ್ ಮೂಲಕ ಅದೇ ಸ್ಥಳದಿಂದ ಮನೆಯಿಂದ ಹೊರ ತರಲಾಗುತ್ತದೆ, ಎಂದು ಬಿಗ್‌ಬಾಸ್ ಆದೇಶಿಸಿದ್ದರು. ಇಂಥ ಬೋರ್ಡಿಂಗ್ ಪಾಸ್ ಎಲಿಮಿನೇಷನ್‌ನಲ್ಲಿ ಮನೆಯಿಂದ ಹೊರ ಬಂದವರೇ ಹರೀಶ್ ರಾಜ್.
ಬುಸುಗುಡುವ ನಾಗಿಣಿ ದೀಪಿಕಾ ದಾಸ್ ಬಿಗ್ ಬಾಸ್‌ನಲ್ಲಿ ಪಡೆದ ಸಂಭಾವನೆ ಲೀಕ್!
ಎಲ್ಲರನ್ನೂ ರಂಜಿಸುತ್ತಾ, ಸಿಕ್ಕಾಪಟ್ಟೆ ಆ್ಯಕ್ಟಿವ್ ಇದ್ದ ಹರೀಶ್ ರಾಜ್ ಮನೆಯಿಂದ ಹೊರ ಬಂದಿದ್ದಕ್ಕೆ ಅಭಿಮಾನಿಗಳು ಬೇಜಾರಾಗಿದ್ದರು. ಅಲ್ಲದೇ, ಅವರ ಆಟಕ್ಕೆ ಬಿಗ್‌ಬಾಸ್ ಫ್ಯಾನ್ಸ್ ಫುಲ್ ಫಿದಾ ಆಗಿದ್ದರು. ಒಂದು ಹಂತದಲ್ಲಿ ಈ ಬಾರಿಯ ಬಿಗ್‌ಬಾಸ್ ವಿನ್ನರೇ ಹರೀಶ್ ರಾಜ್ ಎಂದೇ ಬಿಂಬಿಸಲಾಗಿತ್ತು. ಬಿಗ್‌ಬಾಸ್ ಸೀಸನ್-7 ಮುಗಿದ ನಂತರ ಸುದೀಪ್ ಒಟ್ಟಾಗಿ ಸ್ಪರ್ಧಿಗಳು ಮಾಡಿದ ಪಾರ್ಟಿಯಲ್ಲಿ ಕಿಚ್ಚ ಹರೀಶ್ ಅವರಿಗೆ ದುಬಾರಿ ಉಡುಗೊರೆ ನೀಡಿದ್ದಾರೆ. ಈ ಸಂತೋಷದ ವಿಚಾರವನ್ನು ಹರೀಶ್ ರಾಜ್ ರಿವೀಲ್ ಮಾಡಿದ್ದಾರೆ.
ಬಿಗ್‌ಬಾಸ್ ಶೈನ್ ಶೆಟ್ಟಿ ಗೆದ್ದ ಟಾಟಾ ಅಲ್ಟ್ರೋಝ್ ಕಾರಿನ ಬೆಲೆ, ವಿಶೇಷತೆ ಇಲ್ಲಿದೆ!
'ಬಿಗ್‌ಬಾಸ್ ಸ್ಪರ್ಧೆಯಲ್ಲಿ ಹರೀಶ್ ರಾಜ್ ತುಂಬಾ ಚೆನ್ನಾಗಿ ವೀಕ್ಷಕರನ್ನು ಮನರಂಜಿಸಿದ್ದಾರೆ. ನಾನು ಅವರಿಗ ಏನಾದರೂ ಕೊಡಲೇಬೇಕು,' ಎಂದು ಅವರ ಕೈಯಲ್ಲಿದ್ದ ದುಬಾರಿ ವಾಚನ್ನೇ ತೆಗೆದು, ಹರೀಶ್‌ಗೆ ನೀಡಿದ್ದಾರಂತೆ. ಇಂಥದ್ದೊಂದು ಅವಸ್ಮರಣೀಯ ಘಟನೆ ಪಾರ್ಟಿಯೊಂದರಲ್ಲಿ ನಡೆಯಿತು, ಎಂದು ಹರೀಶ್ ಖುಷಿಯಿಂದ ಹೇಳಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.