ಬುಸುಗುಡುವ ನಾಗಿಣಿ ದೀಪಿಕಾ ದಾಸ್ ಬಿಗ್ ಬಾಸ್‌ನಲ್ಲಿ ಪಡೆದ ಸಂಭಾವನೆ ಲೀಕ್!

By Suvarna News  |  First Published Feb 3, 2020, 12:16 PM IST

ಬಿಗ್ ಬಾಸ್‌ ಕನ್ನಡ ಸೀಸನ್-7 ಮುಕ್ತಾಯವಾಗಿದ್ದು, ಕುಂದಾಪುರದ ಶೈನ್ ಶೆಟ್ಟಿಗೆ ಬಿಗ್‌ ಬಾಸ್ ಕಿರೀಟ ಮುಡಿಗೇರಿದೆ. ಸ್ಟೈಲಿಶ್‌ ಸ್ಟಾರ್‌ ದೀಪಿಕಾ ದಾಸ್‌ 4ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಗಿದೆ. ಅಷ್ಟಕ್ಕೂ 4ನೇ ಸ್ಥಾನಕ್ಕೆ ದೀಪಿಕಾ ಪಡೆದ ಬಹುಮಾನವಾದ್ರೂ ಏನು? ಇಲ್ಲಿದೆ ನೋಡಿ..
 


ಆಟ ಗೆದ್ದರೆ ಒಂದು ಲಕ್‌, ಸೋತವರಿಗೂ ಬಹುಮಾನದ ಮೊತ್ತವೇನೂ ಕಡಿಮೆ ಇಲ್ಲ. ಒಂದೊಂದು ಸಂದರ್ಭಕ್ಕೆ ಒಂದೊಂದು ಆಂಗಿಕ ಭಾಷೆಯನ್ನು ಬದಲಾಯಿಸುತ್ತಿದ್ದ ದೀಪಿಕಾ ಬಗ್ಗೆ ಬಿಗ್‌ಬಾಸ್ ಮನೆಯಲ್ಲಿದ್ದ ಸ್ಪರ್ಧಿಗಳೇ ಚೆನ್ನಾಗಿ ಅರಿತಿದ್ದರು. ಇದರ ಬಗ್ಗೆ ಸುದೀಪ್ ಸಹ ತಮ್ಮ ಅಭಿಪ್ರಾಯವನ್ನು ಒಮ್ಮೆ ವ್ಯಕ್ತಪಡಿಸಿದ್ದರು. ಅದೇನೇ ಇರಲಿ, ಬಿಗ್ ಬಾಸ್ ಮನೆಯಲ್ಲಿ ಅಡುಗೆ ಮಾಡುವಾಗಲೂ ಪಾಯಿಂಟೆಡ್ ಹೀಲ್ಸ್ ಹಾಕ್ಕೊಂಡು ಅಡುಗೆ ಮಾಡುತ್ತಿದ್ದ ದೀಪಿಕಾ, ತನ್ನ ಫ್ಯಾಷನ್ ಸೆನ್ಸ್‌ನಿಂದಲೇ ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿದ್ದರು. ಮೊದ ಮೊದಲು ಸಪ್ಪಗಿರುತ್ತಿದ್ದ ದೀಪಿಕಾ, ಸ್ವಲ್ಪ ದಿನಗಳ ನಂತರ ಗೆಲುವಾದರು. ಕಡೇವರೆಗೂ ಮನೆಯಲ್ಲಿ ಲವ್‌ಲವಿಕೆಯಿಂದ ಇದ್ದರು ಈ ನಾಗಿಣಿ, ಎಲ್ಲ ಟಾಸ್ಕ್‌ಗಳಲ್ಲಿಯೂ ಖುಷ್ ಖುಷಿಯಾಗಿಯೇ ಪಾಲ್ಗೊಳ್ಳುತ್ತಿದ್ದರು. ದೀಪಿಕಾ ಫೈನಲ್‌ವರೆಗೂ ಪಕ್ಕಾ ಹೋಗ್ತಾರೆ ಎನ್ನುವ ಭರವಸೆ ಇತ್ತು ಬಿಗ್‌ಬಾಸ್ ಫ್ಯಾನ್ಸ್‌ಗೆ. ಕಡೇ ಎರಡು ಸ್ಥಾನಗಳನ್ನು ಪಡೆಯುವಲ್ಲಿ ವಿಫಲವಾದರೂ, ನಾಲ್ಕನೇ ಸ್ಥಾನ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ ಈ ಬುಸ್ ಬುಸ್ ನಾಗಿಣಿ. 

ಪರ್ಫೆಕ್ಟ್‌ ಗರ್ಲ್‌ ಎಂದೆನಿಸಿಕೊಂಡಿರುವ ದೀಪಿಕಾ ದಾಸ್ ಬ್ಯಾಗ್‌ನಲ್ಲಿ ಏನಿಟ್ಟವ್ರೇ ಗುರು!

Tap to resize

Latest Videos

undefined

'ನಾಗಿಣಿ' ಧಾರಾವಾಹಿ ಮೂಲಕ ಖ್ಯಾತರಾದ ದೀಪಿಕಾ ದಾಸ್‌ ತಮ್ಮ ನಡೆ-ನುಡಿ ಮೂಲಕ ಪ್ರೇಕ್ಷಕರ ಮನಸ್ಸಿಗೆ ಹತ್ತಿರವಾಗಿದ್ದಾರೆ. ಹುಡುಗರಿಗೂ ಬಿಗ್ ಫೈಟ್‌ ನೀಡುವ ಮೂಲಕ ಟಾಪ್‌ 5 ಸ್ಪರ್ಧಿಗಳಲ್ಲಿ ಒಬ್ಬರಾದರು. ದೀಪಿಕಾ ಬಿಗ್ ಬಾಸ್‌ ಮನೆಯೊಳಗೆ ಹೋಗಲು ಎಷ್ಟು ಸಂಭಾವನೆ ಪಡೆದಿದ್ದಾರೆ,  ಹೊರ ಬಂದ ನಂತರ ಎಷ್ಟು ಕೈ ಸೇರಿತ್ತು ಎಂಬ ಕುತೂಹಲಕ್ಕೆ ಇಲ್ಲಿದೆ ಕ್ಲಾರಿಟಿ.

ಶೈನ್ ಬದಿಗೆ ಸರಿಸಿ ದೀಪಿಕಾ ದಾಸ್ ತಾಯಿ ಮಗಳಿಗೆ ಕೊಟ್ಟ 'ಆ' ಎಚ್ಚರಿಕೆ

ದೀಪಿಕಾ ಬಿಗ್ ಬಾಸ್‌ ಸೀಸನ್‌-7 ರಲ್ಲಿ 4ನೇ ಸ್ಥಾನ ಪಡೆದ ಸ್ಪರ್ಧಿ. ಬಿಗ್‌ಬಾಸ್ ನೀಡಿದ್ದ ಟಾಸ್ಕ್ ನೃತ್ಯ ಸ್ಪರ್ಧೆಯಲ್ಲಿ ವಿಜೇತರಾಗಿರುವುದರಿಂದ ಇಂಡಿಯಾ ಗೇಟ್‌ ಅವರು 5 ಲಕ್ಷ ರೂ. ವಿಶೇಷ ಬಹುಮಾನ,  ಐಯಂಗಾರ್‌ ಪುಳಿಯೋಗರೆ ಮಸಾಲಾ ಅವರಿಂದ 1 ಲಕ್ಷ ರೂ. ಸುಪ್ರೀಂ ಸೋಲಾರ್‌ ಪಾಡ್ರೆಕ್ಟ್ಸ್‌ ಅವರಿಂದ 1 ಲಕ್ಷ ರೂ. ಮತ್ತು ಮಲ್ಲೇಶ್ವರಂನ ಸುದರ್ಶನ್‌ ಸಿಲ್ಕ್ಸ್‌ನವರು 1 ಲಕ್ಷ ರೂ. ನಗದು ನೀಡುವ ಮೂಲಕ ಪ್ರಾಯೋಜಕರಾಗಿದ್ದರು. ಹಾಗಾಗಿ ಒಟ್ಟು 8 ಲಕ್ಷ ರೂ ಬಹುಮಾನ ದೀಪಿಕಾ ಕೈ ಸೇರಿದೆ. ಆದರೆ, ದಿನಕ್ಕೆ ಪಡೆಯುತ್ತಿದ್ದ ಸಂಭಾವನೆ ಬಗ್ಗೆ ನಿಖರ ಮಾಹಿತಿ ಇಲ್ಲ. 

ಒಟ್ಟಿನಲ್ಲಿ ರವಿ ಬೆಳಗೆರೆ ಮನೆಯಿಂದ ಹೊರ ಬಂದ ನಂತರ ಅಷ್ಟೇನೂ ಸ್ವಾರಸ್ಯವಿಲ್ಲದ ಬಿಗ್‌ಬಾಸ್ ಕನ್ನಡ-7 ಮುಗಿದಿದೆ. ಸೀಕ್ರೇಟ್ ರೂಂ ಟಾಸ್ಕ್‌ನಂತ ಯಾವುದೇ ಕುತೂಹಲಗಳೂ ಇಲ್ಲದ ಈ ರಿಯಾಲಿಟಿ ಶೋ ಮೊದಲಿನಷ್ಟು ವೀಕ್ಷಕರನ್ನು ಸೆರೆ ಹಿಡಿಯುವಲ್ಲಿಯೂ ಯಶಸ್ವಿಯಾಗಲಿಲ್ಲ. ತನ್ನದೇ ಆದ ವಿಶೇಷತೆಯಿಂದ ಈ ಶೋ ತನ್ನ ವರ್ಚಸ್ಸು ಕಳೆದುಕೊಂಡಿಲ್ಲ ಎಂದು ಮಾತ್ರ ಹೇಳಬಹುದು. 

Phi Phi Islandನಲ್ಲಿ ‘ನಾಗಿಣಿ’ ಹಾಟ್ ಲುಕ್ ವೈರಲ್!

ಫೆಬ್ರವರಿ 3ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!