
ಜೋಡಿ ಟಾಸ್ಕ್ ಆದಾಗಿನಿಂದಲೂ ಬಿಗ್ ಬಾಸ್ ಮನೆಯಲ್ಲಿ ಜೋಡಿಗಳು ಹೆಚ್ಚಾಗಿವೆ. ದಿವ್ಯಾ-ಅರವಿಂದು ನಡುವೆ ಸ್ಪೆಷಲ್ ಫೀಲಿಂಗ್ ಹೊರತು ಪಡಿಸಿ, ಇನ್ನುಳಿದವರ ನಡುವೆ ಇರುವುದು ಕೇವಲ ಪ್ಯೂರ್ ಫ್ರೆಂಡ್‌ಶಿಪ್. ರಘು ಗೌಡ ಅವರೇ ಮನೆಯಲ್ಲಿ ವೈಷ್ಣವಿ ಒಂಥರ ಮಾರೆಲ್ ಸಪೋರ್ಟ್. ಆದರೆ ಅದನ್ನೇ ತಪ್ಪು ಅನ್ನೋ ರೀತಿಯಲ್ಲಿ ಕಾಣುತ್ತಿರುವುದಕ್ಕೆ ವೈಷ್ಣವಿ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ನಾಲ್ಕು ವಾರಗಳಿಂದ ವೈಷ್ಣವಿ ಅಡಿಗೆ ಮಾಡುತ್ತಿದ್ದ ಕಾರಣ ರಘು ಅಡುಗೆ ಮನೆಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. 'ವೈಷ್ಣವಿ ಅಡುಗೆ ಮಾಡುವಾಗಲೂ ಅವಳ ಹಿಂದೆನೇ ಇರುತ್ತೀಯಾ? ನೀನು ವೈಷ್ಣವಿ ಇಬ್ಬರೂ ಸಪರೇಟ್ ಆಗಿ ಬಿಗ್ ಬಾಸ್ ಮಾಡಿಕೊಳ್ಳಿ,' ಅಂತ ಶುಭಾ ಪೂಂಜಾ ಹೇಳುತ್ತಾರೆ. ಶುಭಾ ಹೇಳಿದ ರೀತಿ ತಪ್ಪು ಎಂದು ವೈಷ್ಣವಿ ಬೇಸರ ಮಾಡಿಕೊಳ್ಳುತ್ತಾರೆ.
ಅಡುಗೆ ವಿಚಾರಕ್ಕೆ ವೈಷ್ಣವಿ ವಿರುದ್ಧ ಸದಸ್ಯರ ಅಸಮಾಧಾನ; ಕಣ್ಣೀರಿಟ್ಟ ಸನ್ನಿಧಿ!
'ದಯವಿಟ್ಟು ಈ ರೀತಿ ಮಾಡನಾಡಬೇಡಿ. ಚೆನ್ನಾಗಿ ಕಾಣಿಸೋಲ್ಲ. ಅವರಿಗೆ ಮದುವೆಯಾಗಿದೆ ಮಗುವಿದೆ,' ಎಂದು ವೈಷ್ಣವಿ ಶುಭಾಗೆ ನೇರವಾಗಿ ಹೇಳಿದ್ದಾರೆ. ವೈಷ್ಣವಿ ಬೇಸರ ಮಾಡಿಕೊಂಡಿದ್ದನ್ನು ಗಮನಿಸಿದ ಶುಭಾ ಅಲ್ಲಿಂದ ಹೊರ ನಡೆಯುತ್ತಾರೆ. ಅಡುಗೆ ವಿಚಾರಕ್ಕೂ ವೈಷ್ಣವಿ ಮೇಲೆ ಇಡೀ ಮನೆ ಕೋಪ ಗೊಂಡರು. ಇದೀಗ ರಘು ಜೊತೆ ಲಿಂಕ್ ಮಾಡುತ್ತಿರುವುದು ಎರಡು ವಿಚಾರಗಳು ಮಿಕ್ಸ್ ಆಗಿ, ವೈಷ್ಣವಿ ಕಣ್ಣೀರಿಟ್ಟಿದ್ದಾರೆ. ಕೆಲ ಸಮಯದ ಕಾಲ ಒಬ್ಬಂಟಿಯಾಗಿ ಕಳೆದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.