ಸ್ವಾರ್ಥಿ ಆಗ್ಬಿಟ್ರಾ ದಿವ್ಯಾ ಉರುಡುಗ? ಹೆಣ್ಣುಮಕ್ಕಳು ಯಾಕೆ ಕ್ಯಾಪ್ಟನ್ ಆಗಿಲ್ಲ?

Suvarna News   | Asianet News
Published : Jun 28, 2021, 11:09 AM ISTUpdated : Jun 28, 2021, 11:15 AM IST
ಸ್ವಾರ್ಥಿ ಆಗ್ಬಿಟ್ರಾ ದಿವ್ಯಾ ಉರುಡುಗ? ಹೆಣ್ಣುಮಕ್ಕಳು ಯಾಕೆ ಕ್ಯಾಪ್ಟನ್ ಆಗಿಲ್ಲ?

ಸಾರಾಂಶ

ಹೆಣ್ಣು ಮಕ್ಕಳು ಕ್ಯಾಪ್ಟನ್ ಆಗುವುದರ ಬಗ್ಗೆ ವೀಕೆಂಡ್ ಎಪಿಸೋಡ್‌ನಲ್ಲಿ ಸುದೀಪ್ ಚರ್ಚೆ ಮಾಡಿದ್ದಾರೆ. ಇದು ಲೆಕ್ಕ ಅಲ್ಲ....  

ಬಿಗ್ ಬಾಸ್ ಸೀಸನ್ 8ರ ಸೆಕೆಂಡ್ ಇನಿಂಗ್ಸ್‌ನ ಮೊದಲ ವಾರದ ಕ್ಯಾಪ್ಟನ್ ಆಗಿ ಮಂಜು ಪಾವಗಡ ಆಯ್ಕೆ ಅಗಿದ್ದಾರೆ. ಕ್ಯಾಪ್ಟನ್‌ ಟಾಸ್ಕ್‌ಗೆ ಮಂಜು ಮತ್ತು ಪ್ರಿಯಾಂಕಾ ನಡುವೆ ಸಖತ್ ಪೈಪೋಟಿ ನಡೆಯಿತು. ಆದರೆ ಎಲ್ಲರೂ ಮಂಜುಗೆ ಸಪೋರ್ಟ್ ಮಾಡುತ್ತಿರುವುದು ತಪ್ಪು ಎಂದು ಪ್ರಿಯಾಂಕಾ ವಿರೋಧಿಸಿದ್ದರು. 

ಬಿಗ್ ಬಾಸ್ ಮನೆಯ ಕ್ಯಾಪ್ಟನ್ ಆಗಲು ಮೊಟ್ಟೆ ಇಲ್ಲದೇ ಲೋಟ ಹೊಡೆಯಬೇಕಿತ್ತು. ಹುಡುಗರು ಮತ್ತು ಹುಡುಗೀಯರ ಎರಡು ತಂಡ ಮಾಡಲಾಗಿತ್ತು. ಕೊನೆಯ ಹಂತದಲ್ಲಿ ಮಂಜು ಮತ್ತು ಪ್ರಿಯಾಂಕ ಉಳಿದುಕೊಂಡರು. ಪ್ರಿಯಾಂಕಾ ಮೊಟ್ಟೆ ಇರುವ ಲೋಟ ಹೊಡೆಯದ ಕಾರಣ ಕ್ಯಾಪ್ಟನ್ ಆಗುವುದರಿಂದ ಮಿಸ್ ಆದರು. ಈ ಟಾಸ್ಕಿನ ಬಗ್ಗೆ ಚರ್ಚೆ ಮಾಡುವಾಗ ದಿವ್ಯಾ ಉರುಡುಗ ಹೇಳಿದ ಮಾತು ಪ್ರಿಯಾಂಕಾಗೆ ಬೇಸರವಾಗಿದೆ. 

'ಮಂಜು ಕ್ಯಾಪ್ಟನ್ ಅಗಲಿ, ಆದರೆ ನಾನು ಫಸ್ಟ್ ಹುಡುಗಿ ಕ್ಯಾಪ್ಟನ್ ಆಗಬೇಕು,' ಎಂದು ಹೇಳಿದ್ದಾರೆ. ಇದಕ್ಕೆ ಪ್ರಿಯಾಂಕಾ ವಿರೋಧಿಸಿ 'ಹುಡುಗರಲ್ಲಿ ಒಗ್ಗಟಿದೆ. ಆದರೆ ಹುಡುಗಿಯರಲ್ಲಿ ಅದಿಲ್ಲ,' ಎಂದು ಉತ್ತರ ನೀಡಿದ್ದಾರೆ. ಮನೆಯಲ್ಲಿರುವ ಹೆಣ್ಣು ಮಕ್ಕಳಿಗೆ ಕ್ಯಾಪ್ಟನ್ ಆಗುವ ಆಸೆ ತುಂಬಾನೇ ಇದೆ. ಆದರೆ ಕ್ಯಾಪ್ಟನ್ ಆಗುತ್ತಿಲ್ಲ. ಈ ವಿಚಾರದ ಬಗ್ಗೆ ಸುದೀಪ್ ಚರ್ಚೆ ಮಾಡಿದ್ದಾರೆ. 'ಫಾರ್ಮ್ಯಾಟ್ ಸರಿ ಇರಲಿಲ್ಲ, ಲಕ್ ಇರಲಿಲ್ಲ ಫಿಸಿಕಲ್ ಟಾಸ್ಕ್..ಇವೆಲ್ಲ ಬ್ಯಾಡ್ ಎಕ್ಸ್‌ಕ್ಯೂಸ್. ಫಸ್ಟ್ ಟೈಮ್ ಇಷ್ಟು ವಾರ ಕಳೆದರೂ ಇಬ್ಬರೂ ಮಹಿಳಾ ಕ್ಯಾಪ್ಟನ್ ಆಗಿಲ್ಲ. ಆಗಲೇಬೇಕು ಅಂತೇನಿಲ್ಲ. ಆಗದೇ ಇರುವುದು ಲಿಟಲ್ ಸ್ಯಾಡ್,' ಎಂದು ಸುದೀಪ್ ಹೇಳಿದ್ದಾರೆ. 'ಹೆಣ್ಣುಮಕ್ಕಳಲ್ಲಿ ಕಾನ್ಫಿಡೆನ್ಸ್ ಕಡಿಮೆ ಇದೆ. ಯಾರ ಎಫರ್ಟ್ ಹಾಕುತ್ತಿಲ್ಲ,' ಎಂದು ಹುಡುಗರು ಕೂಡ ಸ್ಪಷ್ಟನೆ ನೀಡಿದ್ದಾರೆ.

ಬಿಗ್‌ಬಾಸ್‌ನಿಂದ ಹೊರ ಬಂದ ಮೇಲೆ 3 ಕೆಜಿ ತೂಕ ಇಳಿಸಿದೆ: ಪ್ರಿಯಾಂಕಾ ತಿಮ್ಮೇಶ್ 

ಅನಾರೋಗ್ಯದ ಕಾರಣ ಮನೆಯಿಂದ ಹೊರ ಬಂದ ದಿವ್ಯಾ ಉರುಡುಗ, ಎಲ್ಲಾ ಎಪಿಸೋಡ್‌ಗಳನ್ನು ಚೆನ್ನಾಗಿ ನೋಡಿಕೊಂಡು ಬಂದಿದ್ದಾರೆ. ಎಲ್ಲರಿಗಿಂತ ಅವರೇ ಗೇಮ್ ಪ್ಲಾನ್ ಮಾಡುತ್ತಿರುವುದು. ಸ್ವಲ್ಪ ಸ್ವಾರ್ಥ ಬುದ್ಧಿ ತೋರಿಸುತ್ತಿದ್ದಾರೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Bigg Boss ಗಿಲ್ಲಿ ಬಗ್ಗೆ ನಿಮ್ಗೆ ಗೊತ್ತಿಲ್ಲ, ರಘು ಚಪಾತಿ ಕೊಡದ ಕಾರಣ ನಾನ್​ ಹೇಳ್ತೀನಿ ಕೇಳಿ' ಎಂದ ಅಭಿಷೇಕ್
ಹೆಂಡ್ತಿಯನ್ನು ಹೇಗೆ ನೋಡಿಕೊಳ್ಳಬೇಕು? ಬೆಸ್ಟ್​ ಪತಿಯಾಗಲು ಮಾಳುಗೆ Bigg Boss ರಕ್ಷಿತಾ ಶೆಟ್ಟಿ ಏನೆಲ್ಲಾ ಟಿಪ್ಸ್​ ಕೊಟ್ರು ನೋಡಿ!