ಕಿರುತೆರೆ ನಟಿಯ 2 ಲಕ್ಷದ ಬ್ರ್ಯಾಂಡೆಡ್ ಬ್ಯಾಗ್‌ ಎತ್ತಿ ಬಿಸಾಡಿದ ತಾಯಿ; ವಿಡಿಯೋ ವೈರಲ್!

Suvarna News   | Asianet News
Published : Jun 27, 2021, 03:42 PM IST
ಕಿರುತೆರೆ ನಟಿಯ 2 ಲಕ್ಷದ ಬ್ರ್ಯಾಂಡೆಡ್ ಬ್ಯಾಗ್‌ ಎತ್ತಿ ಬಿಸಾಡಿದ ತಾಯಿ; ವಿಡಿಯೋ ವೈರಲ್!

ಸಾರಾಂಶ

ಒಂದು ಬ್ರ್ಯಾಂಡೆಡ್ ಬ್ಯಾಗ್‌ಗೆ ಇಷ್ಟೊಂದು ಹಣ ನೀಡಿರುವುದಕ್ಕೆ ಸಿಟ್ಟಾದ ಕಿರುತೆರೆ ನಟಿ ಆಶು ರೆಡ್ಡಿ ತಾಯಿ. ವಿಡಿಯೋ ವೈರಲ್...  

ಸೆಲೆಬ್ರಿಟಿಗಳೇ ಹಾಗೆ! ಒಂದೆರಡು ಸಿನಿಮಾ ಅಥವಾ ಧಾರಾವಾಹಿಯಲ್ಲಿ ಕಾಣಿಸಿಕೊಂಡ ನಂತರ ಸೋಷಿಯಲ್ ಲೈಫ್‌ಗಾಗಿ ಐಷಾರಾಮಿ ಜೀವನಕ್ಕೆ ಅನಿವಾರ್ಯವೋ, ಅಗತ್ಯವೋ ಒಗ್ಗಿಕೊಂಡು ಬಿಡುತ್ತಾರೆ. ದೇ ಬ್ರ್ಯಾಂಡ್ ಬ್ಯಾಗ್ ಬೇಕು, ಇದೇ ಬ್ರ್ಯಾಂಡ್‌ ಬಟ್ಟೆ ಬೇಕು ಎಂದು ತಾವು ಕಷ್ಟ ಪಟ್ಟು ದುಡಿದ ಹಣವನ್ನು ಅನಗತ್ಯವಾಗಿ ಖರ್ಚು ಮಾಡುತ್ತಾರೆ. ನಟಿ ಆಶು ರೆಡ್ಡಿ ಎರಡು ಲಕ್ಷ ಬೆಲೆಯ ಬ್ಯಾಗನ್ನು ತಂದಾಗ ತಾಯಿ ಹೇಗೆ ಪ್ರತಿಕ್ರಿಯೆ ನೀಡಿದ್ದಾರೆ ಗೊತ್ತಾ? 

ಆಶು ತಂದ ಬ್ಯಾಗನ್ನು ಮೊದಲು ತಾಯಿ ಪರಿಶೀಲಿಸುತ್ತಾರೆ. ಆನಂತರ ಇದರ ಬೆಲೆ ಕೇಳಿ ಶಾಕ್ ಆದವರೇ ಸಿಟ್ಟಿನಿಂದ ಎತ್ತಿ ಬಿಸಾಡುತ್ತಾರೆ, 'ಈ ಬ್ಯಾಗ್ ಬೆಲೆ 2 ಲಕ್ಷ ಎಂದು ತಿಳಿಯುತ್ತಿದ್ದಂತೆ ನನ್ನ ತಾಯಿ ಹೇಗೆ ರಿಯಾಕ್ಟ್ ಮಾಡಿದ್ದಾರೆ ನೋಡಿ.  ಆಕೆಗೆ ಗೊತ್ತಿಲ್ಲ ಇದು ಗಿಫ್ಟ್ ಬಂದಿರುವುದು,' ಎಂದು ಆಶು ವಿಡಿಯೋ ಹಂಚಿಕೊಂಡು ಬರೆದುಕೊಂಡಿದ್ದಾರೆ. 

ಐಷಾರಾಮಿ ಕಾರುಗಳು - ದುಬಾರಿ ಬ್ಯಾಗ್‌ : ಆಲಿಯಾ ಲೈಫ್‌ಸ್ಟೈಲ್‌ ಹೇಗಿದೆ ನೋಡಿ! 

'ಮನೆಯಲ್ಲಿ ಈಗಾಗಲೇ ಸಾಕಷ್ಟು ಬ್ಯಾಗ್‌ಗಳಿವೆ. ಹೀಗಿರುವಾಗ ನೀನು ಯಾಕೆ ಇಷ್ಟೊಂದು ದುಡ್ಡು ಕೊಟ್ಟು ಈ ಬ್ಯಾಗ್ ತಂದಿರುವೆ? ಬ್ಯಾಗ್ ಅಂಗಡಿ ಇಡುವ ಆಲೋಚನೆ ಇದ್ಯಾ?' ಎಂದು ಆಶು ತಾಯಿ ಪ್ರಶ್ನಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Bigg Boss ಗಿಲ್ಲಿ ಬಗ್ಗೆ ನಿಮ್ಗೆ ಗೊತ್ತಿಲ್ಲ, ರಘು ಚಪಾತಿ ಕೊಡದ ಕಾರಣ ನಾನ್​ ಹೇಳ್ತೀನಿ ಕೇಳಿ' ಎಂದ ಅಭಿಷೇಕ್
ಹೆಂಡ್ತಿಯನ್ನು ಹೇಗೆ ನೋಡಿಕೊಳ್ಳಬೇಕು? ಬೆಸ್ಟ್​ ಪತಿಯಾಗಲು ಮಾಳುಗೆ Bigg Boss ರಕ್ಷಿತಾ ಶೆಟ್ಟಿ ಏನೆಲ್ಲಾ ಟಿಪ್ಸ್​ ಕೊಟ್ರು ನೋಡಿ!