
ಬಿಗ್ ಬಾಸ್ ಕನ್ನಡ ಸೀಸನ್ 11ರ (Bigg Boss Kannada season 11) ಸ್ಪರ್ಧಿ, ಫೈರ್ ಬ್ರ್ಯಾಂಡ್ (Fire Brand) ಎಂದೇ ಪ್ರಸಿದ್ಧಿ ಪಡೆದಿರುವ ಚೈತ್ರಾ ಕುಂದಾಪುರ (Chaitra Kundapur), ದಾಂಪತ್ಯ ಜೀವನವನ್ನು ಎಂಜಾಯ್ ಮಾಡ್ತಿದ್ದಾರೆ. ಪತಿ ಶ್ರೀಕಾಂತ್ ಕಶ್ಯಪ್ ಅವ್ರ ಕೈನಲ್ಲಿ ತಿಂಡಿ ಮಾಡ್ತಿಸ್ತಿರುವ ವಿಡಿಯೋ ಒಂದು ವೈರಲ್ ಆಗಿದೆ. ಇದ್ರಲ್ಲಿ ಶ್ರೀಕಾಂತ್ ಅಡುಗೆ ಮಾಡಲು ಸಹಾಯ ಮಾಡ್ತೇನೆ ಅಂತ ಹೇಳಿ ಆಮೇಲೆ ಏನು ಮಾಡಿದ್ರು ಎಂಬುದನ್ನು ಹೇಳಿದ್ದಾರೆ. ವಿಡಿಯೋ ನೋಡಿದ ಬಳಕೆದಾರರು ನೀವೇ ಪುಣ್ಯಾತ್ಮರು, ಅಡ್ಜೆಸ್ಟ್ ಮಾಡ್ಕೊಂದು ಜೀವನ ಮಾಡಿ ಅಂತ ಕಮೆಂಟ್ ಮಾಡಿದ್ದಾರೆ.
Media King ಹೆಸರಿನ ಇನ್ಸ್ಟಾ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಚೈತ್ರಾ ಅಡುಗೆ ಮನೆಯಲ್ಲಿದ್ದು, ಪತಿ ಶ್ರೀಕಾಂತ್ ಮಾಡಿರುವ ತಿಂಡಿ ಬಗ್ಗೆ ಮಾಹಿತಿ ನೀಡಿದ್ದಾರೆ. ಬೆಳಿಗ್ಗೆ ನೀನು ದೇವರ ಪೂಜೆ ಮಾಡು, ನಾನು ತಿಂಡಿ ಮಾಡ್ತೇನೆ ಅಂತ ಶ್ರೀಕಾಂತ್ ಹೇಳಿದ್ದರು. ಅವರನ್ನು ನಂಬಿದ್ರೆ ನನಗೆ ಉಪವಾಸ ಗ್ಯಾರಂಟಿ. ಪಲ್ಯ ಏನೋ ಮಾಡಿದಾರೆ. ಆದ್ರೆ ಚಪಾತಿ ಹಿಟ್ಟು ಕಲಸಿಟ್ಟಿದ್ದಾರೆ, ಚಪಾತಿ ಮಾಡಿಲ್ಲ ಅಂತ ಚೈತ್ರಾ ಒಂದು ವಿಡಿಯೋದಲ್ಲಿ ಹೇಳಿದ್ದಾರೆ. ಇನ್ನೊಂದು ವಿಡಿಯೋದಲ್ಲಿ ಶ್ರೀಕಾಂತ್ ಚಪಾತಿ ಮಾಡ್ತಿರೋದನ್ನು ನೀವು ನೋಡ್ಬಹುದು. ಗಂಡಸ್ರು, ಹೊರಗೆ ಅಂದ್ರೆ ಕ್ಯಾಟರಿನ್ ನಲ್ಲಿ ಅಡುಗೆ ಮಾಡ್ಬೇಕು. ಮನೆಯಲ್ಲಿ ಮಹಿಳೆಯರೇ ಅಡುಗೆ ಮಾಡ್ಬೇಕು ಅನ್ನೋದು ಶ್ರೀಕಾಂತ್ ವಾದ ಅಂತ ಚೈತ್ರಾ ಹೇಳ್ತಿದ್ದಾರೆ.
ಚೈತ್ರಾ ಈ ಎರಡೂ ವಿಡಿಯೋಕ್ಕೆ ಸಾಕಷ್ಟು ಕಮೆಂಟ್ ಬಂದಿದೆ. ಮೊದಲ ವಿಡಿಯೋ ನೋಡಿದ ಫ್ಯಾನ್ಸ್, ಪಾಪ ಶ್ರೀಕಾಂತ್ ಇಷ್ಟು ದಿನ ಅಡುಗೆ ಮಾಡಿ ಸುಸ್ತಾಗಿದ್ದಾರೆ. ನೀವೇ ಅಡುಗೆ ಮಾಡಿ ಎಂದಿದ್ದಾರೆ. ಮತ್ತೆ ಕೆಲವರು ಅನುಸರಿಸಿಕೊಂಡು ಹೋಗಿ, ಇದೆಲ್ಲ ಕಾಮನ್ ಎಂದಿದ್ದಾರೆ. ಇನ್ನೂ ಕೆಲವರು, ಶ್ರೀಕಾಂತ್ ಅಡುಗೆ ಮಾಡೋದನ್ನು ನೋಡಿ, ನೀವೇ ಅದೃಷ್ಟವಂತರು. ಇಷ್ಟಾದ್ರೂ ಅಡುಗೆ ಮಾಡಿದ್ದಾರಲ್ಲ ಅಂತ ಕಮೆಂಟ್ ಮಾಡಿದ್ದಾರೆ.
ವಾರದ ಹಿಂದಷ್ಟೆ ಚೈತ್ರಾ ಕುಂದಾಪುರ, ಶ್ರೀಕಾಂತ್ ಕಶ್ಯಪ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಚೈತ್ರಾ ಮದುವೆ ಆಗ್ತಾರೆ ಎನ್ನುವ ಸುದ್ದಿ ಇತ್ತು. ಆದ್ರೆ ಯಾರನ್ನು ಮದುವೆ ಆಗ್ತಾರೆ ಎನ್ನುವ ಗುಟ್ಟನ್ನು ಬಿಟ್ಟುಕೊಟ್ಟಿರಲಿಲ್ಲ. ಮದುವೆ ಹಿಂದಿನ ದಿನ ಶ್ರೀಕಾಂತ್ ಫೋಟೋ ಪೋಸ್ಟ್ ಮಾಡಿದ್ದ ಚೈತ್ರಾ, ನಂತ್ರ ಅದ್ಧೂರಿಯಾಗಿ ಮದುವೆ ಆದ್ರು. ಹನ್ನೆರಡು ವರ್ಷ ಪ್ರೀತಿಸಿದ ಹುಡುಗನನ್ನು ಚೈತ್ರಾ ಮದುವೆ ಆಗಿದ್ದಾರೆ. ಮದುವೆ ನಂತ್ರ ಚೈತ್ರಾ ಅಪ್ಪನ ವಿಷ್ಯ ಸಾಕಷ್ಟು ಸುದ್ದಿ ಮಾಡಿತ್ತು. ಅವರು ಮದುವೆಗೆ ಯಾಕೆ ಬರಲಿಲ್ಲ ಎನ್ನುವ ಬಗ್ಗೆ ಅಪ್ಪ ಹಾಗೂ ಅಮ್ಮನ ವಿಡಿಯೋ ವೈರಲ್ ಆಗಿತ್ತು.
ಈಗ ಚೈತ್ರಾ ತಮ್ಮ ಹೆಸರು ಬದಲಿಸಿಕೊಂಡಿದ್ದಾರೆ ಎಂಬ ಸುದ್ದಿ ಇದೆ. ಚೈತ್ರಾ ಮದುವೆ ಸಂದರ್ಭದಲ್ಲಿ ಹೆಸರು ಬದಲಿಸಿಕೊಂಡಿದ್ದಾರಂತೆ. ಸಂಪ್ರದಾಯದಂತೆ ಅವರ ಹೆಸರು ಬದಲಾಗಿದೆ. ಶ್ರೀಕಾಂತ್ ಕಶ್ಯಪ್ ತಾಯಿ, ಚೈತ್ರಾ ಹೆಸರನ್ನು ಶ್ರೀಮೇಧಾ ಎಂದು ಬದಲಿಸಿದ್ದಾರೆ. ಬಾಳೆ ಹಣ್ಣು ತಿನ್ನಿಸಿ, ಚೈತ್ರಾ ಹೆಸರು ಬದಲಿಸಿದ್ದಾರೆ. ಇದು ಅಲ್ಲಿನ ಸಂಪ್ರದಾಯ. ಚೈತ್ರಾ ಅಮ್ಮನ ಹೆಸರನ್ನು ಕೂಡ ಮದುವೆ ಸಮಯದಲ್ಲಿ ಬದಲಿಸಲಾಗಿತ್ತು. ಚೈತ್ರಾ ಪತಿ ಶ್ರೀಕಾಂತ್ ಕಶ್ಯಪ್ ಅನಿಮೇಷನ್ ಕೋರ್ಸ್ ಮಾಡಿದ್ದು, ಜ್ಯೋತಿಷ್ಯವನ್ನು ವೃತ್ತಿಯಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಬಿಗ್ ಬಾಸ್ ನಂತ್ರ ಚೈತ್ರಾ ಪ್ರಸಿದ್ಧಿ ಹೆಚ್ಚಾಗಿದ್ದು, ಬಾಯ್ಸ್ ವರ್ಸಸ್ ಗರ್ಲ್ಸ್ ಶೋನಲ್ಲಿ ಕಾಣಿಸಿಕೊಂಡಿದ್ದರು.
\
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.