ನಟನೆ ಜೊತೆಗೆ ಬ್ಯುಸಿನೆಸ್ ಶುರು ಮಾಡಿದ ನಟ ಚಂದನ್ ಕುಮಾರ್. ಬಿರಿಯಾನಿ ಅಂಗಡಿ ಉದ್ಘಾಟನೆಗೆ ಆಗಮಿಸಿದ ಶಿವಣ್ಣ.
ಬಿಗ್ ಬಾಸ್ ಸ್ಪರ್ಧಿ, ಚಂದನವನದ ಚಾಕೊಲೇಟ್ ಬಾಯ್ ಚಂದನ್ ಕುಮಾರ್ ಹೊಸ ವ್ಯಾಪಾರ ಶುರು ಮಾಡಿದ್ದಾರೆ. ನಟನೆ ಜೊತೆಗೆ ಬಿರಿಯಾನಿ ಅಂಗಡಿ ತೆರೆದಿದ್ದಾರೆ. ಇಂದು ಹೋಟೆಲ್ ನಟ ಶಿವರಾಜ್‌ಕುಮಾರ್ ಹೋಟೆಲ್ ಉದ್ಘಾಟನೆ ಮಾಡಿದ್ದಾರೆ.
ಚಿತ್ರರಂಗದಲ್ಲಿ ದಶಕದ ಪಯಣ; ಗಾಡ್ ಫಾದರೂ ಇಲ್ಲ, ಬ್ಯಾಕಪ್ ಇಲ್ಲ!
ಬೆಂಗಳೂರಿನ ಸಹಕಾರ ನಗರದಲ್ಲಿ ಬಿರಿಯಾನಿ ಹೋಟೆಲ್ ಪ್ರಾರಂಭವಾಗಿದ್ದು ಚಂದನ್ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಶೇರ್ ಮಾಡುವ ಮೂಲಕ ಹೋಟೆಲ್ ಹೇಗಿದೆ ಎಂದು ಅಭಿಮಾನಿಗಳಿಗೆ ತೋರಿಸಿದ್ದಾರೆ. ಕಾರ್ತಿಕ ಮಾಸ ಇರುವ ಕಾರಣ ಮುಂದಿನ ವಾರ ಮಿಸ್ ಮಾಡದೆ ಭೇಟಿ ನೀಡುತ್ತೇವೆ ಎಂದು ಕೆಲ ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ.
ಇನ್ನು ವರ್ಕೌಟ್ ಮಾಡುತ್ತಾ ಬ್ಯುಸಿಯಾಗಿರುವ ಚಂದನ್ ಪ್ರೇಮಬರಹ ಚಿತ್ರದ ನಂತರ ಡಾರ್ಲಿಂಗ್ ಕೃಷ್ಣ ಜೊತೆ ಮತ್ತೊಂದು ಚಿತ್ರಕ್ಕೆ ಸಹಿ ಮಾಡಿದ್ದಾರೆ. 'ಶ್ರೀಕೃಷ್ಣ@ಜಿಮೇಲ್ ಡಾಟ್ ಕಾಮ್' ಎಂದ ಶೀರ್ಷಿಕೆಯ ಚಿತ್ರ ಇದಾಗಿದ್ದು ಚಂದನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಹಸಿದ ಕೋತಿಗೆ ಹಣ್ಣು ನೀಡಿ 'ಲಕ್ಷ್ಮೀ ಬಾರಮ್ಮಾ' ಚಂದು ಮಾನವೀಯತೆ!
ನಾಗಶೇಖರ್ ನಿರ್ದೇಶನ ಈ ಸಿನಿಮಾ ಚಿತ್ರೀಕರಣ ಪ್ರಾರಂಭಿಸಿದೆ. ಚಂದನ್ ತಮ್ಮ ಭಾಗ ಚಿತ್ರೀಕರಣ ಮುಗಿಸಿದ್ದಾರೆ ಎನ್ನಲಾಗಿದೆ. 2021 ಸಿನಿಮಾ ರಿಲೀಸ್ ಮಾಡಬೇಕೆಂದು ತಂಡ ನಿರ್ಧರಿಸಿದೆ.