ಕಾಮಿಡಿ ಶೋನಲ್ಲಿ ಬಾಯ್‌ಫ್ರೆಂಡ್‌ ಮರ್ಯಾದೆ ತೆಗೆದು, ಇವನೇ ನನ್ನ ಹುಡುಗ ಕಣ್ರೀ ಎಂದ ಹುಡುಗಿ!‌ ವಿಡಿಯೋ ವೈರಲ್

Published : Aug 12, 2025, 08:01 AM ISTUpdated : Aug 12, 2025, 10:33 AM IST
bro code roast by aashish

ಸಾರಾಂಶ

ಇತ್ತೀಚೆಗೆ ಸ್ಟ್ಯಾಂಡಪ್‌ ಕಾಮಿಡಿ ಭಾರೀ ಜನಪ್ರಿಯತೆ ಪಡೆದಿದೆ. ಓರ್ವ ಮಹಿಳೆ ಇದೇ ವೇದಿಕೆ ಮೇಲೆ ತನ್ನ ಹುಡುಗನ ಕಾಲೆಳೆದು, ಆಮೇಲೆ ಬಾಯ್‌ಫ್ರೆಂಡ್‌ ಎಂದು ಒಪ್ಪಿಕೊಂಡಿದ್ದಾರೆ. ಈ ವಿಡಿಯೋ ಫುಲ್‌ ವೈರಲ್‌ ಆಗ್ತಿದೆ. 

ಅದೊಂದು ಕಾಮಿಡಿ ಶೋ ( bro code roast by aashish ) ಆ ಶೋನಲ್ಲಿ ಮುದ್ದಾದ ಹುಡುಗಿ ಶ್ರೇಯಾ, ತನ್ನ ಹುಡುಗನ ಪರಿಚಯ ಮಾಡಿಕೊಟ್ಟು ಎಲ್ಲರ ಮುಂದೆ ಮರ್ಯಾದೆ ತೆಗೆದಿದ್ದರು. ಹೌದು, ನನ್ನ ಹುಡುಗನಿಗೆ ಉಚ್ಛಾರಣೆ ಮಾಡೋಕೆ ಬರೋದಿಲ್ಲ, ಸ್ಕಿನ್‌ ಕೇರ್‌ ಗೊತ್ತಿಲ್ಲ ಎಂದು ಹೇಳಿ ಎಲ್ಲರ ಮುಂದೆ ಬಾಯ್‌ಫ್ರೆಂಡ್‌ ತಲೆ ತಗ್ಗಿಸುವ ಹಾಗೆ ಮಾಡಿದ್ದಾರೆ. ಒಟ್ಟಿನಲ್ಲಿ ಈ ಜೋಡಿ ಎಲ್ಲರ ಮುಂದೆ ತಮ್ಮ ಪ್ರೀತಿಯನ್ನು ಹೇಳಿಕೊಂಡಿದೆ.

ಮೊದಲು ಮಾತನಾಡಿದ ಶ್ರೇಯಾ ಅವರು, “ನನ್ನ ಹುಡುಗನಿಗೆ ಸ್ಕಿನ್‌ ಕೇರ್‌ ಬಗ್ಗೆ ಗೊತ್ತಿಲ್ಲ. ನನ್ನ ಹತ್ತಿರ ಸ್ಕಿನ್‌ ಕೇರ್‌ ಕೇಳೋದಲ್ಲದೆ ಆ ಪ್ರಾಡಕ್ಟ್‌ಗಳನ್ನು ನನ್ನ ಬಳಿ ಕೇಳೋದಿಲ್ಲ, ಭಿಕ್ಷೆ ಬೇಡ್ತಾನೆ, ಅವನಿಗೆ ನಾನು ಮೊದಲ ಗರ್ಲ್‌ಫ್ರೆಂಡ್‌ ಅಲ್ಲ, ಅವನ ಎಮ್ಮೆಯೇ ಮೊದಲ ಗರ್ಲ್‌ಫ್ರೆಂಡ್.‌ ಅವನಿಗೆ ಎಸ್‌ ಶಬ್ದ ಉಚ್ಛಾರ ಮಾಡೋಕೆ ಬರೋದಿಲ್ಲ” ಎಂದಿದ್ದಾರೆ. ಒಟ್ಟಿನಲ್ಲಿ ಶ್ರೇಯಾ ಎಲ್ಲರ ಮುಂದೆ ತನ್ನ ಹುಡುಗನ ಕಾಲೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅಂದಹಾಗೆ ಎಲ್ಲರೂ ಶ್ರೇಯಾ ಮಾತಿಗೆ ನಕ್ಕಿದ್ದಾರೆ.

ಆಮೇಲೆ ಓಂಕಾರ್‌ ಮಾತನಾಡಲು ಶುರುಮಾಡಿದಾಗ ತನ್ನ ಗರ್ಲ್‌ಫ್ರೆಂಡ್‌ನ್ನು ತನ್ನ ಬಳಿ ಕರೆಸಿಕೊಂಡಿದ್ದಾನೆ. ಆಮೇಲೆ ಅವನು ನನ್ನ ಅದೃಷ್ಟ ಎಷ್ಟು ಚೆನ್ನಾಗಿದೆ ಎಂದು ತೋರಿಸೋಕೆ ಕರೆದೆ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಗರ್ಲ್‌ಫ್ರೆಂಡ್‌ ಕಾಲೆಳೆದಷ್ಟು ಇವರು ಅವರನ್ನು ಕಾಲೆಳೆದಿಲ್ಲ. ಈ ಜೋಡಿ ಇಷ್ಟು ಒಪನ್‌ ಅಪ್‌ ಆಗಿ ಮಾತನಾಡೋದು ಅನೇಕರ ಮೆಚ್ಚುಗೆ ಗಳಿಸಿದೆ.

ಕಾಮಿಡಿಯನ್ ಆಶಿಶ್ ಸೋಲಂಕಿ ಅವರ ʼಬ್ರೋಕೋಡ್ʼ ರೋಸ್ಟ್ ಯಾವಾಗಲೂ ಹಾಸ್ಯದಿಂದಲೇ ಎಂಡ್‌ ಆಗುವುದು. ಭಾರತದ ಉತ್ತಮ ಕಾಮಿಡಿಯನ್‌ಗಳಿರುವ ಎರಡು ತಂಡಗಳ ನಡುವಿನ ತಡೆಯಿಲ್ಲದ ರೋಸ್ಟ್ ಕದನವಾಗಿ ಆರಂಭವಾಗಿ, ಆಮೇಲೆ ರೊಮ್ಯಾಂಟಿಕ್ ತಿರುವಿನತ್ತ ಸಾಗಿತು. ಕಾಮಿಡಿಯನ್ ಓಂಕಾರ್ ರಾವ್, ತನ್ನ ರೋಸ್ಟ್ ಸೆಟ್‌ನ ಮಧ್ಯದಲ್ಲಿ ಎಲ್ಲರ ಮುಂದೆ ಶ್ರೇಯಾ ಪ್ರಿಯಂ ರಾಯ್‌ಗೆ ಮಂಡಿಯೂರಿ ಪ್ರೇಮನಿವೇದನೆ ಮಾಡಿದರು. ಆಗ ಶ್ರೇಯಾ ಹೌದು ಎಂದು ಹೇಳಿ ಒಪ್ಪಿದ್ದಾರೆ.

ಬ್ರೋಕೋಡ್ ರೋಸ್ಟ್‌ನ್ನು ಏಪ್ರಿಲ್ 1, 2025 ರಂದು ಶೂಟಿಂಗ್‌ ಮಾಡಲಾಗಿತ್ತು. ಸ್ಟ್ಯಾಂಡಪ್‌ ಕಾಮಿಡಿಯಲ್ಲಿ ನಡೆದ ಈ ಘಟನೆಯು ಕೇವಲ ಒಂದು ರೋಮ್ಯಾಂಟಿಕ್ ಕ್ಷಣವಾಗಿರದೆ, ಇಬ್ಬರು ಯುವ ಕಾಮಿಡಿಯನ್‌ನ ಸಂಬಂಧದ ಸೌಂದರ್ಯವನ್ನು ಮತ್ತು ಅವರ ವೃತ್ತಿಜೀವನದ ಹಿನ್ನೆಲೆಯನ್ನು ಪ್ರತಿಬಿಂಬಿಸುತ್ತದೆ.

ಒಮ್ಮೆ ಶ್ರೇಯಾ ಅವರು, “ವೇದಿಕೆಯ ಮೇಲೆ ಪ್ರೇಮನಿವೇದನೆ ಮಾಡುವುದು ಮುದ್ದಾಗಿರುತ್ತದೆ” ಎಂದು ತಮಾಷೆಯಾಗಿ ಹೇಳಿದ್ದಾಗ, ಒಂಕಾರ್ ಅದನ್ನು "ಕಿರಿಕಿರಿಯ ಐಡಿಯಾ" ಎಂದು ತಿರಸ್ಕರಿಸಿದ್ದರು. ಅಲ್ಲಿಗೆ ಶ್ರೇಯಾ ಆಸೆ ಕಮರಿತ್ತು. ಏಪ್ರಿಲ್ 1 ರಂದು, ರೋಸ್ಟ್‌ನ ಮಧ್ಯದಲ್ಲಿ, ಒಂಕಾರ್ ಮಂಡಿಯೂರಿ ಉಂಗುರವನ್ನು ನೀಡಿದಾಗ, ಶ್ರೇಯಾ ಆಶ್ಚರ್ಯದಿಂದ ಸ್ಥಬ್ಧರಾದರು. ಆರಂಭದಲ್ಲಿ ಇದು ಏಪ್ರಿಲ್ ಫೂಲ್‌ ಎಂದು ಭಾವಿಸಿದ್ದ ಶ್ರೇಯಾ, ಆಮೇಲೆ ಉಂಗುರು ನೋಡಿ ಇದು ನಿಜ ಎಂದು ಫಿಕ್ಸ್‌ ಆದರು.

 

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

2 ಸತ್ಯ ಬಯಲು ಮಾಡಿದ 'ಲಕ್ಷ್ಮೀ ನಿವಾಸ' ನಿರ್ದೇಶಕರು, ವೀಕ್ಷಕರು ಫುಲ್ ಹ್ಯಾಪಿ
BBK 12: ಟಾಸ್ಕ್ ಆಡದೇ ಈ ವಾರದ ‘ಕ್ಯಾಪ್ಟನ್’ ಆದ ಸ್ಪಂದನಾ.. ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್!