
ಕರಣ್ ಜೋಹರ್ ನಿರೂಪಣೆಯಲ್ಲಿ ಮೂಡಿ ಬರುತ್ತಿರುವ ಬಿಗ್ ಬಾಸ್ ಒಟಿಟಿ ಫಿನಾಲೆ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದೆ. 42 ದಿನಗಳ ಮನೆಯಲ್ಲಿದ್ದ 14 ಸ್ಪರ್ಧಿಗಳಲ್ಲಿ ಒಬ್ಬರಿಗೆ ವಿಜೇತರ ಟ್ರೋಫಿ ಹಾಗೂ 25 ಲಕ್ಷ ರೂ. ಪಡೆದುಕೊಂಡಿದ್ದಾರೆ.
ಹೌದು! ಏನಾದರೂ ಒಂದು ಕೆಲಸ ಮಾಡಿಕೊಂಡು , ಬಿಬಿ ಮನೆಯಲ್ಲಿ ಸದಾ ಆಕ್ಟೀವ್ ಆಗಿರುವ ಸ್ಪರ್ಧಿ ದಿವ್ಯಾ ಅಗರ್ವಾಲ್ ಬಿಬಿ ಒಟಿಟಿ ಸೀಸನ್ 1ರ ವಿಜೇತರಾಗಿ ಟ್ರೋಪಿ ಹಾಗೂ ಹಣ ಗೆದಿದ್ದಾರೆ. ನಿಶಾಂತ್ ಮೊದಲ ರನ್ನರ್ ಅಪ್, ಶಮಿತಾ ಎರಡನೇ ರನ್ನರ್ ಅಪ್ ಆಗಿದ್ದಾರೆ. ಒಟಿಟಿ ಸೀಸನ್‌ನಲ್ಲಿ ಶಮಿತಾ ಜೊತೆಗೆ ಆಪ್ತರಾಗಿದ್ದ ರಾಕೇಶ್ ಮೂರನೇ ರನ್ನರ್ ಅಪ್ ಸ್ಥಾನ ಪಡೆದುಕೊಂಡಿದ್ದಾರೆ ಇನ್ನೂ ಪ್ರತೀಕ್ ನಾಲ್ಕನೇ ರನ್ನರ್ ಅಪ್ ಆಗಿದ್ದಾರೆ.
ನಾಲ್ಕನೇ ಸ್ಥಾನ ಪಡೆದ ಪ್ರತೀಕ್ ಎದುರು ಎರಡು ಆಯ್ಕೆ ಇಡಲಾಗಿತ್ತು. ಒಂದು ಅದೃಷ್ಟದ ಸೂಟ್‌ಕೇಸ್ ಆಯ್ಕೆ ಮಾಡಿಕೊಳ್ಳುವುದು ಇಲ್ಲವಾದರೆ ಫಿನಾಲೆಯ ಮುಂದಿನ ಹಂತ ತಲುಪುವುದು. ಸೂಟ್‌ಕೇಸ್ ಆಯ್ಕೆ ಮಾಡಿಕೊಂಡ ಪ್ರತೀಕ್, ಸಲ್ಮಾನ್ ಖಾನ್ ನಡೆಸಿ ಕೊಡುವ ಟಿವಿ ಬಿಗ್ ಬಾಸ್ ಸೀಸನ್ 15ಕ್ಕೆ ಎಂಟ್ರಿ ಟಿಕೆಟ್ ಪಡೆದುಕೊಂಡಿದ್ದಾರೆ. ಈ ಮೂಲಕ ಬಿಗ್ ಬಾಸ್ ಸೀಸನ್ 15ರ ಮೊದಲ ಸ್ಪರ್ಧಿಯಾಗಿ ಪ್ರತೀಕ್ ಇರಲಿದ್ದಾರೆ.
ಫಿನಾಲೆ ಕಾರ್ಯಕ್ರಮದಲ್ಲಿ ನಟಿ ಜೆನಿಲಿಯಾ ಡಿಸೋಜಾ, ನಟ ರಿತೇಶ್ ದೇಶ್‌ಮುಖ್, ಋತ್ವಿಕ್ ಧನಂಜಯ್, ಕರಣ್ ವಾಹಿ, ಭಾರತಿ ಸಿಂಗ್, ಹರ್ಷ ಲಿಂಬಾಚಿಯಾ ಅತಿಥಿಗಳಾಗಿ ಕಾಣಿಸಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.