ಬಿಗ್ ಬಾಸ್‌ ಸ್ಪರ್ಧಿಗಳ ಫ್ಯಾನ್ಸ್‌ ನಡುವೆ ಗಲಾಟೆ; ಬಸ್ ಕಾರು ಗಾಜು ಪುಡಿಪುಡಿ

Published : Dec 18, 2023, 10:51 AM ISTUpdated : Dec 18, 2023, 12:02 PM IST
ಬಿಗ್ ಬಾಸ್‌ ಸ್ಪರ್ಧಿಗಳ ಫ್ಯಾನ್ಸ್‌ ನಡುವೆ ಗಲಾಟೆ; ಬಸ್ ಕಾರು ಗಾಜು ಪುಡಿಪುಡಿ

ಸಾರಾಂಶ

ಅಭಿಮಾನಿಗಳ ಜಗಳದಿಂದ ಸಾರ್ವಜನಿಕರಿಗೆ ತೊಂದರೆ. ಬಸ್‌ ಮತ್ತು ಕಾರು ಪುಡಿ ಪುಡಿ ಮಾಡಿದಕ್ಕೆ ಕೇಸ್ ದಾಖಲು.....

ಬಿಗ್ ಬಾಸ್ ತೆಲುಗು ಸೀಸನ್ 7ರ ಗ್ರ್ಯಾಂಡ್ ಫಿನಾಲೆ ಡಿಸೆಂಬರ್ 17ರಂದ ನಡೆದಿದೆ. ಯುಟ್ಯೂಬರ್  ಹಾಗೂ ರೈತನಾಗಿ ಗುರುತಿಸಿಕೊಂಡಿರುವ ಪಲ್ಲವಿ ಪ್ರಶಾಂತ್ ವಿನ್ನರ್ ಟ್ರೋಫಿ ಹಿಡಿದಿದ್ದಾರೆ. ಎರಡನೇ ಸ್ಥಾನವನ್ನು ಅಮರ್‌ದೀಪ್ ಚೌದ್ರಿ ಪಡೆದಿದ್ದಾರೆ. ಒಳಗೆ ಗ್ರ್ಯಾಂಡ್ ಫಿನಾಲೆ ನಡೆಯುತ್ತಿದ್ದು ಹೊರಗಡೆ ಅಭಿಮಾನಿಗಳು ಕಾಯುತ್ತಿದ್ದರು. ವಿನ್ನರ್ ಹಾಗೂ ರನ್ನರ್ ಘೋಷಣೆ ಆಗುತ್ತಿದ್ದರಂತೆ ಗಲಾಟೆ ಶುರು ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಗಲಾಟೆ ಫೋಟೋ ಮತ್ತು ವಿಡಿಯೋ ಹರಿದಾಡುತ್ತಿದ್ದರು ನೆಟ್ಟಿಗರು ಬೇಸರ ವ್ಯಕ್ತ ಪಡಿಸಿದ್ದಾರೆ. 

ಅನ್ನಪೂರ್ಣ ಸ್ಟುಡಿಯೋಸ್‌ನಲ್ಲಿ ನಡೆಯುತ್ತಿರುವ ಗ್ರ್ಯಾಂಡ್‌ ಫಿನಾಲೆ ನೋಡಲು ಅಮರ್‌ದೀಪ್ ಮತ್ತು ಪಲ್ಲವಿ ಪ್ರಶಾಂತ್ ಅಭಿಮಾನಿಗಳು ಆಗಮಿಸಿದ್ದರು. ಈ ವೇಳೆ ವಿನ್ನರ್ ಘೋಷಣೆ ಆಗುತ್ತಿದ್ದಂತೆ ಪ್ರಶಾಂತ್ ಅಭಿಮಾನಿಗಳು ಸಂಭ್ರಮ ಶುರು ಮಾಡಿದ್ದಾರೆ. ಅದೇ ಸಮಯದಕ್ಕೆ ಅಮರ್‌ದೀಪ್‌ ಅಭಿಮಾನಿಗಳು ಅಲೇ ಇದ್ದರು....ಇಬ್ಬರ ನಡುವೆ ವಾಗ್ವಾದ ವಿಕೋಪಕ್ಕೆ ಹೋಗಿತ್ತು. ಎರಡೂ ಅಭಿಮಾನಿಗಳ ಗುಂಪು ಪರಸ್ಪರ ತಳ್ಳಾಡಿ ಗುದ್ದಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅದೇ ವೇಳೆ ಕುಂದಾಪುರ- ಸಿಕಂದರ್‌ಬಾದ್‌ ಕಡೆ ಸಾಗುತ್ತಿದ್ದ ಆರ್‌ಟಿಸಿ ಬಸ್ ಮೇಲೆ ದಾಳಿ ಮಾಡಿ ಗಾಜು ಪುಡಿಪುಡಿ ಮಾಡಿದ್ದಾರೆ.

25 ಲಕ್ಷದ ಎಂಗೇಜ್‌ಮೆಂಟ್‌ ರಿಂಗ್, ರಚಿತಾ ರಾಮ್‌ ಕೊರಗಜ್ಜನ ಸನ್ನಿಧಿಯಲ್ಲಿ; ಜೂನ್‌ನಲ್ಲಿ ನಡೆದ ಘಟನೆಗಳು!

ರನ್ನರ್ ಟ್ರೋಫಿ ಹಿಡಿದು ಅಮರ್‌ದೀಪ್‌ ಕಾರಿನ ಬಳಿ ಬರುತ್ತಿದ್ದಂತೆ ಆಕ್ರೋಶ ಹೆಚ್ಚಾಗಿದೆ. ಅಮರ್‌ ಇದ್ದ ಕಾರಿನ ಗಾಜು ಪುಡಿ ಪುಡಿ ಮಾಡಿದ್ದಾರೆ. ಹೊರ ಬರುವಂತೆ ಒತ್ತಾಯ ಮಾಡಿದ್ದಾರೆ. ಅಲ್ಲದೆ ಕಾರಿನಲ್ಲಿ ಅಮರ್‌ದೀಪ್  ತಾಯಿ ಮತ್ತು ಪತ್ನಿ ಗಾಬರಿ ಆಗಿದ್ದಾರೆ. ತಕ್ಷಣವೇ ಪೊಲೀಸರು ಬಂದು ಸುರಕ್ಷಿತಾವಾಗಿ ಮನೆ ತಲುಪಲು ಸಹಾಯ ಮಾಡಿದ್ದಾರೆ. ಇಬ್ಬರು ಸ್ಪರ್ಧಿಗಳ ಅಭಿಮಾನಿಗಳು ಮೇಳೆ ಪೊಲೀಸರು ದೂರು ದಾಖಲಿಸಿದ್ದಾರೆ. ಅಟವನ್ನು ಆಟದ ರೀತಿಯಲ್ಲಿ ನೋಡಬೇಕು ಸ್ಪರ್ಧಿಸಬೇಕು ಪರ್ಸನಲ್‌ ಆಗಿ ತೆಗೆದುಕೊಳ್ಳಬಾರದು ಎಂದು ನೆಟ್ಟಿಗರು ಗರಂ ಆಗಿದ್ದಾರೆ. ಅಷ್ಟೇ ಅಲ್ಲದೆ ಬಿಗ್ ಬಾಸ್ ಸ್ಪರ್ಧಿ ಅಶ್ವಿನಿ ಶ್ರೀ ಕಾರಿನ ಗಾಜು ಪುಡಿ ಆಗಿರುವುದರ ಬಗ್ಗೆ ವಿಡಿಯೋ ಮಾಡಿ ಬೇಸರ ವ್ಯಕ್ತ ಪಡಿಸಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Lakshmi Nivasa Serial: ಪೊಲೀಸ್​ ಕಂಪ್ಲೇಂಟ್​ ಕೊಡಲು ಮುಂದಾದ ವೀಕ್ಷಕರು- ಆಗಿದ್ದೇನು?
BBK 12: ಟ್ರಿಗರ್ ಮಾಡಿದ್ರೆ ಉಗುರಲ್ಲೇ ಹೊಡೆದು ಸಾಯಿಸ್ತೀನಿ: ಧ್ರುವಂತ್‌ಗೆ ಗಿಲ್ಲಿ ವಾರ್ನಿಂಗ್