ಬಿಗ್ ಬಾಸ್ ಮನೆಗೆ ಬಂದಾಗಿನಿಂದ ವಿನಯ್ ಟೀಮ್‌ನಲ್ಲಿಯೇ ಹೆಚ್ಚಾಗಿ ಗುರುತಿಸಿಕೊಂಡಿದ್ದ ಪವಿ ಪೂವಪ್ಪ ಮೂರೇ ವಾರಕ್ಕೆ ತಮ್ಮ ಪ್ರಯಾಣ ಅಂತ್ಯಗೊಳಿಸಿದ್ದಾರೆ.
ಬೆಂಗಳೂರು (ಡಿ.17): ಮೂರು ವಾರಗಳ ಹಿದೆ ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಪ್ರವೇಶ ಪಡೆದಿದ್ದ ಪವಿ ಪೂವಪ್ಪ ಅವರ ಆಟ ಅಂತ್ಯವಾಗಿದೆ. ಈ ವಾರ ಬಿಗ್ ಬಾಸ್ ಮನೆಯಿಂದ ಪವಿ ಪೂವಪ್ಪ ನಿರ್ಗಮಿಸಿದ್ದಾರೆ. ಈ ವಾರ ವಿನಯ್ ಗೌಡ, ಸಿರಿ, ಸಂಗೀತಾ ಶೃಂಗೇರಿ, ಡ್ರೋನ್ ಪ್ರತಾಪ್, ಮೈಕೆಲ್ ಹಾಗೂ ಪವಿ ಪೂವಪ್ಪ ನಾಮಿನೇಷನ್‌ನಲ್ಲಿದ್ದರು. ಶನಿವಾರದ ಎಪಿಸೋಡ್‌ನಲ್ಲಿ ವಿನಯ್ ಗೌಡ ಅವರನ್ನು ಕಿಚ್ಚ ಸುದೀಪ್ ಸೇವ್ ಮಾಡಿದ್ದರು. ಇದರಿಂದಾಗಿ ಸಿರಿ, ಸಂಗೀತಾ ಶೃಂಗೇರಿ, ಡ್ರೋನ್ ಪ್ರತಾಪ್, ಮೈಕೆಲ್ ಮತ್ತು ಪವಿ ಪೋವಪ್ಪ ಎಲಿಮಿನೇಷನ್ ಪರೀಕ್ಷೆಯನ್ನು ಭಾನುವಾರವೂ ಎದುರಿಸಿದ್ದರು. ಸಂಗೀತಾ ಅವರಿಗೆ ದೊಡ್ಡ ಅಭಿಮಾನಿಗಳಿದ್ದಾರೆ ಮತ್ತು ಪ್ರತಾಪ್ ಸಹಾನುಭೂತಿ ಮತಗಳನ್ನು ಪಡೆಯುತ್ತಿದ್ದಾರೆ. ಹೀಗಾಗಿ ಅವರೂ ಸೇಫ್ ಆಗುವುದು ಖಚಿತವಾಗಿತ್ತು. ಕೊನೆಯಲ್ಲಿ ಮೈಕೆಲ್, ಸಿರಿ ಹಾಗೂ ಪವಿ ಪೂವಪ್ಪ ಉಳಿದುಕೊಂಡಿದ್ದರು. ಈ ಹಂತದಲ್ಲಿ ಸುದೀಪ್, ಮೈಕೆಲ್ ಅವರನ್ನು ಸೇವ್ ಮಾಡಿದರೆ, ಕೊನೆಯಲ್ಲಿ ಸಿರಿ ಹಾಗೂ ಪವಿ ಪೂವಪ್ಪ ನಡುವೆ ಸಿರಿ ಅವರನ್ನು ಸುದೀಪ್ ಸೇವ್ ಮಾಡಿದರು.
ಕೊಡಗು ಮೂಲದ ಪವಿ ಪೂವಪ್ಪ ವೃತ್ತಿಪರ ರೂಪದರ್ಶಿ. ಈ ಹಿಂದೆ ಅವರು ಸನ್‌ಲೈಫ್‌ನಲ್ಲಿ 'ಸ್ವಪ್ನ ಸುಂದರಿ' ಶೋನಲ್ಲಿ ಕಾಣಿಸಿಕೊಂಡಿದ್ದರು. ಮತ್ತೊಂದೆಡೆ, ತುಕಾಲಿಯ ಉತ್ತಮ ನಿರ್ವಹಣೆಗಾಗಿ ಸುದೀಪ್ ಈ ವಾರ 'ಕಿಚ್ಚನ ಚಪ್ಪಾಳೆ' (ಸುದೀಪ್ ಮೆಚ್ಚುಗೆ) ನೀಡಿದರು. ಟಾಸ್ಕ್‌ನಲ್ಲಿ ಶಾಲಾ ವಿದ್ಯಾರ್ಥಿಯಾಗಿ ಸ್ಪರ್ಧಿಗಳು ತಮ್ಮ ಉಲ್ಲಾಸದ ಕಾರ್ಯಗಳ ಮೂಲಕ ವೀಕ್ಷಕರನ್ನು ರಂಜಿಸಿದರು.
;ಇರುಳು ಕಂಡ ಬಾವಿಗೆ ಹಗಲು ಬೀಳುವುದು ಅಂದ್ರೆ ಇದೇ ನೋಡಿ. ವಿನಯ್ ಗ್ರೂಪ್ ಸೇರುವುದರಿಂದ ಎಲಿಮಿನೇಷನ್ ಗೆ ಸುಲಭ ದಾರಿ. ಬಿಗ್ ಬಾಸ್ ನೋಡಿದಾಗ ವಿನಯ್ aggressive ಅಂದುಕೊಂಡು ಬಂದಿದ್ದೆ ಒಳಗೆ ಬಂದಾಗ ವಿನಯ್ ಜೊತೆ friendship ಮಾಡಿದಾಗ ತುಂಬಾ ಒಳ್ಳೆಯವನು ಅಂತ ಗೊತ್ತಾಯ್ತು ಅಂತ ನೆನ್ನೆ ಸುದೀಪ್ ಜೊತೆ ಹೇಳ್ತಿದ್ದೆ ಅಲ್ವಾ ಗೊತ್ತಾಯ್ತಲ್ಲ ಹೊರಡು ಮತ್ತೆ ಈಗ ಬಾಯ್' ಎಂದು ಪವಿ ಪೂವಪ್ಪ ಎಲಿಮಿನೇಷನ್‌ಗೆ ವೀಕ್ಷಕರು ಪ್ರತಿಕ್ರಿಯಿಸಿದ್ದಾರೆ.
'ವಿನಯ್ ಗ್ಯಾಂಗ್‌ನಿಂದ ಮತ್ತೊಂದು ವಿಕೆಟ್ ಬಿದ್ದಿದೆ' 'ವಿನಯ್ group ನ್ನು ಸೇರಿದ ಎಲ್ಲ ಸದಸ್ಯರು ಒಬ್ಬರದ ಮೇಲೆ ಒಬ್ಬರು ಹೊರ ಬರುವುದನ್ನು ನೋಡಲು ಎಷ್ಟು ಚಂದ..', 'ಗೆದ್ದೆತ್ತಿನ ಬಾಲ ಹಿಡಿಯೋಕೆ ಬಿಗ್ ಬಾಸ್ ಮನೆಗೆ ಹೋಗಿ ಬಂದ ಪವಿ..', 'ಎಲ್ಲಾ ವಾರವೂ ವಿನಯ್‌ಗೆ ಬಕೆಟ್ ಹಿಡಿದವರೆ ಮನೆಗೆ ಹೋಗ್ತಾ ಇದ್ದಾರೆ..' ಎಂದು ಹಲವರು ಕಾಮೆಂಟ್ ಮಾಡಿದ್ದಾರೆ.
'ಹೋಗ್ತಾನೇ ಬಕೆಟ್ ಹಿಡ್ಕೊಂಡು ಹೋಗಿದ್ಲು, ಬರುತ್ತ ಕಾರ್ತಿಕ್ಗೆ ಕೊಟ್ಟು ಬಂದ್ಲು..' ಎಂದು ಕಾರ್ತಿಕ್ ಮಹೇಶ್ ಅವರಿಗೂ ಈ ವಿಚಾರವನ್ನು ಟ್ಯಾಗ್ ಮಾಡಿ ಪೋಸ್ಟ್ ಮಾಡಿದ್ದಾರೆ. 'ಪವಿ ಅವರು ನನ್ನ ಪ್ರಕಾರ agreement ಮಾಡ್ಕೊಂಡ ಬಂದಿದ್ರು ಅನಸುತ್ತೇ ವಿನಯ್ ಗೆ ಬಕೆಟ್ ಹಿಡಿತ ಇದ್ಲು ಬಂದ್ ದಿನದಿಂದ ne bucket ಹಿಡಿತನೆ ಬಂದಿದ್ದಾಳೆ' ಎಂದು ಕಾಮೆಂಟ್ ಮಾಡಿದ್ದಾರೆ. ವಿನಯ್ ತಂಡದ ಮತ್ತೊಂದು ವಿಕೆಟ್ ಪತನ, ಚಮಚಾ ಗ್ಯಾಂಗ್ ಅಲ್ಲಿ ಇದ್ರೆ ಏನು ಮಾಡಕ್ಕಾಗಲ್ಲ ನ್ಯೂ ಎಂಟ್ರಿ ಬೇರೆ ಕಾರ್ತಿಕ್ ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.
ಇವರೇ ನೋಡಿ ಕನ್ನಡ ಬಿಗ್‌ಬಾಸ್‌ಗೆ ವೈಲ್ಡ್ ಕಾರ್ಡ್ ಎಂಟ್ರಿ, ಒಬ್ಬಾಕೆ ಹಾಟ್ ಸುಂದರಿ ಮತ್ತೊಬ್ಬರು ಸ್ಟೈಲಿಶ್ ಹಂಕ್
ಕಾರ್ತಿಕ್ ಮಹೇಶ್, ಮೈಕಲ್ ಅಜಯ್, ಗೌರೀಶ್ ಅಕ್ಕಿ, ಭಾಗ್ಯಶ್ರೀ ರಾವ್, ವರ್ತೂರು ಸಂತೋಷ್, ಸ್ನೇಕ್ ಶ್ಯಾಮ್, ಸಂಗೀತಾ ಶೃಂಗೇರಿ, ರಕ್ಷಕ್, ಸಿರಿ, ನೀತು ವನಜಾಕ್ಷಿ, ತನಿಶಾ ಕುಪ್ಪಂಡ, ತುಕಾಲಿ ಸಂತೋಷ್, ಡ್ರೋನ್ ಪ್ರತಾಪ್, ವಿನಯ್ ಗೌಡ, ಈಶಾನಿ ಚಂದ್ರಶೇಖರ್, ಸ್ನೇಹಿತ್ ಗೌಡ ಅಕ್ಟೋಬರ್ 8 ರಂದು ಬಿಗ್‌ಬಾಸ್‌ಗೆ ಒಳಹೊಕ್ಕಿದ್ದರು. ಇಲ್ಲಿಯವರೆಗೆ, ಶ್ಯಾಮ್, ಗೌರೀಶ್, ರಕ್ಷಕ್, ಈಶಾನಿ, ಭಾಗ್ಯಶ್ರೀ, ನೀತು ಮತ್ತು ಸ್ನೇಹಿತ್ ಅವರನ್ನು ಶೋನಿಂದ ಹೊರಹಾಕಲಾಗಿದೆ.
Breaking : ಬಿಗ್ ಬಾಸ್ ಸ್ಪರ್ಧಿ ತನಿಷಾ ವಿರುದ್ಧ ಎಫ್ಐಆರ್: ಮತ್ತೊಬ್ಬ ಸ್ಪರ್ಧಿ ಜೈಲು ಸೇರ್ತಾರಾ?